Latest Updates
-
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್!
ಒಂದೇ ಗಂಟೆಯಲ್ಲಿ ಮುಟ್ಟಿನ ನೋವು ಕಂಟ್ರೋಲ್ ಮಾಡುವ ಮನೆಮದ್ದುಗಳು
ಛೇ! ನಾನು ಹೆಣ್ಣಾಗಿ ಹುಟ್ಟಿದ್ದೆ ತಪ್ಪು. ಇಂತಹ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ಈ ಯಾತನೆ ಯಾರಿಗೂ ಬರದಿರಲಿ. ಮುಂದಿನ ಜನ್ಮದಲ್ಲಿ ನನ್ನನ್ನು ಹೆಣ್ಣಾಗಿ ಹುಟ್ಟಿಸಬೇಡ ದೇವರೇ ಎಂದು ಕೈ ಮುಗಿಯುವುದು ಪ್ರತೀ ತಿಂಗಳ ಮುಟ್ಟಿನ ವೇಳೆ ಕೆಲವು ಹುಡುಗಿಯರು ನೋವನ್ನು ಅನುಭವಿಸುವಾಗ. ಇಂತಹ ನೋವು ಅನುಭವಿಸಿದವರಿಗೆ ಗೊತ್ತು. ಹೊಟ್ಟೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವಂತಹ ತಿಂಗಳ ಮುಟ್ಟಿನ ವೇಳೆಯ ನೋವು ಹುಡುಗಿಯರನ್ನು ದೈನಂದಿನ ಯಾವುದೇ ಕೆಲಸಗಳು ಮಾಡದಂತೆ ತಡೆಯುತ್ತದೆ.
ಮುಟ್ಟಿನ ವೇಳೆ ಹುಡುಗಿಯರು ನೋವು ಗರ್ಭಕೋಶದಲ್ಲಿನ ಸ್ನಾಯುಗಳ ಸೆಳೆದಿಂದಾಗಿ ಉಂಟಾಗುತ್ತದೆ. ಈ ಸ್ನಾಯುಗಳು ಹತ್ತಿರದ ರಕ್ತನಾಳಗಳಿಗೆ ಆಮ್ಲಜನಕ ಪೂರೈಕೆಯನ್ನು ನಿಲ್ಲಿಸುವುದರಿಂದ ನೋವು ಕಾಣಿಸಿಕೊಳ್ಳುವುದು. ಸ್ನಾಯು ಸೆಳೆತದ ಅವಧಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ನೋವಿನ ಪ್ರಮಾಣ ಮಾತ್ರ ಅದೇ ಆಗಿರುತ್ತದೆ. ಸಹಿಸಲು ಅಸಾಧ್ಯವಾಗಿರುವ ನೋವನ್ನು ಕಡಿಮೆ ಮಾಡಿಕೊಳ್ಳಲು ನೋವು ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಬಹುದು. ಆದರೆ ಇದರಿಂದ ಅಡ್ಡಪರಿಣಾಮಗಳು ಜಾಸ್ತಿ. ಇದಕ್ಕಾಗಿ ಮನೆಮದ್ದನ್ನು ಉಪಯೋಗಿಸಿಕೊಂಡು ನೋವನ್ನು ನಿವಾರಿಸಬಹುದು. ನೋವನ್ನು ನಿವಾರಿಸಲು ಯಾವ ಮದ್ದನ್ನು ಬಳಸಿಕೊಳ್ಳಬೇಕು ಎಂದು ತಿಳಿದುಕೊಳ್ಳಿ....

ಶುಂಠಿ ಉಪಯೋಗಿಸಿ ನೋವನ್ನು ನಿಲ್ಲಿಸಿ
ಒಂದು ಲೋಟ ನೀರಿನಲ್ಲಿ 29 ಗ್ರಾಂ ನಷ್ಟು ಶುಂಟಿ ಹಾಕಿ ಕುದಿಸಿ.ನಂತರ ಅರ್ಧದಷ್ಟಾದ ಆ ನೀರನ್ನು ಒಂದು ಲೋಟಕ್ಕೆ ಸೋಯಿಸಿ ಇಡಿ.ದಿನದಲ್ಲಿ 2 ಬಾರಿ ಈ ನೀರನ್ನು ಕುಡಿಯುತ್ತಾ ಬನ್ನಿ. ಮುಟ್ಟಾಗುವ 15 ದಿನ ಮೊದಲಿನಿಂದಲೇ ಈ ನೀರನ್ನು ಕುಡಿಯುತ್ತಾ ಬನ್ನಿ ಹೀಗೆ 2 ತಿಂಗಳು ಮಾಡಿದರೆ ಖಂಡಿತ ಮುಟ್ಟಿನ ಸಂದರ್ಭದಲ್ಲಿ ಕಾಡುವ ಹೊಟ್ಟೆ ನೋವನ್ನು ನಿವಾರಿಸಬಹುದು. ಮುಟ್ಟಿನ ಸಮಯದಲ್ಲಿ ಉಳಿದ ದಿನಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಶುಂಟಿ ಬಳಸಿ ಕುಡಿಯಿರಿ ಇದರಿಂದ ನೋವು ಕಡಿಮೆ ಆಗುತ್ತದೆ.

