Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಕಾಮಾಲೆ ರೋಗವನ್ನು ಬುಡ ಸಮೇತ ಕಿತ್ತು ಹಾಕುವ 'ಆಹಾರ ಪಥ್ಯ'
ಕಣ್ಣುಗಳಲ್ಲಿ ಹಳದಿ ಬಣ್ಣ ತರಿಸುವ ಕಾಮಾಲೆ (ಜಾಂಡೀಸ್) ರೋಗ ಯಕೃತ್‌ನ (ಲಿವರ್) ವೈಫಲ್ಯವನ್ನು ತೋರುತ್ತದೆ. ಹಳೆಯ ಮತ್ತು ಸತ್ತ ಕೆಂಪು ರಕ್ತಕಣಗಳನ್ನು ಒಡೆಯಲು ನಮ್ಮ ಯಕೃತ್ ಬಿಲಿರುಬಿನ್ ಎಂಬ ಪೋಷಕಾಂಶವನ್ನು ಬಳಸುತ್ತದೆ.
ಬೇಸಿಗೆ ಕಾಲ ಬರುತ್ತಿರುವಂತೆ ಕಲುಷಿತ ನೀರು ಮತ್ತು ವಾತಾವರಣದ ಬದಲಾವಣೆಯಿಂದಾಗಿ ಹಲವಾರು ರೋಗಗಳು ದೇಹವನ್ನು ಭಾದಿಸಲು ಆರಂಭಿಸುತ್ತದೆ. ಇಂತಹ ರೋಗಗಳು ಕೆಲವೊಮ್ಮೆ ನಿಧಾನವಾಗಿ ಪತ್ತೆಯಾದರೆ ಇನ್ನು ಕೆಲವು ಸಲ ಆರಂಭದಲ್ಲೇ ನಮಗೆ ತಿಳಿದುಬರುತ್ತದೆ. ದೇಹದ ಒಳಗಿನ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ಅದರ ಪರಿಣಾಮ ದೇಹದ ಮೇಲಾಗುತ್ತದೆ ಅಥವಾ ದೇಹದ ಹೊರಗಡೆ ಏನಾದರೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಾವು ನಿರ್ಲಕ್ಷ್ಯ ಮಾಡುವ ಜಾಂಡೀಸ್‌ನ ಲಕ್ಷಣಗಳಿವು!
ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವಂತಹ ಯಕೃತ್(ಲಿವರ್) ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದಾಗ ಕಾಮಾಲೆ ರೋಗ ಕಾಣಿಸಿಕೊಳ್ಳುತ್ತದೆ. ಕಾಮಾಲೆ ರೋಗ ಕಾಣಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಬಿಲಿರುಬಿನ್ ಮಟ್ಟವು ಏರಿಕೆಯಾಗುತ್ತದೆ. ಇದರಿಂದ ಚರ್ಮವು ಹಳದಿಯಾಗಲು ಆರಂಭವಾಗುತ್ತದೆ. ಕಾಮಾಲೆ ರೋಗ ಕಂಡುಬಂದ ತಕ್ಷಣ ಅದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯವಾಗಿ ನೀಡಲೇಬೇಕು. ಇಲ್ಲವಾದಲ್ಲಿ ಯಕೃತ್ ಕೆಟ್ಟು ಹೋಗಿ ಜೀವಕ್ಕೆ ಅಪಾಯವಾಗಬಹುದು.
ಕಾಮಾಲೆ ರೋಗವಿರುವವರು ಕೆಲವೊಂದು ಆಹಾರವನ್ನು ತಿನ್ನಬಾರದು. ಆದರೆ ಬೋಲ್ಡ್ ಸ್ಕೈ ಕಾಮಾಲೆ ರೋಗ (ಜಾಂಡೀಸ್ ರೋಗ) ದವರು ಯಾವ ಆಹಾರವನ್ನು ತಿಂದರೆ ಬೇಗನೆ ಚೇತರಿಸಿಕೊಳ್ಳಬಹುದು ಎಂದು ಹೇಳಿಕೊಡಲಿದೆ...

