For Quick Alerts
ALLOW NOTIFICATIONS  
For Daily Alerts

  ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ರುಚಿ-ಅಡುಗೆ ಮನೆಯಲ್ಲಿಯೇ ಇದೆ!

  By Arshad
  |

  ತೃಪ್ತಿಕರ ಸಮಾಗಮ ಸುಖಕರ ದಾಂಪತ್ಯಜೀವನದ ಅಡಿಪಾಯವಾಗಿದೆ. ಲೈಂಗಿಕ ಕ್ರಿಯೆ ಉತ್ತಮಗೊಳ್ಳಲು ಸೂಕ್ತವಾದ ಆಹಾರಗಳನ್ನು ಸೇವಿಸುವುದೂ ಅಗತ್ಯ. ಸುಖಕರ ದಾಂಪತ್ಯ ಜೀವನದ ಮೂಲಕ ಉತ್ತಮ ಆರೋಗ್ಯ, ರೋಗ ನಿರೋಧಕ ಶಕ್ತಿಯಲ್ಲಿ ಹೆಚ್ಚಳ, ಒತ್ತಡದ ನಿವಾರಣೆ, ಹೃದಯದ ಆರೋಗ್ಯ ಉತ್ತಮಗೊಳ್ಳುವುದು, ಆರೋಗ್ಯಕರ ಸಂತಾನಫಲ ಮತ್ತು ನೆಮ್ಮದಿ ಲಭ್ಯವಾಗುತ್ತದೆ.

  ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಆಹಾರಗಳನ್ನು ಸೇವಿಸವುದು ಮಾತ್ರವಲ್ಲ, ಕೆಲವು ಆಹಾರ ಅಭ್ಯಾಸಗಳನ್ನು ಬದಲಿಸಿಕೊಳ್ಳುವುದೂ ಅಗತ್ಯವಾಗಿದೆ. ವಾಸ್ತವವಾಗಿ ಲೈಂಗಿಕ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸಲು ಯಾವುದೇ ಆಹಾರಗಳು ಈ ಜಗತ್ತಿನಲ್ಲಿಲ್ಲ. ಆದರೆ ಇರುವ ಶಕ್ತಿಯನ್ನು ಪೂರ್ಣವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳಲು ಈ ಆಹಾರಗಳು ನೆರವಾಗುತ್ತವೆ. 

  ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!

  ಇತ್ತೀಚಿನ ದಿನಗಳಲ್ಲಿ ಲೈಂಗಿಕತೆಯ ಬಗ್ಗೆ ಮಡಿವಂತಿಕೆ ಕೊಂಚ ಕಡಿಮೆಯಾಗಿದ್ದು ಈ ನಿಟ್ಟಿನಲ್ಲಿ ಅಮೂಲ್ಯ ಮಾಹಿತಿಗಳು ಲಭ್ಯವಾಗುತ್ತಿವೆ. ಈ ಆಹಾರಗಳನ್ನು 'ಸೆಕ್ಸ್-ಡಯೆಟ್' ಎಂಬ ಹೆಸರಿನಿಂದ ಹೆಚ್ಚು ಪ್ರಚಾರಗೊಳಿಸಲಾಗುತ್ತಿದ್ದು ಖ್ಯಾತ ಹಾಲಿವುಡ್ ನಟಿಯರಾದ ಕಿಮ್ ಕಾರ್ದಶಿಯಾನ್ ಹಾಗೂ ಕ್ಯಾಮರೂನ್ ಡಿಯಾಝ್ ರವರು ಈ ಪ್ರಚಾರದಲ್ಲಿ ತೊಡಗಿದ್ದಾರೆ. ಬರೆಯ ಆಹಾರಗಳನ್ನು ಕಾಮೋತ್ತೇಜಕವಾಗಿ ಸೇವಿಸುವುದು ಮಾತ್ರ ಸಾಕಾಗುವುದಿಲ್ಲ, ಆರೋಗ್ಯಕರ ಜೀವನಶೈಲಿ, ಸೂಕ್ತ ವ್ಯಾಯಾಮ ಹಾಗೂ ಯೋಗಾಸನಗಳನ್ನು ಅನುಸರಿಸುವುದರಿಂದಲೂ ಲೈಂಗಿಕ ಕ್ರಿಯೆಯನ್ನು ಉತ್ತಮಗೊಳಿಸಲು ಸಾಧ್ಯ. ಬನ್ನಿ, ಈ ಅಹಾರಗಳು ಯಾವುವು ಎಂಬುದನ್ನು ನೋಡೋಣ..... 

