ಬೆಳ್ಳಿ ತಟ್ಟೆಯಲ್ಲಿ ಭೋಜನ ಮಾಡಿದ್ರೆ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ!

By: Arshad
Subscribe to Boldsky

ಒಂದು ಕಾಲದಲ್ಲಿ ಬೆಳ್ಳಿ ತಟ್ಟೆ ಲೋಟಗಳಲ್ಲಿ ಆಹಾರವಸ್ತುಗಳನ್ನು ಬಡಿಸುವುದನ್ನು ಪ್ರತಿಷ್ಠೆಯ ಸಂಕೇತ ಎಂದು ಪರಿಗಣಿಸಲಾಗುತ್ತಿತ್ತು. ಕಾಲಕ್ರಮೇಣ ಈ ತಟ್ಟೆ ಲೋಟಗಳನ್ನು ಸ್ಟೀಲ್ ಹಾಗೂ ಇತರ ಲೋಹದ ವಸ್ತುಗಳು ಆಕ್ರಮಿಸಿಕೊಂಡವು. ಆದರೂ ಕೆಲವು ಮನೆಗಳಲ್ಲಿ ಬೆಳ್ಳಿಯ ತಟ್ಟೆ ಲೋಟಗಳನ್ನು ಇಂದಿಗೂ ಬಳಸಲಾಗುತ್ತಿದೆ. ಏಕೆಂದರೆ ಈ ಲೋಹದ ತಟ್ಟೆಗಳನ್ನು ಬಳಸುವುದರಿಂದ ಪ್ರತಿಷ್ಠೆಗಿಂತಲೂ ಆರೋಗ್ಯವೇ ಹೆಚ್ಚು ವೃದ್ಧಿಸುವುದನ್ನು ಈ ಕುಟುಂಬದವರು ಅನುಭವದಿಂದ ಕಂಡುಕೊಂಡಿದ್ದು ಪ್ಲಾಸ್ಟಿಕ್ ಹಾಗೂ ಇತರ ಲೋಹದ ವಸ್ತುಗಳನ್ನು ಬಳಸುತ್ತಿಲ್ಲ. 

ಬೆಳ್ಳಿ ವಸ್ತುಗಳು ಹೊಳೆಯಲು ಕೆಲವೊಂದು ಸಲಹೆಗಳು

ಹೌದು, ಬೆಳ್ಳಿತಟ್ಟೆಯಲ್ಲಿ ಊಟ ಮಾಡುವುದರಿಂದ ಖಂಡಿತವಾಗಿಯೂ ಕೆಲವಾರು ಪ್ರಯೋಜನಗಳಿವೆ. ನಮ್ಮ ಭಾರತೀಯ ಸಂಪ್ರದಾಯವನ್ನು ಗಮನಿಸಿದರೆ ಮಗುವಿನ ಅನ್ನ-ಪ್ರಾಶನ ವಿಧಿಯನ್ನು ಅನುಸರಿಸುವ ದಂಪತಿಗಳಿಗೆ ಇತರ ಹಿರಿಯರು ಬೆಳ್ಳಿಯ ಬಟ್ಟಲು ಅಥವಾ ಇತರ ಬೆಳ್ಳಿಯ ವಸ್ತುಗಳನ್ನೇ ಉಡುಗೊರೆಯಾಗಿ ನೀಡುತ್ತಿದ್ದುದನ್ನು ಗಮನಿಸಬಹುದು. ಬನ್ನಿ, ನಿತ್ಯದ ಆಹಾರ ಸೇವನೆಯನ್ನು ಈ ತಟ್ಟೆಯಲ್ಲಿಯೇ ಸೇವಿಸುವ ಮೂಲಕ ಈ ಲೋಹ ಅದಾವ ಶಕ್ತಿ ನೀಡುತ್ತದೆ ಎಂಬುದನ್ನು ನೋಡೋಣ... 

