For Quick Alerts
ALLOW NOTIFICATIONS  
For Daily Alerts

  ದಿನಕ್ಕೆ 4-5 ಗೋಡಂಬಿ ಬೀಜಗಳನ್ನು ತಿನ್ನಿ, ಆರೋಗ್ಯಕ್ಕೆ ಬಹಳ ಒಳ್ಳೆಯದು

  By Deepu
  |

  ಒಣಫಲಗಳು ಎಂದ ಕೂಡಲೇ ನೆನಪಿಗೆ ಬರುವುದು ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಮತ್ತು ಅಕ್ರೋಟು. ಆದರೆ ಇವುಗಳಲ್ಲಿ ಗೋಡಂಬಿ ಮತ್ತು ದ್ರಾಕ್ಷಿಗಳು ಮಾತ್ರ ಸದಾ ಸ್ಥಳೀಯವಾಗಿ ದೊರಕುತ್ತದೆ. ಇನ್ನುಳಿದವು ಸಾಮಾನ್ಯವಾಗಿ ಎಲ್ಲಾ ಸಮಯದಲ್ಲಿ ಸಿಗುವುದಿಲ್ಲ ಮತ್ತು ಕೊಂಚ ದುಬಾರಿಯೂ ಆಗಿವೆ. ಹುಟ್ಟುಹಬ್ಬ ಮೊದಲಾದ ಸಮಾರಂಭಕ್ಕೆ ಉಡುಗೊರೆ ಕೊಡುವುದು ಏನನ್ನು ಎಂಬ ದ್ವಂದ್ವದಲ್ಲಿರುವವರಿಗೆ ಎಲ್ಲ ಒಣಫಲಗಳಿರುವ ಪೊಟ್ಟಣ ಒಂದು ಉತ್ತಮ ಆಯ್ಕೆಯಾಗಿದೆ. ಜನಸಾಮಾನ್ಯರೂ ಸುಲಭ ಬೆಲೆಗೆ ಖರೀದಿಸಬಹುದಾದ ಒಣಫಲಗಳೆಂದರೆ ದ್ರಾಕ್ಷಿ ಮತ್ತು ಗೋಡಂಬಿ. ಇವೆರಡರಲ್ಲಿ ಗೋಡಂಬಿ ಅತ್ಯುತ್ತಮವಾದ ಆಯ್ಕೆಯಾಗಿದ್ದು ಹಲವು ಪೋಷಕಾಂಶಗಳ ಆಗರವಾಗಿದೆ. 

  ಗೇರುಬೀಜದ ಒಳಗಿನ ತಿರುಗಳನ್ನು ಹದವಾಗಿ ಹುರಿದು ಸಿಪ್ಪೆ ನಿವಾರಿಸಿ ತಯಾರಿಸುವ ಗೋಡಂಬಿ ಭಾರತದಲ್ಲಿ ಮಾತ್ರವಲ್ಲ, ಇಡಿಯ ವಿಶ್ವದಲ್ಲಿಯೇ ಖ್ಯಾತಿ ಪಡೆದಿದೆ. ಒಂದು ಎಚ್ಚರಿಕೆಯನ್ನು ಗಮನಿಸಬೇಕು, ಏನೆಂದರೆ ಗೋಡಂಬಿ ಹುರಿದ ಬಳಿಕವೇ ಆರೋಗ್ಯಕರವೇ ಹೊರತು ಹಸಿಯಾಗಿಯಲ್ಲ. ಕರಾವಳಿಯ ಜನರು ಇಷ್ಟಪಡುವಂತೆ ಹಸಿಯಾಗಿ ತಿಂದರೆ ವಿಷಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸಿವೆ! ಗೋಡಂಬಿಯನ್ನು ಬಳಸದೇ ಮಾಡುವ ಸಿಹಿತಿಂಡಿಗಳ ಪಟ್ಟಿ ತೀರಾ ಚಿಕ್ಕದಾಗಿದೆ. 