  ಕಲ್ಲಂಗಡಿ ಹಣ್ಣು

  ಕಲ್ಲಂಗಡಿ ಹಣ್ಣು

  ಕೆಲವು ತಜ್ಞರು ಕಲ್ಲಂಗಡಿಯನ್ನು ಹೊಸ ವಯಾಗ್ರಾ ಎಂದು ಕರೆದಿದ್ದಾರೆ. ಟೆಕ್ಸಸ್ ನಲ್ಲಿರುವ A&M ವಿಶ್ವವಿದ್ಯಾಲಯದಲ್ಲಿ ಸಂಶೋಧಕ ಹಾಗೂ ಹಣ್ಣು ಮತ್ತು ತರಕಾರಿ ಅಭಿವೃದ್ದಿ ಘಟಕದ ನಿರ್ದೇಶಕರಾದ ಭೀಮು ಪಾಟಿಲ್ ರವರು ವಿವರಿಸುವ ಪ್ರಕಾರ ಕಲ್ಲಂಗಡಿಯನ್ನು ತಿನ್ನುವ ಮೂಲಕ ವಯಾಗ್ರಾ ಸೇವಿಸುವಂತಹ ಪರಿಣಾಮವನ್ನು ದೇಹದ ರಕ್ತನಾಳಗಳ ಮೇಲೆ ಬೀರುತದೆ ಹಾಗೂ ಇದರಿಂದ ಲೈಂಗಿಕ ಶಕ್ತಿಯೂ ಹೆಚ್ಚುತ್ತದೆ. ಈ ತಣ್ಣನೆಯ ಕಲ್ಲಂಗಡಿಯಲ್ಲಿ ಸಿಟ್ರುಲಿನ್ ಅಮೈನೋ ಆಮ್ಲ ಎಂಬ ಪೋಷಕಾಂಶವಿದೆ. ಸಿಟ್ರುಲಿನ್ ನರವ್ಯವಸ್ಥೆಗೆ ಉತ್ತಮವಾದ ಪೋಷಕಾಂಶವಾಗಿದ್ದು ನರಗಳನ್ನು ಸಡಿಲಿಸಲು ನೆರವಾಗುತ್ತದೆ. ಪರಿಣಾಮವಾಗಿ ಲೈಂಗಿಕಾಸಕ್ತಿಯೂ ಹೆಚ್ಚುತ್ತದೆ. ಒಂದು ವೇಳೆ ಈ ಆಸಕ್ತಿಗೆ ಒಳಗಾಗಬೇಕಿದ್ದರೆ ಶಯನಸಮಯಕ್ಕೂ ಮುನ್ನ ದಂಪತಿಗಳಿಬ್ಬರೂ ಸಾಂದ್ರೀಕರಿಸಿದ ಕಲ್ಲಂಗಡಿ ಹಣ್ಣಿನ ರಸವನ್ನು ಕುಡಿಯಬೇಕು. ಇದು ರುಚಿಕರ ಹಾಗೂ ಸುಲಭವಾದ ಆಹಾರವೂ ಆಗಿದೆ.

  ಶತಾವರಿ

  ಶತಾವರಿ

  ಇದರ ಆಕಾರವೂ ಕೊಂಚ ಗುಪ್ತಾಂಗವನ್ನೂ ಹೋಲುವ ಕಾರಣ ಇದನ್ನು ಸೇವಿಸಲು ಮಾನಸಿಕವಾದ ಸಿದ್ಧತೆ ದೊರಕುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಬಿ ಅಥವಾ ಪೋಲೇಟ್ ಹಿಸ್ಟಮೈನ್ ಎಂಬ ರಸದೂತವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಅಗತ್ಯವಾದ ಪೋಷಕಾಂಶವಾಗಿದೆ. ಈಗತಾನೇ ಕೊಯ್ದ ಶತಾವರಿ ಸಿಹಿಯೂ ಆಗಿದ್ದು ಹಸಿಯಾಗಿಯೇ ತಿನ್ನಲು ಆರೋಗ್ಯಕರ ಹಾಗೂ ಕಾಮೋತ್ತೇಕವೂ ಆಗಿದೆ. ಇದು ತಾಜಾ ಇದ್ದಂತೆಯೇ ಮಾರುಕಟ್ಟೆಯಿಂದ ಖರೀದಿಸಿ. ಮನೆಯಲ್ಲಿಯೇ ಬೆಳೆದುಕೊಳ್ಳುವುದು ಇನ್ನೂ ಉತ್ತಮ.

