For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಕಪ್ ಕಾಫಿ ಕುಡಿದರೆ ಸಾಕು-ಇನ್ನಷ್ಟು ಆರೋಗ್ಯವಾಗಿರುವಿರಿ

By Lekhaka
|

ಹೆಚ್ಚು ಕಾಫಿ ಕುಡಿಯಬೇಡಪ್ಪ, ಅದು ದೇಹಕ್ಕೆ ಒಳ್ಳೆಯದಲ್ಲ ಎಂದು ಹೇಳುವ ಮಂದಿಯೇ ಹೆಚ್ಚು. ಆದರೆ ಇದಕ್ಕೆ ಕಾರಣವೇನೆಂದು ಯಾರ ಬಳಿ ಕೇಳಿದರೂ ಅವರಲ್ಲಿ ಉತ್ತರವೆನ್ನುವುದು ಇರುವುದಿಲ್ಲ. ಭಾರತದಲ್ಲಿ ಕಾಫಿ ಮತ್ತು ಚಹಾ ಕುಡಿಯುವವರ ಗಣತಿ ಆರಂಭ ಮಾಡಿದರೆ ಅದು ಯಾವ ರೀತಿಯಾಗಿರಬಹುದು ಎಂದು ಹೇಳಲು ಬರದು. ಆದರೆ ಇಂದಿನ ಯುವಜನರು ಮಾತ್ರ ಕಾಫಿ, ಚಾದಿಂದ ದೂರ ಹೋಗುತ್ತಿದ್ದಾರೆ. ಕೆಲವರಿಗೆ ಮಾತ್ರ ದಿನದಲ್ಲಿ ಒಂದು ನಾಲ್ಕು ಕಪ್ ಕಾಫಿಯಾದರೂ ಬೇಕೇ ಬೇಕು. ದೀರ್ಘಕಾಲ ತನಕ ಕೆಲಸ ಮಾಡುವವರು, ಮನೆಗೆಲಸ ಮಾಡಲು ಶಕ್ತಿ ಬೇಕೆನ್ನುವವರು ಮತ್ತು ಕ್ಲಾಸಿನಲ್ಲಿ ಕೂತರೆ ನಿದ್ರೆ ಬರುತ್ತದೆ ಎನ್ನುವವರು ಕಾಫಿ ಕುಡಿಯುವುದು ಖಚಿತ.

ಕಾಫಿ ಸೇವನೆ ಸಾಧಕ ಬಾಧಕಗಳ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳು ಹೇಳಿವೆ. ನಿಯಮಿತವಾಗಿ ಕಾಫಿ ಸೇವನೆ ಮಾಡಿದರೆ ಅದು ತುಂಬಾ ಹಾನಿಕಾರ ಎನ್ನುವ ಅಭಿಪ್ರಾಯವಿದೆ. ಇನ್ನೊಂದು ಅಧ್ಯಯನ ವರದಿ ಹೇಳುತ್ತದೆ ಕಾಫಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು. ಕಾಫಿ ಕುಡಿಯುವವರಲ್ಲಿ ಕೂಡ ಇಂತಹ ಗೊಂದಲ ಇದ್ದೇ ಇರುತ್ತದೆ. ಕಾಫಿಯಿಂದ ದೇಹಕ್ಕೆ ಹಾನಿಯಿದೆ ಎಂದು ತಿಳಿದ ಅದೆಷ್ಟೋ ಮಂದಿ ಕಾಫಿ ಸೇವನೆ ನಿಲ್ಲಿಸಿರುವ ಉದಾಹರಣೆಗಳು ಇವೆ. ಎಲ್ಲಾ ಆಹಾರಗಳಂತೆ ಕಾಫಿಯಲ್ಲಿ ಕೂಡ ದೇಹಕ್ಕೆ ಲಾಭನಷ್ಟಗಳು ಇದೆ ಎಂದು ನಾವು ಕಂಡುಕೊಂಡಿದ್ದೇವೆ.

ಬೆಕ್ಕಿನ ಮಲದಿಂದ ತಯಾರಿಸಿದ 'ಕಾಫಿ' ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!!

ಕಾಫಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇದ್ದೇ ಇದೆ ಎಂದು ಈ ಲೇಖನದ ಮೂಲಕ ನಿಮಗೆ ತಿಳಿದುಬರಲಿದೆ. ಇದು ಪ್ರತಿಯೊಬ್ಬರಿಗೂ ಹೊಂದಿಕೊಳ್ಳುವ ಪಾನೀಯ. ಆದರೆ ಕೆಲವರ ದೇಹಕ್ಕೆ ಇದು ಅಡ್ಡಪರಿಣಾಮ ಬೀರುವ ಕಾರಣ ವೈದ್ಯರ ಸಲಹೆ ಪಡೆದರೆ ಒಳ್ಳೆಯದು. ಈ ಲೇಖನದಲ್ಲಿ ಕಾಫಿ ಸೇವನೆ ಮಾಡುವವರಿಗೆ ಒಳ್ಳೆಯ ಸುದ್ದಿಯಿದೆ. ಕಾಫಿಯಲ್ಲಿರುವ ಸುಮಾರು ಆರೋಗ್ಯ ಲಾಭಗಳನ್ನು ನಾವು ನಿಮ್ಮ ಮುಂದಿಟ್ಟಿದ್ದೇವೆ. ಅದು ಯಾವುದೆಂದು ತಿಳಿಯಿರಿ....

ಮೆದುಳನ್ನು ಚುರುಕಾಗಿಡುವುದು

ಮೆದುಳನ್ನು ಚುರುಕಾಗಿಡುವುದು

ಕಾಫಿಯಲ್ಲಿರುವ ಪ್ರಮುಖ ಅಂಶವೆಂದರೆ ಕೆಫಿನ್. ಇದು ನೈಸರ್ಗಿಕ ಉತ್ತೇಜಕವಾಗಿದೆ. ಇದು ಮೆದುಳಿಗೆ ಆಮ್ಲಜನಕ ಹಾಗೂ ರಕ್ತವನ್ನು ಪೂರೈಕೆಯನ್ನು ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೆದುಳಿನ ನರಕೋಶಗಳು ಕ್ರಿಯಾತ್ಮಕವಾಗಿ ನಿಮ್ಮನ್ನು ಉಲ್ಲಾಸದಿಂದ ಇಡುವುದು.

ನಿಮಿರುವಿಕೆ ದೌರ್ಬಲ್ಯ ತಡೆಯುವುದು

ನಿಮಿರುವಿಕೆ ದೌರ್ಬಲ್ಯ ತಡೆಯುವುದು

ಕಾಫಿಯಲ್ಲಿರುವಂತಹ ಕೆಫಿನ್ ಹೊಸ ರಕ್ತವನ್ನು ಮೆದುಳಿನಿಂದ ಜನನಾಂಗಗಳಿಗೆ ಹರಿಯುವಂತೆ ಮಾಡುವುದು. ಇದರಿಂದ ಕೆಲವೊಂದು ಲೈಂಗಿಕ ಸಮಸ್ಯೆಗಳಾದ ನಿಮಿರುವಿಕೆ ದೌರ್ಬಲ್ಯ ತಡೆಯಬಹುದು. ಇದರಿಂದ ಪುರುಷರಿಗೆ ಲೈಂಗಿಕ ಕ್ರಿಯೆಯನ್ನು ಶಕ್ತಿ ಬರುವುದು.

ಜ್ಞಾಪಕ ಶಕ್ತಿ ಹೆಚ್ಚಳ

ಜ್ಞಾಪಕ ಶಕ್ತಿ ಹೆಚ್ಚಳ

ಕೆಫಿನ್ ಮೆದುಳಿನ ಕೋಶಗಳನ್ನು ತುಂಬಾ ಚುರುಕಾಗಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಕಲಿಕೆ, ಜ್ಞಾಪಕಶಕ್ತಿ ಇತ್ಯಾದಿಗಳಿಗೆ ಮೆದುಳಿನ ಕೋಶಗಳ ಕಾರ್ಯವು ತುಂಬಾ ಮಹತ್ವದ್ದಾಗಿರುವುದು. ನಿಮ್ಮ ಮೆದುಳಿನ ಕೋಶಗಳು ತುಂಬಾ ಸಕ್ರಿಯವಾಗಿರುವಾಗ ಜ್ಞಾಪಕ ಶಕ್ತಿಯು ಹೆಚ್ಚಾಗುವುದು.