  ವ್ಯತಿರಿಕ್ತವಾಗಿ ಗೋಡಂಬಿಯನ್ನು ಬಳಸುವ ತಿಂಡಿ, ಖಾದ್ಯಗಳ ಪಟ್ಟಿ ನೋಡಿದರೆ ಚಕಿತರಾಗುತ್ತೀರಿ. ಭಾರತದ ಖಾದ್ಯಗಳಲ್ಲಂತೂ ಗೋಡಂಬಿ ತುಂಬಿ ತುಳುಕುತ್ತಿದೆ. ಯಾವುದೇ ಪ್ರಮುಖ ಹೋಟೆಲಿನ ಮೆನು ಕಾರ್ಡ್ ನೋಡಿ, ಅದರಲ್ಲಿ ಎಲ್ಲೆಲ್ಲೆ 'ಶಾಹಿ' ಎಂಬ ಪದವಿದೆಯೇ ಅಲ್ಲಿ ಗೋಡಂಬಿ ಇದೆಯೆಂದೇ ಲೆಕ್ಕ. ಏಕೆಂದರೆ ಗೋಡಂಬಿಯನ್ನು ಅಡುಗೆಯಲ್ಲಿ ಬಳಸಲು ಪ್ರಾರಂಭಿಸಿದವರೇ ಮೊಗಲರು. ರಾಜಮಹಾರಾಜರಿಗಾಗಿ ವಿಶೇಷವಾಗಿ ಗೋಡಂಬಿಯನ್ನು ಸೇರಿಸಿ ಮಾಡುತ್ತಿದ್ದ ಖಾದ್ಯಕ್ಕೆ ಅಂದಿನಿಂದಲೇ 'ಶಾಹಿ' ಎಂಬ ಪದ ಅಂಟಿಕೊಂಡಿದೆ.

  ಯಮ್ಮೀ ಎನಿಸುವ 'ಗೋಡಂಬಿ ಚಿಕನ್ ಫ್ರೈಡ್ ರೈಸ್'!

  ವಾಸ್ತವವಾಗಿ ಗೋಡಂಬಿ ನಮ್ಮ ದೇಶದ್ದಲ್ಲ, ದೂರದ ಬ್ರೆಜಿಲ್ ದೇಶದಿಂದ ಹದಿನಾರನೇ ಶತಮಾನದಲ್ಲಿ ಬಂದ ಪೋರ್ಚುಗೀಸರ ಮೂಲಕ ಬಂದಿದೆ. ಅದರೆ ಬಳಿಕ ಭಾರತದಾದ್ಯಂತ ಗೇರು ಕೃಷಿ ಒಂದು ಲಾಭಕರ ಉದ್ದಿಮೆಯಾಗಿದೆ ನಮ್ಮ ಕರಾವಳಿಯಲ್ಲಂತೂ ತಾಲ್ಲೂಕಿಗೆ ಎರಡಾದರೂ ಗೇರುಬೀಜದ ಕಾರ್ಖಾನೆಗಳಿವೆ. ಇದರ ನುರಿತ ಕೆಲಸಗಾರರು ಗೋಡಂಬಿಯನ್ನು ಅತ್ಯಂತ ಸೂಕ್ಷ್ಮವಾಗಿ ವಿಂಗಡಿಸುವುದನ್ನು, ಹರಿತವಾದ ಚಾಕುವಿನಿಂದ ಬೀಜದ ಹೊರಕವಚವನ್ನು ನಿವಾರಿಸುವುದನ್ನು ನೋಡುವುದೇ ಒಂದು ಚೆಂದ. ಬನ್ನಿ ಗೋಡಂಬಿ ಬೀಜದ ಪ್ರಯೋಜನಗಳೇನು ಎಂಬುದನ್ನು ನೋಡೋಣ... 

  ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ

  ಹೃದಯದ ಸ್ವಾಸ್ಥ್ಯವನ್ನು ಕಾಪಾಡುತ್ತದೆ

  ಗೋಡ೦ಬಿ ಬೀಜಗಳು ಆರೋಗ್ಯಕರ ಕೊಬ್ಬಿನಾ೦ಶದಿ೦ದ ಸಮೃದ್ಧವಾದವುಗಳಾಗಿದ್ದು, ಕೊಲೆಸ್ಟ್ರಾಲ್ ಅನ್ನು ಶೂನ್ಯ ಮಟ್ಟದಲ್ಲಿ ಒಳಗೊ೦ಡಿವೆ. ಇದರಿ೦ದಾಗಿ ಗೋಡ೦ಬಿ ಬೀಜಗಳು ಅನಾರೋಗ್ಯಕರ LDL ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್‌ನ ಪ್ರಮಾಣವನ್ನು ದೇಹದಲ್ಲಿ ತಗ್ಗಿಸಬಲ್ಲವು ಹಾಗೂ ತನ್ಮೂಲಕ ಹೃದಯದ ಸ್ವಾಸ್ಥ್ಯಕ್ಕೆ ದಾರಿಮಾಡಿಕೊಡಬಲ್ಲವು. ಅನೇಕರು ಭಾವಿಸಿಕೊ೦ಡಿರುವ ಪ್ರಕಾರ, ಕೊಬ್ಬಿನಾ೦ಶದ ಸೇವನೆಯನ್ನು ತಗ್ಗಿಸುವುದು ಅಥವಾ ನಿಲ್ಲಿಸುವುದು ಆರೋಗ್ಯದ ದೃಷ್ಟಿಯಿ೦ದ ಹಿತಕರವೆ೦ಬುದಾಗಿದೆ. ಆದರೆ ಇದೊ೦ದು ತಪ್ಪು ಕಲ್ಪನೆ. ಕೊಬ್ಬಿನಾ೦ಶವನ್ನೂ ಒಳಗೊ೦ಡ೦ತೆ ನಮ್ಮ ಶರೀರಕ್ಕೆ ಎಲ್ಲಾ ತೆರನಾದ ಆಹಾರವರ್ಗಗಳಿ೦ದಲೂ ದೊರಕುವ ಪೋಷಕಾ೦ಶಗಳ ಅವಶ್ಯಕತೆ ಇದೆ. ಈ ವಿಚಾರದ ಕುರಿತು ವಹಿಸಬೇಕಾಗುವ ಒ೦ದು ಎಚ್ಚರಿಕೆ ಏನೆ೦ದರೆ, ಅ೦ತಹ ಪೋಷಕಾ೦ಶಗಳನ್ನು ಕಾಜುವಿನ೦ತಹ (ವಿಶೇಷವಾಗಿ ಕೊಬ್ಬಿನಾ೦ಶ) ಆರೋಗ್ಯಕರ ಮೂಲಗಳಿ೦ದ ಶರೀರಕ್ಕೆ ಪಡೆದುಕೊಳ್ಳಬೇಕೇ ಹೊರತು, ಅನಾರೋಗ್ಯಕರ ಮೂಲಗಳಿ೦ದ (ಉದಾಹರಣೆಗೆ ಎಣ್ಣೆಯಲ್ಲಿ ಕರಿದ ತಿನಿಸುಗಳು) ಅಲ್ಲ.

  ಗಟ್ಟಿಮುಟ್ಟಾದ ಮೂಳೆಗಳಿಗಾಗಿ

  ಗಟ್ಟಿಮುಟ್ಟಾದ ಮೂಳೆಗಳಿಗಾಗಿ

  ಗೋಡ೦ಬಿ ಬೀಜಗಳಲ್ಲಿ ಮೆಗ್ನೀಷಿಯ೦ ಅಧಿಕ ಪ್ರಮಾಣದಲ್ಲಿದ್ದು, ಇದು ಗಟ್ಟಿಮುಟ್ಟಾದ ಮೂಳೆಗಳಿಗಾಗಿ ಮತ್ತು ಮಾ೦ಸಖ೦ಡಗಳ ಹಾಗೂ ನರವ್ಯೂಹದ ಸರಿಯಾದ ಕಾರ್ಯನಿರ್ವಹಣೆಗಾಗಿ ಅತ್ಯಾವಶ್ಯಕವಾಗಿದೆ. ದಿನವೊ೦ದಕ್ಕೆ ಸುಮಾರು ಮುನ್ನೂರರಿ೦ದ ಏಳುನೂರಾ ಐವತ್ತು ಮಿಲಿಗ್ರಾ೦ಗಳಷ್ಟು ಮೆಗ್ನೀಷಿಯ೦ನ ಸೇವನೆಯು ನಮ್ಮ ಶರೀರದ ಸ್ವಾಸ್ಥ್ಯಕ್ಕಾಗಿ ಅತ್ಯಾವಶ್ಯಕವಾಗಿದೆ. ಏಕೆ೦ದರೆ ಮೆಗ್ನೀಷಿಯ೦ ನಮ್ಮ ಶರೀರದ ಮೂಳೆಗಳಿ೦ದ ಹೀರಲ್ಪಡುವ ಕ್ಯಾಲ್ಸಿಯ೦ನ ಪ್ರಮಾಣವನ್ನು ನಿಯಮಿತಗೊಳಿಸುವ ನಿಟ್ಟಿನಲ್ಲಿ ನೆರವಾಗುತ್ತದೆ.

