ಧೂಮಪಾನಿ ಹಾಗೂ ಹೆಚ್ ಐ ವಿ ಪೀಡಿತರಿಗೆ ಶ್ವಾಸಕೋಶದ ಕ್ಯಾನ್ಸರ್‌ನ ಅಪಾಯ ಹೆಚ್ಚು!

By Arshad
Subscribe to Boldsky

ಇತ್ತೀಚಿನ ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಈಗಾಗಲೇ HIV ಪೀಡಿತರಾಗಿದ್ದು ಧೂಮಪಾನಿಗಳೂ ಆಗಿರುವ ವ್ಯಕ್ತಿಗಳು HIV ಚಿಕಿತ್ಸೆಗಾಗಿ antiretroviral ಅಥವಾ HIVಯ ವಿರುದ್ಧ ರಕ್ಷಣೆ ನೀಡುವ ಔಷಧಿಗಳನ್ನು ಸೇವಿಸುತ್ತಿರುವ ವ್ಯಕ್ತಿಗಳಿಗೆ ಸಾವು ಸಂಭವಿಸಲು ಏಡ್ಸ್ ಗಿಂಗಲೂ ಶ್ವಾಸಕೋಶದ ಕ್ಯಾನ್ಸರ್ ಪ್ರಬಲ ಕಾರಣವಾಗಲಿದೆ. HIV ಪೀಡಿತರಿಗೆ ಸಾವಿನತ್ತ ನೂಕಲ್ ಏಡ್ಸ್ ವೈರಸ್ ಗಿಂತಲೂ ಧೂಮಪಾನವೇ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಶೋಧಕರು ಹಲವಾರು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಿದ್ದಾರೆ.

ಏಡ್ಸ್ ಚಿಕಿತ್ಸೆಗಾಗಿ ಪಡೆಯುವ ಔಷಧಿಗಳು ವೈರಸ್ಸುಗಳನ್ನು ದೂರವಿಡುವಲ್ಲಿ ಸಮರ್ಥವಾಗಿದ್ದು ರೋಗಿಗೆ ಇನ್ನಷ್ಟು ಹೆಚ್ಚಿನ ಆಯಸ್ಸು ನೀಡುತ್ತವೆ. ಆದರೆ ಇವರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. HIV ಪೀಡಿತರೂ ಧೂಮಪಾನಿಗಳೂ ಆಗಿರುವ ವ್ಯಕ್ತಿಗಳು ಧೂಮಪಾನಿಗಳಲ್ಲದ HIV ಪೀಡಿತರಿಗಿಂತ ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾವಿಗೀಡಾಗುವ ಸಂಭವ ಆರರಿಂದ ಹರಿಮೂರು ಪಟ್ಟು ಹೆಚ್ಚು.

HIV ಪೀಡಿತರು ಒಂದು ವೇಳೆ ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಿದರೆ ಮಾತ್ರ ಈ ಸಂಭವವನ್ನು ಕಡಿಮೆಗೊಳಿಸಬಹುದು. ಇಂದಿನ ಲೇಖನದಲ್ಲಿ ಈ ಮಾರಕ ಕ್ಯಾನ್ಸರ್ ಬಾರದಂತೆ ತಡೆಗಟ್ಟುವ ಕೆಲವು ಮಾಹಿತಿಗಳನ್ನು ನೀಡಲಾಗಿದ್ದು ಆರೋಗ್ಯದ ಕಾಳಜಿ ಹೊಂದಿರುವ ಪ್ರತಿಯೊಬ್ಬರೂ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ...

