ಆರೋಗ್ಯ ಟಿಪ್ಸ್: ಅನ್ನ ಬೇಯಿಸುವಾಗ ಎರಡು ಚಮಚ ಕೊಬ್ಬರಿ ಎಣ್ಣೆ ಸೇರಿಸಿ!

By: Arshad
Subscribe to Boldsky

ಅನ್ನ ಬೇಯಿಸುವಾಗ ಯಾರಾದರೂ ಎಣ್ಣೆ ಹಾಕುತ್ತಾರೆಯೇ? ಅದೂ ಕೊಬ್ಬರಿ ಎಣ್ಣೆ? ಈ ಪ್ರಶ್ನೆ ಹೆಚ್ಚಿನವರಿಗೆ ವಿಚಿತ್ರ ಎನಿಸಬಹುದು. ಅನ್ನ ತಿನ್ನುವುದರಿಂದ ಇದರಲ್ಲಿರುವ ಹೆಚ್ಚಿನ ಕ್ಯಾಲೋರಿಗಳಿಂದಾಗಿ ಕೊಬ್ಬು ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಅನ್ನವನ್ನೇ ತಿನ್ನದೇ ಗೋಧಿ ಮತ್ತು ಇತರ ಧಾನ್ಯಗಳ ಆಹಾರವನ್ನೇ ಹೆಚ್ಚು ಸೇವಿಸುವವರಿಗೆ ಈ ಪ್ರಶ್ನೆಯೇ ಅಪ್ರಸ್ತುತ ಎನಿಸಬಹುದು.

ಆದರೆ, ವಿಶೇಷವಾಗಿ ದಕ್ಷಿಣ ಭಾರತೀಯರಿಗೆ ಅಡುಗೆಯಲ್ಲಿ ಮುಖ್ಯವಾಗಿ ಅನ್ನವಿಲ್ಲದಿದ್ದರೆ ಆ ಊಟವೇ ಅಪೂರ್ಣ. ಹಾಗಾಗಿ ಅನ್ನದ ಸೇವನೆಯನ್ನು ಬಿಡಲಾರದೇ ತೂಕ ಹೆಚ್ಚುವುದರಿಂದಲೂ ತಪ್ಪಿಸಿಕೊಳ್ಳಲಾರದೇ ಅನಿವಾರ್ಯವಾಗಿ ಸ್ಥೂಲದೇಹಕ್ಕೆ ಶರಣಾಗಿರುತ್ತೇವೆ. ಆದರೆ ಅನ್ನವನ್ನು ಸೇವಿಸಿಯೂ ತೂಕ ಹೆಚ್ಚದೇ ಇದ್ದರೆ? ಹೌದಲ್ಲವೇ, ಹೀಗೂ ಆಗಬಹುದೇ? ಹೌದು, ಅನ್ನ ಸೇವನೆಯ ಬಳಿಕವೂ ತೂಕ ಏರದೇ ಇರಲು ಅನ್ನ ಬೇಯಿಸುವಾಗ ಕೊಂಚ ಕೊಬ್ಬರಿ ಎಣ್ಣೆ ಹಾಕಿದರೆ ಸಾಕು. ಬನ್ನಿ, ಈ ಅನ್ನ ತಯಾರಿಸುವ ವಿಧಾನವನ್ನು ನೋಡೋಣ...

ವಿಧಾನ

ವಿಧಾನ

ಒಂದು ಪಾತ್ರೆಯಲ್ಲಿ ಎರಡು ಕಪ್ ನೀರನ್ನು ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ಒಂದು ದೊಡ್ಡಚಮಚ ಕೊಬ್ಬರಿ ಎಣ್ಣೆ ಬೆರೆಸಿ ಬಳಿಕ ಒಂದು ಕಪ್ ತೊಳೆದಿಟ್ಟಿದ್ದ ಅಕ್ಕಿಯನ್ನು ಸೇರಿಸಿ (ಬೆಳ್ತಿಗೆ ಅಕ್ಕಿ) ಮಧ್ಯಮ ಉರಿಯಲ್ಲಿ ಈ ಅಕ್ಕಿಯನ್ನು ಸುಮಾರು ಇಪ್ಪತ್ತೈದು ನಿಮಿಷ ಬೇಯಿಸಿ, ಅಥವಾ ಅಕ್ಕಿ ಪೂರ್ಣವಾಗಿ ನೀರನ್ನು ಹೀರಿಕೊಂಡು ಬೇಯುವವರೆಗೆ ಮುಂದುವರೆಸಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಈ ಅನ್ನವನ್ನು ರಾತ್ರಿ ಫ್ರಿಜ್ಜಿನಲ್ಲಿಟ್ಟು ಸುಮಾರು ಹತ್ತರಿಂದ ಹನ್ನೆರಡು ಘಂಟೆಗಳ ಬಳಿಕ ಹೊರತೆಗೆಯಿರಿ. ಬಳಿಕ ಕೊಂಚವೇ ಬಿಸಿಮಾಡಿ ನಿಮ್ಮ ನೆಚ್ಚಿನ ಸಾರು, ಸಾಂಬಾರ್ ನೊಂದಿಗೆ ಸೇವಿಸಿ. ಈ ವಿಧಾನದಿಂದ ಅನ್ನ ತುಂಬಾ ಆರೋಗ್ಯಕರವಾಗಿರುತ್ತದೆ.