  ಬೆಣ್ಣೆಹಣ್ಣು

  ಬೆಣ್ಣೆಹಣ್ಣು

  ಇತ್ತೀಚಿನ ವರದಿಯೊಂದರಲ್ಲಿ ಪ್ರಕಟವಾದಂತೆ ಸಾವಯವ ವಿಧಾನದಲ್ಲಿ ಬೆಳೆದ ಸಿಸಿಲಿಯನ್ ಬೆಣ್ಣೆಹಣ್ಣುಗಳು ಯೂರೋಪಿನಾದ್ಯಂತ ಸಂಚಲನೆ ಸೃಷ್ಟಿಸಿವೆ. ಅಷ್ಟಕ್ಕೂ ಲಭ್ಯವಿದ್ದ ಹಣ್ಣುಗಳು ಬೇಡಿಕೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲವಂತೆ. ಪುರಾತನ ಅಜ್ಟೆಕ್ ಹೆಸರಾದ "ahuacatl," ಅಥವಾ ವೃಷಣ ಎಂಬ ಅರ್ಥ ಬರುವ ಹೆಸರನ್ನೇ ಈ ಹಣ್ಣಿಗೂ ಇಡಲಾಗಿದೆ. ಇದರ ಕಾಮೋತ್ತೇಜಕ ಗುಣಗಳನ್ನು ಕಂಡುಕೊಂಡ ಸ್ಪಾನಿಷ್ ಧರ್ಮಗುರುಗಳು ಈ ಹಣ್ಣುಗಳನ್ನು ತಿನ್ನದಂತೆ ವಿದ್ಯಾರ್ಥಿಗಳಿಗೆ ಕಟ್ಟುಪಾಡು ವಿಧಿಸಿದ್ದರು.

  ಸೆಲೆರಿ ಎಲೆಗಳು

  ಸೆಲೆರಿ ಎಲೆಗಳು

  ಸೆಲೆರಿ ಎಲೆಗಳನ್ನು ನೀವು ಸಾಮಾನ್ಯವಾಗಿ ಕಾಮೋತ್ತೇಜಕವೆಂದು ಪರಿಗಣಿಸುವುದಿಲ್ಲ. ಜೂಡಿ ಗಾಮನ್, ಡಾ. ವಾಲ್ಟರ್ ಗಾಮನ್, ಹಾಗೂ ಡಾ. ಮಾರ್ಕ್ ಆಂಡರ್ಸನ್ ಲೇಖಕರಾಗಿರುವ ಗ್ರಂಥವಾದ "Stay Young: Ten Proven Steps to Ultimate Health," ದಲ್ಲಿ ವಿವರಿಸಿರುವ ಪ್ರಕಾರ ಸೆಲೆರಿ ಸೇವನೆಯಿಂದ ಫೆರೋಮೋನ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ಇದು ಪುರುಷನ ಬೆವರಿನಲ್ಲಿ ಒಂದು ಬಗೆಯ ಸುಗಂಧವನ್ನು ಸೇರಿಸುತ್ತದೆ ಹಾಗೂ ಇದು ಮಹಿಳೆಯರಿಗೆ ಹೆಚ್ಚು ಆಕರ್ಷಣೆ ನೀಡುತ್ತದೆ. ಆದರೆ ಈ ಎಲೆಗಳು ಸಾವಯವ ವಿಧಾನದಲ್ಲಿ ಬೆಳೆದಿರುವುದು ಅಗತ್ಯ. ರಾಸಾಯನಿಕ ಗೊಬ್ಬರ ಹಾಕಿದ ಸೆಲೆಯಿರಲ್ಲಿ ಹಲವಾರು ಕೀಟನಾಶಕಗಳಿದ್ದು ಇವು ನಿರೀಕ್ಷಿತ ಫಲಿತಾಂಶವನ್ನು ನೀಡುವುದಿಲ್ಲ.

