ಹಲ್ಲಿನ ಯಾವುದೇ ಸಮಸ್ಯೆಗೆ-ಒಂದು ಕಪ್ 'ಗ್ರೀನ್ ಟೀ' ಪರ್ಫೆಕ್ಟ್ ಮದ್ದು!

By: Hemanth
Subscribe to Boldsky

ವ್ಯಸ್ತ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ. ಇಂದಿನ ದಿನಗಳಲ್ಲಿ ಹೆಚ್ಚಿನವರು ಕಚೇರಿ ಹಾಗೂ ಮನೆ ಮಧ್ಯೆ ಸಮಯ ಹೊಂದಾಣಿಕೆಯಿಂದಾಗಿ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರು ನಿರೀಕ್ಷಿಸುತ್ತಾರೆಯಾದರೂ ಅದನ್ನು ಪಡೆಯುವುದು ತುಂಬಾ ಕಷ್ಟ. ಇಂದಿನ ದಿನಗಳಲ್ಲಿ ಗ್ರೀನ್ ಟೀ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ.

ಚೀನಾದಲ್ಲಿ ಹುಟ್ಟಿರುವ ಕೆಮೆಲಿಯಾ ಸೈನೆನ್ಸಿಸ್ ಎನ್ನುವ ಗಿಡದ ಎಲೆಗಳನ್ನು ಒಣಗಿಸಿ ಗ್ರೀನ್ ಟೀ ತಯಾರಿಸಲಾಗುತ್ತದೆ. ಹಿಂದೆ ಕೇವಲ ಚೀನಾದಲ್ಲಿ ಮಾತ್ರ ಇದು ಲಭ್ಯವಿತ್ತು. ಆದರೆ ಇಂದು ವಿಶ್ವದ ಹೆಚ್ಚಿನ ರಾಷ್ಟ್ರಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ಗ್ರೀನ್ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ಕಾರಣದಿಂದ ಹೆಚ್ಚಿನವರು ಇದರ ಸೇವನೆ ಮಾಡುತ್ತಿದ್ದಾರೆ.

ಮನೆಮದ್ದು ಬಳಸಿ ಹಳದಿ ಹಲ್ಲುಗಳಿಗೆ ವಿದಾಯ ಹೇಳಿ

ಸಾಮಾನ್ಯ ಗ್ರೀನ್ ಟೀಯಲ್ಲಿ ಶೇ. 99.9ರಷ್ಟು ನೀರಿನಾಂಶವಿದೆ. 100ಮಿ.ಲೀ.ಗ್ರೀನ್ ಟೀಯಲ್ಲಿ ಒಂದು ಕ್ಯಾಲರಿಯಿದೆ. ಇದು ಉರಿಯೂತ ಶಮನಕಾರಿ ಮತ್ತು ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವಂತಹ ಇದು ದೇಹದ ಸಂಪೂರ್ಣ ಆರೋಗ್ಯಕ್ಕೆ ನೆರವಾಗುವುದು. ಗ್ರೀನ್ ಟೀಯಿಂದ ಹಲ್ಲುಗಳಿಗೆ ಆಗುವಂತಹ ಲಾಭಗಳ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಲಿದೆ.... 

ಹಲ್ಲುಗಳಲ್ಲಿ ಬಿಳಿಯ ಪದರಗಳ ಸಮಸ್ಯೆಗೆ

ಹಲ್ಲುಗಳಲ್ಲಿ ಬಿಳಿಯ ಪದರಗಳ ಸಮಸ್ಯೆಗೆ

ಹಲ್ಲುಗಳಲ್ಲಿ ಬಿಳಿಯ ಪದರಗಳು ನಿರ್ಮಾಣವಾಗುವುದು. ಇದರಲ್ಲಿ ಸೂಕ್ಷ್ಮಾಣು ಜೀವಿಗಳು ಸಂತಾನೋತ್ಪತ್ತಿ ಮಾಡುವುದರಿಂದ ಹಲ್ಲುಗಳು ಕೆಡುವುದು. ಗ್ರೀನ್ ಟೀಯಲ್ಲಿ ಎಪಿಗಲ್ಲೊಕೆಟೆಚಿನ್ ಗಾಲೇಟ್ ಎನ್ನುವ ಅಂಶವಿದೆ. ಇದು ದಂತಕುಳಿ ನಿರ್ಮಾಣ ಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುವುದು.

ದಂತ ಕುಳಿ ತಡೆಯುವುದು

ದಂತ ಕುಳಿ ತಡೆಯುವುದು

ಪ್ರತೀ ಸಲ ನಾವು ಏನಾದರೂ ಆಹಾರ ತಿಂದಾಗ ಸ್ವಲ್ಪ ಪ್ರಮಾಣವು ಹಲ್ಲುಗಳಲ್ಲಿ ಹೋಗಿ ಜಮೆಯಾಗುವುದು. ಇದರಿಂದಾಗಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ದಂತಕುಳಿ ಉಂಟಾಗುವುದು. ಗ್ರೀನ್ ಟೀಯು ಜೊಲ್ಲುರಸದ ಆಮ್ಲೀಯತೆಯನ್ನು ಕಡಿಮೆ ಮಾಡಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವುದು.

