ಚಳಿಗಾಲದಲ್ಲಿ ಒಂದೆರಡು ಕಿತ್ತಳೆ ಹಣ್ಣು ಸೇವಿಸಿ, ಇದು ಆರೋಗ್ಯದ ಗಣಿ

By: Arshad
Subscribe to Boldsky

ಔಷಧಿಗಳು ಕಹಿಯಾಗಿಯೇ ಇರುತ್ತವಂತೆ. ಅಂತೆಯೇ ಆರೋಗ್ಯಕರ ಆಹಾರ ಕೂಡಾ! ಆರೋಗ್ಯಕರ ಆಹಾರಗಳೆಲ್ಲವೂ ರುಚಿಕರವಲ್ಲ, ಹಾಗೂ ರುಚಿಕರವಾದ ಆಹಾರವೆಲ್ಲಾವೂ ಆರೋಗ್ಯಕರವಲ್ಲ. ಆದರೆ ಕೆಲವು ಆಹಾರಗಳು ಇದಕ್ಕೆ ಅಪವಾದ. ಕೆಲವು ಹಣ್ಣುಗಳು ಸಿಹಿಯಾಗಿದ್ದರೂ ಆರೋಗ್ಯಕರವೂ ಆಗಿವೆ. ಆಯಾ ಋತುಮಾನಕ್ಕೆ ನಿಸರ್ಗದ ಕೊಡುಗೆಯ ರೂಪದಲ್ಲಿ ನಮಗ್ ಲಭ್ಯವಾಗುವ ವಿವಿಧ ಹಣ್ಣುಗಳು ಆರೋಗ್ಯವನ್ನು ವೃದ್ಧಿಸಲು ನೆರವಾಗುತ್ತವೆ. ತಾಜಾ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ನುಗಳು ಹಾಗೂ ಖನಿಜಗಳಿವೆ. ಇವೆಲ್ಲವೂ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ನೀಡುತ್ತವೆ. ಅಲ್ಲದೇ ಹಣ್ಣುಗಳಲ್ಲಿರುವ ಕರಗುವ ಹಾಗೂ ಕರಗದ ನಾರು ಮಲಬದ್ಧತೆಯಿಂದ ರಕ್ಷಿಸುತ್ತದೆ.

ಇದರಲ್ಲಿರುವ ನೈಸರ್ಗಿಕ ಸಕ್ಕರೆ ಮಧುಮೇಹಿಗಳಿಗೂ ಸೂಕ್ತವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಉತ್ತಮ ಆರೋಗ್ಯಕ್ಕೆ ಹಣ್ಣುಗಳು ಸಿಹಿಯಾದ, ನೈಸರ್ಗಿಕ ಆಯ್ಕೆಯಾಗಿದೆ. ಈಗ ಚಳಿಗಾಲದ ದಿನಗಳು ಹತ್ತಿರಾಗುತ್ತಿವೆ. ಈ ತಿಂಗಳುಗಳಲ್ಲಿ ಹೆಚ್ಚಿನವರು ಹುಳಿಯಾಗಿರುವ ಹಣ್ಣುಗಳನ್ನು ತಿನ್ನಲು ಕೊಂಚ ಹಿಂದೇಟು ಹಾಕುತ್ತಾರೆ. ಹುಳಿರುಚಿಯಿಂದ ಹಲ್ಲುಗಳಿಗೆ ಕೊಂಚ ಚುರುಕು ತಾಕುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ ಸಿಹಿಲಿಂಬೆ, ಕಿತ್ತಳೆ, ಚಕ್ಕೋತ ಮೊದಲಾದ ಲಿಂಬೆಜಾತಿಯ ಹಣ್ಣುಗಳನ್ನು ತಿನ್ನುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಉತ್ತಮಗೊಂಡು ಚಳಿಗಾಲದಲ್ಲಿ ಸಾಮಾನ್ಯವಾದ ಶೀತ, ಕಫ ಕೆಮ್ಮುಗಳಿಂದ ರಕ್ಷಿಸುತ್ತದೆ. ಈ ಹಣ್ಣುಗಳಲ್ಲಿರುವ ವಿಟಮಿನ್ ಸಿ ಇಂದ ಇದೆಲ್ಲಾ ಸಾಧ್ಯವಾಗುತ್ತದೆ. ಹಣ್ಣುಗಳಲ್ಲಿಯೇ ಅತಿ ಹೆಚ್ಚಿನ ವಿಟಮಿನ್ ಸಿ ಕಿತ್ತಳೆಹಣ್ಣುಗಳಲ್ಲಿದೆ.

