For Quick Alerts
ALLOW NOTIFICATIONS  
For Daily Alerts

  ಆರೋಗ್ಯ ಟಿಪ್ಸ್: ಹುಣಸೆಹುಳಿಯ ರಸ ಮತ್ತು ಬೀಜ, ಎಲ್ಲವೂ ಆರೋಗ್ಯಕರ

  By Arshad
  |

  ಇಡಿಯ ಭಾರತದಲ್ಲಿ ಇಮ್ಲಿ ಎಂದೇ ಹೆಚ್ಚು ಜನಜನಿತವಾಗಿರುವ ಹುಣಸೆಹುಳಿ ಹೆಸರೇ ತಿಳಿಸುವಂತೆ ಕೊಂಚ ಹುಳಿ ಕೊಂಚ ಸಿಹಿ ಮಿಶ್ರಿತ ಫಲವಾಗಿದ್ದು ಸಾವಿವಾರು ವರ್ಷಗಳಿಂದ ಹಲವಾರು ಸಂಸ್ಕೃತಿಗಳಲ್ಲಿ ರುಚಿಗಾಗಿ ಬಳಸಲ್ಪಡುತ್ತಾ ಬರಲಾಗಿದೆ. ಹುಳಿನೀರನ್ನು ಸಾಂಬಾರ್, ಪಾನಿ ಪೂರಿ ಮೊದಲಾದ ಹಲವಾರು ಅಡುಗೆಗಳಿಗೂ, ಮಸಿ ಹಿಡಿದ ಪಾತ್ರೆಗಳ ಮಸಿ ತೆಗೆಯಲು, ಆಭರಣಗಳನ್ನು ಸ್ವಚ್ಛಗೊಳಿಸಲು ಮೊದಲಾದ ದಿನಬಳಕೆಯ ಉಪಯೋಗಕ್ಕೂ ಬಳಸಲಾಗುತ್ತದೆ.

  ಇದರ ನಾಲಿಗೆಗೆ ಚುರುಗುಟ್ಟಿಸುವ ರುಚಿಗೆ ಟಾರ್ಟಾರಿಕ್ ಆಮ್ಲ ಎಂಬ ರಾಸಾಯನಿಕ ಕಾರಣವಾಗಿದ್ದು ಇದೇ ಕಾರಣಕ್ಕೆ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಉಷ್ಣವಲಯದ ಕಾಡುಗಳಲ್ಲಿ ವಿಫಲವಾಗಿ ಬೆಳೆಯುವ ಹುಣಸೆಮರ ಭಾರತದಲ್ಲಿ ಹೆಚ್ಚೂ ಕಡಿಮೆ ಎಲ್ಲಾ ಪ್ರದೇಶದಲ್ಲಿಯೂ ಇದೆ. ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಹುಣಸೆ ಮರಗಳಿವೆ. ಹುಣಸೆಯಲ್ಲಿ ವಿವಿಧ ವಿಟಮಿನ್ನುಗಳು, ವಿಶೇಷವಾಗಿ ಬಿ ಮತ್ತು ಸಿ, ಆಂಟಿ ಆಕ್ಸಿಡೆಂಟುಗಳು, ಕ್ಯಾರೊಟೀನ್ ಮತ್ತು ಖನಿಜಗಳಾದ ಮೆಗ್ನೀಶಿಯಂ ಹಾಗೂ ಪೊಟ್ಯಾಶಿಯಂ ಇವೆ. ಹುಣಸೆಯನ್ನು ಒಣಗಿಸಿದ ಬಳಿಕ ಅಂಟಂಟಾಗಿದ್ದು ಮುಟ್ಟಲು ಕೊಂಚ ಮುಜುಗರ ಎನಿಸಿದರೂ ಇದು ಪೌಷ್ಟಿಕಾಂಶದ ಆಗರವೇ ಆಗಿದೆ. 

  ಹುಣಸೆ ಹಣ್ಣು ಅಪ್ಪಟ ಗಾಢ ಖಾಕಿ ಬಣ್ಣದ ಕವಚದೊಳಕೆ ಕೆಲವಾರು ಬೀಜಗಳೊಂದಿಗೆ ಕೋಡಿನಾಕೃತಿಯಲ್ಲಿರುತ್ತದೆ. ಇದರ ಪುಟ್ಟ ಎಲೆಗಳು ಸಹಾ ಹಲವಾರು ಅಡುಗೆಗಳಿಗೆ ರುಚಿಕಾರಕವಾಗಿ ಬಳಸಲ್ಪಡುತ್ತದೆ. ಹುಣಸೆಯ ಎಲೆ ಹಣ್ಣು ಮಾತ್ರವಲ್ಲ, ಬೀಜಗಳಿಂದಲೂ ಹಲವಾರು ಪ್ರಯೋಜನಗಳಿವೆ.

  ನಮಗೆಲ್ಲಾ ಹುಳಿಯ ನೀರು ಮಾಡಿ ಅಡುಗೆಗೆ ಸೇರಿಸುವುದು ಅಥವಾ ಪಾನಿ ಪೂರಿಯ ನೀರನ್ನು ಕುಡಿಯುವುದು ಮಾತ್ರ ಗೊತ್ತೇ ಹೊರತು ಹುಣಸೆಯನ್ನು ಇನ್ನೂ ಹಲವಾರು ವಿಧದಲ್ಲಿ, ವಿಶೇಷವಾಗಿ ಆರೋಗ್ಯ ವೃದ್ಧಿಸುವಲ್ಲಿ ಬಳಸಬಹುದು ಎಂದು ಗೊತ್ತೇ ಇಲ್ಲ. ಬನ್ನಿ, ಇಂದು ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಅರಿಯೋಣ... 

  ತೂಕ ಇಳಿಸಲು ನೆರವಾಗುತ್ತದೆ

  ತೂಕ ಇಳಿಸಲು ನೆರವಾಗುತ್ತದೆ

  ತೂಕ ಇಳಿಸಲು ಹಾಗೂ ಸ್ಥೂಲಕಾಯ ಕಳೆದುಕೊಳ್ಳಲು ಹುಣಸೆಹಣ್ಣು ಅದ್ಭುತವಾದ ನೆರವನ್ನು ನೀಡುತ್ತದೆ. ಹುಣಸೆಯಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ

  ಅಥವಾ HCA ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲದಂತೆಯೇ ಕೊಬ್ಬಿನ ಉತ್ಪಾದನೆಯ ಗತಿಯನ್ನು ನಿಧಾನಗೊಳಿಸುತ್ತದೆ. ಈ ಆಮ್ಲ ಹುಣಸೆಯ ಎಲೆ, ಕವಚ, ಬೀಜಗಳಲ್ಲಿಯೂಕಂಡುಬರುತ್ತದೆ. ಆದರೆ ಹಣ್ಣಿನ ತಿರುಳಿನಲ್ಲಿ ಅತಿ ಹೆಚ್ಚು ಸಾಂದ್ರತೆಯಲ್ಲಿದೆ. ಇದರ ಸೇವನೆಯಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಿಣ್ವಗಳು ಕೊಬ್ಬನ್ನು ಸಂಗ್ರಹಿಸದಂತೆ ನೋಡಿಕೊಳ್ಳುವ ಮೂಲಕ ಸ್ಥೂಲಕಾಯ ಆವರಿಸದಿರಲು ನೆರವಾಗುತ್ತದೆ.

  ಜೀರ್ಣಶಕ್ತಿ ಹೆಚ್ಚಿಸುತ್ತದೆ

  ಜೀರ್ಣಶಕ್ತಿ ಹೆಚ್ಚಿಸುತ್ತದೆ

  ಆಹಾರದಲ್ಲಿ ಹುಳಿಯ ರಸವನ್ನು ಬೆರೆಸಿ ಸೇವಿಸುವ ಮೂಲಕ ಆಹಾರಕ್ಕೆ ಅಗತ್ಯವಾದ ರುಚಿ ಬರುವುದು ಮಾತ್ರವಲ್ಲ, ಜೀರ್ಣಾಂಗಗಳು ಆಹಾರವನ್ನು ಜೀರ್ಣಿಸಲು ನೆರವಾಗುತ್ತದೆ. ತನ್ಮೂಲಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

  ಜಠರವ್ರಣವಾಗದಂತೆ ತಡೆಯುತ್ತದೆ

  ಜಠರವ್ರಣವಾಗದಂತೆ ತಡೆಯುತ್ತದೆ

  ಹೊಟ್ಟೆಯಲ್ಲಿ ಮತ್ತು ಸಣ್ಣ ಕರುಳಿನಲ್ಲಿ ಉಂಟಾಗುವ ಹುಣ್ಣುಗಳು ಭಾರೀ ಉರಿ ಹಾಗೂ ನೋವು ತರುವಂತಹದ್ದಾಗಿವೆ. ಹುಣಸೆಯ ಬೀಜದಲ್ಲಿರುವ

  ಪಾಲಿಫಿನೋಲಿಕ್ ಸಂಯುಕ್ತಗಳು ಈ ಹುಣ್ಣುಗಳಾಗದಂತೆ ರಕ್ಷಿಸುವ ಗುಣ ಹೊಂದಿದ್ದು ವಿಶೇಷಾಅಗಿಜಠರವ್ರಣ ಅಥವಾ ಅಲ್ಸರ್ ಆಗದಂತೆ ತಡೆಯುತ್ತದೆ.