ಉಸಿರಿನ ವಾಸನೆ ತಡೆಯುವುದು

ಉಸಿರಿನ ವಾಸನೆ ತಡೆಯುವುದು

ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಾ ಇರುವವರಿಗೆ ಉಸಿರಿನ ವಾಸನೆ ಸಾಮಾನ್ಯವಾಗಿದೆ. ಹಲ್ಲುಜ್ಜುವ ಬ್ರಷ್ ಹೋಗದೆ ಇರುವಂತಹ ಗಂಟಲಿನ ಹಿಂಭಾಗದಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದು. ಇದರಿಂದ ಉಸಿರಿನಲ್ಲಿ ಕೆಟ್ಟ ವಾಸನೆ ಬರುವುದು.

ಉಸಿರಿನ ವಾಸನೆ ತಡೆಯುವುದು

ಉಸಿರಿನ ವಾಸನೆ ತಡೆಯುವುದು

ಗ್ರೀನ್ ಟೀಯಲ್ಲಿ ಕಂಡುಬರುವ ಪಾಲಿಫಿನಾಲ್ ಗಳು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಶೇ.30ರಷ್ಟು ಕಡಿಮೆ ಮಾಡುವುದು ಮತ್ತು ಉಸಿರಿನ ವಾಸನೆ ತಡೆಯುವುದು. ಗ್ರೀನ್ ಟೀಯು ಬ್ಯಾಕ್ಟೀರಿಯಾವನ್ನು ಕೊಂದು ಹಾಕುವುದರಿಂದ ದಿನವಿಡಿ ನಿಮ್ಮಲ್ಲಿ ತಾಜಾ ಉಸಿರು ಉಳಿಯುವುದು.

ಬಾಯಿ ದುರ್ವಾಸನೆಗೆ ಅಡುಗೆ ಮನೆಯಲ್ಲಿಯೇ ಇದೆ ಪರಿಹಾರ

ಒಸಡಿನ ಕಾಯಿಲೆ ತಡೆಯುವುದು

ಒಸಡಿನ ಕಾಯಿಲೆ ತಡೆಯುವುದು

ಒಸಡಿನಲ್ಲಿ ಹಾಗೂ ಹಲ್ಲುಗಳಿಗೆ ಬೆಂಬಲಾಗಿರುವಂತಹ ಮೂಳೆಗಳಲ್ಲಿ ತೀವ್ರ ಉರಿಯೂತವು ಕಾಣಿಸಿಕೊಳ್ಳುವ ಕಾರಣದಿಂದಾಗಿ ಒಸಡಿನಲ್ಲಿ ಸಮಸ್ಯೆ ಉಂಟಾಗುವುದು. ಲಿಪೊ ಪಾಲಿಸ್ಯಾಕರೈಡ್‌ಗಳ ಮೂಲಕ ಸಬ್ಜಿಜಿವಲ್ ಬ್ಯಾಕ್ಟೀರಿಯಾಗಳು ಪಾರ್ಶ್ವಾಂತರದ ವಿನಾಶಕ್ಕೆ ಕಾರಣವಾಗುವುದು. ಇದರಲ್ಲಿ ಒಂದು ಭಾಗವು ಪ್ರತಿರೋಧಕ ವ್ಯವಸ್ಥೆಯಿಂದ ಉತ್ಪತ್ತಿಯಾಗುವ ಫ್ರೀ ರ್ಯಾಡಿಕಲ್ ಗಳಿಗೆ ಕಾರಣವಾಗುವುದು.

ಒಸಡಿನ ಕಾಯಿಲೆ ತಡೆಯುವುದು

ಒಸಡಿನ ಕಾಯಿಲೆ ತಡೆಯುವುದು

ಗ್ರೀನ್ ಟೀಯ ಹೆಚ್ಚಿನ ಲಾಭ ಪಡೆಯಬೇಕಾದರೆ ದಿನದಲ್ಲಿ ಐದು ಕಪ್ ಟೀ ಕುಡಿಯಬೇಕು. ಇದಕ್ಕೆ ಸಿಹಿ ಹಾಕಬಾರದು. ಗ್ರೀನ್ ಟೀ ಕುಡಿಯಲು ಹಿಂಜರಿಕೆ ಇರುವವರು ಗ್ರೀನ್ ಟೀ ಹೊಂದಿರುವ ಟೂಥ್ ಪೇಸ್ಟ್, ಮೌಥ್ ವಾಶ್, ಚೂಯಿಂಗ್ ಗಮ್ ಇತ್ಯಾದಿ ಬಳಸಬಹುದು.

English summary

Green Tea Is Good For Your Teeth & Gums?

ml serving. Green tea contains a high percentage of compounds that can naturally curb inflammation and kill bacteria that cause an infection. Plus, it is so rich in antioxidants that it has no choice but to contribute to your overall oral well-being. Here is a small list of dental benefits of green tea that will have us flashing a healthy, happy smile. Take a look.
Subscribe Newsletter