Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೆನಪಿಡಿ, ಮಳೆಗಾಲದಲ್ಲಿ ಮೀನು ಆರೋಗ್ಯಕ್ಕೆ ಒಳ್ಳೆಯದಲ್ಲ...
ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಕಾರಣದಿಂದ ಮೀನು ಹಿಡಿಯಬಾರದು ಎಂದು ಸುಮಾರು 60 ದಿನಗಳ ಕಾಲ ಮೀನುಗಾರರಿಕೆಗೆ ನಿಷೇಧ ಹೇರಲಾಗುತ್ತದೆ. ಆದರೆ ಕೆಲವು ಮಂದಿ ಕದ್ದುಮುಚ್ಚಿ ಮೀನುಗಾರಿಕೆ ನಡೆಸುವರು. ಇದರಿಂದ ಮೀನುಗಳ ಸಂತತಿ ನಾಶವಾಗುವುದು ಮಾತ್ರವಲ್ಲದೆ ಮುಂದಿನ ಜನಾಂಗಕ್ಕೆ ಮೀನು ಸಿಗದೇ ಇರಬಹುದು. ಈಗಾಗಲೇ ಕೈಗಾರಿಕೆಯ ಕಲುಷಿತ ನೀರನ್ನು ಬಿಟ್ಟು ಮತ್ಸ್ಯ ಸಂತತಿಯ ನಾಶ ಮಾಡಲಾಗಿದೆ.
ವಿದೇಶಗಳಿಗೆ ರಫ್ತಾಗುವಂತಹ ಮೀನಿನ ಸಂತತಿ ನಾಶವಾದರೆ ಅದರಿಂದ ಆರ್ಥಿಕವಾಗಿಯೂ ಮುಂದೆ ಭಾರೀ ಪರಿಣಾಮ ಬೀರಲಿದೆ. ಆದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯೇ ಎನ್ನುವ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಕೆಲವೊಂದು ಆರೋಗ್ಯ ಕಾರಣಗಳಿಂದಾಗಿ ಮಳೆಗಾಲದಲ್ಲಿ ಮೀನು ತಿನ್ನಬಾರದು ಎಂದು ಹೇಳಲಾಗುತ್ತದೆ. ಇದು ಯಾಕೆ ಎಂದು ತಿಳಿಯಲು ಮುಂದೆ ಕಣ್ಣು ಹಾಯಿಸಿ....

ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆಯು ದುರ್ಬಲ
ಮಳೆಗಾಲದ ಸಮಯದಲ್ಲಿ ಜೀರ್ಣಾಂಗ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು. ಹೆಚ್ಚು ಭಾರವಾಗಿರುವುದನ್ನು ತಿಂದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಉಂಟಾಗಬಹುದು. ಮಳೆಗಾಲದಲ್ಲಿ ಮಂಸಾಹಾರವನ್ನು ತ್ಯಜಿಸಿದರೆ ತುಂಬಾ ಒಳ್ಳೆಯದು.

ಮಳೆಗಾಲದಲ್ಲಿ ನೀರು ಕಲುಷಿತವಾಗುವುದು
ಮಳೆಗಾಲದಲ್ಲಿ ನೀರು ಕಲುಷಿತವಾಗುವುದು ಸಾಮಾನ್ಯ. ಕಲುಷಿತ ನೀರಿನಿಂದ ಹಿಡಿದ ಮೀನನ್ನು ನೀವು ತಿಂದರೆ ಕಾಲರಾ, ಅತಿಸಾರ, ಕಾಮಾಲೆ ಮತ್ತು ಟೈಫಾಯ್ಡ್ ಆಗಬಹುದು.

ಮೀನುಗಳ ಮೊಟ್ಟೆ ಹೊಟ್ಟೆ ಸೇರಿದರೆ ಏನಾಗಬಹುದು?
ಮಳೆಗಾಲದಲ್ಲಿ ಹೆಚ್ಚಾಗಿ ಮೀನುಗಳು ಮೊಟ್ಟೆಯಿಡುವ ಸಮಯವಾಗಿದೆ. ಮೊಟ್ಟೆಯಿರುವ ಮೀನನ್ನು ನೀವು ತಿಂದರೆ ಆಗ ಆಹಾರ ವಿಷವಾಗಬಹುದು ಅಥವಾ ಹೊಟ್ಟೆಯಲ್ಲಿ ಸೋಂಕು ಕಾಣಿಸಬಹುದು.

ತಾಜಾ ಮೀನಲ್ಲ
ಮಳೆಗಾಲದಲ್ಲಿ ಬೇಡಿಕೆಯಿರುವ ಕಾರಣದಿಂದಾಗಿ ಮೇ ತಿಂಗಳ ಅಂತ್ಯದ ವೇಳೆ ಹಿಡಿದ ಮೀನನ್ನು ಸಂಗ್ರಹಿಸಿಡಲಾಗುತ್ತದೆ. ಮಳೆಗಾಲದಲ್ಲಿ ಮಾರಲಾಗುವ ಹೆಚ್ಚಿನ ಮೀನುಗಳು ತಾಜಾವಾಗಿರಲ್ಲ. ಮೀನು ಶೇಖರಣೆಯ ಜಾಗವು ಸ್ವಚ್ಛವಾಗಿರದಿದ್ದರೆ ಮೀನು ತಿಂದ ಮರುದಿನ ನಿಮಗೆ ವಾಂತಿಯಾಗಬಹುದು.

ನೀರು ಕಲುಷಿತಗೊಂಡರೆ ಏನಾಗುವುದು?
ನಗರಗಳ ಚರಂಡಿಯಲ್ಲಿರುವ ಎಲ್ಲಾ ರೀತಿಯ ಕಸಕಡ್ಡಿಗಳು ಮಳೆಗಾಲದ ನೀರಿಗೆ ಕೊಚ್ಚಿ ಹೋಗುವುದು. ಇದರಿಂದ ಕೆರೆ ಹಾಗೂ ಸಮುದ್ರದ ನೀರು ಕೂಡ ಕಲುಷಿತವಾಗುವುದು. ಮಳೆಗಾಲದಲ್ಲಿ ಈ ಕಾರಣದಿಂದಲೇ ನೀರು ವಿಷವಾಗುವುದು. ಇಂತಹ ನೀರಿನಿಂದ ಹಿಡಿದ ಮೀನು ತಿಂದರೆ ಆರೋಗ್ಯ ಕೆಡಬಹುದು.

ಮೀನಿನ ಸಂಗ್ರಹಣೆಗೆ ರಾಸಾಯನಿಕ ಬಳಕೆ
ಕೆಲವೊಂದು ಕಡೆಗಳಲ್ಲಿ ಮಳೆಗಾಲಕ್ಕೆ ಮೀನನ್ನು ಸಂಗ್ರಹಿಸಿಡಲು ರಾಸಾಯನಿಕಗಳನ್ನು ಬಳಸಲಾಗುವುದು. ಪಾಲಿಫಾಸ್ಪೇಟ್ ಮತ್ತು ಸಲ್ಫೇಟ್ ಬ್ಯಾಕ್ಟೀರಿಯಾ ಮತ್ತು ಫಂಗಲ್ ನ್ನು ದೂರವಿಡುತ್ತದೆ. ಆದರೆ ಈ ರಾಸಾಯನಿಕಗಳಿಂದ ಆರೋಗ್ಯಕ್ಕೆ ಹಾನಿಯಾಗುವುದು.



Click it and Unblock the Notifications
