ನಿಮಗೂ ಬೆನ್ನು ನೋವಾ? ಹಾಗಾದರೆ 'ಬೆಳ್ಳುಳ್ಳಿ' ಟ್ರೈ ಮಾಡಿ!

By: manu
Subscribe to Boldsky

ವಯಸ್ಕರಿಗೆ ಕಾಡುವ ಸಾಮಾನ್ಯ ರೋಗವೆಂದರೆ ಅದು ಬೆನ್ನುನೋವು. ಒಂದು ಅಂದಾಜಿನ ಪ್ರಕಾರ ಶೇ. 80ರಷ್ಟು ವಯಸ್ಕರು ದೀರ್ಘಕಾಲ ಅಥವಾ ತಾತ್ಕಾಲಿಕ ಬೆನ್ನುನೋವಿನಿಂದ ಬಳಲುತ್ತಾರೆ. ತೀವ್ರವಾದ ಸ್ನಾಯು, ಅತಿಯಾದ ತೂಕ, ಸಂಧಿವಾತ, ಆಸ್ಟಿಯೊಪೊರೋಸಿಸ್, ಅತಿಯಾದ ಶ್ರಮದ ಕೆಲಸ, ಕ್ಯಾಲ್ಸಿಯಂ ಕೊರತೆ ಸೇರಿದಂತೆ ಅನೇಕ ತೊಂದರೆಗಳಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಇದು ಮಹಿಳೆಯರಲ್ಲಿ ಅತಿ ಹೆಚ್ಚು ಎಂದು ಹೇಳಬಹುದು.

ಆದರೆ ಬೆನ್ನು ನೋವು ಕಾಣಿಸಿಕೊಂಡಾಗ ಮಾತ್ರೆಗಳನ್ನೆಲ್ಲಾ ನುಂಗುವ ಬದಲು, ನೈಸರ್ಗಿಕವಾದ ದಿವ್ಯ ಔಷಧಿ 'ಬೆಳ್ಳುಳ್ಳಿ'ಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಅಪಾರ ಪ್ರಮಾಣದ ರೋಗ ನಿರೋಧಕ ಗುಣವನ್ನು ಒಳಗೊಂಡಿರುವ ಇದು ಉರಿಯೂತ ಹಾಗೂ ಬೆನ್ನು ನೋವನ್ನು ಸುಲಭವಾಗಿ ನಿಯಂತ್ರಿಸುತ್ತದೆ.

ಬೆನ್ನು ನೋವನ್ನು ಶಮನಗೊಳಿಸಲು ಸೂಕ್ತ ಸಲಹೆಗಳು

ಅದರಲ್ಲೂ ಬೆಳ್ಳುಳ್ಳಿಯೊಂದಿಗೆ ಇತರ ನೋವು ನಿವಾರಕ ವಸ್ತುಗಳನ್ನು ಬಳಸಿದರೆ ದೀರ್ಘಕಾಲದ ಬೆನ್ನು ನೋವನ್ನು ನಿಯಂತ್ರಿಸಿ, ಚೇತರಿಕೆ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ, ಬನ್ನಿ ಬೆಳ್ಳುಳ್ಳಿಯ ಮಿಶ್ರಣ ಹಾಗೂ ವಿಧಾನವನ್ನು ನೀಡಿದ್ದೇವೆ ಮುಂದೆ ಓದಿ... 

ಬೆಳ್ಳುಳ್ಳಿ ಮತ್ತು ತೆಂಗಿನೆಣ್ಣೆ

ಬೆಳ್ಳುಳ್ಳಿ ಮತ್ತು ತೆಂಗಿನೆಣ್ಣೆ

ಸಂಧಿವಾತ ನೋವು ನಿವಾರಣೆಗೆ ತೆಂಗಿನೆಣ್ಣೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ತೆಂಗಿನೆಣ್ಣೆ ಮತ್ತು ಬೆಳ್ಳುಳ್ಳಿಯ ಮಿಶ್ರಣ ನೋವು ನಿವಾರಣೆಗೆ ಸಹಾಯ ಮಾಡುವುದು.