ಚಳಿಗಾಲದ ಸಂಜೀವಿನಿ-ಹುಳಿ ಸಿಹಿ ರುಚಿಯ 'ಕಿತ್ತಳೆ ಹಣ್ಣು'

ಚಳಿಗಾಲದಲ್ಲಿ ನಮ್ಮ ಕೊಡಗಿನಿಂದ ಬರುವ ಕಿತ್ತಳೆ ಸಿಹಿಯಾಗಿದ್ದು ಗರಿಷ್ಠ ಪ್ರಮಾಣದ ವಿಟಮಿನ್ ಸಿ ಹೊಂದಿರುತ್ತದೆ. ಅಷ್ಟೇ ಅಲ್ಲ, ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಫ್ಲೂ ಜ್ವರದಿಂದ ರಕ್ಷಿಸುತ್ತದೆ. ಇದರಲ್ಲಿರುವ ಫೈಟೋಕೆಮಿಕಲ್ಸ್ ಎಂಬ ರಾಸಾಯನಿಕಗಳು ಕ್ಯಾನ್ಸರ್ ಉಂಟುಮಾಡುವ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದೆ. ಬನ್ನಿ, ಕಿತ್ತಳೆಯ ಸೇವನೆಯಿಂದ ಪಡೆಯಬಹುದಾದ ಹತ್ತು ಅದ್ಭುತ ಆರೋಗ್ಯಕರ ಪ್ರಯೋಜನಗಳ ಬಗ್ಗೆ ನೋಡೋಣ. ಇದನ್ನು ಅರಿತ ಬಳಿಕವಾದರೂ ಕಿತ್ತಳೆಯನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳದಿರಲು ನಿಮಗೆ ಕಾರಣವೇ ಉಳಿಯುವುದಿಲ್ಲ.

ಮಲಬದ್ಧತೆಯ ತೊಂದರೆ ನಿವಾರಿಸುತ್ತದೆ

ಮಲಬದ್ಧತೆಯ ತೊಂದರೆ ನಿವಾರಿಸುತ್ತದೆ

ಕಿತ್ತಳೆಯಲ್ಲಿ ಕರಗುವ ಹಾಗೂ ಕರಗದ ನಾರುಗಳೆರಡೂ ಇವೆ. ಆದ್ದರಿಂದ ಕಿತ್ತಳೆಯ ಸೇವನೆಯ ಮೂಲಕ ಜೀರ್ಣಾಂಗಗಳಲ್ಲಿ ಆಹಾರದ ಚಲನೆ ಸುಲಭವಾಗುತ್ತದೆ ಹಾಗೂ ಮಲವಿಸರ್ಜನೆಯನ್ನು ಸುಲಭವಾಗಿ ಒತ್ತಡರಹಿತವಾಗಿ ನಿರ್ವಹಿಸಲು ನೆರವಾಗುತ್ತದೆ. ಪರಿಣಾಮವಾಗಿ ಕರುಳುಗಳಲ್ಲಿ ಉಂಟಾಗುವ ಉರಿಯೂತದಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ, ಕಿತ್ತಳೆಯ ಪೋಷಕಾಂಶಗಳು ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳಿಸಲು ನೆರವಾಗುತ್ತವೆ. ಸಾಮಾನ್ಯವಾಗಿ ನಾರಿನ ಆಹಾರಗಳು ಸಿಹಿಯಾಗಿರುವುದಿಲ್ಲ. ಕಿತ್ತಳೆ ಇದಕ್ಕೆ ಅಪವಾದ, ಇದು ಸಿಹಿಯಾದ ಹಾಗೂ ಆರೋಗ್ಯಕರ ನಾರನ್ನು ಹೊಂದಿದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಕಿತ್ತಳೆಯಲ್ಲಿ ಮೆಗ್ನೇಶಿಯಂ ಪ್ರಮಾಣ ಹೇರಳವಾಗಿರುವ ಕಾರಣ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಅಲ್ಲದೇ ಇದರೊಂದಿಗೆ ಹೆಸ್ಪರಿಡಿನ್ ಎಂಬ ಫ್ಲೇವನಾಯ್ಡು ಸಹಾ ಇದೆ. ಇದು ಸಹಾ ರಕ್ತದ ಒತ್ತಡವನ್ನು ಸೂಕ್ತ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ

ಕಿತ್ತಳೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಸಹಾ ಆಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಕಿತ್ತಳೆಯಲ್ಲಿ ಲಿಮೋನೀನ್ ಎಂಬ ಪೋಷಕಾಂಶವಿದ್ದು ಇದಕ್ಕೆ ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುವ ಶಕ್ತಿಯಿದೆ. ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕುಸಿದಾಗ ಈ ಪೋಷಕಾಂಶ ನೆರವಿಗೆ ಬರುತ್ತದೆ ಹಾಗೂ ದೇಹದಲ್ಲಿರುವ ಕಾನ್ಸರ್ ಉಂಟುಮಾಡುವ ಕಣಗಳನ್ನು ಗುರುತಿಸಿ ನಾಶಪಡಿಸುವ ಮೂಲಕ ಇವುಗಳನ್ನು ಬೆಳೆಯಲು ಬಿಡದೇ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.

ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ

ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುವ ಮೂಲಕ ದೇಹದ ವಿವಿಧ ಅಂಗಗಳ ಮೇಲೆ ಇವುಗಳಿಂದ ಕ್ಯಾನ್ಸರ್ ಉಂಟಾಗದಂತೆ ಕಾಪಾಡುತ್ತದೆ. ಸಾಮಾನ್ಯವಾಗಿ ಈ ಕಣಗಳು ನಮ್ಮ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಣಗಳನ್ನು ಕಳೆವಣಿಕಳೆತ (oxidation) ಕ್ಕೆ ಗುರಿಯಾಗಿಸುತ್ತದೆ. ಈಗ ಕೊಲೆಸ್ಟ್ರಾಲ್ ಕಣಗಳು ತೀರಾ ಅಂಟುಗುಣವನ್ನು ಪಡೆದು ರಕ್ತನಾಳಗಳ ಒಳಗೆಲ್ಲಾ ಅಂಟಿಕೊಂಡಿರುತ್ತವೆ. ಪರಿಣಾಮವಾಗಿ ರಕ್ತಸಂಚಾರಕ್ಕೆ ಅಡ್ಡಿಯಾಗಿ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಇದು ಹೃದಯದ ಕಾಯಿಲೆ ಹಾಗೂ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕಿತ್ತಳೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ಕಳೆವಣಿಕಳೆತವನ್ನು ತಟಸ್ಥಗೊಳಿಸುವ ಮೂಲಕ ಫ್ರೀ ರ್‍ಯಾಡಿಕಲ್ ಗಳ ಪ್ರಭಾವದಿಂದ ಜಿಡ್ಡು ಇಲ್ಲದಂತೆ ಮಾಡುತ್ತದೆ ಹಾಗೂ ತನ್ಮೂಲಕ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ.

ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ

ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ

ಕಿತ್ತಳೆಯಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಯುತವಾಗಿಸುತ್ತದೆ. ಪರಿಣಾಮವಾಗಿ ದೇಹ ಹಲವು ವಿಧದ ಸೋಂಕುಗಳಿಂದ ರಕ್ಷಣೆ ಪಡೆಯುತ್ತದೆ. ಇದರ ಜೊತೆಗೇ ಕಿತ್ತಳೆಯಲಿರುವ ಪಾಲಿಫಿನಾಲ್ ಪೋಷಕಾಂಶಗಳಿಗೆ ವೈರಸ್ಸುಗಳ ವಿರುದ್ದ ಹೋರಾಡುವ ಗುಣವಿದ್ದು ವೈರಸ್ಸುಗಳು ದೇಹವನ್ನು ಪ್ರವೇಶಿಸಿದ ಕ್ಷಣದಲ್ಲಿಯೇ ಕೊಂದು ಈ ಮೂಲಕ ಎದುರಾಗಬಹುದಾಗಿದ್ದ ಸೋಂಕುಗಳಿಂದ ರಕ್ಷಿಸುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಕಿತ್ತಳೆ ಒಂದು ನೈಸರ್ಗಿಕ ರಕ್ತಶುದ್ಧಕಾರಕವಾಗಿದೆ. ಇದರಲ್ಲಿರುವ ಫ್ಲೇವನಾಯ್ಡುಗಳು ದೇಹದಲ್ಲಿ ಕಿಣ್ವಗಳ ಚಟುವಟಿಕೆಯನ್ನು ಪ್ರಾರಂಭಿಸಿ ಯಕೃತ್ ನಿಂದ ಕಲ್ಮಶಗಳನ್ನು ವಿಸರ್ಜಿಸಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕೊಲ್ಯಾಜೆನ್ ಎಂಬ ರಾಸಾಯನಿಕವನ್ನು ಹೆಚ್ಚು ಉತ್ಪಾದಿಸುತ್ತದೆ ಹಾಗೂ ಇದರಿಂದ ಚರ್ಮಕ್ಕೆ ಉತ್ತಮವಾದ ಸೆಳೆತ ದೊರಕುತ್ತದೆ. ಪರಿಣಾಮವಾಗಿ ಚರ್ಮದ ಸಡಿಲಿಕೆ ಇಲ್ಲವಾಗಿ ವೃದ್ದಾಪ್ಯದ ಚಿಹ್ನೆಗಳು ದೂರವಾಗುತ್ತವೆ. ಇದರಲ್ಲಿರುವ ಕರಗದ ನಾರು ಕಲ್ಮಶಗಳು ಸುಲಭವಾಗಿ ವಿಸರ್ಜಿಸಲು ನೆರವಾಗುತ್ತವೆ ಹಾಗೂ ದೇಹದಲ್ಲಿ ಅನಗತ್ಯ ಕಲ್ಮಶಗಳಿಲ್ಲದಿರುವಂತೆ ನೋಡಿಕೊಳ್ಳುತ್ತದೆ.

ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ

ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ

ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚಿದ್ದರೂ ಕೇವಲ ಹಾಲು ಕುಡಿಯುವುದರಿಂದ ಕ್ಯಾಲ್ಸಿಯಂ ಅನ್ನು ನಮ್ಮ ದೇಹ ಹೀರಿಕೊಳ್ಳುವುದಿಲ್ಲ. ಇದಕ್ಕೆ ವಿಟಮಿನ್ ಡಿ ಇರುವ ಆಹಾರ ಜೊತೆಗಿರಬೇಕು. ಜೇನಿನಲ್ಲಿರುವ ವಿಟಮಿನ್ ಡಿ ಮೂಲಕ ಹಾಲಿನ ಕ್ಯಾಲ್ಸಿಯಂ ಮೂಳೆಗಳಿಗೆ ತಲುಪಲು ಸಾಧ್ಯವಾಗುತ್ತದೆ. ಜೇನಿನ ಬದಲು ಕಿತ್ತಳೆಯನ್ನು ಸೇವಿಸಿದರೂ ಇದರಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್ ಡಿ ಹಾಲಿನಲ್ಲಿರುವ ಕ್ಯಾಲ್ಸಿಯಂ ಪಡೆಯಲು ನೆರವಾಗುತ್ತದೆ. ಕಿತ್ತಳೆಯಲ್ಲಿ ಆಸ್ಕಾರ್ಬಿಕ್ ಆಮ್ಲ ಎಂಬ ಪೋಷಕಾಂಶವೂ ಇದ್ದು ಇದು ಸಹಾ ಮೂಳೆಗಳು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ.

