ಪ್ರಕೃತಿ ಜೊತೆ ಚೆಲ್ಲಾಟ ಆಡಿದರೆ-ರೋಗಗಳು ಕಟ್ಟಿಟ್ಟ ಬುತ್ತಿ!

Posted By: Hemanth
Subscribe to Boldsky

ಮನುಷ್ಯ ಪ್ರಕೃತಿ ಜತೆಗೆ ಎಷ್ಟು ಚೆಲ್ಲಾಟವಾಡುತ್ತಿದ್ದೇನೆಂದರೆ ಮುಂದಿನ ದಿನಗಳಲ್ಲಿ ಉಸಿರಾಡಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿಯೇನಿಲ್ಲ. ಯಾಕೆಂದರೆ ಅಷ್ಟರ ಮಟ್ಟಿಗೆ ವಾತಾವರಣ ಕಲುಷಿತಗೊಂಡಿದೆ. ಬೆಂಗಳೂರಿನ ಕೆರೆಯಿಂದ ನೊರೆಯು ಎದ್ದೆದ್ದು ಬರುತ್ತಾ ಇದ್ದರೆ, ದೆಹಲಿಯಲ್ಲಿ ಮಂಜು ಕವಿದಂತೆ ಇರುವುದು ಹಾಗೂ ಚೆನ್ನೈಯ ಸಮುದ್ರ ತೀರದಲ್ಲಿ ತೈಲ ಸಂಗ್ರಹ ಇದೆಲ್ಲವೂ ಮನುಷ್ಯರೇ ಮಾಡಿಕೊಂಡಿರುವಂತಹ ಅನಾಹುತಗಳು. ಭೂಮಿ ತಾಯಿಗೆ ಕಲುಷಿತ ವಾತಾವರಣ ಸಹಿಸಿಕೊಳ್ಳಲು ಸಾಧ್ಯವಾಗದೆ ಇರುವಂತಹ ಸಮಯದಲ್ಲಿ ಇಂತಹ ಘಟನೆಗಳು ನಡೆಯುತ್ತದೆ. ಜನರು ಇಂತಹ ಪರಿಸರದಲ್ಲಿ ವಾಸಮಾಡುತ್ತಾ ಇರುವ ಕಾರಣದಿಂದ ಇದು ತುಂಬಾ ಅಪಾಯಕಾರಿಯಾಗಿದೆ.

ಗಾಳಿ, ನೀರು, ಮಣ್ಣು, ಶಬ್ದ ಮತ್ತು ಬೆಳಕಿನ ಮಾಲಿನ್ಯವೆಂದು ಪರಿಗಣಿಸಬಹುದಾಗಿದೆ. ಇವುಗಳಲ್ಲಿ ವಾಯು ಮಾಲಿನ್ಯವು ತುಂಬಾ ಅಪಾಯಕಾರಿಯಾಗಿದೆ. ಮನುಷ್ಯ ಉಸಿರಾಡುವುದು ಗಾಳಿಯನ್ನೇ ಆಗಿರುವ ಕಾರಣದಿಂದಾಗಿ ಅಸ್ತಮಾ, ಉಸಿರಾಟದ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂದಿನ ದಿನಗಳಲ್ಲಿ ನಾವು ಉಸಿರಾಡುವಂತಹ ಗಾಳಿಯು ಹೊಗೆ, ಮಣ್ಣು, ಪಾದರಸ, ಕ್ಲೋರೋ ಫ್ಲೋರೋ ಕಾರ್ಬನ್, ತಂಬಾಕಿನ ಹೊಗೆ, ಸಲ್ಫರ್, ಕಾರ್ಬನ್ ಮೋನೋಕ್ಸೈಡ್, ನೈಟ್ರೋಜನ್ ಆಕ್ಸೈಡ್ ಇಂತಹ ಹಲವಾರು ಹಾನಿಕರಕ ಪದಾರ್ಥಗಳ ಮಿಶ್ರಣವನ್ನು ನಾವಿಂದು ಉಸಿರಾಡುತ್ತಾ ಇದ್ದೇವೆ.