  ಹೃದಯಕ್ಕೂ ಒಳ್ಳೆಯದು

  ಹೃದಯಕ್ಕೂ ಒಳ್ಳೆಯದು

  ಕೆಲವಾರು ಸಂಶೋಧನೆಗಳಿಂದ ಹುಣಸೆ ಹುಳಿ ಹೃದಯಕ್ಕೆ ಒಳ್ಳೆಯದು ಎಂದು ಕಂಡುಬಂದಿದೆ. ಇದರಲ್ಲಿರುವ ಫ್ಲೇವನಾಯ್ಡುಗಳು ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆ ಮಾಡುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು (HDL) ಹೆಚ್ಚಿಸಿ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಅಷ್ಟು ಮಾತ್ರವಲ್ಲ, ರಕ್ತದಲ್ಲಿ ಟ್ರೈಗ್ಲಿಸರೈಡ್ ಎಂಬ ಕಣಗಳು ಹೆಚ್ಚು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಇದೂ ಒಂದು ಬಗೆಯ ಕೊಬ್ಬು ಆಗಿದ್ದು ಹೆಚ್ಚಿನ ಪ್ರಮಾಣ ಸ್ಥೂಲಕಾಯಕ್ಕೆ ಕಾರಣವಾಗಿದೆ. ಹುಣಸೆಯಲ್ಲಿರುವ ಅಧಿಕ ಪೊಟ್ಯಾಶಿಯಂ ರಕ್ತದ ಒತ್ತಡವನ್ನುಸಮತೋಲನದಲ್ಲಿರಿಸಲು ನೆರವಾಗುತ್ತದೆ. ಒಟ್ಟಾರೆಯಾಗಿ ಹುಣಸೆ ಹುಳಿ ಹೃದಯಕ್ಕೆ ಹಲವು ರೀತಿಯಲ್ಲಿ ನೆರವಾಗುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

  ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ

  ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಗುತ್ತದೆ

  ಹುಳಿಯ ಬೀಜಗಳಲ್ಲಿ ಅತಿ ಹೆಚ್ಚು ಆಂಟಿ ಆಕ್ಸಿಡೆಂಟುಗಳಿದ್ದು ಈ ಗುಣ ವಿಶೇಷವಾಗಿ ಮೂತ್ರಪಿಂಡಗಳ ವೈಫಲ್ಯ ಹಾಗೂ ಮೂತ್ರಪಿಂಡಗಳ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡುತ್ತದೆ.

  ಗಾಯಗಳನ್ನು ಬೇಗನೇ ಮಾಗಿಸುತ್ತದೆ

  ಗಾಯಗಳನ್ನು ಬೇಗನೇ ಮಾಗಿಸುತ್ತದೆ

  ಹುಣಸೆ ಎಲೆಗಳು ಹಾಗೂ ತೊಗಟೆಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಪ್ರತಿಜೀವಕ ಗುಣಗಳಿವೆ. ಇವು ಗಾಯಗಳನ್ನು ಮಾಗಿಸಲು ನೆರವಾಗುತ್ತದೆ. ಅದರಲ್ಲೂ ಹುಣಸೆ ಬೀಜದ ಪುಡಿಯನ್ನು ಹಚ್ಚುವ ಮೂಲಕ ಗಾಯಗಳು ಕೇವಲ ಹತ್ತು ದಿನಗಳಲ್ಲಿ ಮಾಗುತ್ತವೆ.

  ಶೀತ ಮತ್ತು ಕೆಮ್ಮು ಬಾರದಂತೆ ರಕ್ಷಿಸುತ್ತದೆ

  ಶೀತ ಮತ್ತು ಕೆಮ್ಮು ಬಾರದಂತೆ ರಕ್ಷಿಸುತ್ತದೆ

  ಇದರಲ್ಲಿ ಅತಿ ಹೆಚ್ಚು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಹುಣಸೆ ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಈ ಮೂಲಕ ಶೀತ ಕೆಮ್ಮು ಮೊದಲಾದ ವೈರಸ್ಸುಗಳಿಂದ ಆಗಮಿಸುವ ರೋಗಗಳು ನಿವಾರಣೆಯಾಗುತ್ತದೆ. ಒಂದು ಲೋಟ ಹುಣಸೆನೀರಿನ ಟೀ ಕುಡಿಯುವ ಮೂಲಕ ಶೀತ ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಈ ಟೀಯಲ್ಲಿ ಕೊಂಚ ಕಾಳುಮೆಣಸಿನ ಪುಡಿಯನ್ನು ಬೆರೆಸಿ.