ಮಾಡುವ ವಿಧಾನ...

1. ಹತ್ತು ಬೆಳ್ಳುಳ್ಳಿ ಎಸಳನ್ನು ಜಜ್ಜಿ 60 ಮಿ.ಲೀ. ತೆಂಗಿನೆಣ್ಣೆಗೆ ಸೇರಿಸಿಕೊಳ್ಳಿ

2. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿಮಾಡಿಕೊಳ್ಳಿ

3. ನಂತರ ಕೆಳಗಿಳಿಸಿ, ಸೋಸಿಕೊಳ್ಳಿ

4. ಇನ್ನು ಸೋಸಿದ ಮಿಶ್ರಣವನ್ನು ಗಾಜಿನ ಜಾರಿನಲ್ಲಿ ಶೇಖರಿಸಿಡಬೇಕು.

ನೋವಿನ ಸಂದರ್ಭದಲ್ಲಿ ಈ ಮಿಶ್ರಣದಿಂದ ಮಸಾಜ್ ಮಾಡಿ, 3 ಗಂಟೆಗಳ ಕಾಲ ಬಿಡಬೇಕು. ನಂತರ ಬೆಚ್ಚಗಿನ ನೀರು ಮತ್ತು ಸೋಪಿನ ನೀರಿನಲ್ಲಿ ತೊಳೆಯಬೇಕು.

ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ

ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆ

ತ್ವಚೆಯ ಮೇಲಿರುವ ರಂಧ್ರಗಳಲ್ಲಿ ಸಾಸಿವೆ ಎಣ್ಣೆಯು ಸುಲಭವಾಗಿ ತೂರಿಕೊಳ್ಳುತ್ತದೆ. ನೋಯುತ್ತಿರುವ ಸ್ನಾಯುಗಳು ಮತ್ತು ತೀವ್ರವಾದ ಕೀಲುಗಳಿಗೆ ಸಂಬಂಧಿಸಿದ ಅಸ್ವಸ್ಥತೆಗೆ ಪರಿಹಾರವನ್ನು ಒದಗಿಸುತ್ತದೆ.

ಮಾಡುವ ವಿಧಾನ...

1. 8 ರಿಂದ 10 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ 1/2 ಕಪ್ ಶುದ್ಧ ಸಾಸಿವೆ ಎಣ್ಣೆಯಲ್ಲಿ ಹಾಕಿ

2. ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಹುರಿಯಲು ಸಣ್ಣ ಉರಿಯಲ್ಲಿ ಇಡಿ.

3. ಕಂದು ಬಣ್ಣಕ್ಕೆ ತಿರುಗಿದ ಮೇಲೆ ಮಿಶ್ರಣವನ್ನು ಕೆಳಗಿಳಿಸಿ.

4. ಆರಿದ ನಂತರ ಎಣ್ಣೆಯಲ್ಲಿದ್ದ ಬೆಳ್ಳುಳ್ಳಿಯನ್ನು ಸೋಸಿ.

5. ನೋವಿರುವ ಸ್ಥಳದಲ್ಲಿ ದಿನಕ್ಕೆ 1-2 ಬಾರಿ ಮಸಾಜ್ ಮಾಡಿ.

ಬೆಳ್ಳುಳ್ಳಿ ಮತ್ತು ಅರಿಶಿನ

ಬೆಳ್ಳುಳ್ಳಿ ಮತ್ತು ಅರಿಶಿನ

ಅರಿಶಿನದಲ್ಲಿ ಕಕ್ಯುಮಿನ್ ಪ್ರೋಟೀನ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ವಾತ, ನೋವು, ಉರಿಯೂತಗಳನ್ನು ಕಡಿಮೆಮಾಡುತ್ತದೆ. ಇದರೊಂದಿಗೆ ಬೆಳ್ಳುಳ್ಳಿಯನ್ನು ಸೇರಿಸಿ ಮನೆ ಔಷಧಿ ತಯಾರಿಸಬಹುದು.

ವಿಧಾನ...