ತಲೆನೋವು ನಿವಾರಣೆ

ತಲೆನೋವು ನಿವಾರಣೆ

ಒತ್ತಡ, ಶೀತ, ಸೈನಸಿಟಿಸ್, ಗ್ಯಾಸ್ಟ್ರಿಟಿಸ್ ಮತ್ತು ಕೆಲವೊಂದು ರೀತಿಯ ಔಷಧಿಯ ಅಡ್ಡಪರಿಣಾಮಗಳಿಂದಾಗಿ ನಿಮಗೆ ತಲೆನೋವು ಕಾಣಿಸುತ್ತಾ ಇದ್ದರೆ ನೀವು ಒಂದು ಕಪ್ ಬಿಸಿ ಕಾಫಿ ಕುಡಿದರೆ ಅದರಿಂದ ಸಮಸ್ಯೆ ನಿವಾರಣೆಯಾಗುವುದು.

ಟೈಪ್ 2 ಮಧುಮೇಹದ ಅಪಾಯ ಕಡಿಮೆಗೊಳಿಸುವುದು

ಟೈಪ್ 2 ಮಧುಮೇಹದ ಅಪಾಯ ಕಡಿಮೆಗೊಳಿಸುವುದು

ನಮಗೆ ತಿಳಿದಿರುವ ಪ್ರಕಾರ ಮಧುಮೇಹದಲ್ಲಿ ಎರಡು ವಿಧಗಳಿಗೆ ಟೈಪ್ 1 ಮತ್ತು ಟೈಪ್2. ಟೈಪ್ 2ರ ಮಧುಮೇಹಿಗಳ ದೇಹದಲ್ಲಿ ದೇಹವು ಇನ್ಸುಲಿನ್ ಗೆ ಪ್ರತಿರೋಧ ಒಡ್ಡುತ್ತದೆ ಮತ್ತು ಸರಿಯಾದ ಪ್ರಮಾಣದ ಇನ್ಸುಲಿನ್ ಒದಗಿಸುವುದಿಲ್ಲ. ಕಾಫಿಯಲ್ಲಿ ಕೆಫಿನ್ ಇನ್ಸುಲಿನ್ ಹಾರ್ಮೋನು ಮಟ್ಟವನ್ನು ನಿಯಂತ್ರಣದಲ್ಲಿಟ್ಟು ರೋಗ ಬರದಂತೆ ತಡೆಯುವುದು.

ಯಕೃತ್ ನ ರಕ್ಷಣೆ

ಯಕೃತ್ ನ ರಕ್ಷಣೆ

ಮೆದುಳಿನ ಕೋಶಗಳು ಆರೋಗ್ಯ ಹಾಗೂ ಕ್ರಿಯಾತ್ಮಕವಾಗಿರುವಂತೆ ಮಾಡುವ ಕಾಫಿಯಲ್ಲಿರುವ ಕೆಫಿನ್ ಯಕೃತ್ ನ ಕೋಶಗಳ ಆರೋಗ್ಯವನ್ನೂ ಕಾಪಾಡುವುದು. ಆಹಾರ ಮತ್ತು ಆಲ್ಕೋಹಾಲ್ ನಲ್ಲಿರುವಂತಹ ವಿಷಕಾರಿ ಅಂಶಗಳಿಂದ ಯಕೃತ್ ನ್ನು ಇದು ಕಾಪಾಡುವುದು.

