For Quick Alerts
ALLOW NOTIFICATIONS  
For Daily Alerts

ಸ್ಮಾರ್ಟ್ ಫೋನ್‌ನ ಬೆಳಕು ಕಣ್ಣಿಗೆ ಮಾತ್ರವಲ್ಲ, ಮೆದುಳಿಗೂ ಅಪಾಯಕಾರಿ!

ಮೊಬೈಲ್ ಇಲ್ಲದೆ ಜಗತ್ತಿದ್ಯಾ ಹೇಳಿ ಈಗ? ನೋ ಚಾನ್ಸ್..ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇಬೇಕು. ಎದ್ದಾಗ,ಮಲಗಿದಾಗ 24/7 ಮೊಬೈಲ್ ಇರಲೇಬೇಕು ಅನ್ನುವಂತಾಗಿದೆ ಹೆಚ್ಚಿನವ್ರ ಸ್ಥಿತಿ...ಆದರೆ ಇದರ ಅಡ್ಡಪರಿಣಾಮದ ಬಗ್ಗೆ ಆಲೋಚಿಸಿದ್ದೀರಾ?

By Manu
|

ಪುಸ್ತಕ ಓದುವುದಕ್ಕೂ ಸ್ಮಾರ್ಟ್ ಫೋನ್‌ನ ಸಹಾಯದಿಂದ ಪಠ್ಯವನ್ನು ಓದುವುದಕ್ಕೂ ಪ್ರಮುಖ ವ್ಯತ್ಯಾಸವಿದೆ. ಪುಸ್ತಕದಲ್ಲಿ ಬೆಳಕಿನ ಪ್ರತಿಫಲಿತ ಕಿರಣಗಳು ಕಣ್ಣಿಗೆ ತಲುಪಿದರೆ ಸ್ಮಾರ್ಟ್ ಫೋನಿನ ಪರದೆಯಿಂದ (ಸ್ಕ್ರೀನ್) ಹೊರಡುವ ನಸುನೀಲಿ ಬಣ್ಣದ ಕಿರಣಗಳು ನೇರವಾಗಿ ಕಣ್ಣನ್ನು ತಲುಪುತ್ತವೆ. ಟೀವಿ, ಲ್ಯಾಪ್ ಟಾಪ್, ಟ್ಯಾಬ್, ಇತ್ಯಾದಿ ಎಲ್ಲಾ ಪರದೆಗಳ ಬೆಳಕೂ ಇದೇ ಪರಿಯದ್ದಾಗಿದೆ. ಅಯ್ಯಯ್ಯೋ ಫೋನ್ ಸಹವಾಸವೇ ಬೇಡ! ಏನಿದರ ರಹಸ್ಯ?

ಈ ಬೆಳಕು ಸೂರ್ಯನ ಬಿಳಿ ಬೆಳಕನ್ನು ಬಹುತೇಕವಾಗಿ ಹೋಲುವ ಕಾರಣ ನಮ್ಮ ಮೆದುಳಿನಲ್ಲಿ ವಂಶವಾಹಿನಿಯಾಗಿ ಬಂದಿರುವ ಸೂಚನೆಗಳು ಈ ಬೆಳಕಿನಿಂದ ಗಲಿಬಿಲಿಗೊಳ್ಳುತ್ತವೆ. ಅಂದರೆ ಸೂರ್ಯನ ಬೆಳಕಿಲ್ಲದಿದ್ದಾಗಾ ರಾತ್ರಿ ಎಂದು ಈ ಬೆಳಕಿನ ಉಪಸ್ಥಿತಿಯಲ್ಲಿ ಈಗಲೂ ಹಗಲೇ ಎಂದು ಮೆದುಳು ತೀರ್ಮಾನಿಸಲು ಕಾರಣವಾಗುತ್ತದೆ. ಆಯ್ತು, ಏನೀಗ? ಎಂದು ಪ್ರಶ್ನೆ ಕೇಳಿದಿರಾ? ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರಂಟಿ..