ಇಂದಿನ ದಿನಗಳಲ್ಲಿ ನದಿ ಹಾಗೂ ಕೆರೆಗಳು ಕಾಣಸಿಗುವುದೇ ತುಂಬಾ ಅಪರೂಪ. ಆದರೆ ಕಾಣಸಿಗುವಂತಹ ಕೆರೆ ಹಾಗೂ ನದಿಗಳಿಗೆ ಕಾರ್ಖಾನೆ ಹಾಗೂ ಮನೆಗಳಿಂದ ತ್ಯಾಜ್ಯ ಬಿಡಲಾಗುತ್ತದೆ. ಇದರಿಂದ ನೀರು ಮಾಲಿನ್ಯಗೊಳ್ಳುತ್ತದೆ. ಆಮ್ಲೀಯ ಮಳೆ ಇದನ್ನು ಮತ್ತಷ್ಟು ಕೆಡಿಸುತ್ತದೆ. ಮಣ್ಣಿನ ಫಲವತ್ತತೆಗಾಗಿ ಅತಿಯಾಗಿ ಬಳಸುವ ರಾಸಾಯನಿಕ, ಆಮ್ಲೀಯ ಮಳೆ, ಭೂಮಿಯ ಕೊರೆತ, ಕಲ್ಮಷ ನೀರು ಮತ್ತು ಮರುಬಳಸಲು ಸಾಧ್ಯವಾಗದೆ ಇರುವಂತಹ ಕೊಳಚೆ ನೀರಿನ ಮಾಲಿನ್ಯ ಉಂಟು ಮಾಡುತ್ತದೆ. ನಿಗದಿತ ಮಟ್ಟಕ್ಕಿಂತ ಹೆಚ್ಚು ಶಬ್ದವಾದರೆ ಅದನ್ನು ಶಬ್ದ ಮಾಲಿನ್ಯವೆಂದು ಕರೆಯಲಾಗುತ್ತದೆ. ಅತಿಯಾದ ಬೆಳಕು ಮತ್ತು ಖಗೋಳಿಯ ಅಡಚಣೆಗಳಿಂದಾಗಿ ಬೆಳಕಿನ ಮಾಲಿನ್ಯವು ನಡೆಯುತ್ತದೆ. ಇವೆಲ್ಲವೂಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇವುಗಳಲ್ಲಿ ಕೆಲವನ್ನು ವಿವರವಾಗಿ ತಿಳಿಸಲಾಗಿದೆ...

ಅಸ್ತಮಾ

ಅಸ್ತಮಾ

ಹೊಗೆಯಲ್ಲಿ ಪ್ರಮುಖ ಅಂಶವಾಗಿರುವ ಓಜೋನ್ ಎನ್ನುವ ಅನಿಲವು ಶ್ವಾಸಕೋಸ ಮತ್ತು ಶ್ವಾಸನಾಳಗಳಿಗೆ ತುಂಬಾ ಕಿರಕಿರಿ ಉಂಟು ಮಾಡುತ್ತವೆ. ಧೂಳು ಮತ್ತು ಹೊಗೆಯು ತುಂಬಾ ಸುಲಭವಾಗಿ ಅಸ್ತಮಾವನ್ನು ಉಂಟು ಮಾಡುವುದು.

ಅಸ್ತಮಾ ಕಾಯಿಲೆ: ಭಯ ಬೇಡ, ಮನೆಮದ್ದೇ ಇದಕ್ಕೆ ರಾಮಬಾಣ

ಕ್ಯಾನ್ಸರ್

ಕ್ಯಾನ್ಸರ್

ಡಿಸೇಲ್ ವಾಹನಗಳ ಹೊಗೆ, ಲೋಹ ಹಾಗೂ ಇನ್ನಿತರ ಕೆಲವೊಂದು ಅಂಶಗಳಿಂದ ವಾಯು ಮಾಲಿನ್ಯವಾಗುತ್ತದೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಮೂತ್ರಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಿದೆ. ಓಜೋನ್ ಪದರವು ದುರ್ಬಲವಾಗಿ ಯುವಿ ಕಿರಣಗಳು ನೇರವಾಗಿ ನಮ್ಮ ಮೇಲೆ ಬೀಳುವ ಕಾರಣದಿಂದಾಗಿ ಚರ್ಮದ ಕ್ಯಾನ್ಸರ್ ಬರುವುದು. ನೀರು ಹಾಗೂ ಕಲುಷಿತ ಆಹಾರದಿಂದಲೂ ಹಲವಾರು ರೀತಿಯ ಕ್ಯಾನ್ಸರ್ ಬರಬಹುದು.