ದೃಷ್ಟಿ ಉತ್ತಮವಾಗಲು

ದೃಷ್ಟಿ ಉತ್ತಮವಾಗಲು

ಕಾಫಿಯಲ್ಲಿ ಕೆಫಿನ್ ನೊಂದಿಗೆ ಕೆಲವೊಂದು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು ಕೂಡ ಇವೆ. ಕಾಫಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಕಣ್ಣಿನ ಕೋಶಗಳನ್ನು ಪುನಶ್ಚೇತನಗೊಳಿಸಿ ದೃಷ್ಟಿಯನ್ನು ಸುಧಾರಿಸುವುದು.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ದಿನದಲ್ಲಿ ಒಂದು ಕಪ್ ಕಾಫಿ ಕುಡಿಯುವುದರಿಂದ ಮೆದುಳಿನ ಮತ್ತು ಯಕೃತ್ ನಂತಹ ಹಲವಾರು ರೀತಿಯ ಕ್ಯಾನ್ಸರ್‌ಗಳನ್ನು ತಡೆಯಬಹುದು. ಕಾಫಿಯಲ್ಲಿರುವ ಕೆಫಿನ್ ಅಂಗಾಂಗಗಳಲ್ಲಿ ಕ್ಯಾನ್ಸರ್ ನ ಗಡ್ಡೆಗಳು ಬೆಳೆಯದಂತೆ ತಡೆಯುತ್ತದೆ.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ನಿಯಮಿತವಾಗಿ ಕಾಫಿ ಸೇವನೆ ಮಾಡುವುದರಿಂದ ಹಸಿವು ಕಡಿಮೆಯಾಗುವುದು ಮತ್ತು ತಿನ್ನುವ ಆಸೆ ತಡೆಯುವುದು. ಇದರಿಂದ ಜಂಕ್ ಫುಡ್ ಸೇವನೆ ಕಡಿಮೆಯಾಗಿ ತೂಕ ಕಳೆದುಕೊಳ್ಳಲು ನೆರವಾಗುವುದು.

 ದೀರ್ಘ ಕಾಲ ಬದುಕಲು

ದೀರ್ಘ ಕಾಲ ಬದುಕಲು

ದಿನನಿತ್ಯ ಕಾಫಿ ಸೇವನೆ ಮಾಡಿದರೆ ಚಯಪಚಯ ಕ್ರಿಯೆ ಸುಧಾರಣೆಯಾಗುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಮಾರಕ ಕಾಯಿಲೆ ತಡೆಯಬಹುದು ಮತ್ತು ದೀರ್ಘ ಕಾಲ ಬದುಕಬಹುದು.

 ಲೈಂಗಿಕ ಜೀವನ ಸುಧಾರಣೆ

ಲೈಂಗಿಕ ಜೀವನ ಸುಧಾರಣೆ

ಪುರುಷರು ಹಾಗೂ ಮಹಿಳೆಯರ ಜನನಾಂಗಗಳಿಗೆ ಆಮ್ಲಜನಕ ಮತ್ತು ರಕ್ತಸಂಚಾರವು ಸರಿಯಾಗಿ ಆಗುವಂತೆ ಮಾಡುವಲ್ಲಿ ಕೆಫಿನ್ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಿಂದ ಲೈಂಗಿಕ ಶಕ್ತಿಯು ಸುಧಾರಣೆಯಾಗಿ ಲೈಂಗಿಕ ಕ್ರಿಯೆಯಲ್ಲಿ ಸುಧಾರಣೆಯಾಗುವುದು.

ಆತಂಕ ಕಡಿಮೆಗೊಳಿಸುವುದು

ಆತಂಕ ಕಡಿಮೆಗೊಳಿಸುವುದು

ನಕಾರಾತ್ಮಕ ಅಂಶದಿಂದಾಗಿ ನಿಮ್ಮ ಮೆದುಳಿನಲ್ಲಿ ಭೀತಿ ಮತ್ತು ಆತಂಕ ಉಂಟಾಗುತ್ತಾ ಇದೆಯಾ? ಆತಂಕ ಉಂಟುಮಾಡುವ ಹಾರ್ಮೋನುಗಳಾದ ಕಾರ್ಟಿಸಾಲ್ ಅನ್ನು ಕಡಿಮೆ ಮಾಡುವಂತಹ ಸಾಮರ್ಥ್ಯವು ಕೆಫಿನ್ ನಲ್ಲಿದೆ.

ಹೃದಯದ ಆರೋಗ್ಯ ಕಾಪಾಡುವುದು

ಹೃದಯದ ಆರೋಗ್ಯ ಕಾಪಾಡುವುದು

ಕಾಫಿಯಲ್ಲಿರುವ ಕೆಫಿನ್ ಅಂಶವು ಹೃದಯಕ್ಕೆ ರಕ್ತ ಪೂರೈಕೆಯನ್ನು ಸರಾಗವಾಗಿಸುವುದು. ಇದು ಹೃದಯಬಡಿತವನ್ನು ಸಮತೋಲದಲ್ಲಿಟ್ಟುಕೊಂಡು ಹೃದಯ ಆರೋಗ್ಯವನ್ನು ಕಾಪಾಡಿ ಪ್ರಮುಖ ಹೃದಯ ಕಾಯಿಲೆಗಳನ್ನು ತಡೆಯುವುದು.

