Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರಂಟಿ..
ಮೊಬೈಲ್ ಇಲ್ಲದೆ ಜಗತ್ತಿದ್ಯಾ ಹೇಳಿ ಈಗ.. ನೋ ಚಾನ್ಸ್.. ಪ್ರತಿಯೊಬ್ಬರಿಗೂ ಮೊಬೈಲ್ ಬೇಕೇಬೇಕು. ಎದ್ದಾಗ, ಮಲಗಿದಾಗ 24/7 ಮೊಬೈಲ್ ಇರಲೇಬೇಕು ಅನ್ನುವಂತಾಗಿದೆ ಹೆಚ್ಚಿನವ್ರ ಸ್ಥಿತಿ. ಕೆಲವರಿಗೆ ಮೊಬೈಲ್ ಕೈಯಲ್ಲಿ ಇಲ್ಲದೇ ಇದ್ರೆ ಏನನ್ನೋ ಕಳದುಕೊಂಡ ಭಾವನೆ. ಹೀಗೆ ಅತಿಯಾಗಿ ಮೊಬೈಲ್ ಬಳಸೋದು, ಅದಕ್ಕಿಂತಲೂ ಹೆಚ್ಚಾಗಿ ಮಲಗುವ ವೇಳೆ, ಬೆಡ್ ರೂಂನಲ್ಲೂ ಮೊಬೈಲ್ ಬಳಸೋದ್ರಿಂದ ಆಗುವ ದುಷ್ಪರಿಣಾಮಗಳು ಒಂದೆರಡಲ್ಲ. ಅಯ್ಯಯ್ಯೋ ಫೋನ್ ಸಹವಾಸವೇ ಬೇಡ! ಏನಿದರ ರಹಸ್ಯ?
ಹೆಚ್ಚಿನವ್ರು ತಾವು ಮಲಗುವಾಗ ಮೊಬೈಲ್ ಅನ್ನು ತಮ್ಮ ತಲೆಯ ಬಳಿಯೇ ಇಲ್ಲವೇ ದಿಂಬಿನ ಪಕ್ಕದಲ್ಲಿ ಅಥವಾ ಅಲ್ಲೇ ಆಚೆ ಈಚೆ ಇಟ್ಟುಕೊಂಡು ಮಲಗ್ತಾರೆ. ಹೀಗೆ ಮಾಡುವ ಪರಿಪಾಠ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತೆ ಅನ್ನೋದು ಸಂಶೋಧನೆಯಿಂದ ಬಹಿರಂಗ ಗೊಂಡಿದೆ. ಹಾಗಾದ್ರೆ ಏನೆಲ್ಲ ಪರಿಣಾಮಗಳಾಗುತ್ತೆ ಅನ್ನೋದನ್ನು ತಿಳಿದುಕೊಳ್ಳಲು ಮುಂದೆ ಓದಿ..

ನಿದ್ದೆ ಹಾಳಾಗುತ್ತೆ..
ಮೊಬೈಲ್‌ನಲ್ಲಿ ಅದೂ ಇದೂ ಅಂತ ನೋಡ್ತಾನೇ ಇರೋದ್ರಿಂದ ಮೊದಲನೆಯದಾಗಿ ಅಗತ್ಯಕ್ಕಿಂತ ಕಡಿಮೆ ನಿದ್ದೆ ಮಾಡುವಂತಾಗುತ್ತೆ. ಫಿಲ್ಮ್ ನೋಡೋದು, ಚಾಟ್ ಮಾಡೋದು ಮಾಡ್ತಲೇ ಇರೋದ್ರಿಂದ ನಿದ್ದೆ ಹಾಳಾಗುತ್ತೆ. ನಿದ್ದೆ ಹಾಳಾದ್ರೆ ಎಲ್ಲವೂ ಹಾಳಾದಂತೆ..ನಿದ್ದೆ ಕಡಿಮೆಯಾದ್ರೆ ಹತ್ತು ಹಲವು ಆರೋಗ್ಯ ಸಮಸ್ಯೆಗಳು ತನ್ನಿಂದ ತಾನೆ ವಕ್ಕರಿಸಿಕೊಂಡು ಬಿಡುತ್ತೆ. ತಲೆನೋವು, ಡಾರ್ಕ್ ಸರ್ಕಲ್, ಟೆಕ್ಷನ್, ಇತ್ಯಾದಿಗಳು ಬಳುವಳಿಯಾಗಿ ಸಿಗುತ್ತೆ.

ಕುತ್ತಿಗೆ ನೋವು, ಕೈನೋವು
ಹಾಸಿಗೆಯಲ್ಲಿ ಮೊಬೈಲ್ ಹಿಡಿದು ಮಲಗುವುದರಿಂದ, ಯಾವ್ಯಾವುದೋ ಭಂಗಿಯಲ್ಲಿ ನೀವು ಮೊಬೈಲ್‌ನಲ್ಲಿ ಕೆಲಸ ಮಾಡುತ್ತೀರಿ. ಹಾಗಾಗಿ ಕ್ರಮೇಣ ಅದು ಕುತ್ತಿಗೆನೋವು ಮತ್ತು ಕೈನೋವಿಗೆ ಕಾರಣವಾಗುತ್ತೆ. ಹಾಗಾಗಿ ಮೊಬೈಲ್ ದೂರ ಇಟ್ಟು ಮಲಗೋದೆ ಸೂಕ್ತ...

