ಸಿಪ್ಪೆ ಎಂದು ತಾತ್ಸಾರ ಬೇಡ... ಇದರಲ್ಲಿಯೇ ಹೆಚ್ಚು ಪೋಷಕಾಂಶಗಳಿರುವುದು

By: Divya pandith
Subscribe to Boldsky

ನಮಗೆ ಗೊತ್ತಿರುವ ಹಾಗೆ ಹಣ್ಣು ಮತ್ತು ತರಕಾರಿಗಳು ಅಗತ್ಯವಾದ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು ನಮ್ಮ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವುಗಳ ಸಿಪ್ಪೆಯೂ ಹೆಚ್ಚು ಆರೋಗ್ಯಕರವಾದದ್ದು ಎನ್ನುವುದನ್ನು ನಾವು ತಿಳಿದಿಲ್ಲ. ಸಾಮಾನ್ಯವಾಗಿ ನಾವು ಹಣ್ಣು ಹಾಗೂ ತರಕಾರಿಯನ್ನು ಬಳಸುವಾಗ ಅದರ ಸಿಪ್ಪೆಯನ್ನು ತೆಗೆದು ಕಸದ ಬುಟ್ಟಿಗೆ ಅಥವಾ ಗಿಡ-ಮರಗಳ ಬುಡಕ್ಕೆ ಹಾಕುತ್ತೇವೆ.

ಈ ಸಿಪ್ಪೆಗಳು ಎಷ್ಟು ವರ್ಣ ರಂಜಿತವಾಗಿ ಮನಸ್ಸಿಗೆ ಮುದ ನೀಡುತ್ತವೆಯೋ ಅಷ್ಟೇ ಪ್ರಮಾಣದಲ್ಲಿ ಪೌಷ್ಟಿಕಾಂಶವನ್ನು ಒದಗಿಸುತ್ತವೆ. ಕೆಲವು ವರದಿಯ ಪ್ರಕಾರ ಸಿಪ್ಪೆಗಳಿಂದ ಕ್ಯಾನ್ಸರ್‌ನಂತಹ ರೋಗಗಳನ್ನು ತಡೆಗಟ್ಟಬಹುದು. ಕೆಲವು ಹಣ್ಣು ಹಾಗೂ ತರಕಾರಿಗಳ ಸಿಪ್ಪೆ ಮತ್ತು ಬೀಜಗಳನ್ನು ಎಸೆಯುವುದರಿಂದ ಆರೋಗ್ಯಕರ ವಸ್ತುವನ್ನು ಎಸೆಯುತ್ತಿದ್ದೇವೆ ಎನ್ನುವುದನ್ನು ನಾವು ಅರಿಯಬೇಕು.

ಇಂತಹ ಹಣ್ಣುಗಳ ಸಿಪ್ಪೆ ಬಿಸಾಡಿದರೆ, ನಿಮ್ಮ ಆರೋಗ್ಯಕ್ಕೇ ನಷ್ಟ!

ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ನಿತ್ಯ ನಾವು ಉಪಯೋಗಿಸುವಂತಹ ತರಕಾರಿಗಳ ಸಿಪ್ಪೆಯಿಂದ ಯಾವೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ ಬನ್ನಿ....

ಕಲ್ಲಂಗಡಿ ತೊಗಟೆ (ರಿಂಡ್ಸ್)

ಕಲ್ಲಂಗಡಿ ತೊಗಟೆ (ರಿಂಡ್ಸ್)

ಕಲ್ಲಂಗಡಿಯ ತೊಗಟೆಯು ಅಮೈನೋ ಆಮ್ಲದಿಂದ ಸಮೃದ್ಧವಾಗಿದೆ. ಇದು ರಕ್ತನಾಳದ ಹಿಗ್ಗುವಿಕೆಗೆ ಸಹಾಯವಾಗುತ್ತದೆ. ಇದನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸುಧಾರಣೆಗೊಂಡು ದೇಹವು ಆರೋಗ್ಯವಾಗಿರುವಂತೆ ಮಾಡುತ್ತದೆ.

ಸ್ಟ್ರಾಬೆರ್ರಿಯ ಎಲೆಗಳು

ಸ್ಟ್ರಾಬೆರ್ರಿಯ ಎಲೆಗಳು

ಇದು ದೇಹದಲ್ಲಿರುವ ಹಾನಿಕಾರಕ ರಾಡಿಕಲ್ಸ್‌ನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಸ್ಟ್ರಾಬೆರ್ರಿ ಎಲೆಗಳ ಕಸಾಯ ಮಾಡಿ ಕುಡಿಯುವುದರಿಂದ ದೇಹವು ಆರೋಗ್ಯ ಪೂರ್ಣವಾಗಿರುತ್ತದೆ.

ಕಾನ್ ಕ್ಯೂಬ್ಸ್

ಕಾನ್ ಕ್ಯೂಬ್ಸ್

ಕಾರ್ನ್ ಕಾಬ್ಸ್‌ಗಳು ಕ್ಯಾಲೋರಿಗಳನ್ನು ಕಡಿಮೆಮಾಡುತ್ತವೆ. ಮಧುಮೇಹಕ್ಕೆ, ಕಣ್ಣಿನ ಆರೋಗ್ಯ ಕಾಪಾಡಲು, ಹೃದಯ ನಾಳಗಳ ಆರೋಗ್ಯಕ್ಕೆ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆ ಹಣ್ಣಿನ ಸಿಪ್ಪೆ

ನಿಂಬೆ ಸಿಪ್ಪೆಯು ಫೈಬರ್ ಹಾಗೂ ಸಮೃದ್ಧವಾದ ವಿಟಮಿನ್ ಎ ಸತ್ವವನ್ನು ಒಳಗೊಂಡಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದನ್ನು ಸಿಟ್ರಿಕ್ ಹಣ್ಣುಗಳ ಜೊತೆಗೆ ಅಥವಾ ಜೇನುತುಪ್ಪ ಮತ್ತು ಮೊಸರು ಮಿಶ್ರಣದೊಂದಿಗೆ ಸೇವಿಸಬೇಕು.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಒಮೆಗಾ-3, ಸತು, ಮೆಗ್ನೀಸಿಯಮ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ ಬಿ ಸಮೃದ್ಧವಾಗಿದೆ. ಇದು ಉರಿಯೂತ, ಹೃದಯ ರೋಗ, ಕ್ಯಾನ್ಸರ್, ಸಂಧಿವಾತದ ಅಪಾಯವನ್ನು ತಡೆಯುತ್ತದೆ. ಈ ಬೀಜಗಳನ್ನು ಹುರಿದುಕೊಂಡು ಸೇವಿಸಬಹುದು. ಹಸಿಯ ಬೀಜವನ್ನು ಹಾಗೇ ಸೇವಿಸಬಹುದು. ಇಲ್ಲವಾದರೆ ಬ್ರೆಡ್ ಮತ್ತು ಸಲಾಡ್‍ಗಳ ಜೊತೆಯಲ್ಲೂ ಸೇವಿಸಬಹುದು.

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆಯು ಫೈಬರ್, ವಿಟಮಿನ್ ಮತ್ತು ಫ್ಲವೋನಾಯಿಡ್‍ಗಳ ಶಕ್ತಿಯಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತನಾಳಗಳ ರಕ್ಷಣೆ ಮತ್ತು ದೇಹದಲ್ಲಿ ಕಾಣಿಸಿಕೊಂಡ ಉರಿಯೂತಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಸೌತೆಕಾಯಿ ಸಿಪ್ಪೆ

ಸೌತೆಕಾಯಿ ಸಿಪ್ಪೆ

ಸೌತೆಕಾಯಿ ಸಿಪ್ಪೆ ಫೈಬರ್ ಗುಣದ ಉತ್ತಮ ಮೂಲ ಎಂದು ಹೇಳಲಾಗುತ್ತದೆ. ಇದು ಮಲಬದ್ಧತೆಯನ್ನು ನಿವಾರಿಸುತ್ತದೆ. ಜೊತೆಗೆ ಕರುಳಿನ ಕ್ಯಾನ್ಸರ್ ಆಗದಂತೆ ತಡೆಯುವುದು.

ಬೀಟ್ರೂಟ್ ಸಿಪ್ಪೆ

ಬೀಟ್ರೂಟ್ ಸಿಪ್ಪೆ

ಇದನ್ನು ಹುರಿದು ಅಥವಾ ಸೂಪ್ ಮಾಡಿ ಕುಡಿಯಬಹುದು. ಇದರಿಂದ ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಅಂಶವು ಹೆಚ್ಚುವುದು.

English summary

Food Scraps That Are Healthy, Avoid Throwing Them

By discarding food scraps, you are actually throwing away a lot of health benefits, as the skin and leaves of certain foods are rich in antioxidants and have anti-inflammatory properties, which in turn can help in fighting certain diseases.So, stop ignoring food scraps and have a look at some of them and the health benefits that these food parts have to offer.
Subscribe Newsletter