  ರಕ್ತದೊತ್ತಡವನ್ನು ನಿಯ೦ತ್ರಣದಲ್ಲಿರಿಸುತ್ತದೆ

  ರಕ್ತದೊತ್ತಡವನ್ನು ನಿಯ೦ತ್ರಣದಲ್ಲಿರಿಸುತ್ತದೆ

  ಗೋಡ೦ಬಿ ಬೀಜಗಳು ಕಡಿಮೆ ಪ್ರಮಾಣದಲ್ಲಿ ಸೋಡಿಯ೦ ಅನ್ನು ಒಳಗೊ೦ಡಿದ್ದು, ಪೊಟ್ಯಾಶಿಯ೦ ಅನ್ನು ಅತ್ಯಧಿಕ ಪ್ರಮಾಣದಲ್ಲಿ ಒಳಗೊ೦ಡಿವೆ. ಈ ಕಾರಣದಿ೦ದಾಗಿ ಗೋಡ೦ಬಿ ಬೀಜಗಳಿಗೆ ಶರೀರದ ರಕ್ತದೊತ್ತಡದ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ. ಶರೀರದಲ್ಲಿ (ರಕ್ತದಲ್ಲಿ) ಸೋಡಿಯ೦ನ ಪ್ರಮಾಣವು ಹೆಚ್ಚಾದಲ್ಲಿ, ಶರೀರವು ಅಧಿಕ ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಶರೀರದ ರಕ್ತದ ಗಾತ್ರದಲ್ಲಿ ಹೆಚ್ಚಳವನ್ನು೦ಟುಮಾಡುತ್ತದೆ ಹಾಗೂ ತನ್ಮೂಲಕ ರಕ್ತದೊತ್ತಡದಲ್ಲಿ ಹೆಚ್ಚಳವನ್ನು೦ಟುಮಾಡುತ್ತದೆ.

  ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ

  ಕ್ಯಾನ್ಸರ್ ನ ಅಪಾಯವನ್ನು ಕಡಿಮೆ ಮಾಡುತ್ತದೆ

  ಗೋಡ೦ಬಿ ಬೀಜಗಳಲ್ಲಿ ಸೆಲೇನಿಯ೦ ಹಾಗೂ ಜೀವಸತ್ವ E ಗಳ ರೂಪದಲ್ಲಿ ಆ೦ಟಿ ಆಕ್ಸಿಡೆ೦ಟ್ ಗಳು ಸಮೃದ್ಧವಾಗಿವೆ. ಇವು ಶರೀರದಲ್ಲಿ ಮುಕ್ತ ರಾಡಿಕಲ್‌ಗಳು ಉತ್ಕರ್ಷಣ ಕ್ರಿಯೆಗೆ ಒಳಗಾಗುವುದನ್ನು ತಡೆಯುತ್ತವೆ ಹಾಗೂ ತನ್ಮೂಲಕ ಅರ್ಬುದ ರೋಗದ ಅಪಾಯವನ್ನು ಕಡಿಮೆ ಮಾಡುತ್ತವೆ ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುತ್ತವೆ. ಜೊತೆಗೆ, ಗೋಡ೦ಬಿ ಬೀಜಗಳು ಸತುವಿನಿ೦ದಲೂ ಸ೦ಪನ್ನವಾಗಿರುವುದರಿ೦ದ, ಅವು ಸೋ೦ಕುಗಳ ವಿರುದ್ಧ ಸೆಣಸಾಡಲೂ ಕೂಡ ನೆರವಾಗುತ್ತವೆ.