ಸಾಸಿವೆ ಉಪಯೋಗಿಸಿ ನೋವು ಹೋಗಲಾಡಿಸಿ
ನೀರಿಗೆ ಸಾಸಿವೆಯನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಇದರಲ್ಲಿ ಹತ್ತಿ ಬಟ್ಟೆಯನ್ನು ಅದ್ದಿ,ಹಿಂಡಿ,ಹೊಟ್ಟೆ ನೋವಿರುವಾಗ ಹೊಟ್ಟೆಯ ಮೇಲೆ ಈ ಬಟ್ಟೆಯನ್ನು ಹಾಕಿ ಇದರಿಂದ ಹೊಟ್ಟೆ ನೋವು ನಿವಾರಿಸಬಹುದು.

ಜೀರಿಗೆ
ಅನಿಯಮಿತ ಮುಟ್ಟಿನ ದಿನಗಳನ್ನು ಸೂಕ್ತ ಪರಿಹಾರವನ್ನು ನೀಡುವ ಜೀರಿಗೆ ಮುಟ್ಟಿನ ನೋವನ್ನು ಉಪಶಮನಗೊಳಿಸುವಲ್ಲಿ ಎತ್ತಿದ ಕೈಯಾಗಿದೆ. ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದನ್ನು ಕುಡಿಯುವುದರಿಂದ ಮುಟ್ಟಿನ ಸೆಳೆತ, ಆಯಾಸ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಷಗಳ ಕಾಲ ಕುದಿಸಿ ತಣಿಸಿದ ನಂತರ ಸೇವಿಸಿ.

ಪಪ್ಪಾಯಿ ಹಣ್ಣು
ವಿಶೇಷವಾಗಿ ಮುಟ್ಟಿಗಿಂತ ಮೊದಲು ಪಪ್ಪಾಯಿಯನ್ನು ಸೇವಿಸುವುದು ಒಳ್ಳೆಯದು. ಪಪ್ಪಾಯಿ ಮುಟ್ಟಿನ ನೋವಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವ ಕಿಣ್ವ, (ಪಪಿಯನ್) ಗಳನ್ನು ಒಳಗೊಂಡಿದೆ. ಇದು ಮುಟ್ಟಿನ ಸಂದರ್ಭದಲ್ಲಿ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗಿ ಆಗುವಂತೆ ಮಾಡುತ್ತದೆ.

ತುಳಸಿ
ಪ್ರಬಲ ನೋವುನಿವಾರಕ ಕೆಫಿಕ್ ಆಮ್ಲ ಒಳಗೊಂಡಿರುವುದರಿಂದ ನೀವು ಮುಟ್ಟಿನ ನೋವು ಕಾಣಿಸಿಕೊಂಡ ಸಮಯದಲ್ಲಿ ತುಳಸಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಮಸಾಲೆಗಳಲ್ಲಿ ಅದನ್ನು ಬಳಸಿ ಅಥವಾ ನಿಮ್ಮ ಹರ್ಬಲ್ ಚಹಾದೊಂದಿಗೆ ತುಳಸಿಯನ್ನು ಸೇರಿಸಿ , ಮತ್ತು ಇದು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೀವೇ ನೋಡಿ!