  ಹಸಿಮೆಣಸು

  ಹಸಿಮೆಣಸು

  ಮೆಣಸು ಖಾರ ಹೌದು. ಆದರೆ ಈ ಖಾರ ನೀಡುವ ಕ್ಯಾಪ್ಸೈಸಿನ್ ಎಂಬ ಪೋಷಕಾಂಶ ಕಾಮೋತ್ತೇಜಕವೂ ಆಗಿದೆ. ಖಾರ ತಿಂದಾಗ ದೇಹದಲ್ಲಿ ಕೊಂಚ ಬದಲಾವಣೆಯಾಗಿರುವುದನ್ನು ಗಮನಿಸಿರಬಹುದು. ಕ್ಯಾಪ್ಸೈಸಿನ್ ಕೆಲವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಹಾಗೂ ಇದು ಹೃದಯದ ಬಡಿತವನ್ನು ಹೆಚ್ಚಿಸಿ ಹೆಚ್ಚಿನ ಪ್ರಮಾಣದ ಎಂಡೋಮಾರ್ಫಿನ್ ಗಳನ್ನು ಬಿಡುಗಡೆ ಮಾಡುತ್ತದೆ. ಇದು ನೈಸರ್ಗಿಕ ಕಾಮೋತ್ತೇಜಕವಾಗಿದೆ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಹಸಿ ಬೆಳ್ಳುಳ್ಳಿ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಕೆಲವು ಎಸಳುಗಳನ್ನು ತಿಂದರೆ ಇದರ ವಾಸನೆ ಸಂಗಾತಿಯನ್ನು ದೂರಮಾಡಿದಂತೆ ಅನ್ನಿಸಿದರೂ ಇದು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವುದು ಮಾತ್ರ ನಿಜ. ಬೆಳ್ಳುಳ್ಳಿ ದೇಹದ ಉಷ್ಣತೆ ಹೆಚ್ಚಿಸುವ ಮೂಲಕ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆಲಿಸಿನ್ ಗುಪ್ತಾಂಗಗಳಲ್ಲಿ ರಕ್ತಸಂಚಾರ ಹೆಚ್ಚಿಸುವ ಮೂಲಕ ಇದು ಸಾಧ್ಯವಾಗುತ್ತದೆ. ಆದರೆ ಇದು ಒಂದೇ ದಿನದಲ್ಲಿ ಸಾಧ್ಯವಾಗುವುದಿಲ್ಲ. ಇದರ ಸರಿಯಾದ ಪರಿಣಾಮವನ್ನು ಗಮನಿಸಬೇಕಾದರೆ ಒಂದು ತಿಂಗಳಾದರೂ ಬೆಳ್ಳುಳ್ಳಿಯನ್ನು ಸತತವಾಗಿ ಸೇವಿಸಬೇಕು.

   ತುಳಸಿ ಎಲೆಗಳು

  ತುಳಸಿ ಎಲೆಗಳು

  ತುಳಸಿ ಎಲೆಗಳ ಪರಿಮಳ ಬಹಳ ಹಿಂದಿನಿಂದಲೂ ಕಾಮೋತ್ತೇಜಕವಾಗಿ ಬಳಕೆಯಲ್ಲಿದೆ. ಹಿಂದಿನ ಮಹಿಳೆಯರು ತುಳಸಿಪುಡಿಯನ್ನು ಎಣ್ಣೆಯಲ್ಲಿ ಬೆರೆಸಿ ಚರ್ಮಕ್ಕೆ ಹಚ್ಚಿಕೊಂಡು ಪುರುಷರನ್ನು ಆಕರ್ಷಿಸಲು ಯತ್ನಿಸುತ್ತಿದ್ದರು. ತುಳಸಿ ರಕ್ತಸಂಚಾರ ಹೆಚ್ಚಿಸುತ್ತದೆ ಹಾಗೂ ಹೃದಯವನ್ನು ರಕ್ಷಿಸುತ್ತದೆ. ಇವೆರಡೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿವೆ. ಇದಕ್ಕಾಗಿ ತುಳಸಿ ಎಲೆಗಳ ಬಾವಿಯಲ್ಲಿ ಮುಳುಗಬೇಕಾಗಿಲ್ಲ, ಬದಲಿಗೆ ಕೊಂಚ ತುಳಸಿ ಎಲೆಗಳನ್ನು ನುಣ್ಣಗೆ ಅರೆದು ಇದನ್ನು ಸಂಗಾತಿಗಳಿಬ್ಬರೂ ಊಟದ ಜೊತೆಗೆ ಸೇವಿಸುವ ಮೂಲಕ ಕಾಮೋತ್ತೇಜಕ ಗುಣ ಹೆಚ್ಚುತ್ತದೆ.