ಬೆಳ್ಳಿ ಉತ್ತಮ ಬ್ಯಾಕ್ಟೀರಿಯಾ ನಿರೋಧಕ

ಬೆಳ್ಳಿ ಉತ್ತಮ ಬ್ಯಾಕ್ಟೀರಿಯಾ ನಿರೋಧಕ

ಬೆಳ್ಳಿ ಸ್ವಾಭಾವಿಕವಾದ ಬ್ಯಾಕ್ಟೀರಿಯಾ ವಿಕರ್ಷಕವಾಗಿದೆ. ಅಂದರೆ ಈ ಲೋಹದ ಮೇಲೆ ಬ್ಯಾಕ್ಟೀರಿಯಾಗಳು ಕೂರಲಾರವು. ಆದ್ದರಿಂದ ಬೆಳ್ಳಿಯ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡುವ ಮೂಲಕ ಬ್ಯಾಕ್ಟೀರಿಯಾಗಳನ್ನು ಪರಿಪೂರ್ಣವಾಗಿ ನಿವಾರಿಸಬಹುದು. ಅಷ್ಟೇ ಅಲ್ಲ, ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದ ಬ್ಯಾಕ್ಟೀರಿಯಾಗಳ ಪ್ರವೇಶ ತಡೆದಂತಾಗುತ್ತದೆ. ಕೆಲವು ಬ್ಯಾಕ್ಟೀರಿಯಾಗಳು ಆಂಟಿ ಬ್ಯಾಕ್ಟೀರಿಯಲ್ ಎಂದು ಬರೆದಿರುವ ದ್ರವಗಳನ್ನೂ ಗುಟುಕರಿಸಿದರೂ ಬೆಳ್ಳಿಯ ಮೇಲೆ ಬದುಕಲಾರವು.

ಬೆಳ್ಳಿ ಮಕ್ಕಳಿಗೂ ಸುರಕ್ಷಿತ

ಬೆಳ್ಳಿ ಮಕ್ಕಳಿಗೂ ಸುರಕ್ಷಿತ

ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಸೋಂಕು ತಗಲಬಾರದೆಂದೇ ಹಿಂದೆ ಬೆಳ್ಳಿಯ ತಟ್ಟೆಗಳಲ್ಲಿ ಮಕ್ಕಳಿಗೆ ಊಟ ಬಡಿಸಲಾಗುತ್ತಿತ್ತು. ಇಂದಿಗೂ ಬೆಳ್ಳಿ ಮಕ್ಕಳಿಗೆ ಸುರಕ್ಷಿತವಾಗಿದೆ.

ಬೆಳ್ಳಿ ಆಹಾರವನ್ನು ತಾಜಾರೂಪದಲ್ಲಿಡುತ್ತದೆ

ಬೆಳ್ಳಿ ಆಹಾರವನ್ನು ತಾಜಾರೂಪದಲ್ಲಿಡುತ್ತದೆ

ಕೆಲವು ಆಹಾರಗಳು, ವೈನ್ ಮೊದಲಾದವುವಗಳನ್ನು ಹಿಂದಿನ ಕಾಲದಲ್ಲಿ ಬೆಳ್ಳಿಯ ಪಾತ್ರೆಯಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಇದರಿಂದ ಈ ಆಹಾರಗಳು ಬಹಳ ಹೊತ್ತಿನವರೆಗೆ ತಾಜಾತನ ಉಳಿಸಿಕೊಳ್ಳುತ್ತಿದ್ದವು. ಆಹಾರದಲ್ಲಿರುವ ಸೂಕ್ಷ್ಮಜೀವಿಗಳನ್ನು ಕೊಂದು ಅವುಗಳ ಅಭಿವೃದ್ದಿಯನ್ನು ತಡೆಯುವ ಮೂಲಕ ಬೆಳ್ಳಿ ಆಹಾರದ ಸಂರಕ್ಷಣೆ ಮಾಡುತ್ತದೆ ಹಾಗೂ ಇದೇ ಕಾರಣದಿಮ್ದ ಬಹುಕಾಲದವರೆಗೆ ಆಹಾರವಸ್ತುಗಳು ಕೆಡದೇ ಉಳಿಯುತ್ತವೆ.

 ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ನಿಜವೇ? ಈ ಬಗ್ಗೆ ತಜ್ಞರು ನೀಡುವ ವಿವರಣೆಯ ಪ್ರಕಾರ ಬೆಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಅದರ ಮೇಲೆ ಇರಿಸಿದ ಆಹಾರವೂ ಪಡೆದು ಈ ಆಹಾರವನ್ನು ಸೇವಿಸುವ ಮೂಲಕ ದೇಹ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯುತ್ತದೆ.

ಬೆಳ್ಳಿ ತಂಪು ಪರಿಣಾಮ ಬೀರುತ್ತದೆ

ಬೆಳ್ಳಿ ತಂಪು ಪರಿಣಾಮ ಬೀರುತ್ತದೆ

ಬೆಳ್ಳಿ ದೇಹಕ್ಕೆ ತಂಪು ಪರಿಣಾಮವನ್ನು ಬೀರುತ್ತದೆ. ಅಂದರೆ ಇದು ಸದಾ ತಂಪಾಗಿದ್ದು ದೇಹದ ಉಷ್ಣತೆಯನ್ನು ಸೆಳೆಯುತ್ತದೆ. ಇದೇ ಕಾರಣಕ್ಕೆ ಬೆಳ್ಳಿಯನ್ನು ಆಭರಣಗಳ ರೂಪದಲ್ಲಿ ