For Quick Alerts
ALLOW NOTIFICATIONS  
For Daily Alerts

  ಸುರಕ್ಷಿತ ವಾಂತಿಯಾಗಿಸಲು ನಾಲ್ಕು ಪ್ರಮಾಣಿತ ವಿಧಾನಗಳು

  By Arshad
  |

  ವಾಂತಿ ಎಂದರೆ ನಮ್ಮ ಹೊಟ್ಟೆಯೊಳಗಿನ ದ್ರವವನ್ನು ಬಲವಂತವಾಗಿ ಹೊರ ಹಾಕುವುದೇ ಆಗಿದೆ. ಅನೈಚ್ಛಿಕವಾದ ವಾಂತಿ ಎಂದರೆ ನಮ್ಮ ಹೊಟ್ಟೆಯಲ್ಲಿ ಏನೋ ತೊಂದರೆ ಇದೆ ಎಂದರ್ಥ. ಒಂದು ವೇಳೆ ಕೆಟ್ಟು ಹೋದ ಆಹಾರ ಸೇವಿಸಿದರೆ, ಒಗ್ಗದ ಆಹಾರ ಸೇವಿಸಿದರೆ ಅಥವಾ ಕೆಲವೊಮ್ಮೆ ವಿಷಾಹಾರ ಸೇವನೆ ಅಥವಾ ಕ್ಯಾನ್ಸರ್ ಮೂಲಕವೂ ವಾಂತಿಯಾಗಬಹುದು. ಕೆಲವೊಮ್ಮೆ ವಾಂತಿ ಮಾಡಿಸುವುದು ಅಗತ್ಯವಾಗಿರುತ್ತದೆ. ಉದಾಹರಣೆಗೆ ಸೇವಿಸಿದ ಆಹಾರದಲ್ಲಿ ವಿಷದ ಅಂಶವಿರುವುದು ಗೊತ್ತಾದರೆ, ಆಮ್ಲೀಯತೆ ತೀವ್ರವಾದರೆ, ಮದ್ಯದ ಅಮಲು ಹೆಚ್ಚಾದರೆ ಮೊದಲಾದ ಸಂದರ್ಭಗಳಲ್ಲಿ ವಾಂತಿ ಮಾಡಿಸಬೇಕಾಗುತ್ತದೆ. ಹೆಚ್ಚಿನವರು ವಾಂತಿಯ ಬಳಿಕ ಆರಾಮ ಅನುಭವಿಸುತ್ತಾರೆ.

  vomiting

  ಆದರೆ ವಾಂತಿಯನ್ನು ಬಲವಂತವಾಗಿ ಮಾಡಿಸುವುದು ಅಷ್ಟು ಸುರಕ್ಷಿತವಲ್ಲ. ಒಂದು ವೇಳೆ ವಾಂತಿಯಾಗುವ ಒತ್ತಡ ಹೆಚ್ಚಾದರೆ ಇದು ಗಂಟಲ ಒಳಗಿನ ಭಾಗಕ್ಕೆ ಘಾಸಿಯುಂಟು ಮಆದಿ ಗಾಯಗಳಾಗಿಸಬಹುದು. ಕೆಲವೊಮ್ಮೆ ಮೈಗ್ರೇನ್ ನಂತಹ ತಲೆನೋವಿದ್ದಾಗ ಸತತ ವಾಂತಿಯ ಅನುಭವವಾಗುತ್ತಿದ್ದು ವಾಂತಿಯಾಗದೇ ಬಹಳ ಸಂಕಟವಾಗುತ್ತದೆ. ಈ ಸಂದರ್ಭದಲ್ಲಿಯೂ ವಾಂತಿ ಮಾಡಿಸುವುದೇ ಸೂಕ್ತ ಕ್ರಮವಾಗಿದೆ. ವಾಂತಿ ಮಾಡಿಸುವುದು ಒಂದು ಸೂಕ್ತ ಕ್ರಮವನ್ನು ಅನುಸರಿಸಿದಾಗಲೇ ಇದು ಸುರಕ್ಷಿತವಾಗುತ್ತದೆ. ಬನ್ನಿ, ಈ ಸುರಕ್ಷಿತ ವಿಧಾನಗಳು ಯಾವುವು ಎಂಬುದನ್ನು ನೋಡೋಣ...