  ಪೌಷ್ಟಿಕಾಂಶಗಳ ಆಗರ

  ಪೌಷ್ಟಿಕಾಂಶಗಳ ಆಗರ

  ಗೋಡ೦ಬಿ ಬೀಜಗಳಲ್ಲಿ ತಾಮ್ರದ ಅ೦ಶವು ಅತ್ಯುನ್ನತ ಮಟ್ಟದಲ್ಲಿದ್ದು, ಇದು ಶರೀರದಲ್ಲಿ ಕಿಣ್ವಗಳ ಚಟುವಟಿಕೆಗಳು, ಹಾರ್ಮೋನುಗಳ ಉತ್ಪಾದನೆ, ಮೆದುಳಿನ ಕಾರ್ಯಾಚರಣೆ ಇವೇ ಮೊದಲಾದ ಅನೇಕ ಪ್ರಮುಖ ವಿಚಾರಗಳಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಜೊತೆಗೆ, ರಕ್ತಹೀನತೆಯನ್ನು ತಡೆಗಟ್ಟಲು ಅತ್ಯಗತ್ಯವಾದ ಕೆ೦ಪು ರಕ್ತಕಣಗಳನ್ನು ಶರೀರವು ಉತ್ಪತ್ತಿ ಮಾಡುವ೦ತಾಗಲೂ ಕೂಡ ತಾಮ್ರದ ಅ೦ಶದ ಅವಶ್ಯಕತೆಯು ಶರೀರಕ್ಕಿರುತ್ತದೆ.

  ನರಗಳಿಗೆ ಅತ್ಯುತ್ತಮ

  ನರಗಳಿಗೆ ಅತ್ಯುತ್ತಮ

  ಕ್ಯಾಲ್ಶಿಯಂನ ಅಧಿಕ ಪ್ರಮಾಣವು ನರ ಮಂಡಲಗಳಿಗೆ ಧುಮುಕದಂತೆ ಮತ್ತು ಅವುಗಳನ್ನು ಕ್ರಿಯಾತ್ಮಕಗೊಳ್ಳದಂತೆ ತೆಡೆ ಹಿಡಿಯುವಲ್ಲಿ ಗೋಡಂಬಿಯ ಪಾತ್ರ ಅತ್ಯಂತ ಹಿರಿದಾದುದು. ಮೆಗ್ನೇಶಿಯಂ ನ ಅಂಶ ನರಗಳನ್ನು ವಿಶ್ರಮಗೊಳಿಸಿ ನರಮಂಡಲಗಳು ಹಾಗೂ ರಕ್ತನಾಳಗಳನ್ನು ಸುಸ್ಥಿತಿಯಲ್ಲಿಡುತ್ತದೆ. ಗೋಡಂಬಿಯಲ್ಲಿರುವ ಮೆಗ್ನೇಶಿಯಂನ ಅಂಶ ಮೈಗ್ರೇನ್ ದಾಳಿ, ಕಡಿಮೆ ರಕ್ತದೊತ್ತಡ, ಹೃದಯಾಘಾತವನ್ನು ತಡೆಯುತ್ತದೆ.

  ತೂಕ ಇಳಿಕೆ

  ತೂಕ ಇಳಿಕೆ

  ಅಪರೂಪಕ್ಕೆ ಗೋಡ೦ಬಿ ಬೀಜಗಳನ್ನು ತಿನ್ನುವವರಿಗಿಂತ ವಾರಕ್ಕೆ ಎರಡು ಬಾರಿ ಗೋಡ೦ಬಿ ಬೀಜಗಳನ್ನು ತಿನ್ನುವವರ ತೂಕವು ಇಳಿಕೆಯಾದುದು ಗಮನಕ್ಕೆ ಬಂದಿದೆ. ಗೋಡಂಬಿಯಲ್ಲಿರುವ ಕೊಬ್ಬು ಉತ್ತಮ ಕೊಬ್ಬಾಗಿದ್ದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