ಕ್ಯಾಮೊಮೈಲ್ ಚಹಾ
ಆಂಟಿಸ್ಪಾಸ್ಮೊಡಿಕ್ ಅಗಿರುವ ಕ್ಯಾಮೊಮೈಲ್ ಚಹಾ ನೋವಿಗೆ ಉಪಶಮನವನ್ನು ನೀಡುತ್ತದೆ ಅಂತೆಯೇ ಮುಟ್ಟಿನ ಸೆಳೆತಕ್ಕೆ ಉತ್ತಮ ಪರಿಹಾರಕವಾಗಿದೆ. ಒಂದು ಕಪ್‌ನಷ್ಟು ಕ್ಯಾಮೊಮೈಲ್ ಚಹಾವನ್ನು ಸೇವಿಸಿ ಆರಾಮ ಮಾಡಿ, ಇದು ನಿಮಗೆ ಸೆಳೆತದಿಂದ ಆರಾಮವನ್ನು ನೀಡಿ ಕೆಳಹೊಟ್ಟೆಯ ಸಂಕಟವನ್ನು ಕಡಿಮೆ ಮಾಡುತ್ತದೆ.
ಕ್ಯಾಮೊಮೈಲ್ ಚಹಾ ಮಾಡುವ ವಿಧಾನ
ಒಂದು ಕಪ್ ನೀರನ್ನು ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ಎರಡು-ಮೂರು ಟೀ ಸ್ಪೂನ್ ಕ್ಯಾಮೊಮೈಲ್ ಟೀ ಪುಡಿಯನ್ನು ಬೆರೆಸಿಕೊಳ್ಳಿ. ಇದು ಮೂರು ನಿಮಿಷ ಬೇಯಲಿ. ಈ ಟೀಯನ್ನು ಶೋಧಿಸಿಕೊಂಡು ಲೋಟಕ್ಕೆ ಸುರಿದುಕೊಳ್ಳಿ. ನಿಮಗೆ ಅಗತ್ಯವಾದಲ್ಲಿ ಜೇನು ತುಪ್ಪ ಅಥವಾ ಸ್ವಲ್ಪ ಲಿಂಬೆರಸವನ್ನು ಬೆರೆಸಿಕೊಂಡು ಸೇವಿಸಿ. ಮುಟ್ಟಿನ ನೋವಿನಿಂದ ಮುಕ್ತರಾಗಿ.

ನುಗ್ಗೆ ಸೊಪ್ಪಿನ ಜ್ಯೂಸ್
ತಿಂಗಳ ಮುಟ್ಟಿನ ವೇಳೆ ಅತಿಯಾದ ನೋವನ್ನು ಅನುಭವಿಸುವವರು ಮನೆಮದ್ದನ್ನು ಉಪಯೋಗಿಸಬೇಕೆಂದು ಬಯಸುವುದಾದರೆ ನುಗ್ಗೆ ಕಾಯಿ ಮರದ ಎಲೆಗಳಿಂದ ಮಾಡಿದ ಜ್ಯೂಸ್ ಅನ್ನು ಕುಡಿಯಬೇಕು. ನುಗ್ಗೆ ಕಾಯಿ ಮರದ ಎಲೆಗಳ ಅಥವಾ ನುಗ್ಗೆ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ದೇಹದಲ್ಲಿ ಕಬ್ಬಿನಾಂಶವು ಹೆಚ್ಚಾಗುತ್ತದೆ. ಇದು ದೇಹಕ್ಕೆ ಪೋಷಕಾಂಶವನ್ನು ನೀಡಿ ದೇಹದಲ್ಲಿ ರಕ್ತವು ಸರಿಯಾಗಿ ಸರಬರಾಜು ಆಗಲು ನೆರವಾಗುತ್ತದೆ. ಇದರಿಂದ ನೋವು ಕಡಿಮೆಯಾಗುವುದು.

ನುಗ್ಗೆ ಸೊಪ್ಪಿನ ಜ್ಯೂಸ್ ಮಾಡಿಕೊಳ್ಳುವುದು ಹೇಗೆ?
1. ನುಗ್ಗೆ ಸೊಪ್ಪಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಸರಿಯಾಗಿ ತೊಳೆಯಿರಿ.
2. ಎಲೆಗಳನ್ನು ರುಬ್ಬಿಕೊಂಡು ಅದರ ಜ್ಯೂಸ್ ತೆಗೆಯಿರಿ.
3. ಜ್ಯೂಸ್ ಅನ್ನು ಗಾಳಿಸಿಕೊಂಡು ¼ ಕಪ್ ಜ್ಯೂಸ್‌ಗೆ ಒಂದು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
4.ತಿಂಗಳ ಮುಟ್ಟಿನ ಮೊದಲ ಎರಡು ದಿನ ಈ ಜ್ಯೂಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ.
5. ತಿಂಗಳ ಮುಟ್ಟಿನ ವೇಳೆ ಕಾಣಿಸಿಕೊಳ್ಳುವ ನೋವು ಇದರಿಂದ ಕಡಿಮೆಯಾಗುವುದು.