  ದಾಲ್ಚಿನ್ನಿ

  ದಾಲ್ಚಿನ್ನಿ

  ದಾಲ್ಚಿನ್ನಿ ಪುಡಿಯನ್ನು ಅತ್ಯಂತ ಸಮರ್ಥವಾದ ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ. ಇದು ದೇಹದ ಬಿಸಿಯನ್ನು ಹೆಚ್ಚಿಸುತ್ತದೆ, ಹಸಿವನ್ನೂ ಹೆಚ್ಚಿಸುತ್ತದೆ. ಹೊಟ್ಟೆಯ ಜೊತೆಗೇ ದೇಹದ ಹಸಿವನ್ನೂ ಹೆಚ್ಚಿಸುತ್ತದೆ. ಇದರ ಸೇವನೆಯಿಂದ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಹೆಚ್ಚಿನ ಗಮನವನ್ನು ಸಂಗಾತಿಗೆ ನೀಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿಯನ್ನು ನಿಮ್ಮ ನಿತ್ಯದ ಕಾಫಿ ಟೀ, ಮೊಸರು, ಹಾಲು ಅಥವಾ ಲಘು ಆಹಾರಗಳ ಮೇಲೆ, ಕೇಕ್, ಕುಕ್ಕಿ ಮೊದಲಾದವುಗಳ ಮೇಲೆ ಚಿಮುಕಿಸಿಕೊಳ್ಳುವ ಮೂಲಕ ಸೇವಿಸಿದರೆ ಸಾಕು.

  ಏಲಕ್ಕಿ

  ಏಲಕ್ಕಿ

  ನಿಮಿರು ದೌರ್ಬಲ್ಯವನ್ನು ನಿವಾರಿಸಲು ಏಲಕ್ಕಿ ಉತ್ತಮ ಆಯ್ಕೆಯಾಗಿದ್ದು ಬಹಳ ಹಿಂದಿನಿಂದಲೂ ಬಳಕೆಯಾಗಿದೆ. ಇದರಲ್ಲಿ 1,8-cineole ಎಂಬ ಪೋಷಕಾಂಶ ಹೆಚ್ಚಿನ ಸಾಂದ್ರತೆಯಲ್ಲಿದ್ದು ಇದರ ಸೇವನೆಯಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಸ್ನಾಯುಗಳ ಸೆಡೆತವನ್ನೂ ಕಡಿಮೆಗೊಳಿಸುತ್ತದೆ. ಇದರ ಪರಿಮಳ ಪ್ರಚೋದನೆ ನೀಡುವ ಜೊತೆಗೇ ವಾತಾವರಣವನ್ನೂ ಉಲ್ಲಸಿತಗೊಳಿಸುತ್ತದೆ.

  ಬಾದಾಮಿ

  ಬಾದಾಮಿ

  ಇಂದು ಮಾರುಕಟ್ಟೆಯಲ್ಲಿ ಸಿಗುತ್ತಿರುವ ಬಾದಾಮಿ-ಬೆಣ್ಣೆಯ ಕ್ರೀಂ ಸಹಾ ಉತ್ತಮ ಕಾಮೋತ್ತೇಜಕವಾಗಿದೆ. ಹಿಂದಿನಿಂದಲೂ ಬಾದಾಮಿ ಎಂದರೆ ಫಲವತ್ತತೆಯ ಸಂಕೇತವೆಂದು ಪರಿಗಣಿಸಲ್ಪಡುತ್ತಿದೆ. ಇದಕ್ಕೆ ಪೂರಕವಾದ ಕೆಲವಾರು ಮಾಹಿತಿಗಳನ್ನು ಇಂದು ಸಂಶೋಧನೆಗಳು ನೀಡಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸೆಲೆನಿಯಂ ಹಾಗೂ ಸತು ಸಂತಾನೋತ್ಪತ್ತಿಗೆ ಉತ್ತಮವಾಗಿವೆ. ಅಲ್ಲದೇ ಒಮೆಗಾ ೩ ಕೊಬ್ಬಿನ ಆಮ್ಲಗಳು ರಕ್ತಪರಿಚಲನೆಯನ್ನು ಹೆಚ್ಚಿಸಿ ಆರೋಗ್ಯವನ್ನು ಹೆಚ್ಚಿಸುತ್ತವೆ.