  ಮುಜುಗರವನ್ನುಂಟು ಮಾಡುವ ವಾಂತಿ ಸಮಸ್ಯೆಗೆ ಫಲಪ್ರದ ಮನೆಮದ್ದುಗಳು

  ಹೆಚ್ಚು ನೀರು ಕುಡಿಯಿರಿ

  ವಾಂತಿಯಾಗಬೇಕೆಂದಿದ್ದರೆ ನೀರು ಹೆಚ್ಚು ಹೆಚ್ಚಾಗಿ ಕುಡಿಯಿರಿ ಹಾಗೂ ವಾಂತಿಯನ್ನು ಹೊರಹಾಕುವ ಸ್ಥಳದ ಸಮೀಪವೇ ಇರಿ. ಸಾಕಷ್ಟು ನೀರು ಇದ್ದರೆ ವಾಂತಿ ಹೊರಬರಲು ಸುಲಭವಾಗುತ್ತದೆ ಹಾಗೂ ಅಗತ್ಯವಿರುವ ಒತ್ತಡ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಹೊಟ್ಟೆ, ಅನ್ನನಾಳ ಮತ್ತು ಗಂಟಲಿನಿಂದ ವಾಂತಿ ಸುಲಲಿತವಾಗಿ ಹಾಗೂ ಅಂಗಗಳಿಗೆ ಘಾಸಿಯಾಗದಂತೆ ಹೊರಬರುತ್ತದೆ. ಅಲ್ಲದೇ ಜಠರದ ಆಮ್ಲೀಯ ರಸವನ್ನು ತಿಳಿಗೊಳಿಸಿ ಉರಿಯಾಗದಂತೆ ಹೊರಹಾಕಲೂ ಸಾಧ್ಯವಾಗುತ್ತದೆ. ಆದರೆ ನೀರು ಕುಡಿದ ತಕ್ಷಣ ವಾಂತಿ ಮಾಡಬಾರದು. ಸುಮಾರು ಹತ್ತು ನಿಮಿಷ ಕಳೆದ ಬಳಿಕವೇ ವಾಂತಿಯಾಗಿಸುವುದು ಕ್ಷೇಮ.

  vomiting

  ನಾಲಿಗೆ ಸ್ವಚ್ಛಗೊಳಿಸುವ ಉಪಕರಣ ಬಳಸಿ

  ಟಂಗ್ ಕ್ಲೀನರ್ ಎಂಬ ಈ ಸುಲಭ ಉಪಕರಣವನ್ನು ಹಿಂದೆ ನಮ್ಮ ಹಿರಿಯರು ಬೇವಿನ ಕಡ್ಡಿಯನ್ನು ಅಡ್ಡ ಸೀಳಿ ಬಳಸುತ್ತಿದ್ದರು. ಈ ಉಪಕರಣದಿಂದ ನಾಲಿಗೆಯ ಹಿಂಭಾಗವನ್ನು ಕೆರೆದಾಗ ಹೊಟ್ಟೆ ಕಿವುಚಿದಂತಾಗುವುದನ್ನು ನಾವೆಲ್ಲರೂ ಅನುಭವಿಸಿದ್ದೇವೆ. ಬರೆಯ ನಾಲಿಗೆಯ ಹಿಂಭಾಗ ಮಾತ್ರವಲ್ಲ, ಕಿರುನಾಲಿಗೆ, ಗಂಟಲ ಮೇಲ್ಭಾಗ ಮೊದಲಾದ ಯಾವುದೇ ಭಾಗಕ್ಕೆ ಈ ಉಪಕರಣ ತಾಕಿದಾಗ ಸೂಕ್ಷ್ಮಸಂವೇದನೆಯುಂಟಾಗಿ ವಾಂತಿಯಾಗುತ್ತದೆ. ಇದನ್ನೇ ವಾಂತಿಯಾಗಿಸಲು ಬಳಸಬಹುದು. ಈ ಉಪಕರಣವನ್ನು ನಾಲಿಗೆಯ ಹಿಂಭಾಗದಲ್ಲಿ ಮೂರು ನಾಲ್ಕು ಬಾರಿ ಉಜ್ಜಿಕೊಳ್ಳುತ್ತಾ ಹಿಂದಿನಿಂದ ಮುಂದೆ ಬರುವಂತೆ ಕೆರೆಯಬೇಕು. ಇದರಿಂದ ತಕ್ಷಣವೇ ವಾಂತಿಯಾಗುತ್ತದೆ.