ನೆಲ್ಲಿಕಾಯಿ
ನೆಲ್ಲಿಕಾಯಿಯಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ ಸಿ ಪ್ರಮಾಣ ಹೇರಳವಾಗಿದ್ದು ಕಾಮಾಲೆಗೆ ಉತ್ತಮವಾದ ಆಹಾರವಾಗಿದೆ. ಇದಕ್ಕಾಗಿ ಬೀಜ ನಿವಾರಿಸಿ ಕೊಂಚ ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದು ಯಕೃತ್‌ನ ಜೀವಕೋಶಗಳನ್ನು ಬೆಳೆಸಿ ಹಳೆಯ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ.

ತುಳಸಿ ಎಲೆಗಳು
ಕಾಮಾಲೆ ಇರುವವರು ತುಳಸಿ ಎಲೆಗಳನ್ನು ಸೇವನೆ ಮಾಡಿದರೆ ಒಳ್ಳೆಯದು. 5-6 ತುಳಸಿ ಎಲೆಗಳನ್ನು ಜಜ್ಜಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ರೋಗವು ಬೇಗನೆ ನಿಯಂತ್ರಣಕ್ಕೆ ಬರುವುದು.

ಕಬ್ಬಿನ ಹಾಲು
ಕಾಮಾಲೆ ರೋಗವನ್ನು ಅತಿ ಶೀಘ್ರವಾಗಿ ನಿವಾರಿಸುವ ಪ್ರಮುಖ ಆಹಾರವೆಂದರೆ ಅದು ಕಬ್ಬಿನಹಾಲು. ದಿನದಲ್ಲಿ ಎರಡು ಲೋಟ ಕಬ್ಬಿನ ಹಾಲನ್ನು ಕುಡಿಯುವುದರಿಂದ ಯಕೃತ್ ನ ಕಾರ್ಯಚಟುವಟಿಕೆ ಸಾಮಾನ್ಯವಾಗಿ ಯಕೃತ್ ಬಲಗೊಳ್ಳುವುದು. ಕೇವಲ 10-15 ದಿನದಲ್ಲಿ ಈ ಕಾಯಿಲೆಯನ್ನು ಸಂಪೂರ್ಣವಾಗಿ ನಿವಾರಿಸಬಹುದು ಎಂದು ಅಧ್ಯಯನಗಳಿಂದ ಕೂಡ ಸಾಬೀತಾಗಿದೆ. ಬಿಸಿಲಿನ ಝಳಕ್ಕೆ, ತಂಪುಣಿಸುವ ಕೂಲ್ ಕೂಲ್ 'ಕಬ್ಬಿನ ಹಾಲು'

ಕೊತ್ತಂಬರಿ ಬೀಜದ ನೀರು
ಕೊತ್ತಂಬರಿ ಬೀಜವನ್ನು ನಾವು ಪ್ರತಿಯೊಂದು ಮನೆಗಳಲ್ಲೂ ಕಾಣುತ್ತೇವೆ. ಇದೇ ಕೊತ್ತಂಬರಿ ಬೀಜದ ನೀರು ಯಕೃತ್ ಅನ್ನು ಶುದ್ಧೀಕರಿಸುವುದು. ಇಷ್ಟು ಮಾತ್ರವಲ್ಲದೆ ರಕ್ತದಲ್ಲಿರುವ ವಿಷಕಾರಿ ಅಂಶ ಹಾಗೂ ಹೆಚ್ಚಿನ ಬಿಲಿರುಬಿನ್ ನ್ನು ತೆಗೆದುಹಾಕುವುದು. ಮೂರು ಕಪ್ ಶುದ್ಧೀಕರಿಸಿದ ನೀರಿನಲ್ಲಿ 2-3 ಚಮಚ ಕೊತ್ತಂಬರಿ ಬೀಜವನ್ನು ರಾತ್ರಿಯಿಡಿ ನೆನೆಯಲು ಹಾಕಿ ಅಥವಾ ಅರ್ಧ ಲೀಟರ್ ನೀರಿನಲ್ಲಿ ಕೊತ್ತಂಬರಿ ಬೀಜವನ್ನು ಕುದಿಸಿ. ಈ ನೀರನ್ನು ದಿನದಲ್ಲಿ ಮೂರು ಸಲ 15 ದಿನಗಳ ಕಾಲ ಕುಡಿದರೆ ಕಾಮಾಲೆ ರೋಗವು ನಿವಾರಣೆಯಾಗುವುದು.