1. 2 ಚಮಚ ಅರಿಶಿನ ಮತ್ತು ಸ್ವಲ್ಪ ಬೆಳ್ಳುಳ್ಳಿಯ ಪೇಸ್ಟ್ ತೆಗೆದುಕೊಂಡು ಒಂದು ಮಿಶ್ರಣ ತಯಾರಿಸಬೇಕು.

2. ಒಂದು ಚಮಚ ಈ ಮಿಶ್ರಣವನ್ನು ಸೇವಿಸಿ, ಒಂದು ಗ್ಲಾಸ್ ನೀರು ಕುಡಿಯಬೇಕು.

3. ಇದರ ರುಚಿ ಹೆಚ್ಚಿಸಿಕೊಳ್ಳಲು ಸ್ವಲ್ಪ ಜೇನು ತುಪ್ಪ ಸೇರಿಸಬಹುದು.

4. ದಿನಕ್ಕೆ ಎರಡು ಬಾರಿ ಇದನ್ನು ಸೇವಿಸಿದರೆ ಬೆನ್ನು ನೋವು ನಿವಾರಣೆಯಾಗುವುದು.

ಬೆಳ್ಳುಳ್ಳಿ ಹಾಲು

ಬೆಳ್ಳುಳ್ಳಿ ಹಾಲು

ಬೆಳ್ಳುಳ್ಳಿ ಹಾಲನ್ನು ಸೇವಿಸುವುದರಿಂದ ನರವ್ಯೂಹದಲ್ಲಿ ಇರುವ ನೋವನ್ನು ನಿವಾರಿಸಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೂಳೆ ನೋವನ್ನು ಕಡಿಮೆ ಮಾಡುತ್ತದೆ.

ವಿಧಾನ...

1. ನಾಲ್ಕು ಬೆಳ್ಳುಳ್ಳಿ ಎಸಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು.

2. ಸಣ್ಣ ಉರಿಯಲ್ಲಿ 200ಮಿ.ಲೀ. ಹಾಲಿಗೆ ರುಬ್ಬಿಕೊಂಡ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.

3. ಕೆಲವು ನಿಮಿಷಗಳಕಾಲ ಹಾಲನ್ನು ಹಾಗೇ ಕುದಿಯಲು ಬಿಡಿ.

4. ಉಗುರು ಬೆಚ್ಚಗಿನ ಈ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸಿ.

ಹೀಗೆ ಮಾಡುವುದರಿಂದ ಬೆನ್ನು ನೋವು ಬಹು ಬೇಗ ನಿವಾರಣೆಯಾಗುವುದು.

ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

 ಬೆಳ್ಳುಳ್ಳಿ ಮತ್ತು ಶುಂಠಿ ಪೋಲ್ಟೀಸ್ (ಬೇಯಿಸಿದ ಹಿಟ್ಟು)

ಬೆಳ್ಳುಳ್ಳಿ ಮತ್ತು ಶುಂಠಿ ಪೋಲ್ಟೀಸ್ (ಬೇಯಿಸಿದ ಹಿಟ್ಟು)

ಸಂಧಿವಾತ ಮತ್ತು ಮೂಳೆಗೆ ಸಂಬಂಧಿಸಿದ ನೋವು ನಿವಾರಣೆಗೆ ಶುಂಠಿ ಮತ್ತು ಬೆಳ್ಳುಳ್ಳಿಯ ಮಿಶ್ರಣ ಉತ್ತಮವಾದ್ದು.

ವಿಧಾನ...

1. 5 ಅಂಗುಲದಷ್ಟು ಉದ್ದದ ಶುಂಠಿಯ ಚೂರು ಮತ್ತು 8-10 ಎಸಳು ಬೆಳ್ಳುಳ್ಳಿ ಸೇರಿಸಿ ಪೇಸ್ಟ್ ತಯಾರಿಸಿ.

2. ನೋವಿರುವ ಸ್ಥಳದಲ್ಲಿ ಈ ಮಿಶ್ರಣವನ್ನು ಅನ್ವಯಿಸಿ ಒಂದು ಬಟ್ಟೆಯಿಂದ ಸುತ್ತಿ ರಕ್ಷಿಸಬೇಕು.