  vomiting

  ಬೆರಳನ್ನು ಬಳಸಿ

  ವಾಂತಿಯಾಗಿಸುವ ಅತ್ಯಂತ ಸುಲಭ ವಿಧಾನವೆಂದರೆ ಬೆರಳು ಉಪಯೋಗಿಸುವುದು. ತೋರು ಮತ್ತು ಮಧ್ಯದ ಬೆರಳನ್ನು ಜೊತೆಯಾಗಿ ಗಂಟಲ ಆಳಕ್ಕೆ ಕೊಂಚವೇ ಒತ್ತಡದಿಂದ ತಾಕಿಸಿ. ಇದರಿಂದ ತಕ್ಷಣವೇ ವಾಂತಿಯಾಗುತ್ತದೆ. ಕೆಲವೊಮ್ಮೆ ಇದು ಪೂರ್ಣವಾಗಿ ವಾಂತಿಯಾಗಿಸಲು ಸಾಧ್ಯವಾಗದೇ ಹೋಗಬಹುದು. ಆಗ ಎರಡರ ಬದಲು ಮೂರು ಬೆರಳುಗಳನ್ನು ಬಳಸಬಹುದು. ಇದೂ ಸಾಧ್ಯವಾಗದೇ ಇದ್ದರೆ ಬೆರಳುಗಳನ್ನು ಗಂಟಲ ಒಳಗೆ ಅಡ್ಡಲಾಗಿ ನೇವರಿಸಬೇಕು.

  ಯಾರಾದರೊಬ್ಬರು ವಾಂತಿ ಮಾಡುತ್ತಿರುವುದನ್ನು ಕಲ್ಪಿಸಿಕೊಳ್ಳಿ

  ಇತರರು ವಾಂತಿ ಮಾಡಿಕೊಳ್ಳುವುದನ್ನು ನಾವು ನೋಡದಿರುವುದೇ ಒಳ್ಳೆಯದು. ಏಕೆಂದರೆ ವಾಂತಿಯಾಗುವುದನ್ನು ನೋಡಿದಾದ ನೋಡಿದವರಿಗೂ ವಾಂತಿಯಾಗುವ ಪ್ರಚೋದನೆ ದೊರಕುತ್ತದೆ. ಆದ್ದರಿಂದ ವಾಂತಿಯಾಗಬೇಕೆಂದರೆ ವ್ಯಕ್ತಿಯೊಬ್ಬರು ವಾಂತಿ ಮಾಡಿಕೊಳ್ಳುತ್ತಿರುವ ಚಿತ್ರವನ್ನು ಕಲ್ಪಿಸಿಕೊಳ್ಳಿ. ಅಥವಾ ಗೂಗಲ್ ಅಥವಾ ಯೂಟ್ಯೂಬ್ ನಲ್ಲಿ ವಾಂತಿ ಮಾಡಿಕೊಳ್ಳುತ್ತಿರುವ ಚಿತ್ರ ಅಥವಾ ವೀಡಿಯೋ ವೀಕ್ಷಿಸಿ ತಕ್ಷಣ ನಿಮಗೂ ವಾಂತಿಯಾಗುವ ಸಾಧ್ಯತೆ ಇದೆ.

  ಉಗುರುಬೆಚ್ಚನೆಯ ನೀರಿನಿಂದ ಮುಕ್ಕಳಿಸಿ

  ಇನ್ನೊಂದು ಸುಲಭವಾದ ವಿಧಾನವೆಂದರೆ ಉಗುರುಬೆಚ್ಚನೆಯ ನೀರಿನಿಂದ ಗಳಗಳ ಮಾಡುವುದು. ಒಂದೇ ಸಮನೆ ಕನಿಷ್ಟ ಹತ್ತು ಸೆಕೆಂಡುಗಳನ್ನಾದರೂ ಹೀಗೇ ಗಳಗಳ ಮಾಡಬೇಕು. ಗದ್ದವನ್ನು ಸಾಧ್ಯವಾದಷ್ಟು ಮೇಲೆ ಎತ್ತಿರಬೇಕು. ಈ ವಿಧಾನದಿಂದ ಕಿರುನಾಲಿಗೆಗೆ ಪ್ರಚೋದನೆ ದೊರೆತು ತಕ್ಷಣವೇ ವಾಂತಿಯಾಗುತ್ತದೆ.