  ಸಿಹಿಗೆಣಸು

  ಸಿಹಿಗೆಣಸು

  ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದಲ್ಲದೇ ಇದರ ಮೂಲಕ ಎದುರಾಗಿರುವ ನಿಮಿರು ದೌರ್ಬಲ್ಯವನ್ನೂ ಕಡಿಮೆ ಮಾಡುತ್ತದೆ. ಸಿಹಿಗೆಣಸಿನಲ್ಲಿ ಬೀಟ್ಯಾ ಕ್ಯಾರೋಟಿನ್ ಸಹಾ ಹೆಚ್ಚಿನ ಪ್ರಮಾಣದಲ್ಲಿದ್ದು ದೇಹಕ್ಕೆ ವಿಫುಲವಾಗಿ ವಿಟಮಿನ್ ಎ ಒದಗಿಸುತ್ತವೆ. ಈ ವಿಟಮಿನ್ ವಿಶೇಷವಾಗಿ ಮಹಿಳೆಯರಲ್ಲಿ ದ್ರವಿಸಲು ಹೆಚ್ಚಿನ ನೆರವು ನೀಡುತ್ತದೆ. ಸಿಹಿಗೆಣಸನ್ನು ವಿವಿಧ ಖಾದ್ಯಗಳ ರೂಪದಲ್ಲಿ ಸೇವಿಸಬಹುದಾದರೂ ಉತ್ತಮವಾದ ವಿಧಾನವೆಂದರೆ ಹುರಿದು ತಿನ್ನುವುದು.

  ಎಳನೀರು

  ಎಳನೀರು

  ಎಳನೀರಿನಲ್ಲಿರುವ ಎಲೆಕ್ಟ್ರೋಲೈಟುಗಳು ನಮ್ಮ ರಕ್ತದಲ್ಲಿರುವ ಮಟ್ಟದಲ್ಲಿಯೇ ಇರುವ ಕಾರಣ ಇದಕ್ಕೆ ಜೀವಜಲವೆಂದೂ ಕರೆಯುತ್ತಾರೆ. ಇದರ ಸೇವನೆಯಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ಕಾಮೋತ್ತೇಜಕವೂ ಆಗಿದೆ. ಎಳನೀರನ್ನು ನೇರವಾಗಿ ಕುಡಿದಷ್ಟೂ ಉತ್ತಮ. ನಿಮ್ಮ ನಿತ್ಯದ ಸ್ಮೂಥಿ ಹಾಗೂ ಇತರ ಲಘು ಆಹಾರಗಳಿಗೆ ನೀರಿನ ಬದಲು ಎಳನೀರು ಸೇರಿಸಿಯೂ ಸೇವಿಸಬಹುದು.

  ದಾಳಿಂಬೆ

  ದಾಳಿಂಬೆ

  ಎಡಿನ್ ಬರ್ಗ್ ನಲ್ಲಿರುವ ಕ್ವೀನ್ ಮಾರ್ಗರೆಟ್ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯೊಂದರ ಪ್ರಕಾರ ದಾಳಿಂಬೆ ರಸದ ಸೇವನೆಯಿಂದ ಪುರುಷರಲ್ಲಿ ಟೆಸ್ಟಾಸ್ಟೆರೋನ್ ಎಂಬ ಹಾರ್ಮೋನು ಹೆಚ್ಚು ಉತ್ಪಾದನೆಯಾಗುವ ಮೂಲಕ ಲೈಂಗಿಕ ಶಕ್ತಿಯೂ ಹೆಚ್ಚುತ್ತದೆ. ಈ ಹಾರ್ಮೋನು ಲೈಂಗಿಕ ಹಸಿವನ್ನು ಹೆಚ್ಚಿಸುವ ಹಾಗೂ ಮನೋಭಾವವನ್ನು ಉತ್ತಮಗೊಳಿಸುವ ರಸದೂತವಾಗಿದ್ದು ತನ್ಮೂಲಕ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ. ದಾಳಿಂಬೆಯನ್ನು ನಿತ್ಯದ ಆಹಾರದ ಒಂದು ಭಾಗವಾಗಿಸಿ ಸೇವಿಸುತ್ತಿರುವುದು ಉತ್ತಮ. ಇದನ್ನು ಸಾಲಾಡ್ ರೂಪದಲ್ಲಿ ಹಸಿಯಾಗಿ ಅಥವಾ ಇತರ ಹಣ್ಣುಗಳ ರಸದೊಂದಿಗೆ ಮಿಶ್ರಣ ಮಾಡಿಯೂ ಸೇವಿಸಬಹುದು.