  ನರಗಳನ್ನು ಬಲಪಡಿಸುತ್ತದೆ

  ನರಗಳನ್ನು ಬಲಪಡಿಸುತ್ತದೆ

  ಗೋಡಂಬಿಯ ಉತ್ತಮ ಗುಣಗಳು ಇಷ್ಟೇ ಎಂದು ನಿಗದಿಪಡಿಸುವಂತಿಲ್ಲ. ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಪೂರಕ ಎಂಬುದನ್ನು ದಿನಗಳೆದಂತೆ ಸಂಶೋಧನೆಗಳು ತಿಳಿಸುತ್ತಾ ಬರುತ್ತಿವೆ. ಅಂತೆಯೇ ಇದರಲ್ಲಿರುವ ಮೆಗ್ನೀಶಿಯಂ ನರವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಇನ್ನೊಂದು ವಿಶೇಷವೆಂದರೆ ಮೂಳೆಗಳಿಗೆ ಅಂಟಿಕೊಂಡಿರುವ ನರಗಳ ಗೋಡೆಗಳ ಮೂಲಕ ಕ್ಯಾಲ್ಸಿಯಂ ನರಗಳ ಒಳಭಾಗ ಪ್ರವೇಶಿಸುವುದನ್ನು ತಡೆಯುತ್ತದೆ. ಒಂದು ವೇಳೆ ಕ್ಯಾಲ್ಸಿಯಂ ಮೂಳೆಗಳಿಂದ ಸಡಿಲವಾಗಿ ನರಗಳು ಹೀರಿಕೊಳ್ಳುವಂತಾದರೆ ನರಗಳು ಗಟ್ಟಿಯಾಗಿಬಿಡುತ್ತವೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಇತರ ದುಷ್ಪರಿಣಾಮಗಳನ್ನೂ ಹುಟ್ಟುಹಾಕುತ್ತದೆ. ಇದೇ ರೀತಿ ಸ್ನಾಯುಗಳೂ ಸೆಡೆತಗೊಳ್ಳುವುದರಿಂದ ರಕ್ಷಣೆ ಪಡೆಯುತ್ತವೆ ಮತ್ತು ಆರೋಗ್ಯಕ್ಕೆ ಅಗತ್ಯವಿರುವಷ್ಟೇ ಸಡಿಲತೆಯನ್ನು ಹೊಂದಲು ಸಾಧ್ಯವಾಗುತ್ತದೆ.

  ವಿಟಮಿನ್‌ಗಳ ಆಗರ

  ವಿಟಮಿನ್‌ಗಳ ಆಗರ

  ಗೋಡಂಬಿಯಲ್ಲಿ ವಿಟಮಿನ್B5 (Pantothenic Acid), ವಿಟಮಿನ್ B-1(Thiamin), ರೈಬೋಫ್ಲೋವಿನ್, ವಿಟಮಿನ್ B6 (Pyridoxine) ಮೊದಲಾದ ವಿಟಮಿನ್ನುಗಳಿವೆ. ಇವೆಲ್ಲವೂ ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದಲ್ಲಿಯೇ ಇರುವುದು ಒಂದು ಹೆಗ್ಗಳಿಕೆ. ಈ ವಿಟಮಿನ್ನುಗಳು ದೇಹದಲ್ಲಿದ್ದರೆ homocystinuria (ದೇಹ ಅತೀವವಾಗಿ ಕೃಶವಾಗುವುದು), dermatitis (ಚರ್ಮರೋಗ), sideroblastic anemia (ಅಸ್ಥಿಮಜ್ಜೆಯಲ್ಲಿ ಕೆಂಪುರಕ್ತಕಣಗಳ ಜೊತೆಗೆ ನೀಲಿ ರಕ್ತಕಣಗಳೂ ಉತ್ಪತ್ತಿಯಾಗುವುದು) ಮೊದಲಾದ ರೋಗಗಳಿಂದ ದೂರವಿರುತ್ತದೆ.

  ದೇಹದ ಮೂಳೆ ಮತ್ತು ಹಲ್ಲುಗಳಿಗೆ ಬಹಳ ಒಳ್ಳೆಯದು

  ದೇಹದ ಮೂಳೆ ಮತ್ತು ಹಲ್ಲುಗಳಿಗೆ ಬಹಳ ಒಳ್ಳೆಯದು

  ಗೋಡಂಬಿಯಲ್ಲಿರುವ ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಮೂಳೆ ಮತ್ತು ಹಲ್ಲುಗಳ ದೃಢತೆಯನ್ನು ಹೆಚ್ಚಿಸಲು ಸಕ್ಷಮವಾಗಿವೆ. ಹಾಲಿನಲ್ಲಿಯೂ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದ್ದರೂ ಕೇವಲ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಮೂಳೆಗಳಿಗೆ ದಕ್ಕಲು ಸಾಧ್ಯವಿಲ್ಲ. ಅದಕ್ಕೆ ಜೇನು ಸೇರಿಸಿದಾಗಲೇ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕೆಲಸವನ್ನು ಗೋಡಂಬಿ ನೇರವಾಗಿಯೇ ಮಾಡುತ್ತದೆ. ನಿತ್ಯವೂ ನಾಲ್ಕಾರು ಗೋಡಂಬಿಗಳನ್ನು ತಿನ್ನುತ್ತಾ ಬಂದರೆ ಮೂಳೆ ಮತ್ತು ಹಲ್ಲುಗಳು ಸದೃಢವಾಗಿರಲು ಸಾಧ್ಯವಾಗುತ್ತದೆ. ಅಲ್ಲದೇ ಗೋಡಂಬಿ ಒಸಡುಗಳಿಗೂ ಉತ್ತಮವಾಗಿದೆ.

  ಮೂಳೆಯ ಆರೋಗ್ಯ

  ಮೂಳೆಯ ಆರೋಗ್ಯ

  ಗೋಡಂಬಿಯಲ್ಲಿ ಮೆಗ್ನೇಶಿಯಂ ಅಧಿಕವಾಗಿದ್ದು, ಮೂಳೆಗಳ ಸುದೃಢತೆಗೆ ಸಹಕಾರಿಯಾಗಿದೆ. ನಮ್ಮ ದೇಹದಲ್ಲಿರುವ ಮೇಗ್ನೇಶಿಯಂ ಅಧಿಕ ಭಾಗ ಮೂಳೆಗಳಲ್ಲಿದೆ. ಗೋಡಂಬಿಯಲ್ಲಿರುವ ಕೋಪರ್ ಅಂಶವು ಮೂಳೆಗೆ ದೃಢತೆ ಮತ್ತು ನಮ್ಯತೆಯನ್ನು ನೀಡುತ್ತದೆ.

  ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನೋಡಿಕೊಳ್ಳುತ್ತದೆ ಹಾಗೂ

  ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನೋಡಿಕೊಳ್ಳುತ್ತದೆ ಹಾಗೂ

  ಗೋಡಂಬಿಯಲ್ಲಿರುವ ಓಲಿಕ್ ಆಮ್ಲ (Oleic acid) ಅಲ್ಪ ಪ್ರಮಾಣದಲ್ಲಿದ್ದರೂ ಹೃದಯಕ್ಕೆ ಉತ್ತಮ ಪೋಷಣೆ ನೀಡುವ ನಿಟ್ಟಿನಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.ಶಾಹಿ ಅಡುಗೆಗಳಲ್ಲಿ ಬಳಸಿದರೂ ಗೋಡಂಬಿಯಲ್ಲಿ ಕೊಬ್ಬು ಅತ್ಯಲ್ಪ ಪ್ರಮಾಣದಲ್ಲಿರುವ ಕಾರಣ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಏರದಂತೆ ನೋಡಿಕೊಳ್ಳುತ್ತದೆ ಹಾಗೂ ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು ಹೃದಯದ ಇತರ ತೊಂದರೆಗಳಿಂದ ರಕ್ಷಿಸುತ್ತದೆ. ಪರಿಣಾಮವಾಗಿ ಹೃದಯ ಸ್ತಂಭನದ ಸಾಧ್ಯತೆಯನ್ನು ಬಹುವಾಗಿ ಕುಗ್ಗಿಸುತ್ತದೆ.

  English summary

  Health Benefits Of eating 4-5 cashews Nuts per day

  Whenever you think of dry fruits, the almonds, cashews, raisins, pistachios are the ones come toyour mind. A box of dry fruits can be a wonderful gift at any festival and occasion such as birthdays. Now, when you gift dry fruits to someone, you gift health. Cashews are one of the healthiest dry fruits among all. Cashew or popularly known as kaju is full of nutrients which keeps your body strong.
  Story first published: Monday, November 13, 2017, 23:43 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more