  vomiting

  ನಿಂತಲ್ಲೇ ಗರಗರ ತಿರುಗುವುದು

  ನಾವು ಚಿಕ್ಕಂದಿನಲ್ಲಿ ನಿಂತಲ್ಲೇ ತಿರುತಿರುಗಿ ನಿಂತ ಬಳಿಕ ಸುತ್ತಲ ಜಗವೆಲ್ಲಾ ತಿರುಗುವುದನ್ನು ಅನುಭವಿಸಿದ್ದೇವೆ. ಆದರೆ ಇದು ನಿಂತ ತಕ್ಷಣವೇ ವಾಂತಿಯಾಗುವಂತಹ ಅನುಭವವನ್ನೂ ಅನುಭಿಸಿರಬೇಕಲ್ಲವೇ? ಒಂದು ವೇಳೆ ಬೇರೆ ಯಾವ ವಿಧಾನವೂ ಫಲಕಾರಿಯಾಗದೇ ಇದ್ದರೆ ಈ ವಿಧಾನ ಅನುಸರಿಸಿ. ನಿಂತಲ್ಲೇ ತಲೆಯನ್ನು ತಗ್ಗಿಸಿ ಗರಗರ ತಿರುಗಿ ತಲೆತಿರುಗುವಂತಾದಾಗ ನಿಲ್ಲಿ. ಈ ಪ್ರಯತ್ನದಲ್ಲಿ ಯಾವುದೇ ಗಾಯವಾಗದಂತೆ ಮಾತ್ರ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆ ಆತ್ಮೀಯರ ಸಹಾಯ ಪಡೆದುಕೊಳ್ಳುವುದು ಉತ್ತಮ.

  ನಿಮ್ಮ ಹಳೆಯ ನೆನಪುಗಳನ್ನು ಕೆದಕಿ

  ಯಾವುದಾದರೂ ಹಳೆಯ ನೆನಪು ಕೆದಕಿದಾಗ ವಾಂತಿ ಬರುವಂತಹ ಪ್ರಸಂಗವೇನಾದರೂ ಇದ್ದರೆ ಇದನ್ನು ಮತ್ತೊಮ್ಮೆ ಕೆದಕುವ ಮೂಲಕ ವಾಂತಿಯಾಗಬಹುದು. ನಿಮಗೆ ಕೊಂಚವೂ ಇಷ್ಟವಿಲ್ಲದ ಔಷಧಿಯ ವಾಸನೆ, ವಾಂತಿಗೆ ಕಾರಣವಾಗಬಹುದಾದ ಯಾವುದೋ ನೆನಪು ಒಟ್ಟಾರೆ ವಾಂತಿ ಮಾಡಬಹುದಾದ ಯಾವುದೇ ನೆನಪನ್ನು ಕೆದಕಿದರೆ ಸಾಕು.

  ನೆನಪಿಡಿ: ವಾಂತಿಯನ್ನು ಅಗತ್ಯವಿದ್ದರೆ ಮಾತ್ರ ಮಾಡಬೇಕೇ ವಿನಃ ಅನಗತ್ಯವಾಗಿ ವಾಂತಿ ಮಾಡಬಾರದು. ಅಲ್ಲದೇ ಒಂದು ವೇಳೆ ವಾಂತಿ ಸತತವಾಗಿದ್ದರೆ ಇದರ ಅಡ್ಡಪರಿಣಾಮವಾಗಿ ಹಲ್ಲುಗಳು ಸವೆಯುವುದು, ಗಂಟಲ ಒಳಭಾಗದಲ್ಲಿ ಗಾಯವಾಗುವುದು, ಅನ್ನನಾಳಕ್ಕೂ ಘಾಸಿಯುಂಟಾಗುವುದು ಮೊದಲಾಗುವುದು ಎದುರಾಗುತ್ತದೆ.

  English summary

  Safe tried and tested ways to induce vomiting

  Normally, vomiting is a sign that something has gone wrong in our body. It could be as innocuous as a reaction to spoilt food or something more serious like poisoning or cancer. But sometimes, vomiting needs to be induced in order to cure a nasty case of hangover or a bad episode of acidity. Many people also experience great relief after expelling the contents of their stomach. However, forcibly inducing vomiting can sometimes lead to bleeding and injuries to your throat.
  Story first published: Monday, November 13, 2017, 23:14 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more