ನೋವು ನಿವಾರಣೆ

ನೋವು ನಿವಾರಣೆ

ಕೆಫಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ನ ಸಮ್ಮಿಶ್ರಣವು ಕಾಫಿಯಲ್ಲಿ ಉರಿಯೂತ ಶಮನಕಾರಿ ಗುಣವನ್ನು ಉಂಟು ಮಾಡುವುದು. ಇದರಿಂದ ಹೃದಯ, ಗಂಟು, ಬೆನ್ನು ಇತ್ಯಾದಿ ಕಡೆಗಳಲ್ಲಿ ಇರುವಂತಹ ನೋವನ್ನು ಇದು ನಿವಾರಣೆ ಮಾಡುವುದು.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಕಾಫಿಯು ನೈಸರ್ಗಿಕ ವಿರೇಚಕದಂತೆ ಕೆಲಸ ಮಾಡುವ ಕಾರಣದಿಂದ ಮಲವನ್ನು ತುಂಬಾ ಮೃಧುವಾಗಿಸಿ ಕರುಳಿನಲ್ಲಿ ಹೆಚ್ಚು ತೇವಾಂಶವು ಉಳಿಯುವಂತೆ ಮಾಡಿ ಮಲವು ಸರಾಗವಾಗಿ ಸಾಗುವಂತೆ ಮಾಡುವುದು. ಇದರಿಂದ ಮಲಬದ್ದತೆ ನಿವಾರಣೆಯಾಗುವುದು.

ಮೆದುಳಿನ ಕಾಯಿಲೆಗಳ ಅಪಾಯ ಕಡಿಮೆ

ಮೆದುಳಿನ ಕಾಯಿಲೆಗಳ ಅಪಾಯ ಕಡಿಮೆ

ಕೆಫಿನ್ ಮೆದುಳಿನ ಕೋಶಗಳನ್ನು ತುಂಬಾ ಕ್ರಿಯಾತ್ಮಕವಾಗಿಡುವ ಕಾರಣದಿಂದಾಗಿ ವಯಸ್ಸಾಗುವಾಗ ಬರುವಂತಹ ಪಾರ್ಕಿನ್ಸನ್, ಬುದ್ಧಿಮಾಂದ್ಯತೆ, ಆಲ್ಝೈಮರ್ ಇತ್ಯಾದಿಗಳನ್ನು ತಡೆಯುವುದು. ಇದರಿಂದ ವಯಸ್ಸಾಗುತ್ತಾ ಇದ್ದರೂ ಆರೋಗ್ಯ ಕಾಪಾಡಿಕೊಳ್ಳಬಹುದು.

ಪಾರ್ಶ್ವವಾಯು

ಪಾರ್ಶ್ವವಾಯು

ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಮೆದುಳಿಗೆ ಸರಿಯಾಗಿ ರಕ್ತ ಸರಬರಾಜು ಆಗದೆ ಅದರ ಕೋಶಗಳಿಗೆ ಹಾನಿಯಾಗುವುದೇ ಪಾರ್ಶ್ವವಾಯು. ಇದು ತುಂಬಾ ಗಂಭೀರ ಮತ್ತು ಪ್ರಾಣಹಾನಿ ಉಂಟು ಮಾಡುವ ಕಾಯಿಲೆ. ಪ್ರತೀ ದಿನ ಒಂದು ಸಣ್ಣ ಕಪ್ ಕಾಫಿ ಸಕ್ಕರೆ ಹಾಕದೆ ಸೇವಿಸಿದರೆ ಅದರಿಂದ ರಕ್ತನಾಳಗಳು ಸರಾಗವಾಗಿ ಕೆಲಸ ಮಾಡಿ ರಕ್ತ ಹೆಪ್ಪುಗಟ್ಟದಂತೆ ತಡೆದು ಪಾರ್ಶ್ವವಾಯು ತಡೆಯುವುದು.