ಮೊಬೈಲ್ ವಿಕಿರಣಗಳ ಪ್ರಭಾವ
ನಿಮ್ಗೆ ಗೊತ್ತಿಲ್ಲದೆ ನಿಮ್ಮ ಮೇಲೆ ಹಾಸಿಗೆ ಹತ್ತಿರದಲ್ಲೇ ಇರುವ ಮೊಬೈಲ್ ಎಫೆಕ್ಟ್ ಮಾಡುತ್ತೆ. ಮೊಬೈಲ್ ಸಿಗ್ನಲ್‌ಗಾಗಿ ಇರುವ ವಿಕಿರಣ ನಿಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತೆ. ಕಾಲಕ್ರಮೇಣ ಗೊತ್ತಾಗುವ ವಿಚಾರವೇ ಹೊರತು, ಇದ್ರ ಎಫೆಕ್ಟ್ ಒಮ್ಮೆಲೆ ತಿಳಿದುಬರುವುದಿಲ್ಲ.

ಲೈಂಗಿಕ ಸಂಬಂಧ ಹಾಳು ಮಾಡುತ್ತೆ
ಮೊಬೈಲ್ ಹಾಸಿಗೆ ಹತ್ತಿರದಲ್ಲೇ ಇರೋದ್ರಿಂದ ಹೆಚ್ಚಿನವ್ರು ತಮ್ಮ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾರೆ ಅನ್ನೋದು ಸಮೀಕ್ಷೆಗಳಿಂದ ತಿಳಿದುಬಂದಿದೆ. ನಿಶ್ಯಬ್ಧತೆ ಲೈಂಗಿಕತೆಯನ್ನು ವೃದ್ಧಿಸುತ್ತೆ. ಆದ್ರೆ ಮೊಬೈಲ್ ನಲ್ಲಿ ಆಗಾಗ ಬರುವ ಮೇಸೇಜ್ ಗಳು,ಫೋನ್ ಕಾಲ್ ಗಳು ಆ ನಿಶ್ಯಬ್ಧತೆಯನ್ನು ಹಾಳು ಮಾಡಿ ನಿಮ್ಮ ಲೈಂಗಿಕ ಆಸಕ್ತಿಯನ್ನು ಕುಂದಿಸುತ್ತೆ. ಲೈಫಲ್ಲಿ ಎಲ್ಲಕ್ಕಿಂತ ಹೆಚ್ಚು ಮೊಬೈಲ್ ಅನ್ನುವಂತೆ ವರ್ತಿಸುವ ಕೆಲವರು ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ಕಳೆದುಕೊಂಡಿರ್ತಾರೆ ಅನ್ನೋದು ಸಾಬೀತಾಗಿದೆ.

ಕಣ್ಣಿಗೆ ಕೆಟ್ಟ ಪರಿಣಾಮ ಉಂಟುಮಾಡುತ್ತೆ
ಮಲಗುವಾಗ ಲೈಟ್ ಆಫ್ ಮಾಡಿ ಮೊಬೈಲ್ ನೋಡೋದು ಅಭ್ಯಾಸ. ಅಂದ್ರೆ ಕತ್ತಲೆ ಕೋಣೆಯಲ್ಲಿ ಮೊಬೈಲ್ ಬೆಳಕು ಮಾತ್ರ ನಿಮ್ಮ ಕಣ್ಣಿಗೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತೆ. ಕತ್ತಲೆಯಲ್ಲಿ ಮಲಗೋದ್ರಿಂದ ನಮ್ಮ ದೇಹದಲ್ಲಿ ಹಲವು ಹಾರ್ಮೋನುಗಳು ಬಿಡುಗಡೆಗೊಳ್ಳುತ್ತೆ ಮತ್ತು ಆರೋಗ್ಯವಾಗಿರಲು ಈ ಹಾರ್ಮೋನುಗಳು ಸಹಾಯಕವಾಗಲಿದೆ. ಅದ್ರಲ್ಲೂ ಬ್ರೈಟ್‌ನೆಸ್ ಅಧಿಕವಾಗಿಟ್ಟುಕೊಂಡು ಮೊಬೈಲ್ ನೋಡುವವರಿಗೆ ಹಲವು ದೃಷ್ಟಿ ದೋಷ ಉಂಟಾಗೋದು ಗ್ಯಾರೆಂಟಿ..

ಸೋ ಬಿ ಕೇರ್‌ಫುಲ್
ಇದಿಷ್ಟೇ ಅನ್ಕೋಬೇಡಿ, ಇನ್ನು ಹಲವು ಸಮಸ್ಯೆಗಳಿಗೆ ನೀವು ಹಾಸಿಗೆ ಬಳಿ ಮೊಬೈಲ್ ಇಡೋದ್ರಿಂದ ಆಗಲಿದೆ. ಒಂದು ವೇಳೆ ಮೊಬೈಲ್ ಸಿಡಿದರಂತೂ ಕೇಳೋದೆ ಬೇಡ, ಜೀವಕ್ಕೇ ಅಪಾಯ. ಸೋ ಬಿ ಕೇರ್‌ಫುಲ್. ಒಂದು ವೇಳೆ ಇಷ್ಟು ದಿನ ನೀವು ಮಲಗುವಾಗ ಮೊಬೈಲ್ ಹತ್ತಿರದಲ್ಲೇ ಇಟ್ಟು ಮಲಗುತ್ತಾ ಇದ್ದಲ್ಲಿ ಇನ್ಮುಂದೆ ಆ ತಪ್ಪನ್ನು ಮುಂದುವರಿಸ್ಬೇಡಿ...



Click it and Unblock the Notifications
