ಬಿಪಿ ರೋಗದ ಸಮಸ್ಯೆ ಇದ್ದರೆ-'ಮುಳ್ಳುಸೌತೆ-ಬೆಳ್ಳುಳ್ಳಿ' ಸಲಾಡ್ ಸೇವಿಸಿ

By: manu
Subscribe to Boldsky

ಯಾರಿಗಾದರೂ ಅತಿಯಾಗಿ ಕೋಪ ಬಂದಾಗ ಅಥವಾ ನಮ್ಮ ಮೇಲೆ ಕಿರುಚಾಡಿದಾಗ ಆತನಿಗೆ ಬಿಪಿ ನೆತ್ತಿಗೇರಿದೆ ಎಂದು ಹೇಳುವುದುಂಟು. ಬಿಪಿ ಯಾನೆ ರಕ್ತದೊತ್ತಡ ಎನ್ನುವುದು ಒಂದು ಸಮಸ್ಯೆಯಾಗಿ ಕಾಡುತ್ತಾ ಇರುತ್ತದೆ. ಹೆಚ್ಚಿನವರಿಗೆ ಈ ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

ಅಪಧಮನಿಗಳು ಕುಗ್ಗಿ, ಹೃದಯವು ಹೆಚ್ಚಿನ ರಕ್ತವನ್ನು ಹೊರಹಾಕಿದಾಗ ರಕ್ತದೊತ್ತಡವು ಹೆಚ್ಚಾಗುತ್ತದೆ. ಇದರಿಂದ ಪಾರ್ಶ್ವವಾಯು ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಾಣಿಸಬಹುದು. ಪ್ರಾರಂಭಿಕ ಅಧಿಕ ರಕ್ತದೊತ್ತಡ ಮತ್ತು ದ್ವಿತೀಯ ರಕ್ತದೊತ್ತಡವು ತುಂಬಾ ಭಿನ್ನವಾಗಿರುತ್ತದೆ. 

ನಂಬಲೇಬೇಕು, ಮಾತ್ರೆಯ ಹಂಗಿಲ್ಲದೇ 'ಬಿಪಿ' ನಿಯಂತ್ರಣ!

ವರ್ಷಗಳಿಂದ ಅಧಿಕ ರಕ್ತದೊತ್ತಡವು ಕಾಣಿಸುತ್ತಾ ಇದ್ದರೆ ಅದನ್ನು ನಾವು ಪ್ರಾರಂಭಿಕ ರಕ್ತದೊತ್ತಡವೆನ್ನಬಹುದು. ಥೈರಾಯ್ಡ್, ಕಿಡ್ನಿ ಸಮಸ್ಯೆ, ಮೂತ್ರಜನನಾಂಗದ ಗ್ರಂಥಿಯ ಗಡ್ಡೆಯಿಂದ ಬರುವಂತಹ ಅಧಿಕ ರಕ್ತದೊತ್ತಡವನ್ನು ದ್ವಿತೀಯ ಅಧಿಕ ರಕ್ತದೊತ್ತಡವೆನ್ನಲಾಗುತ್ತದೆ.

ಹೈ ಬಿಪಿ ಇದ್ದರೆ, ಉಪ್ಪಿನ ಬದಲು ಈ ಆಹಾರ ತಿನ್ನಿ

ಅಧಿಕ ರಕ್ತದೊತ್ತಡ ಬರಲು ಪ್ರಮುಖ ಕಾರಣವೆಂದರೆ ಕೊಲೆಸ್ಟ್ರಾಲ್. ಒತ್ತಡ, ಬೊಜ್ಜು, ಕೆಟ್ಟ ಆಹಾರಕ್ರಮ, ಧೂಮಪಾನ, ವಿಟಮಿನ್ ಮತ್ತು ಖನಿಜಾಂಶದ ಕೊರತೆ ಹಾಗೂ ಮದ್ಯಪಾನವು ಪ್ರಮುಖ ಕಾರಣವಾಗಿದೆ. ಮುಳ್ಳುಸೌತೆ ಮತ್ತು ಬೆಳ್ಳುಳ್ಳಿಯ ಸಲಾಡ್ ಅಧಿಕ ರಕ್ತದೊತ್ತಡಕ್ಕೆ ಒಳ್ಳೆಯ ಔಷಧಿಯಾಗಿದೆ. ಇದು ಹೇಗೆಂದು ಮುಂದೆ ತಿಳಿಯುವ.....  

ಬೇಕಾಗುವ ಸಾಮಗ್ರಿಗಳು

ಬೇಕಾಗುವ ಸಾಮಗ್ರಿಗಳು

ಬೆಳ್ಳುಳ್ಳಿಯ ಮೂರು ಎಸಲು, ಒಂದು ಮುಳ್ಳುಸೌತೆ, ಒಂದು ಚಮಚ ಆ್ಯಪಲ್ ಸೀಡರ್ ವಿನೇಗರ್ ಮತ್ತು ಅರ್ಧ ಲೋಟ ನೀರು.