ಕೊತ್ತಂಬರಿ ಬೀಜ
ಸೂಕ್ತ ಸಮಯದಲ್ಲಿ ಮುಟ್ಟು ಉಂಟಾಗಲು ಕೊತ್ತಂಬರಿ ಬೀಜದ ಸೇವನೆಯನ್ನು ಮಾಡಬಹುದು. ವಿಳಂಬವಾಗಿ ಮುಟ್ಟು ಉಂಟಾಗುವುದನ್ನು ತಡೆಯಲು ನಿತ್ಯವೂ ಇದನ್ನು ಸೇವಿಸಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. 2 ಕಪ್‌ನಷ್ಟು ನೀರನ್ನು ತೆಗೆದುಕೊಂಡು ಅದರಲ್ಲಿ ಕೊತ್ತಂಬರಿ ಬೀಜವನ್ನು ನೆನೆಸಿ. ಒಂದು ಕಪ್‌ನಷ್ಟು ನೀರು ಆಗುವವರೆಗೆ ಇದನ್ನು ಕುದಿಸಿಕೊಳ್ಳಿ. ನಿಮ್ಮ ಮುಟ್ಟು ನಿಯಮಿತವಾಗಿ ಉಂಟಾಗಲು ದಿನಕ್ಕೆ ಮೂರು ಬಾರಿ ಇದನ್ನು ಸೇವಿಸಿ.

ಕ್ಯಾರೆಟ್ ಜ್ಯೂಸ್
ದಿನಕ್ಕೆ ಮೂರು ಬಾರಿ ಹಸಿ ಕ್ಯಾರೆಟ್ ಅಥವಾ ಕ್ಯಾರೆಟ್ ಜ್ಯೂಸ್ ಅನ್ನು ಸೇವಿಸುವುದು ನಿಮ್ಮ ಮುಟ್ಟನ್ನು ನಿಯಮಿತ ಗೊಳಿಸುತ್ತದೆ. ನಿಮ್ಮ ಮುಟ್ಟನ್ನು ನಿಯಮಿತವಾಗಿ ಉಂಟುಮಾಡಲು ಕ್ಯಾರೆಟ್ ಅನ್ನು ನಿತ್ಯವೂ ಸೇವಿಸುವ ಅಭ್ಯಾಸವನ್ನು ಬೆಳೆಯಿಸಿಕೊಳ್ಳಿ.

ಬೆಚ್ಚಗಿನ ಪ್ಯಾಡ್‌ಗಳು
ನೋವುಭರಿತ ಜಾಗೆಗಳಿಗೆ ಬೆಚ್ಚಗಿನ ಪ್ಯಾಡ್ ಅಥವಾ ಬಿಸಿನೀರಿನ ಬಾಟಲ್ ಅನ್ನು ಇರಿಸುವುದರಿ೦ದಲೂ ಸಹ ಉಪಶಮನವು ದೊರೆಯುತ್ತದೆ. ಆದರೆ, ನೀವು ನಿರಾಳಗೊ೦ಡು ನಿದ್ರೆಗೆ ಜಾರುವುದಕ್ಕಿ೦ತ ಮೊದಲೇ ಆ ಬೆಚ್ಚಗಿನ ಪಾಡ್ ಅನ್ನು ತೆಗೆದುಬಿಡುವುದನ್ನು ಮರೆಯಬೇಡಿರಿ.

ಆಗಾಗ ಸ್ವಲ್ಪ ಸ್ವಲ್ಪನೇ ತಿನ್ನುತ್ತೀರಿ
ಋತುಚಕ್ರದ ಅವಧಿಯಲ್ಲಿ ನೋವು೦ಟಾದಾಗ, ಆದಷ್ಟು ಲಘು ಭೋಜನವನ್ನು ಕೈಗೊಳ್ಳಲು ಪ್ರಯತ್ನಿಸಿರಿ. ಹೊಟ್ಟೆಯನ್ನು ತು೦ಬಿಸುವ ಪ್ರಮಾಣದ ಬೋಜನವು ಕಿರಿಕಿರಿಯನ್ನು೦ಟು ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮೇಲಿ೦ದ ಮೇಲೆ, ಸಣ್ಣ ಪ್ರಮಾಣದ, ಲಘು ಭೋಜನಗಳನ್ನು ಕೈಗೊಳ್ಳುವುದು ಅತ್ಯುತ್ತಮವಾಗಿರುತ್ತದೆ. ಹೀಗೆ ಮಾಡುವುದರಿ೦ದ ನಿಮ್ಮ ಹೊಟ್ಟೆಯು ತು೦ಬುತ್ತದೆ ಹಾಗೂ ಜೊತೆಗೆ ಇದರಿ೦ದ ನಿಮಗೆ ಯಾವುದೇ ತೆರನಾದ ಕಿರಿಕಿರಿಯು೦ಟಾಗುವುದಿಲ್ಲ.