  ಬಾಳೆ ಹಣ್ಣು

  ಬಾಳೆ ಹಣ್ಣು

  ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

  ಟೊಮೇಟೊ ಹಣ್ಣುಗಳು

  ಟೊಮೇಟೊ ಹಣ್ಣುಗಳು

  ಟೊಮೇಟೊಗಳನ್ನು ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

  ಕೇಸರಿ

  ಕೇಸರಿ

  ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

  ಕಪ್ಪು ಚಾಕಲೇಟು

  ಕಪ್ಪು ಚಾಕಲೇಟು

  ಒಂದು ವೇಳೆ ಚಾಕಲೇಟು ತಿನ್ನುವುದು ನಿಮಗೆ ಇಷ್ಟವಿದ್ದರೆ ಜಿಹ್ವಾಚಪಲ್ಯವನ್ನು ತಣಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ಕಪ್ಪು ಚಾಕಲೇಟಿನಿಂದ ಸಾಧ್ಯ. ಇದಲ್ಲಿರುವ ಫಿನೈಲ್ ಇಥೈಲಿಮೈನ್ ಎಂಬ ಪೋಷಕಾಂಶಗಳು ಪುರುಷರ ದೇಹದಲ್ಲಿ ಎಂಡಾರ್ಫಿನ್ ಗಳನ್ನು ಹೆಚ್ಚಿಸಿ ಲೈಂಗಿಕ ಶಕ್ತಿಯನ್ನು ವೃದ್ಧಿಸಲು ನೆರವಾಗುತ್ತದೆ.

  ಒಣಫಲಗಳು

  ಒಣಫಲಗಳು

  ಗೋಡಂಬಿ, ಶೇಂಗಾಬೀಜ, ಬಾದಾಮಿ, ಪಿಸ್ತಾ ಮೊದಲಾದ ಒಣಫಲಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚು ಉತ್ಪಾದಿಸಲು ನೆರವಾಗುತ್ತದೆ. ಈ ಟೆಸ್ಟಾಸ್ಟೆರಾನ್ ಪುರುಷರಲ್ಲಿ ಕಾಮಾಸಕ್ತಿಯನ್ನು ಹೆಚ್ಚಿಸಲು

  ಮೊಟ್ಟೆಗಳು

  ಮೊಟ್ಟೆಗಳು

  ಮೊಟ್ಟೆಗಳು ಸಹ ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುವ ಒಂದು ಅದ್ಭುತವಾದ ಆಹಾರವಾಗಿದೆ. ವಿಟಮಿನ್ ಡಿ, ಬಿ5 ಮತ್ತು ಬಿ6 ಈ ಎಲ್ಲಾ ಅಂಶಗಳು ಲೈಂಗಿಕ ತುಡಿತವನ್ನು ಉದ್ಧೀಪನ ಮಾಡುವ ಮತ್ತು ದೇಹದಲ್ಲಿನ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುವ ಅಂಶಗಳಾಗಿವೆ. ಇವುಗಳು ನಿಮ್ಮ ಸಂಗಾತಿಯೊಂದಿಗೆ ನಿಮಗೆ ಒಂದು ಮಧುರವಾದ ರತಿಕ್ರೀಡೆಗೆ ಅನುವು ಮಾಡಿಕೊಡುತ್ತದೆ.

  ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸಿ

  ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸಿ

  ಕಾಫಿ ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

  ವಯಾಗ್ರದಂತೆ ಕೆಲಸ ಮಾಡುವ ಆಹಾರಗಳು-ಯಾವುದೇ ಅಡ್ಡಪರಿಣಾಮಗಳಿಲ್ಲ!

  English summary

  Boost Your Sex Drive, Deliciously! Let’s Get it in the Kitchen!

  Can eating specific foods get that mojo going? I’m a skeptic about this theory, but curiosity got the best of me so I decided to investigate. Because hey, I’ll admit, there are times we could all use some inspiration to get in the mood and get it on. And what better way than through the gut? If experience serves me right, specific foods (we meet again, dark chocolate) do stimulate bodily desires, so bring it on baby with these aphrodisiac foods!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more