ತಯಾರಿ

ತಯಾರಿ

ಮುಳ್ಳುಸೌತೆಕಾಯಿಯನ್ನು ತೊಳೆದು ತುಂಡು ಮಾಡಿಕೊಳ್ಳಿ. ಬೆಳ್ಳುಳ್ಳಿಯನ್ನು ಕೊಚ್ಚಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಆದಕ್ಕೆ ಆ್ಯಪಲ್ ಸೀಡರ್ ವಿನೇಗರ್ ಮತ್ತು ನೀರು ಹಾಕಿ. ಇದಕ್ಕೆ ಕೆಲವು ಪುದೀನಾ ಎಲೆಗಳನ್ನು ಕತ್ತರಿಸಿ ಹಾಕಿ. ಈಗ ಸಲಾಡ್ ಸವಿಯಿರಿ.

ತೂಕ ಇಳಿಸಿಕೊಳ್ಳಬೇಕೇ? ಸೌತೆಕಾಯಿ ಜ್ಯೂಸ್ ರೆಸಿಪಿ ಪ್ರಯತ್ನಿಸಿ

ಬೆಳ್ಳುಳ್ಳಿಯ ಪವರ್

ಬೆಳ್ಳುಳ್ಳಿಯ ಪವರ್

ರಕ್ತಚಲನೆಯ ಸಮಸ್ಯೆ, ಅಪಧಮನಿ ಕಾಠಿಣ್ಯ, ಹೃದಯಾಘಾತ, ಪರಿಧಮನಿಯ ಹೃದಯ ಕಾಯಿಲೆ, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡಕ್ಕೆ ಹಸಿ ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸಿಕೊಳ್ಳುತ್ತಾರೆ.

ಬೆಳ್ಳುಳ್ಳಿಯ ಪವರ್

ಬೆಳ್ಳುಳ್ಳಿಯ ಪವರ್

ಬೆಳ್ಳುಳ್ಳಿಯಲ್ಲಿ ಇರುವಂತಹ ಅಲಿಸಿನ್ ರಕ್ತದೊತ್ತಡಕ್ಕೆ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ರಕ್ತನಾಳಗಳಿಗೆ ಶಮನವನ್ನು ನೀಡುವುದು.

ಮುಳ್ಳುಸೌತೆಯ ಪವರ್

ಮುಳ್ಳುಸೌತೆಯ ಪವರ್

ಮುಳ್ಳುಸೌತೆಯಲ್ಲಿ ನಾರಿನಾಂಶ, ಮೆಗ್ನಿಶಿಯಂ, ಪೊಟಾಶಿಯಂ ಮತ್ತು ನೀರಿನಾಂಶ ಹೆಚ್ಚಿದೆ. ಇದರಲ್ಲಿ ಇರುವಂತಹ ಪೊಟಾಶಿಯಂ ದೇಹದಲ್ಲಿರುವ ಸೋಡಿಯಂನ್ನು ಸಮತೋಲನದಲ್ಲಿಡುತ್ತದೆ. ಬೆಳ್ಳುಳ್ಳಿ ಮತ್ತು ಮುಳ್ಳುಸೌತೆಯ ಸಲಾಡ್ ಹೃದಯರಕ್ತನಾಳದ ಆರೋಗ್ಯವನ್ನು ವೃದ್ಧಿಸುತ್ತದೆ.

ಮುಳ್ಳುಸೌತೆಯ ಪವರ್

ಮುಳ್ಳುಸೌತೆಯ ಪವರ್

ಕಡು ಹಸಿರಾಗಿರುವ ಮುಳ್ಳುಸೌತೆಗಳನ್ನು ಆಯ್ಕೆ ಮಾಡಿ. ಖರೀದಿಸುವ ಮೊದಲು ಅದು ಮೃಧುವಾಗಿದೆಯಾ ಅಥವಾ ಗಟ್ಟಿಯಾಗಿದೆಯಾ ಎಂದು ತಿಳಿದುಕೊಳ್ಳಿ. ಗಟ್ಟಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.

ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

English summary

Cucumber Garlic Salad For Hypertension

When the arteries become narrow and the heart pumps more blood, blood pressure tends to increase. This condition could increase the risk of stroke and hypertension. Primary hypertension is different from secondary hypertension. If the problem of hypertension occurs over the years, it is known as primary. If it occurs all of a sudden due to some other reason like thyroid problem, kidney issue or adrenal gland tumour then it is known as secondary hypertension.
Subscribe Newsletter