ಧೂಮಪಾನ ಮಾಡಬೇಡಿ

ಧೂಮಪಾನ ಮಾಡಬೇಡಿ

ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನವೇ ಮೂಲ. 80% ರಿಂದ 90 % ರಷ್ಟು ಕ್ಯಾನ್ಸರ್ ಗಳು ಧೂಮಪಾನದಿಂದಲೇ ಆಗಮಿಸುತ್ತವೆ. ಉಳಿದ ಹತ್ತು ಶೇಖಡಾದಲ್ಲಿ ಒಂಬತ್ತರಷ್ಟು ಶೇಖಡಾ ಪರೋಕ್ಷ ಧೂಮಪಾನ, ಅಂದರೆ ಧೂಮಪಾನಿಗಳು ಬಿಟ್ಟ ಹೊಗೆಯನ್ನು ಅನಿವಾರ್ಯವಾಗಿ ಸೇವಿಸುವವರಲ್ಲಿ ಕಂಡುಬರುತ್ತದೆ. ಒಂದು ಶೇಖಡಾ ಮಾತ್ರ ಇತರ ಕಾರಣದಿಂದ ಆವರಿಸಬಹುದು. ಆದ್ದರಿಂದ ಧೂಮಪಾನದ ಮೂಲಕ ಏನೋ ಸಾಧನೆ ಮಾಡಿದ ತೋರಿಕೆಯ ಬೂಟಾಟಿಕೆಯನ್ನು ಬಿಟ್ಟು ಧೂಮಪಾನರಹಿತ ಜೀವನದ ಮೂಲಕ ಈ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆಯನ್ನು ಅತಿ ಕಡಿಮೆಯಾಗಿಸಬಹುದು.

ನಿಮ್ಮ ಮನೆಯಲ್ಲಿ ರೇಡಾನ್ ಇದೆಯೇ ಪರೀಕ್ಷಿಸಿ

ನಿಮ್ಮ ಮನೆಯಲ್ಲಿ ರೇಡಾನ್ ಇದೆಯೇ ಪರೀಕ್ಷಿಸಿ

ರೇಡಾನ್ ಎಂದರೆ ಪರಮಾಣು ಸಂಖ್ಯೆ 86 ಉಳ್ಳ ವಿಕಿರಣಶೀಲ ಅನಿಲ ಧಾತುವಾಗಿದ್ದು ಅಲ್ಪ ಪ್ರಮಾಣದಲ್ಲಿ ವಿಕಿರಣವನ್ನು ಸೂಸುತ್ತದೆ. ಈ ವಿಕಿರಣಕ್ಕೆ ಒಳಗಾದ ವ್ಯಕ್ತಿಗಳಿಗೂ ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚು. ಭೂಮಿಯಲ್ಲಿ ಒಂದು ವೇಳೆ ಯುರೇನಿಯಂ ನ ಅಂಶವಿದ್ದರೆ ಇದು ಒಡೆದು ಕಣ್ಣಿಗೆ ಕಾಣದ ಹೊಗೆಯ ರೂಪದಲ್ಲಿ ಮನೆಯಲ್ಲಿ ಆವರಿಸಬಹುದು. ಒಂದು ವೇಳೆ ನಿಮ್ಮ ಮನೆಯ ನೆಲ ಆಗಾಗ ಬಿರುಕು ಬಿಡುತ್ತಿದ್ದರೆ ಈ ಸಾಧ್ಯತೆ ಹೆಚ್ಚು. ಇದನ್ನು ಪತ್ತೆಹಚ್ಚಲು ರೇಡಾನ್ ಉಪಕರಣ ಲಭ್ಯವಿದೆ. ಒಂದು ವೇಳೆ ಹೌದು ಎಂದಾದರೆ ನಿಮ್ಮ ಮನೆಯಲ್ಲಿ ಮಾತ್ರವಲ್ಲ, ಇಡಿಯ ಪ್ರದೇಶದ ಜನತೆಗೇ ಅಪಾಯವಿದೆ.

ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ

ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ

ಒಂದು ಸಮೀಕ್ಷೆಯಲ್ಲಿ ಕಂಡುಕೊಂಡಂತೆ 29%ರಷ್ಟು ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಕೆಲಸದ ಸ್ಥಳದಲ್ಲಿ ಕ್ಯಾನ್ಸರ್ ಉಂಟುಮಾಡುವ ಕಣಗಳಿರುವ ಕಾರಣ ಎದುರಾಗಿರುತ್ತದೆ. ಆದ್ದರಿಂದ ನಿಮ್ಮ ಕೆಲಸದ ಸ್ಥಳದಲ್ಲಿ ವಾಯು ಮಲಿನಗೊಂಡಿದ್ದರೆ ಸಾಕಶ್ಟು ಎಚ್ಚರಿಕೆ ವಹಿಸುವ ಮೂಲಕ ಗಂಡಾಂತರದಿಂದ ಪಾರಾಗಬಹುದು.