ಹಲ್ಲುಗಳನ್ನು ದೃಢಗೊಳಿಸುತ್ತದೆ

ಹಲ್ಲುಗಳನ್ನು ದೃಢಗೊಳಿಸುತ್ತದೆ

ಕಿತ್ತಳೆಗಳು ಒಸಡುಗಳ ಆರೋಗ್ಯವನ್ನು ಕಾಪಾಡಲು ಅತ್ಯುತ್ತಮ ಆಹಾರವಾಗಿದೆ. ಅಲ್ಲದೇ ಒಸಡು ಮತ್ತು ಹಲ್ಲುಗಳನ್ನು ಬೆಸೆಯುವ ಅಂಗಾಂಶವನ್ನು ಹಾಗೂ ರಕ್ತನಾಳಗಳನ್ನು ಬಲಪಡಿಸುತ್ತದೆ. ಅಲ್ಲದೇ ಹಲ್ಲುಗಳ ಹೊರಕವಚದ ಮೇಲೆ ರಕ್ಷಣೆ ನೀಡುವ ಪದರವೊಂದನ್ನು ನಿರ್ಮಿಸಿ ಹಲ್ಲುಗಳು ಸವೆಯುವುದರಿಂದ ರಕ್ಷಿಸುತ್ತದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ಉರಿಯೂತವನ್ನು ತಡೆದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಮೂಲಕ ಬಾಯಿಯ ದುರ್ವಾಸನೆಯಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ, ನಿಯಮಿತವಾಗಿ ಕಿತ್ತಳೆ ಸೇವಿಸುವ ಮೂಲಕ ನಾಲಿಗೆಯ ಮೇಲೆ ಬಿಳಿಯ ಪದರವುಂಟಾಗುವುದನ್ನೂ ತಡೆಯಬಹುದು.

ಮೂತ್ರಪಿಂಡಗಳ ಕಾಯಿಲೆಯಿಂದ ರಕ್ಷಿಸುತ್ತದೆ

ಮೂತ್ರಪಿಂಡಗಳ ಕಾಯಿಲೆಯಿಂದ ರಕ್ಷಿಸುತ್ತದೆ

ನಿಯಮಿತವಾಗಿ ಕಿತ್ತಳೆಗಳನ್ನು ಸೇವಿಸುವ ಮೂಲಕ ಮೂತ್ರಪಿಂಡಗಳಲ್ಲಿರುವ ಹೆಚ್ಚಿನ ಸಿಟ್ರೇಟ್ ಗಳನ್ನು ಮೂತ್ರದ ಮೂಲಕ ಹೊರಹಾಕಲು ನೆರವಾಗುತ್ತದೆ. ತನ್ಮೂಲಕ ಮೂತ್ರದ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಮೂಲಕ ಮೂತ್ರಪಿಂಡಗಳ ಮೇಲಿನ ಭಾರವನ್ನು ಕಡಿಮೆ ಮಾಡುವ ಮೂಲಕ ಮೂತ್ರಪಿಂಡಗಳ ಕಾರ್ಯಕ್ಷಮತೆ ಉತ್ತಮಗೊಳಿಸುತ್ತದೆ.

ಅಸ್ತಮಾ ಆವರಿಸುವುದರಿಂದ ರಕ್ಷಿಸುತ್ತದೆ

ಅಸ್ತಮಾ ಆವರಿಸುವುದರಿಂದ ರಕ್ಷಿಸುತ್ತದೆ

ನಿಯಮಿತವಾಗಿ ಕಿತ್ತಳೆಗಳನ್ನು ಸೇವಿಸುತ್ತಾ ಬರುವ ಮೂಲಕ ಅಸ್ತಮಾ ಆಘಾತದ ಸಾಧ್ಯತೆಗಳು ಕಡಿಮೆಯಾಗುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಣ ಕಣಗಳನ್ನು ನಿಷ್ಪಲಗೊಳಿಸುವ ಮೂಲಕ ಶ್ವಾಸನಾಳಗಳ ಉರಿಯೂತ ಮತ್ತು ಇದರಿಂದ ಉಂಟಾಗುವ ಅಸ್ತಮಾದಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ಫ್ಲೇವನಾಯ್ಡುಗಳು ಶ್ವಾಸನಾಳಗಳ ಸೂಕ್ಷ್ಮಸಂವೇದನೆಯನ್ನೂ ಕಡಿಮೆಗೊಳಿಸುತ್ತದೆ.

English summary

Exceptional Benefits You Can Derive From Eating Oranges

Oranges are sweet tasting fruits commonly found during the winter months. They are full of vitamin C and anti-oxidants, that boost our immune system and help fight infection and flues. They contain phytochemicals, which fight against cancer-causing agents, etc. Here are top 10 amazing benefits of oranges, which will definitely make you include them in your diet-
Story first published: Wednesday, November 15, 2017, 13:40 [IST]
Subscribe Newsletter