ಆಲ್ಝೈಮೆರ್

ಆಲ್ಝೈಮೆರ್

ಆಲ್ಝೈಮೆರ್ ಎನ್ನುವುದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಮೆದುಳಿನ ಜೀವಕೋಶದ ನೆನಪು, ಕಾರ್ಯ ಮತ್ತು ಕೌಶಲ್ಯ ಹಾಳುಗೆಡವುದು. ಇದರಿಂದ ಆ ವ್ಯಕ್ತಿಯ ದೈನಂದಿನ ಚಟುವಟಿಕೆ ಮೇಲೆ ಪರಿಣಾಮವಾಗುವುದು. ಕಾಫಿಯಲ್ಲಿ ಇರುವಂತಹ ಕೆಫಿನ್ ಮೆದುಳಿನ ಕೋಶಗಳು ಆರೋಗ್ಯವಾಗಿ ಹಾಗೂ ದೀರ್ಘಕಾಲ ತನಕ ಚಟುವಟಿಕೆಯಿಂದ ಇರುವಂತೆ ಮಾಡುವುದು. ಇದರಿಂದ ಆಲ್ಝೈಮೆರ್ ಕಾಯಿಲೆ ತಡೆಯಬಹುದು ಎಂದು ಅಮೆರಿಕಾದ ಸಂಶೋಧನಾ ವರದಿ ಹೇಳಿದೆ.

ಮಧುಮೇಹ

ಮಧುಮೇಹ

ಮಧುಮೇಹವು ದೇಹದ ಒಂದು ಪ್ರಮುಖ ಸಮಸ್ಯೆಯಾಗಿದೆ. ದೇಹದಲ್ಲಿ ಇನ್ಸುಲಿನ್ ಪ್ರತಿರೋಧಕವು ನಿರ್ಮಾಣವಾಗಿ ಯಾವುದೇ ರೀತಿಯ ಇನ್ಸುಲಿನ್ ದೇಹದಲ್ಲಿ ಉತ್ಪತ್ತಿಯಾಗದೆ ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುವುದು. ಮಧುಮೇಹ ಸಂಪೂರ್ಣವಾಗಿ ನಿವಾರಣೆ ಮಾಡಲು ಸಾಧ್ಯವಿಲ್ಲ. ಆದರೆ ಚಿಕಿತ್ಸೆಯಿದೆ. ಕಾಫಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ಚಯಾಪಚಯಾ ಕ್ರಿಯೆಯ ಆರೋಗ್ಯವಾಗಿಸಿ, ಇನ್ಸುಲಿನ್ ಹಾರ್ಮೋನು ಸಮತೋಲ ಕಾಪಾಡಿಕೊಂಡು ವಯಸ್ಸಾಗುವ ವೇಳೆ ಬರುವ ಮಧುಮೇಹ ತಡೆಯುವುದು ಎಂದು ಅಮೆರಿಕನ್ ಕೆಮಿಕಲ್ ಸೊಸೈಟಿ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯೊಂದು ಹೇಳಿದೆ.