  ಅಸ್ತಮಾ ಗುಣಪಡಿಸುತ್ತದೆ

  ಅಸ್ತಮಾ ಗುಣಪಡಿಸುತ್ತದೆ

  ಸಂಶೋಧನೆಯಲ್ಲಿ ಕಂಡುಕೊಂಡಂತೆ ಹುಣಸೆಯಲ್ಲಿರುವ ಅಲರ್ಜಿನಿರೋಧಕ ಗುಣ (antihistaminic property) ಅಸ್ತಮಾರೋಗ ಹಾಗೂ ಈ ಮೂಲಕ ಎದುರಾಗಿದ್ದ ಅಲರ್ಜಿಯನ್ನು ಗುಣಪಡಿಸಲು ನೆರವಾಗುತ್ತದೆ.

  ಯಕೃತ್ ಅನ್ನು ರಕ್ಷಿಸುತ್ತದೆ

  ಯಕೃತ್ ಅನ್ನು ರಕ್ಷಿಸುತ್ತದೆ

  ಹುಣಸೆಯ ಸೇವನೆಯಿಂದ ಯಕೃತ್ ಗೆ ಎದುರಾಗಬಹುದಾಗಿದ್ದ ಕೆಲವಾರು ತೊಂದರೆಗಳಿಂದ ರಕ್ಷಣೆ ಒದಗಿಸಿದಂತಾಗುತ್ತದೆ. ವಿಶೇಷವಾಗಿ ಮದ್ಯಪಾನ ಹೆಚ್ಚಾಗಿ ಯಕೃತ್ ವಿಫಲಗೊಂಡಿರುವ ವ್ಯಕ್ತಿಗಳು ನಿತ್ಯವೂ ಹುಣಸೆ ಎಲೆಗಳನ್ನು ಸೇವಿಸುತ್ತಾ ಬಂದರೆ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳ ತೊಡಗುತ್ತದೆ.ನಿತ್ಯವೂ ಕೊಬ್ಬು ಹೆಚ್ಚಿರುವ ಆಹಾರ ಸೇವಿಸುವ ವ್ಯಕ್ತಿಗಳೂ ನಿತ್ಯವೂ ಕೊಂಚ ಹುಣಸೆಹುಳಿಯ ನೀರನ್ನು ಕುಡಿಯುತ್ತಾ ಬಂದರೆ ಇದರಿಂದ ಸ್ಥೂಲಕಾಯ ಉಂಟಾಗುವುದಿಲ್ಲ.

  ಮಧುಮೇಹಿಗಳಿಗೂ ತಕ್ಕುದು

  ಮಧುಮೇಹಿಗಳಿಗೂ ತಕ್ಕುದು

  ಹುಣಸೆಯ ಬೀಜದಲ್ಲಿರುವ ಉರಿಯೂತ ನಿವಾರಕ ಗುಣ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನೂ ನಿಯಂತ್ರಿಸುವ ಗುಣ ಹೊಂದಿದೆ. ವಿಶೇಷವಾಗಿ ಮೇದೋಜೀರಕ ಗ್ರಂಥಿಯ ಅಂಗಾಂಶದ ಜೀವಕೋಶಗಳಿಗಾದ ಘಾಸಿಯನ್ನು ಸರಿಪಡಿಸಿ ಮೇದೋಜೀರಕ ಗ್ರಂಥಿ ಮತ್ತೊಮ್ಮೆ ಸರಿಯಾಗಿ ಕೆಲಸ

  ನಿರ್ವಹಿಸುವಂತೆ ಮಾಡುವ ಮೂಲಕ ಮಧುಮೇಹವನ್ನು ಹಿಮ್ಮೆಟ್ಟಿಸಬಹುದು. ಇದರಲ್ಲಿರುವ ಆಲ್ಫಾ-ಅಮೈಲೇಸ್ ಎಂಬ ಕಿಣ್ವ ಸಹಾ ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

  ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

  ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ

  ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳ ಗುಣ ಮತ್ತು ಕರಗುವ ನಾರಿನಿಂದಾಗಿ ಹುಳಿಯ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಸಾಧಾರಣ ಮಟ್ಟಕ್ಕೆ ಬರಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಭಂಧಿ ತೊಂದರೆಗಳ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.

  English summary

  Here are the amazing health benefits of tamarind

  There are also many health benefits of the tamarind fruit, tamarind leaves and seeds. Most of us only know tamarind as an ingredient added to our foods for a tangy flavour, but you will be surprised at the wonderful medicinal benefits of tamarind. Here are the amazing health benefits of tamarind:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more