ವಾಸ್ತವವಾಗಿ ಮೆದುಳಿನ ಈ ಸೂಚನೆಯೇ ನಮ್ಮ ಜೀವದ ಜೀವಾಳವಾಗಿದೆ. ಮಲಗಿದ ಬಳಿಕ ಜರುಗುವ ಅನೈಚ್ಛಿಕ ಕ್ರಿಯೆ, ರಕ್ತಪರಿಚಲನೆ, ನರವ್ಯವಸ್ಥೆ, ರೋಗ ನಿರೋಧಕ ಗುಣ, ಎಲ್ಲವೂ ಈ ಸೂಚನೆಗಳನ್ನು ಅವಲಂಬಿಸಿವೆ. ಈ ಸೂಚನೆಗಳಿಗನುಸಾರವಾಗಿ ನಮ್ಮ ನಿತ್ಯದ ದೈಹಿಕ ಕಾರ್ಯಗಳು ನಡೆಯುತ್ತವೆ. ಈ ಬೆಳಕಿನಿಂದ ಎದುರಾಗುವ ದೊಡ್ಡ ತೊಂದರೆ ಎಂದರೆ ಬೆಳಕ್ಕಿದ್ದಷ್ಟೂ ಹೊತ್ತು ಮೆದುಳು ಇದು ಹಗಲು ಎಂದೇ ಪರಿಗಣಿಸಿ ಮೆಲಟೋನಿನ್ ಎಂಬ ರಸದೂತವನ್ನು ಬಿಡುಗಡೆ ಮಾಡುವುದೇ ಇಲ್ಲ. ಪರಿಣಾಮವಾಗಿ ತಡರಾತ್ರಿಯವರೆಗೂ ನಿಮಗೆ ನಿದ್ದೆ ಬರುವುದಿಲ್ಲ! ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ!

ಈ ಅಪಾಯವನ್ನು ಮನಗಂಡಿರುವ ತಜ್ಞರು ಮಲಗುವ ಸಮಯಕ್ಕೂ ಸುಮಾರು ಎರಡರಿಂದ ಮೂರು ಗಂಟೆಗೂ ಮುನ್ನವೇ ಈ ಬೆಳಕಿನ ಉಪಕರಣಗಳಷ್ಟನ್ನೂ ಬಂದ್ ಮಾಡಲು ಸಲಹೆ ನೀಡುತ್ತಾರೆ. ಈ ಕಿರಣಗಳ ಪ್ರಭಾವದಿಂದ ಮೆದುಳು ಮತ್ತು ದೇಹದ ಮೇಲೆ ಯಾವ ರೀತಿಯ ಪರಿಣಾಮಗಳಾಗುತ್ತವೆ ಎಂಬ ಬಗ್ಗೆ ತಜ್ಞರು ನೀಡಿದ ವಿವರಗಳನ್ನು ಸಂಗ್ರಹಿಸಿ ಇಂದಿನ ಲೇಖನದಲ್ಲಿ ನೀಡಲಾಗಿದೆ...

#1

#1

ಸ್ಮಾರ್ಟ್ ಫೋನ್‌ಗಳ ಪ್ರಭಾವ ಹದಿಹರೆಯದವರಲ್ಲಿ ಅತಿ ಹೆಚ್ಚಾಗಿರುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಕಣ್ಣುಗಳಿಂದ ಮೆದುಳು ಅತಿಹೆಚ್ಚು ಮಾಹಿತಿಯನ್ನು ಸಂಗ್ರಹಿಸುತ್ತದೆ. ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಹೇಗೆ ಕಳೆಯಬೇಕು ಎಂಬ ವೇಳಾಪಟ್ಟಿ ಇರುವ ಸೂಚನೆ (circadian rhythm) ಹದಿಹರೆಯದಲ್ಲಿ ಹೆಚ್ಚು ಸೂಕ್ಷ್ಮವಾಗಿದ್ದು ಈ ಕಿರಣಗಳ ಪ್ರಭಾವದಿಂದ ಹದಿಹರೆಯದ ವ್ಯಕ್ತಿಗಳು ಹೆಚ್ಚು ಹೊತ್ತು ಎಚ್ಚರಿರುತ್ತಾರೆ.

