'ಕಪ್ಪು ಜೀರಿಗೆ' ನೋಡಲು ಕಪ್ಪಗಿದ್ದರೂ, ಸಿಕ್ಕಾಪಟ್ಟೆ ಔಷಧೀಯ ಗುಣವಿದೆ

By: manu
Subscribe to Boldsky

ನಿಮ್ಮ ಮನೆಯ ಮಸಾಲೆ ಪದಾರ್ಥಗಳ ನಡುವೆ ಕರಿಜೀರಿಗೆ ಅಥವಾ ಕಪ್ಪು ಜೀರಿಗೆ ಅಥವಾ ಕರಿ ಜೀರಿಗೆ (black cumin seed) ಇಲ್ಲದಿದ್ದರೆ ನಿಮ್ಮ ಮಸಾಲಾ ಭಂಡಾರ ಅಪೂರ್ಣ. ಇದು ಕೇವಲ ಅಡುಗೆಗಳಿಗೆ ರುಚಿ ನೀಡುವ ಸಾಂಬಾರ ಪದಾರ್ಥ ಮಾತ್ರವಲ್ಲ, ಬದಲಿಗೆ ಹಲವು ಕಾಯಿಲೆಗಳಿಗೆ ಸಿದ್ಧೌಷಧಿಯೂ ಹೌದು. Nigella Sativa ಎಂಬ ಹೆಸರಿನ ಗಿಡದ ಬೀಜಗಳಾಗಿರುವ ಈ ಜೀರಿಗೆ ಮೂಲತಃ ದಕ್ಷಿಣ ಮತ್ತು ನೈಋತ್ಯ ಏಷ್ಯಾ ದೇಶಗಳದ್ದಾಗಿದೆ.

ಸಾಮಾನ್ಯ ಜೀರಿಗೆಗಿಂತಲೂ ಕೊಂಚ ಕಹಿಯಾಗಿರುವ ಈ ಜೀರಿಗೆ ಕೊಂಚ ತೀಕ್ಷ್ಣವಾದ ಪರಿಮಳವನ್ನೂ ಹೊಂದಿರುತ್ತದೆ. ನೋಡಲಿಕ್ಕೆ ಪುಟ್ಟದಾದ, ಕರಿಬೀಜಗಳಾಗಿದ್ದರೂ ಇದರ ಪೋಷಕಾಂಶಗಳು ಮಾತ್ರ ಪ್ರಬಲವಾಗಿವೆ. ಇದರಲ್ಲಿರುವ ಎಣ್ಣೆಯ ಅಂಶದಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಪರ್ಯಾಯ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಈ ಜೀರಿಗೆಯನ್ನು ಹಾಗೇ ತಿನ್ನಬಹುದು ಅಥವಾ ಜೇನಿನೊಂದಿಗೆ ಬೆರೆಸಿಕೊಂಡೂ ಸೇವಿಸಬಹುದು.

ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ನೀರಿನೊಂದಿಗೆ ಅಥವಾ ಹಾಲಿನಲ್ಲಿ ಬೇಯಿಸಿಯೂ ಸೇವಿಸಬಹುದು. ನಿಮ್ಮ ನಿತ್ಯದ ಬ್ರೆಡ್, ರೊಟ್ಟಿಗಳ ಮೇಲೆ ಚಿಮುಕಿಸಿಕೊಂಡೂ ತಿನ್ನಬಹುದು. ಬನ್ನಿ, ಈ ಜೀರಿಗೆಯ ಸೇವನೆಯಿಂದ ಯಾವೆಲ್ಲಾ ಕಾಯಿಲೆಗಳಿಗೆ ಔಷಧಿಯ ಪರಿಣಾಮ ಪಡೆಯಬಹುದು ಎಂಬುದನ್ನು ನೋಡೋಣ..... 

ಕುಂದಿದ್ದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ಕುಂದಿದ್ದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ

ಕೆಲವಾರು ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಕರಿಜೀರಿಗೆಯ ಎಣ್ಣೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೋಗಕಾರಕ ಕಣಗಳ ವಿರುದ್ಧ ಹೋರಾಡುತ್ತದೆ. ಇದರ ಬೀಜಗಳಿಂದ ಹಿಂಡಿ ತೆಗೆದ ಎಣ್ಣೆ (black seed oil), ಜೇನು ಹಾಗೂ ಚೆಕ್ಕೆಪುಡಿಯನ್ನು ಸೇರಿಸಿ ಕುಡಿಯುವ ಮೂಲಕ ಕುಂದಿದ್ದ ರೋಗ ನಿರೋಧಕ ಶಕ್ತಿಯನ್ನು ಮತ್ತೆ ಬಲಪಡಿಸಬಹುದು.