ಕ್ಯಾಲೋರಿಯಲ್ಲಿ ಇಳಿಕೆ

ಕ್ಯಾಲೋರಿಯಲ್ಲಿ ಇಳಿಕೆ

ಈ ವಿಧಾನದಿಂದ ಅಕ್ಕಿಯಲ್ಲಿರುವ ಕ್ಯಾಲೋರಿಗಳು ಸುಮಾರು ಐವತ್ತು ಶೇಖಡಾದಷ್ಟು ಕಡಿಮೆಯಾಗುತ್ತವೆ. ಸಾಮಾನ್ಯ ವಿಧಾನದಲ್ಲಿ ಕೇವಲ ಹತ್ತು ಶೇಖಡಾ ಮಾತ್ರ ಕಡಿಮೆಯಾಗುತ್ತದೆ. ವಾಸ್ತವವಾಗಿ ಈ ವಿಧಾನದಲ್ಲಿ ಯಾವ ಅಕ್ಕಿಯನ್ನು ಉಪಯೋಗಿಸುತ್ತೇವೆ ಎಂಬುದು ಮುಖ್ಯ. ಅಕ್ಕಿಯ ಪ್ರಕಾರ ಬದಲಾದಂತೆಯೇ ಈ ಶೇಖಡಾವಾರು ಸಹಾ ಕೊಂಚ ಬದಲಾಗಬಹುದು.

ಕೊಬ್ಬರಿ ಎಣ್ಣೆ ಹೇಗೆ ಉಪಯುಕ್ತ?

ಕೊಬ್ಬರಿ ಎಣ್ಣೆ ಹೇಗೆ ಉಪಯುಕ್ತ?

ಕೊಬ್ಬರಿ ಎಣ್ಣೆಯಲ್ಲಿ ಆರೋಗ್ಯಕರ ಕೊಬ್ಬು ಇದೆ. ಹಾಗಾದರೆ ಕೊಬ್ಬನ್ನು ಅನ್ನದಲ್ಲಿ ಸೇರಿಸುವುದರಿಂದ ಕೊಬ್ಬು ಹೇಗೆ ಕಡಿಮೆಯಾಗಲು ಸಾಧ್ಯ? ಇದನ್ನು ಅರಿಯಲು ಅನ್ನ ತಿಂದ ಬಳಿಕ ನಮ್ಮ ರಕ್ತದಲ್ಲಿ ಏನಾಗುತ್ತದೆ ಎಂದು ಅರಿವಾಗಬೇಕು. ಅನ್ನದಲ್ಲಿರುವ ಪೋಷಕಾಂಶಗಳು ತಕ್ಷಣವೇ ಮತ್ತು ಸುಲಭವಾಗಿ ಜೀರ್ಣವಾಗುವುದರಿಂದ ನಮ್ಮ ರಕ್ತದಲ್ಲಿ ಊಟದ ಬಳಿಕ ಸಕ್ಕರೆಯ ಅಂಶ ಥಟ್ಟನೇ ಏರಿಬಿಡುತ್ತದೆ. ಕೊಬ್ಬರಿ ಎಣ್ಣೆಯನ್ನು ಸೇರಿಸುವುದರಿಂದ ಈ ಪೋಷಕಾಂಶಗಳು ತುಂಬಾ ನಿಧಾನವಾಗಿ ಜೀರ್ಣಗೊಳ್ಳುವ ಕಾರಣ ರಕ್ತದಲ್ಲಿ ಸಕ್ಕರೆಯ ಅಂಶ ಥಟ್ಟನೇ ಏರುವುದಿಲ್ಲ. ಇದೇ ಇದರ ಗುಟ್ಟು.

ತಣಿಸುವುದರಿಂದ ಏನು ಪ್ರಯೋಜನ?

ತಣಿಸುವುದರಿಂದ ಏನು ಪ್ರಯೋಜನ?

ಕೊಬ್ಬರಿ ಎಣ್ಣೆಯನ್ನು ಸೇರಿಸಿದ ಅನ್ನವನ್ನು ತಣಿಸುವ ಮೂಲಕ ಅನ್ನದ ರಾಸಾಯನಿಕ ಸಂಯೋಜನೆ ಕೊಂಚ ಬದಲಾಗುತ್ತದೆ ಹಾಗೂ ತನ್ನ ಕ್ಯಾಲೋರಿಗಳನ್ನು ಕಳೆದುಕೊಳ್ಳುತ್ತದೆ. ಈ ಅನ್ನವನ್ನು ಸೇವಿಸುವ ಮೂಲಕ ಕಡಿಮೆ ಕ್ಯಾಲೋರಿಗಳನ್ನು ಆದರೆ ಪೂರ್ಣಪ್ರಮಾಣದ ರುಚಿಯನ್ನು ಪಡೆಯಬಹುದು.