ಆಯಾಸದ ಭಾವನೆಯನ್ನು ಕೊನೆಗೊಳಿಸುತ್ತದೆ

ಆಯಾಸದ ಭಾವನೆಯನ್ನು ಕೊನೆಗೊಳಿಸುತ್ತದೆ

ಯಾವುದೇ ಕೆಲಸ ಮಾಡಿದರೂ ಕೊಂಚ ಹೊತ್ತಿನ ಏಕತಾನತೆಯ ಬಳಿಕ ಆಯಾಸವೆನ್ನಿಸುತ್ತದೆ. ಏಕೆಂದರೆ ನಮ್ಮ ಮೆದುಳು ಒಂದೇ ರೀತಿಯ ಸೂಚನೆಗಳನ್ನು ಸತತವಾಗಿ ಪಡೆದುಕೊಳ್ಳಬಯಸುವುದಿಲ್ಲ, ಮೆದುಳಿಗೆ ಯಾವಾಗಲೂ ಬದಲಾವಣೆಯಾಗುತ್ತಲೇ ಇರಬೇಕು. ಹಾಗಾಗಿ ನಾವು ಸತತವಾಗಿ ಒಂದೇ ರೀತಿಯ ಊಟ ಮಾಡಲಾರೆವು, ಒಂದೇ ರೀತಿಯ ಬಟ್ಟೆ ತೊಡಲಾರೆವು. ಕೆಲವೊಮ್ಮೆ ಸತತವಾಗಿ ಕೆಲಸ ಮಾಡಬೇಕಾದಾಗ ಆಯಾಸವೆನ್ನಿಸಿ ವಿಶ್ರಾಂತಿ ಬಯಸುತ್ತೇವೆ. ಈ ಹೊತ್ತಿನಲ್ಲಿ ಸ್ವಲ್ಪ ಕಾಫಿ ಕುಡಿದರೆ ಕಾಫಿಯಲ್ಲಿನ ಕೆಫೀನ್ ಮೆದುಳಿಗೆ ರವಾನೆಯಾಗಿ ಈ ಭಾವನೆಯಿಂದ ಶೀಘ್ರವಾಗಿ ಹೊರಬರಲು ನೆರವಾಗುತ್ತದೆ.

ತೂಕ ಕಡಿಮೆಗೊಳಿಸಲು ಸಹಕರಿಸುತ್ತದೆ

ತೂಕ ಕಡಿಮೆಗೊಳಿಸಲು ಸಹಕರಿಸುತ್ತದೆ

ಕಾಫಿಯ ಮೂಲಕ ಜೀರ್ಣಾಗಗಳಿಗೆ ಸೇರುವ ಕೆಫೀನ್ ರಕ್ತ ಸೇರುವ ಮೊದಲು ಕರುಳುಗಳು ಹೆಚ್ಚಿನ ಕೊಬ್ಬನ್ನು ದಹಿಸಬೇಕಾಗಿ ಬರುತ್ತದೆ. ಇದರಿಂದಾಗಿ ಕೊಬ್ಬು ಶೀಘ್ರವಾಗಿ ಕರಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಆದರೆ ಕಾಫಿ ಕುಡಿದೇ ತೂಕ ಇಳಿಸುತ್ತೇವೆ ಎಂದು ಇದರ ಅರ್ಥವಲ್ಲ. ತೂಕ ಕಳೆದುಕೊಳ್ಳಲು ಇತರ ಪ್ರಯತ್ನಗಳ ಜೊತೆಗೆ ಪ್ರತಿದಿನ ಅಲ್ಪಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ನಿಧಾನವಾಗಿ ಆರೋಗ್ಯಕರ ವಿಧಾನದಲ್ಲಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಆಯಸ್ಸು ಹೆಚ್ಚುತ್ತದೆ

ಆಯಸ್ಸು ಹೆಚ್ಚುತ್ತದೆ

ಆಯಸ್ಸು ಹೆಚ್ಚಲು ಆರೋಗ್ಯ ಉತ್ತಮ ಸ್ಥಿತಿಯಲ್ಲಿರುವ ಜೊತೆಗೇ ಮೆದುಳು ಸಹಾ ಉತ್ತಮ ಸ್ಥಿತಿಯಲ್ಲಿರುವುದು ಮುಖ್ಯ. ನಿಯಮಿತವಾಗಿ ಮಿತಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ದೇಹ ಮತ್ತು ಮೆದುಳು ಉತ್ತಮ ಸ್ಥಿತಿಯನ್ನು ಕಾಯ್ದುಕೊಳ್ಳುವ ಮೂಲಕ ಆಯಸ್ಸು ಹೆಚ್ಚುತ್ತದೆ.