ಅಲೋವೆರಾ ಅಥವಾ ಲೋಳೆಸರ
ಚರ್ಮದ ಆರೋಗ್ಯಕ್ಕೆ ಅಲವೀರಾ ಸಹಕಾರಿ ಅನ್ನೋದು ಹೆಚ್ಚಿನವ್ರಿಗೆ ಗೊತ್ತು. ಆದ್ರೆ ಅಲೋವೆರಾ ಜ್ಯೂಸ್ ಸೇವಿಸೋದ್ರಿಂದ ಮುಟ್ಟಿನ ದಿನಗಳಲ್ಲಾಗುವ ಅಧಿಕ ರಕ್ತಸ್ರಾವವನ್ನು ತಡೆಗಟ್ಟಿಕೊಳ್ಳಬಹುದು ಅನ್ನುವ ಸತ್ಯ ಹೆಚ್ಚಿನ ಮಹಿಳೆಯರಿಗೆ ತಿಳಿದಿಲ್ಲ. ಪ್ರತಿದಿನ ಸ್ವಲ್ಪವೇ ಸ್ವಲ್ಪ ಅಲವೀರಾ ಜಲ್‌ನಿಂದ ಜ್ಯೂಸ್ ತಯಾರಿಸಿಕೊಂಡು ಸೇವಿಸಿದ್ರೆ ಮುಟ್ಟಿನ ದಿನಗಳನ್ನು ಆರಾಮದಾಯಕವಾಗಿ ಇರಬಹುದು

ಮೂಸಂಬಿ ಜ್ಯೂಸ್
ಫ್ರೆಶ್ ಜ್ಯೂಸ್ ಯಾವಾಗಲೂ ಕೂಡ ಆರೋಗ್ಯಕ್ಕೆ ಉತ್ತಮವೇ. ಮೂಸಂಬಿರಸಕ್ಕೆ ಎರಡು ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ, ದಿನಕ್ಕೆ ನಾಲ್ಕರಿಂದ ಐದು ಬಾರಿ ಸೇವಿಸಿ. ಮೂಸಂಬಿ ರಸದಲ್ಲಿ ನಿಮ್ಗೆ ವಿಟಮಿನ್ ಸಿ ಲಭ್ಯವಾಗುತ್ತೆ ಮತ್ತು ಅದಕ್ಕೆ ಸೇರಿಸಿದ ಲಿಂಬೆಯ ರಸ ಹೆಚ್ಚಿನ ರಕ್ತಸ್ರಾವವವನ್ನು ತಡೆಗಟ್ಟಿ ಆರಾಮದಾಯಕವಾಗಿರುವಂತೆ ಮಾಡುತ್ತೆ.

ಜೀರಿಗೆ
ಎರಡು ಟೇಬಲ್ ಸ್ಪೂನ್ ಜೀರಿಗೆಯನ್ನು ನೀರಿಗೆ ಸೇರಿಸಿ ಮತ್ತು ಚೆನ್ನಾಗಿ ಕುದಿಸಿ. ಹಳದಿ ಬಣ್ಣಕ್ಕೆ ತಿರುಗಿದ ನಂತ್ರ ಬೇಕು ಅನ್ನಿಸಿದರೆ ಸಕ್ಕರೆ ಮತ್ತು ಸ್ವಲ್ಪ ಹಾಲು ಸೇರಿಸಿ ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಿರಿ,. ನಿಮ್ಮ ಸಮಸ್ಯೆ ಖಂಡಿತ ನಿವಾರಣೆಯಾಗುತ್ತೆ.

ಮೂಲಂಗಿ
ಸ್ವಲ್ಪ ನೀರು ಸೇರಿಸಿ ಎರಡರಿಂದ ಮೂರು ಮೂಲಂಗಿಯನ್ನು ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಒಂದು ಗ್ಲಾಸ್ ಮಜ್ಜಿಗೆಯನ್ನು ಸೇರಿಸಿ. ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸಿ. ಅತಿಯಾದ ರಕ್ತಸ್ರಾವವನ್ನು ಕಂಟ್ರೋಲ್ ಮಾಡುವುದರ ಜೊತೆಗೆ ನೋವನ್ನು ಕಡಿಮೆ ಮಾಡಿ ಆರಾಮದಾಯಕ ಫೀಲಿಂಗ್ ನೀಡಲು ಇದು ನೆರವಾಗುತ್ತೆ.



Click it and Unblock the Notifications