ಜ್ವರ ಮತ್ತು ಫ್ಲೂ ಗುಣಪಡಿಸುತ್ತದೆ

ಜ್ವರ ಮತ್ತು ಫ್ಲೂ ಗುಣಪಡಿಸುತ್ತದೆ

ಇದರ ಉರಿಯೂತ ನಿವಾರಕ, ವೈರಸ್ ನಿವಾರಕ ಹಾಗೂ ಬ್ಯಾಕ್ಟೀರಿಕಾ ನಿವಾರಕ ಗುಣಗಳು ಪ್ರತಿ ಮನೆಯಲ್ಲಿಯೂ ಇರಲೇಬೇಕಾದ ಔಷಧಿಯನ್ನಾಗಿಸಿವೆ. ಒಂದು ವೇಳೆ ಸಾಮಾನ್ಯ ಜ್ವರ, ಫ್ಲೂ ಜ್ವರ ಅಥವಾ ಗಂಟಲಬೇನೆ ಮೊದಲಾದವು ಕಾಣಿಸಿಕೊಂಡರೆ ಈ ಜೀರಿಗೆಯ ಕಷಾಯ ಮಾಡಿ ಕುಡಿದು ದೇಹವನ್ನು ಬೆಚ್ಚಗಿರಿಸಬೇಕು. ಕೆಲವೇ ಹೊತ್ತಿನಲ್ಲಿ ಮೈ ಬೆವರಲು ತೊಡಗುತ್ತದೆ ಹಾಗೂ ದೇಹದ ತಾಪಮಾನ ಕಡಿಮೆಗೊಳಿಸಲು ಹಾಗೂ ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು ನೆರವಾಗುತ್ತದೆ.

ಹಲ್ಲು ನೋವಿಗೆ

ಹಲ್ಲು ನೋವಿಗೆ

ಇದರ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಹಲ್ಲುನೋವನ್ನು ಗುಣಪಡಿಸುವ ಕ್ಷಮತೆ ಹೊಂದಿವೆ. ಒಂದು ವೇಳೆ ಹಲ್ಲುನೋವಿದ್ದರೆ ಈ ಎಣ್ಣೆಯಿಂದ ನೋವಿರುವ ಭಾಗವನ್ನು ಬೆರಳಿನಿಂದ ನಯವಾಗಿ ಉಜ್ಜಿಕೊಳ್ಳುವ ಮೂಲಕ ಒಸಡುಗಳಲ್ಲಾಗಿದ್ದ ಸೋಂಕನ್ನು ನಿವಾರಿಸಿ ಹಲ್ಲುನೋವನ್ನು ಹೋಗಲಾಡಿಸಬಹುದು.

ಚಿಟಿಕೆ ಹೊಡೆಯುವುದರೊಳಗೆ, ಹಲ್ಲು ನೋವು ಮಂಗಮಾಯ!

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಸಾಮಾನ್ಯ ಮಟ್ಟಕ್ಕಿಂತ ಕೊಂಚವೇ ಹೆಚ್ಚಿನ ಸಂಕೋಚನ ಹಾಗೂ ವ್ಯಾಕೋಚನದ ಒತ್ತಡವಿದ್ದರೆ ಈ ಜೀರಿಗೆಯ ಸೇವನೆಯಿಂದ ಸಾಮಾನ್ಯ ಸ್ಥಿತಿಗೆ ಬರಲು ಸಾಧ್ಯ ಎಂದು ಕೆಲವು ಸಂಶೋಧನೆಗಳು ಧೃಢಗೊಳಿಸಿವೆ.