3. ಹೀಗೆ 30 ರಿಂದ 45 ನಿಮಿಷಗಳ ಕಾಲ ಅದನ್ನು ಆರಲು ಬಿಡಿ.

4. ನಿತ್ಯವೂ ಹೀಗೆ ಮಾಡುವುದರಿಂದ ಬೆನ್ನು ನೋವು ಶಮನವಾಗುವುದು.

ಬೆಳ್ಳುಳ್ಳಿ ಮತ್ತು ನೀಲಗಿರಿ ಎಣ್ಣೆ ಮಸಾಜ್

ಬೆಳ್ಳುಳ್ಳಿ ಮತ್ತು ನೀಲಗಿರಿ ಎಣ್ಣೆ ಮಸಾಜ್

ನೀಲಗಿರಿ ತೈಲವು ನೈಸರ್ಗಿಕವಾಗಿಯೇ ನೋವು ನಿವಾರಕ ಉತ್ಪನ್ನ. ಬೆಳ್ಳುಳ್ಳಿ ಮತ್ತು ನೀಲಗಿರಿ ಎಣ್ಣೆಯ ಮಿಶ್ರಣವು ನೋವು ನಿವಾರಣೆಗೆ ದಿವ್ಯ ಔಷಧಿ.

ವಿಧಾನ...

1. 2 ಚಮಚ ನೀಲಗಿರಿ ಸಾರಭೂತ ತೈಲ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಒಂದು ಮಿಶ್ರಣ ತಯಾರಿಸಬೇಕು.

2. ಚಮಚದಲ್ಲಿಯೇ ಈ ಮಿಶ್ರಣವನ್ನು ನೋವಿನ ಪ್ರದೇಶದಲ್ಲಿ ಬಳಿಯಬೇಕು.

3. ನಂತರ ಮೃದುವಾಗಿ ವೃತ್ತಾಕಾರದಲ್ಲಿ ಮಸಾಜ್ ಮಾಡಬೇಕು.

4. ಹೀಗೆ ಅನ್ವಯಿಸಿ 1-2 ಗಂಟೆಗಳಕಾಲ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.

5. ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ ನೋವು ನಿವಾರಣೆಯಾಗುವುದು.

ಬೆಳ್ಳುಳ್ಳಿ ಮತ್ತು ಎಪ್ಸಮ್ ಉಪ್ಪು

ಬೆಳ್ಳುಳ್ಳಿ ಮತ್ತು ಎಪ್ಸಮ್ ಉಪ್ಪು

ಎಪ್ಸ್‍ಮ್ ಉಪ್ಪು ಮೆಗ್ನೀಸಿಯಮ್, ಸಲ್ಫೇಟ್ ಮತ್ತು ಕಿಣ್ವಗಳ ಒಂದು ಉತ್ತಮ ಮೂಲ ಇದು. ಬೆಳ್ಳುಳ್ಳಿಯೊಂದಿಗೆ ಈ ಮಿಶ್ರಣವನ್ನು ಸೇರಿಸಿದಾಗ ಉತ್ತಮ ಮರಿಣಾಮ ಬೀರುವುದು.

ವಿಧಾನ...

1. 2 ರಿಂದ 3 ಚಮಚ ಎಪ್ಸಮ್ ಉಪ್ಪು ಮತ್ತು ಬೆಳ್ಳುಳ್ಳಿಯ ಪೇಸ್ಟ್ ಅನ್ನು ಬಿಸಿ ನೀರಿಗೆ ಸೇರಿಸಿ.

2. ಇದರೊಳಗೆ ಒಂದು ಕ್ಲೀನ್ ಇರುವ ಟವೆಲ್‍ಅನ್ನು ನೆನೆಸಿಡಿ.

3. ಟವೆಲ್ ತೆಗೆದು ಹೆಚ್ಚುವರಿ ನೀರನ್ನು ಹಿಂಡಿ, ಬೆನ್ನಿನ ಮೇಲೆ ಇಟ್ಟುಕೊಳ್ಳಬೇಕು.