ಈರುಳ್ಳಿ ಮತ್ತು ಬೆಳ್ಳುಳ್ಳಿ- ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ

ಬ್ರಾಂಕೈಟಿಸ್(ಶ್ವಾಸನಾಳದ ಒಳಪೊರೆಯ ಉರಿಯೂತ)

ಬ್ರಾಂಕೈಟಿಸ್(ಶ್ವಾಸನಾಳದ ಒಳಪೊರೆಯ ಉರಿಯೂತ)

ಕೆಲವೊಂದು ರೀತಿಯ ವಾಯು ಮಾಲಿನ್ಯಗಳು ಶ್ವಾಸಕೋಶ ಹಾಗೂ ಶ್ವಾಸಕೋಶದ ನಾಳಗಳಿಗೆ ಕಿರಿಕಿರಿಯನ್ನು ಉಂಟು ಮಾಡಬಹುದು. ಇದರಿಂದ ಬ್ರಾಂಕೈಟಿಸ್ ಉಂಟಾಗುತ್ತದೆ. ತಂಬಾಕಿನ ಹೊಗೆ, ಧೂಳು, ಹೊಗೆ ಹಾಗೂ ಆವಿಯಿಂದ ಹೀಗೆ ಆಗುತ್ತದೆ. ಪದೇ ಪದೇ ಹೊಗೆಯನ್ನೇ ಉಸಿರಾಡುವುದರಿಂದ ಪೊರೆಗಳಿಗೆ ಹಾನಿಯಾಗಿ ಬ್ರಾಂಕೈಟಿಸ್ ಉಂಟಾಗಬಹುದು.

ಚರ್ಮದ ಅಲರ್ಜಿ

ಚರ್ಮದ ಅಲರ್ಜಿ

ವಾಯು ಮಾಲಿನ್ಯವಿರುವಂತಹ ಪ್ರದೇಶಗಳಲ್ಲಿ ವಾಸಿಸುವುದರಿಂದ ಚರ್ಮವು ವಯಸ್ಸಾದಂತೆ ಕಾಣಬಹುದು ಮತ್ತು ಅಲರ್ಜಿಯಾಗಬಹುದು. ಅಟೊಪಿಕ್ ಡರ್ಮಟಿಸ್, ಎಸ್ಜಿಮಾ, ಸೋರಿಯಾಸಿಸ್ ಮತ್ತು ಮೊಡವೆಗಳು ಚರ್ಮದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು. ವಾಯು ಮಾಲಿನ್ಯಕ್ಕೆ ದೇಹವನ್ನು ಅತಿಯಾಗಿ ಒಡ್ಡಿಕೊಂಡರೆ ಇಂತಹ ಸಮಸ್ಯೆ ಕಾಣಿಸುವುದು.

ಶೀತ ಮತ್ತು ಕಫ

ಶೀತ ಮತ್ತು ಕಫ

ವಾಯು ಮಾಲಿನ್ಯದಿಂದ ವೈರಲ್ ಸೋಂಕು ಕಾಣಿಸುವುದು. ಶೀತಕ್ಕೆ ಒಳಗಾಗಿರುವವರಿಗೆ ವಾಯು ಮಾಲಿನ್ಯದಿಂದ ತುಂಬಾ ಹಾನಿಯಾಗುವುದು. ಯಾಕೆಂದರೆ ಶ್ವಾಸಕೋಶವು ಅತಿಯಾಗಿ ಕಫವನ್ನು ಉತ್ಪತ್ತಿ ಮಾಡುತ್ತದೆ. ಮಾಲಿನ್ಯವು ನರಗಳ ಮೇಲೆ ಪರಿಣಾಮವನ್ನು ಉಂಟು ಮಾಡಿ ಕಫವನ್ನು ಉತ್ಪಾದಿಸುತ್ತದೆ.

ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯ

For Quick Alerts
ALLOW NOTIFICATIONS
For Daily Alerts

    English summary

    Environmental Pollution Can Increase These Health Risks

    The foam-spewing lakes of Bengaluru, the smoggy Delhi city with zero visibility and the disastrous oil spill of the Chennai shores - environmental pollution is staring at us point blank today. It has turned into one of the gravest problems humankind is battling now. Environment pollution occurs when the damage is done at a pace at which earth cannot make enough repairs. The condition becomes fearsome because of the number of people who are exposed to it.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more