Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಜಪಾನಿಯರ ಈ ರಹಸ್ಯ ಕ್ರಮ ಅನುಸರಿಸಿ-10 ಕೇಜಿ ತೂಕ ಇಳಿಸಿಕೊಳ್ಳಿ!
ಆರೋಗ್ಯ, ತಂತ್ರಜ್ಞಾನ, ಸಂಪ್ರದಾಯ, ಆಪತ್ಕಾಲವನ್ನು ಎದುರಿಸುವುದು ಯಾವುದನ್ನು ಪರಿಗಣಿಸಿದರೂ ಜಪಾನೀಯರಿಂದ ಈ ವಿಶ್ವ ಕಲಿಯಬೇಕಾದುದು ಬೇಕಾದಷ್ಟಿದೆ. ಅಲ್ಲದೇ ಸುಮೋ ಪೈಲ್ವಾನರನ್ನು ಹೊರತುಪಡಿಸಿ ಇತರ ಜನಸಾಮಾನ್ಯರು ಸ್ಲಿಮ್ ಆಗಿ ಕಾಣಲು ಇವರು ಅನುಸರಿಸುತ್ತಿರುವ ಸಂಪ್ರದಾಯ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾ-ಜಪಾನ್ ಸುಂದರಿಯರ ಸೌಂದರ್ಯದ ಸೀಕ್ರೆಟ್..
ಪ್ರಮುಖವಾಗಿ ಇವರ ಆಹಾರ ಕ್ರಮ, ಇವರ ಆಹಾರದಲ್ಲಿ ಪ್ರಮುಖವಾಗಿ ಅಕ್ಕಿ ಮತ್ತು ಸಾಗರ ಉತ್ಪನ್ನಗಳಿವೆ. ಇವೆರಡರಲ್ಲಿಯೂ ಗ್ಲುಟೆನ್ ಅಂಶವಿಲ್ಲ ಹಾಗೂ ಹೆಚ್ಚು ಕ್ಯಾಲೋರಿಗಳನ್ನು ಹೊಂದಿದೆ. ಇದರೊಂದಿಗೆ ಜಪಾನೀಯರು ಸಾಂಪ್ರಾದಾಯಿಕವಾದ ಪೇಯವೊಂದನ್ನು ಸೇವಿಸುತ್ತಾರೆ. ಈ ಪೇಯವೂ ಇವರ ಕೃಶಕಾಯ ಮತ್ತು ಆರೋಗ್ಯದ ಗುಟ್ಟಾಗಿದೆ. ಜಪಾನೀಯರ ಶಿಸ್ತು, ಪ್ರಾಮಾಣಿಕತೆಗೆ ತಲೆಬಾಗಲೇಬೇಕು!
ಜಪಾನೀಯರು ಕುಡಿಯುತ್ತಾ ಬಂದಿರುವ ಈ ಪೇಯ ಅಥವಾ ಜ್ಯೂಸ್ ಅನ್ನು ಸರಿಯಾದ ಕ್ರಮದಲ್ಲಿ ಕುಡಿದರೆ ಸ್ಥೂಲಕಾಯ ಒಂದೇ ತಿಂಗಳಲ್ಲಿ ಹತ್ತು ಕೇಜಿಗಳಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಬನ್ನಿ, ಈ ಪೇಯ ಯಾವುದು ಎಂಬುದನ್ನು ನೋಡೋಣ.. ಈ ಪೇಯ ತಯಾರಿಸುವ ವಿಧಾನ....

ಅಗತ್ಯವಿರುವ ಸಾಮಾಗ್ರಿಗಳು
1. ಸೋಯಾಬೀನ್ ಧಾನ್ಯ: ಒಂದು ದೊಡ್ಡ ಚಮಚ
2. ಜೇನು ಒಂದು ದೊಡ್ಡ ಚಮಚ
3. ಕೊಬ್ಬು ರಹಿತ ಹಾಲು - ½ ಕಪ್

ಮಾಹಿತಿ #1
ಈ ಪೇಯವನ್ನು ಕುಡಿಯುವ ಮೂಲಕ ದೇಹದಲ್ಲಿ ಮೂರು ರೀತಿಯ ಬದಲಾವಣೆಗಳು ಆಗುತ್ತದೆ. ಹೊಟ್ಟೆ ಹಸಿವು ಕಡಿಮೆಯಾಗುವುದು, ಹೆಚ್ಚು ಕ್ಯಾಲೋರಿಗಳು ಖರ್ಚಾಗುವುದು, ಜೀವ ರಾಸಾಯನಿಕ ಕ್ರಿಯೆ ಚುರುಕುಗೊಳ್ಳುವುದು. ಇವೆಲ್ಲವೂ ದೇಹದ ಕೊಬ್ಬನ್ನು ಬಳಸಿ ತೂಕವನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಮಾಹಿತಿ #2
ಸೋಯಾಬೀನ್, ಜೇನು ಮತ್ತು ಕೊಬ್ಬುರಹಿತ ಹಾಲು ಈ ಮೂರೂ ಅಂಶಗಳು ಪರಿಪೂರ್ಣ ಆಹಾರಗಳಾಗಿದ್ದು ದಿನದ ಅಗತ್ಯದ ಪೋಷಕಾಂಶಗಳನ್ನು ನೀಡುವ ಜೊತೆಗೇ ಅತಿ ನಿಧಾನವಾಗಿ ಜೀರ್ಣಗೊಳ್ಳುವ ಕಾರಣ ಹಸಿವನ್ನು ನಿಗ್ರಹಿಸುತ್ತವೆ.

ವ್ಯಾಯಾಮವೂ ಅತ್ಯಗತ್ಯ
ಬರೆ ಈ ಪೇಯವನ್ನು ಕುಡಿದರೆ ಮಾತ್ರ ಸಾಲದು, ಜಾಪಾನೀಯರು ಅನುಸರಿಸುವಂತೆ ಸಾಕಷ್ಟು ನಡಿಗೆ, ಸೈಕ್ಲಿಂಗ್ ಮತ್ತು ಸುಲಭ ವ್ಯಾಯಾಮವನ್ನೂ ಅನುಸರಿಸಿದರೆ ಮಾತ್ರ ಈ ಪೇಯ ಕುಡಿದ ಪೂರ್ಣ ಪ್ರಯೋಜನ ಪಡೆಯಬಹುದು.

ತಯಾರಿಸುವ ವಿಧಾನ
ಹಂತ1: ಮೇಲೆ ವಿವರಿಸಿದ ಮೂರೂ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಗೊಟಾಯಿಸಿ. ಬಳಿಕ ಈ ಪೇಯವನ್ನು ಒಂದು ಲೋಟದಲ್ಲಿ ಸಂಗ್ರಹಿಸಿ.
ಹಂತ 2: ಈ ಪೇಯವನ್ನು ಪ್ರತಿ ರಾತ್ರಿ ಮಲಗುವ ಮುನ್ನ ಕುಡಿದು ಕೊಂಚ ದೂರ ನಡೆದಾಡಿ ಬಳಿಕ ಮಲಗಿ



Click it and Unblock the Notifications