ಕ್ಯಾನ್ಸರ್ ರೋಗವನ್ನು ತಡೆಯುತ್ತದೆ

ಕ್ಯಾನ್ಸರ್ ರೋಗವನ್ನು ತಡೆಯುತ್ತದೆ

ಮಿತಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ದೇಹ ವಿವಿಧ ಕ್ಯಾನ್ಸರ್ ಬರುವುದನ್ನು ತಡೆಯಬಹುದು ಎಂದು ಸಂಶೋಧನೆಗಳಿಂದ ಕಂಡುಬಂದಿದೆ. ಬಾಯಿ ಮತ್ತು ತಲೆಯ ಕ್ಯಾನ್ಸರ್ ಬರುವ ಸಂಭವವನ್ನು 39%, ಮಹಿಳೆಯರಲ್ಲಿ ಗರ್ಭಕೋಶದ ಮತ್ತು ಸ್ತನ ಕ್ಯಾನ್ಸರ್ ಬರುವ ಸಂಭವವನ್ನು ಸಾಕಷ್ಟು ಪ್ರಮಾಣದಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಂಭವವನ್ನು 60%, ಮೆದುಳಿನ ಕ್ಯಾನ್ಸರ್ ಬರುವ ಸಂಭವವನ್ನು 40%, ಕರುಳಿನ ಕ್ಯಾನ್ಸರ್ ಬರುವ ಸಂಭವವನ್ನು 25%, ಯಕೃತ್ ಕ್ಯಾನ್ಸರ್ ಬರುವ ಸಂಭವವನ್ನು 41% ಕಡಿಮೆಗೊಳಿಸುತ್ತದೆ.

ನಿಮ್ಮನ್ನು ಸದಾ ಎಚ್ಚರದಲ್ಲಿರಿಸುತ್ತದೆ

ನಿಮ್ಮನ್ನು ಸದಾ ಎಚ್ಚರದಲ್ಲಿರಿಸುತ್ತದೆ

ನಿಮ್ಮ ಗಮನವನ್ನು ಗರಿಷ್ಟ ಮಟ್ಟದಲ್ಲಿರಿಸಲು ಅಗತ್ಯವಿರುವ ಕೆಲಸಗಳಾದ ವಾಹನ ಚಲಾವಣೆ, ಕ್ರೇನ್ ನಡೆಸುವಿಕೆ, ಹೊಲಿಗೆ ಮೊದಲಾದ ಕೆಲಸಗಳನ್ನು ಮಾಡುವ ಮುನ್ನ ಒಂದು ಲೋಟ ಕಾಫಿ ಕುಡಿಯುವುದರಿಂದ ನಿಮ್ಮ ಮೆದುಳು ಸದಾ ಎಚ್ಚರದ ಅವಸ್ಥೆಯಲ್ಲಿದ್ದು ನಿಮ್ಮ ಕೆಲಸದ ಕಡೆಗೆ ಗರಿಷ್ಟ ಗಮನ ನೀಡಲು ಸಾಧ್ಯವಾಗುತ್ತದೆ. ಕಾಫಿಯಲ್ಲಿರುವ ಪೋಷಕಾಂಶಗಳು ರಕ್ತದ ಮೂಲಕ ಮೆದುಳನ್ನು ತಲುಪಿ ಮೆದುಳಿನ ಸಾಮರ್ಥಗಳಾದ ನೆನಪಿನ ಶಕ್ತಿ, ಜಾಗರೂಕತೆ, ಭಾವಾವೇಶ, ಪ್ರತಿಕ್ರಿಯೆ ಮೊದಲಾದವುಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ಆದುದರಿಂದ ಬೆಳಗ್ಗಿನ ಉಪಾಹಾರದ ಬಳಿಕ ಒಂದು ಚಿಕ್ಕ ಲೋಟ ಕಾಫಿ ಕುಡಿದು ನಿಮ್ಮ ಕೆಲಸವನ್ನು ಪ್ರಾರಂಭಿಸಿದರೆ ನಿಮ್ಮ ಕಾರ್ಯಕ್ಷಮತೆ ಹೆಚ್ಚುವುದು ಹಾಗೂ ತಪ್ಪುಗಳಾಗುವ ಸಂಭವವೂ ಕಡಿಮೆಯಾಗುತ್ತದೆ.

English summary

Good Things That Can Happen To Your Body When You Drink Coffee!

while drinking coffee, a number of us may be worried about whether coffee is actually good for us or not. In fact, it has been noted that a lot of people try to quit coffee after reading reports on how it can harm one's health. However, we must realise that just like most foods, coffee too has both pros and cons. So, we must ensure that we get certain facts about what we ingest, before deciding whether they are bad for our health or not. Also, one must keep in mind that although coffee does come with a number of health benefits, it may not be a suitable beverage for everyone.
X
Desktop Bottom Promotion