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಮಧುಮೇಹವನ್ನು ಕಡಿಮೆಗೊಳಿಸುತ್ತದೆ

ಈ ಜೀರಿಗೆಯ ಸೇವನೆಯಿಂದ ಟೈಪ್-1 ಹಾಗೂ ಟೈಪ್-2 ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪ್ರಯೋಜನವಾಗುತ್ತದೆ ಎಂದು ಭಾವಿಸಲಾಗಿದೆ. Indian Council of Medical Research ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆಯಲ್ಲಿ ಕಂಡುಕೊಂಡಂತೆ "ಮೇದೋಜೀರಕದಲ್ಲಿ ಉತ್ಪತ್ತಿಯಾಗುವ ಬೀಟಾ ಜೀವಕೋಶಗಳ ಸಂಖ್ಯೆಯಲ್ಲಿ ಇಳಿಕೆ, ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿದ್ದುದನ್ನು ಹೆಚ್ಚಿಸುವ ಹಾಗೂ ಮೇಲೇರಿರುವ ಗ್ಲುಕೋಸ್ ರಕ್ತಸಾರ (serum)ವನ್ನು ಕಡಿಮೆಗೊಳಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ" ಎಂದು ವಿವರಿಸಲಾಗಿದೆ.

ಮಲಬದ್ಧತೆ ಶಮನಗೊಳಿಸಲು

ಮಲಬದ್ಧತೆ ಶಮನಗೊಳಿಸಲು

ಕರಿಜೀರಿಗೆ ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಇವುಗಳು ಕರುಳು ಹಾಗೂ ಇತರ ಜೀರ್ಣಾಂಗಗಳನ್ನು ಒಳಗಿನಿಂದ ಶುದ್ಧೀಕರಿಸಲು ಹಾಗೂ ಕರುಳುಗಳಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ವಾಯುಪ್ರಕೋಪ, ಹೊಟ್ಟೆಯುಬ್ಬರಿಕೆ, ಮಲಬದ್ಧತೆ ಮೊದಲಾದ ತೊಂದರೆಗಳಿಗೆ ಶಮನ ನೀಡುತ್ತದೆ.

ಕಿವಿನೋವನ್ನು ಶಮನಗೊಳಿಸಲು

ಕಿವಿನೋವನ್ನು ಶಮನಗೊಳಿಸಲು

ಈ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ನಿರೋಧಕ ಗುಣಗಳು ಹಲವು ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಇದರ ಉರಿಯೂತ ನಿವಾರಕ ಗುಣದ ಕಾರಣ ಕಿವಿಯಲ್ಲಿ ಸೋಂಕಿನಿಂದ ನೋವು ಉಂಟಾಗಿದ್ದರೆ ಈ ಎಣ್ಣೆಯನ್ನು ಕೆಲವು ತೊಟ್ಟು ಬಿಟ್ಟುಕೊಳ್ಳುವ ಮೂಲಕ ಕಡಿಮೆ ಮಾಡಬಹುದು.

ಹೆಪಟೈಟಿಸ್ ರೋಗವನ್ನು ಗುಣಪಡಿಸಲು

ಹೆಪಟೈಟಿಸ್ ರೋಗವನ್ನು ಗುಣಪಡಿಸಲು

ಕರಿಜೀರಿಗೆಯ ತೈಲದ ಪರಿಣಾಮ ಯಕೃತ್‌ನ ತೊಂದರೆಗಳನ್ನು ನಿವಾರಿಸುವಲ್ಲಿ ಅತ್ಯಂತ ಉತ್ತಮವಾಗಿದೆ. ಈ ಮೂಲಕ ಯಕೃತ್‌ಗೆ ಉಂಟಾಗಿರುವ ಘಾಸಿಯನ್ನು ಸರಿಪಡಿಸಲು ಹಾಗೂ ಯಕೃತ್‌ಗೆ ಸಂಬಂಧಿಸಿದ ಕಾಯಿಲೆಗಳನ್ನು ಗುಣಪಡಿಸಲೂ ಸಾಧ್ಯ. ವಿಶೇಷವಾಗಿ ಈ ಮೂಲಕ ಎದುರಾಗುವ ಹೆಪಟೈಟಿಸ್ -ಸಿ ಕಾಯಿಲೆಯ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಹಲವು ಲಿವರ್ ಟಾನಿಕ್ ಗಳಲ್ಲಿ ಈ ಎಣ್ಣೆಯನ್ನು ಪ್ರಮುಖವಾಗಿ ಬಳಸಲಾಗುತ್ತದೆ.

English summary

Black Cumin Seeds Are A Must Have If You Have These Diseases

Black cumin are seeds of a plant called Nigella Sativa, which is native to South and Southwest Asia. They taste bitter, have a pungent smell and are popularly known as black seeds after their appearance. The nutrition-rich oil has made its way to alternate medicine since ancient times. Here are some of the diseases for which these wonder seeds have become a home remedy with their several health benefits, take a look
Subscribe Newsletter