#2

#2

ಅಷ್ಟೇ ಅಲ್ಲ, ಎಲ್ಲಾ ವಿದ್ಯುನ್ಮಾನ ಉಪಕರಣಗಳ ಮತ್ತು ವೈಫೈ ತರಂಗಾಂತರಂಗಳ ಮೂಲಕ ಹೊಮ್ಮುವ ವಿದ್ಯುದಾಯಸ್ಕಾಂತೀಯ ವಿಕಿರಣ ವಿಶೇಷವಾಗಿ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿವೆ.

#3

#3

ಮಲಗುವ ಮುನ್ನ ಎಲ್ಲಾ ಉಪಕರಣಗಳನ್ನು ಬಂದ್ ಮಾಡುವುದು ಮತ್ತು ವೈಫೈ ಸಹಿತ ಎಲ್ಲವನ್ನೂ ಆಫ್ ಮಾಡಿ ಇಡುವುದನ್ನು ತಜ್ಞರು ಬಲವಾಗಿ ಸಮರ್ಥಿಸುತ್ತಾರೆ.

#4

#4

ಹಗಲಿನ ಹೊತ್ತಿನಲ್ಲಿ ಪ್ರಖರವಾಗಿಯೂ ರಾತ್ರಿಯ ವೇಳೆ ಮಸುಕಾಗಿಯೂ ಇರುವಂತೆ ಮಾಡುವ ಫ್ಲಕ್ಸ್ (flux) ಒಂದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಈ ಬೆಳಕಿನ ಪರಿಣಾಮಗಳನ್ನು ಕೊಂಚ ಕಡಿಮೆ ಮಾಡಬಹುದು.

#5

#5

ಸ್ಮಾರ್ಟ್ ಫೋನ್ ನಿಮ್ಮ ಮಲಗುವ ಸಮಯಗಳನ್ನೇ ಮೇಲೆಕೆಳಗೆ ಮಾಡಬಹುದು. ಪರಿಣಾಮವಾಗಿ ಮಲಗಬೇಕಾದ ಸಮಯದಲ್ಲಿ ನಿದ್ದೆ ಬಾರದೇ ಬೆಳಗ್ಗಿನ ಹೊತ್ತು ನಿದ್ದೆಯಿಂದ ಏಳಲು ಸಾಧ್ಯವಾಗದೇ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ.

#6

#6

ರಾತ್ರಿ ಮಲಗುವ ಮುನ್ನ ಎಷ್ಟು ಹೊತ್ತು ಪರದೆಯನ್ನು ವೀಕ್ಷಿಸುತ್ತೀರೋ, ಇದಕ್ಕೆ ಅನುಸಾರವಾಗಿ ರಾತ್ರಿ ಮಲಗಿದ ಬಳಿಕ ಆವರಿಸುವ ಗಾಢನಿದ್ದೆಯೂ ಕಡಿಮೆಯಾಗುತ್ತದೆ. ಇದು ಸ್ತನ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

#7

#7

ಸರಿಯಾದ ನಿದ್ದೆ ಇಲ್ಲದೇ ಇರುವ ಕಾರಣ ಮರುದಿನ ನಿಮ್ಮ ಗಮನವನ್ನು ಒಂದು ಕಡೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇದರ ಪರೋಕ್ಷ ಪರಿಣಾಮಗಳು ಭೀಕರವಾಗಿರಬಹುದು. ವಿಶೇಷವಾಗಿ ಡ್ರೈವಿಂಗ್, ಅಪಾಯಕರ ಸನ್ನಿವೇಶದಲ್ಲಿ ಕೆಲಸ ಮಾಡುವ ಸಂದರ್ಭಗಳಲ್ಲಿ ನಿದ್ದೆಯ ಕಾರಣ ಒಂದು ಕ್ಷಣ ಎಚ್ಚರತಪ್ಪಿದರೂ ಪ್ರಾಣಾಪಾಯ ತಪ್ಪಿದ್ದಲ್ಲ.

English summary

How Smartphone's Light Affects The Brain And Body

You are very well aware of the fact that smartphones release a blue light that allows you to read clearly even during a sunny day. This light is emitted by all the devices like laptops, TV and other gadgets too. This light is known to imitate the sun and thereby confuse the brain, making it think that it is day outside even if it is night. Due to this, the brain stops to release melatonin and you'll not be able to sleep well at night.
Story first published: Tuesday, April 4, 2017, 13:20 [IST]
X
Desktop Bottom Promotion