ಬಾರ್ಲಿ ನೀರು
ಬಾರ್ಲಿಯಲ್ಲಿರುವ ಇರುವಂತಹ ಮೂತ್ರವರ್ಧಕ ಗುಣವು ಕಾಮಾಲೆ ರೋಗವನ್ನು ಪರಿಣಾಮಕಾರಿಯಾಗಿ ನಿವಾರಿಸಲು ಒಂದು ಒಳ್ಳೆಯ ಮದ್ದು. ಒಂದು ಲೋಟ ನೀರಿಗೆ ಒಂದು ಚಮಚ ಹುರಿದ ಬಾರ್ಲಿಯ ಹುಡಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದರ ರುಚಿ ಹಿಡಿಸದೆ ಇದ್ದರೆ ಆಗ ಒಂದು ಚಮಚ ಸಾವಯವ ಜೇನುತುಪ್ಪ, ಒಂದು ಚಮಚ ತಾಜಾ ಲಿಂಬೆ ರಸ, ಸ್ವಲ್ಪ ಉಪ್ಪು ಹಾಕಿ. ಕಾಮಾಲೆ ರೋಗವು ಕಡಿಮೆಯಾಗುವ ತನಕ ಪ್ರತೀ ದಿನ 4-5 ಲೋಟ ಬಾರ್ಲಿ ನೀರನ್ನು ಸೇವಿಸಿ. ಬಾರ್ಲಿ ನೀರು: ಇದುವೇ ಆರೋಗ್ಯ ವೃದ್ಧಿಗೆ ಪನ್ನೀರು

ಮಜ್ಜಿಗೆ
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿನಾಂಶವು ಹೇರಳವಾಗಿದೆ. ಇದು ಕಾಮಾಲೆ ರೋಗವನ್ನು ನಿವಾರಣೆ ಮಾಡುವಲ್ಲಿ ಪ್ರಮುಖಪಾತ್ರ ನಿಭಾಯಿಸುವುದು. ದಿನದಲ್ಲಿ ಎರಡು ಅಥವಾ ಮೂರು ಲೋಟ ಮಜ್ಜಿಗೆ ಸೇವಿಸಿ. ಇದರಿಂದ ಕಾಮಾಲೆ ರೋಗದ ಲಕ್ಷಣಗಳು ಪರಿಣಾಮಕಾರಿಯಾಗಿ ಕಡಿಮೆಯಾಗುವುದು. ಆರೋಗ್ಯ ಟಿಪ್ಸ್: ಬಿರು ಬಿಸಿಲಿನ ದಾಹಕ್ಕೆ, ತಂಪುಣಿಸು 'ಮಜ್ಜಿಗೆ'

ಬಾಳೆಹಣ್ಣು
ಕಾಮಾಲೆರೋಗ ಇರುವವರು ತಮ್ಮ ಆಹಾರ ಕ್ರಮದಲ್ಲಿ ಬಾಳೆಹಣ್ಣನ್ನು ಸೇರಿಸಿಕೊಳ್ಳಲೇಬೇಕು. ಇದರಲ್ಲಿ ಎಲೆಕ್ಟ್ರೋಲೆಟ್ಸ್ ಮತ್ತು ಪೊಟಾಶಿಯಂ ಸಮೃದ್ಧವಾಗಿದೆ. ಇದು ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಒಂದು ಬಾಳೆಹಣ್ಣನ್ನು ಪ್ರತೀ ದಿನ ತಿನ್ನಿ ಅಥವಾ ಬಾಳೆಹಣ್ಣಿಗೆ ಸಾವಯವ ಜೇನುತುಪ್ಪ ಸೇರಿಸಿ ತಿನ್ನಿ.



Click it and Unblock the Notifications