ಪಿಷ್ಟವನ್ನು ತಡೆಯುತ್ತದೆ

ಪಿಷ್ಟವನ್ನು ತಡೆಯುತ್ತದೆ

ಅಕ್ಕಿಯಲ್ಲಿ ಮುಖ್ಯವಾಗಿ ಪಿಷ್ಟವಿದೆ. ಈ ಪಿಷ್ಟ ಸುಲಭವಾಗಿ ಜೀರ್ಣವಾಗುತ್ತದೆ. ಅನ್ನವನ್ನು ತಣಿಸಿದಾಗ ಈ ಪಿಷ್ಟವೂ ತಣಿದು ಗಟ್ಟಿಯಾಗುತ್ತದೆ. ಹಾಗಾಗಿ ತಣಿಸಿದ ಅನ್ನವನ್ನು ಸೇವಿಸಿದಾಗ ಗಟ್ಟಿಯಾಗಿರುವ ಈ ಪಿಷ್ಟವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಹೆಚ್ಚಿನ ಹೊತ್ತು ತಗಲುತ್ತದೆ ಹಾಗೂ ಹೆಚ್ಚಿನ ಕೊಬ್ಬನ್ನೂ ಖರ್ಚು ಮಾಡಬೇಕಾಗಿ ಬರುತ್ತದೆ. ಇದೇ ಕಾರಣಕ್ಕೆ ಕೊಬ್ಬು ಏರದಿರಲು ನೆರವಾಗುತ್ತದೆ.

ಸೇವನೆಗೂ ಮುನ್ನ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು

ಸೇವನೆಗೂ ಮುನ್ನ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು

ಮೊಸರಿನಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿವೆ. ಇವು ನಮ್ಮ ಸ್ನೇಹಿ ಬ್ಯಾಕ್ಟೀರಿಯಾಗಳಾಗಿದ್ದು ಜೀರ್ಣಕ್ರಿಯೆಗೆ ಸಹಕರಿಸುತ್ತವೆ. ಇದೇ ರೀತಿಯಲ್ಲಿ ತಣಿಸಿದ ಅನ್ನದಲ್ಲಿಯೂ ಸ್ನೇಹಿ ಬ್ಯಾಕ್ಟೀರಿಯಾಗಳಿದ್ದು ಜೀರ್ಣಕ್ರಿಯೆ ಕೊಂಚ ತಡವಾದರೂ ಸರಿ, ಆರೋಗ್ಯಕರವಾಗಿ ಮತ್ತು ಸುಲಭವಾಗಿ ಆಗುವಂತೆ ಸಹಕರಿಸುತ್ತದೆ. ಅಲ್ಲದೇ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ.

ಯಾವ ವಿಧದ ಅಕ್ಕಿ ಸೂಕ್ತ?

ಯಾವ ವಿಧದ ಅಕ್ಕಿ ಸೂಕ್ತ?

ಈ ವಿಧಾನಕ್ಕೆ ಪಾಲಿಶ್ ಮಾಡದ ಕಂದು ಬಣ್ಣದ ಬೆಳ್ತಿಗೆ ಅಕ್ಕಿ ಅತ್ಯಂತ ಸೂಕ್ತವಾಗಿದೆ. ಇದು ಲಭ್ಯವಿಲ್ಲದಿದ್ದಲ್ಲಿ ಕಡಿಮೆ ಪಾಲಿಶ್ ಇರುವ ಕಂದು ಅಥವಾ ಬಿಳಿ ಅಕ್ಕಿಯನ್ನೂ ಆಯ್ಕೆ ಮಾಡಬಹುದು. ಆದರೆ ಕಂದು ಅಕ್ಕಿಯೇ ಉತ್ತಮ. ಸ್ಟೀಮ್ ವಿಧಾನದಲ್ಲಿ ಹೆಚ್ಚು ಪಾಲಿಷ್ ಮಾಡಿರುವ ಅಕ್ಕಿ ಈ ವಿಧಾನಕ್ಕೆ ಸೂಕ್ತವಲ್ಲ.

English summary

Health Tip: Boil Rice With Coconut Oil!

Did you ever boil rice with coconut oil? Many people try to stay away from rice or at least try to reduce their consumption of white rice mainly due to the carb content and the calories in it. Well, there is a method to convert rice into low-carb rice though it sounds like a weird idea! Boil rice with coconut oil. Are you wondering how? Follow this method.
Subscribe Newsletter