4. ಟವೆಲ್ ಆರುವ ತನಕ ಬಿಟ್ಟು, ಪುನಃ ಬಿಸಿ ಮಿಶ್ರಣದಲ್ಲಿ ಅದ್ದಿ ಕ್ರಿಯೆಯನ್ನು ಪುನರಾವರ್ತಿಸಿ.

5. ದಿನದಲ್ಲಿ 3 ಬಾರಿ ಹೀಗೆ ಮಾಡುವುದರಿಂದ ಬೆನ್ನಿನ ನೋವು ಗುಣವಾಗುವುದು.

 ಬೆಳ್ಳುಳ್ಳಿ ಮತ್ತು ತುಳಸಿ ಟೀ

ಬೆಳ್ಳುಳ್ಳಿ ಮತ್ತು ತುಳಸಿ ಟೀ

ತುಳಸಿ ಎಲೆಯಲ್ಲಿ ನೈಸರ್ಗಿಕ ತೈಲದ ಗುಣವನ್ನು ಒಳಗೊಂಡಿದೆ. ಇದು ಬಲವಾದ ಉರಿಯೂತದ ಪ್ರಕ್ರಿಯೆಯನ್ನು ಶಮನಗೊಳಿಸುತ್ತದೆ. ತುಳಸಿ ಟೀಯೊಂದಿಗೆ ಬೆಳ್ಳುಳ್ಳಿ ಬೆರೆಸಿ ಒಂದು ಮಿಶ್ರಣ ತಯಾರಿಸಿದರೆ ನೋವು ನಿವಾರಕ ಔಷಧಿ ತಯಾರಾಗುತ್ತದೆ.

ವಿಧಾನ...

1. ಸ್ವಲ್ಪ ತುಳಸಿ ಎಲೆ ಮತ್ತು 3-4 ಎಸಳು ಬೆಳ್ಳುಳ್ಳಿ ಎಸಳನ್ನು ನೀರಿನಲ್ಲಿ ಹಾಕಿ ಕುದಿಸಿ.

2. ನೀರು ಮೊದಲಿನ ಪ್ರಮಾಣಕ್ಕಿಂತ ಅರ್ಥದಷ್ಟು ಪ್ರಮಾಣಕ್ಕೆ ಬಂದಾಗ ಉರಿಯನ್ನು ಆರಿಸಿ.

3. ಇದನ್ನು ಸ್ವಲ್ಪ ಸಮಯದ ತನಕ ಆರಲು ಬಿಡಿ.

4. ದಿನಕ್ಕೆ 1 ರಿಂದ 2 ಬಾರಿ ಈ ಮಿಶ್ರಣವನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ನೋವು ನಿವಾರಣೆಯಾಗುವುದು.

ಬೆಳ್ಳುಳ್ಳಿ ಪೇಸ್ಟ್

ಬೆಳ್ಳುಳ್ಳಿ ಪೇಸ್ಟ್

*ಸುಮಾರು 8 ರಿಂದ 10 ತಾಜಾ ಬೆಳ್ಳುಳ್ಳಿಯ ಎಸಳನ್ನು ಚೆನ್ನಾಗಿ ಜಜ್ಜಿ, ಪೇಸ್ಟ್ ರೀತಿ ಮಾಡಿಕೊಂಡು, ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಿ, ಹಾಗೂ ಒಂದು ಟವಲ್‌ನಿಂದ ಸುತ್ತಿಕೊಳ್ಳಿ.

*ಸುಮಾರಿ ಅರ್ಧ ಗಂಟೆ ಹಾಗೆಯೇ ಬಿಡಿ, ತದನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಟವಲ್‌‌ನ್ನು ಅದ್ದಿ ಚೆನ್ನಾಗಿ ಒರೆಸಿಕೊಳ್ಳಿ

ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?

English summary

Garlic Remedies To Get Relief From Back Pain

Approximately 80% adults are suffered by either chronic or temporary back pain. Instead of popping antibiotics or painkillers, back pain can be treated using natural ingredients such as garlic. It can not only provide relief from back pain but also promote the recovery process in case of chronic back pain by reducing inflammation.
Subscribe Newsletter