ಮನೆಯಲ್ಲಿಯೂ ಜಾಗರೂಕರಾಗಿರಿ

ಮನೆಯಲ್ಲಿಯೂ ಜಾಗರೂಕರಾಗಿರಿ

ನಿಮ್ಮ ಮನೆಯ ಗ್ಯಾರೇಜ್ ಅಥವಾ ಕೊಳೆಯಾಗಿರುವ ಸಿಂಕ್ ಸಹಾ ಅಪಾಯಕರ ರಾಸಾಯನಿಕಗಳನ್ನು ಸೂಸುತ್ತಿರಬಹುದು. ವಿಶೇಷವಾಗಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್, ಬಲ್ಬು, ಸಿ ಎಫ್ ಎಲ್ ಮೊದಲಾದವು ಹಾಳಾದ ಬಳಿಕ ಇವು ಒಡೆದರೆ ಒಳಗಿನ ರಾಸಾಯನಿಕಗಳು ಹೊರಸೂಸಿ (ವಿಶೇಷವಾಗಿ ಸಿಎಫ್ ಎಲ್ ಒಳಗಿನ ಪಾದರಸ) ಗಾಳಿಯನ್ನು ಕಲುಶಿತಗೊಳಿಸಬಹುದು. ಈ ಅಪಾಯಗಳನ್ನು ಉಪಕರಣಗಳ ಲೇಬಲ್ ಅಥವಾ ಪುಸ್ತಕದಲ್ಲಿ ಬರೆದಿರುತ್ತಾರೆ. ಈ ಬಗ್ಗೆ ಮಾಹಿತಿ ಪಡೆದಿರುವುದು ಉತ್ತಮ.
ವಿವಿಧ ಹಣ್ಣು ತರಕಾರಿಗಳನ್ನು ಸೇವಿಸಿ

ವಿವಿಧ ಹಣ್ಣು ತರಕಾರಿಗಳನ್ನು ಸೇವಿಸಿ

ಹಸಿಯಾಗಿ ತಿನ್ನಬಹುದಾದ ತರಕಾರಿ ಹಾಗೂ ಹಣ್ಣುಗಳು ದೇಹಕ್ಕೆ ಹಲವು ವಿಧದ ರಕ್ಷಣೆ ಒದಗಿಸುತ್ತವೆ. ಇದರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಹಾ ಸೇರಿದೆ. ವಿಶೇಷವಾಗಿ ವಿವಿಧ ಬಣ್ಣಗಳ ಹಣ್ಣುಗಳನ್ನು ಸೇವಿಸಬೇಕು. ಪ್ರತಿ ಹಣ್ಣು ತರಕಾರಿಯಲ್ಲೂ ತನ್ನದೇ ಆದ ವಿಶೇಷ ಪೋಷಕಾಂಶಗಳಿದ್ದು ದೇಹಕ್ಕೆ ರಕ್ಷಣೆ ಒದಗಿಸುತ್ತವೆ. ಅದರಲ್ಲೂ ಹೆಚ್ಚಿನವರು ಇಷ್ಟಪಡದ ಹಸಿರು ಸೊಪ್ಪುಗಳಾದ ಬಸಲೆ, ಪಾಲಕ್,ಬ್ರೋಕೋಲಿ ಮೊದಲಾದವು, ಬಿಳಿ ಈರುಳ್ಳಿ, ಕೆಂಪು ಸೇಬು ಟೊಮೆಟೊ ಮೊದಲಾದವುಗಳನ್ನು ಹಸಿಯಾಗಿಯೇ ಸೇವಿಸಬೇಕು.

For Quick Alerts
ALLOW NOTIFICATIONS
For Daily Alerts

    English summary

    Lung cancer risk high among smokers with hiv

    A recent study has shown that smokers living with HIV who consistenly take antiretroviral medications will be more likely to die of lung cancer than AIDS. The researchers point out that the number one killer of people with HIV, is actually not the virus, but smoking itself. The antiviral medicines are helping people with HIV to live longer, but they are dying from cancer at rates higher than that of the normal population. The research found out that people with HIV who continued smoking were 6 to 13 times more likley to die from lung cancer than due to AIDS-related causes.
    Story first published: Wednesday, September 20, 2017, 23:48 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more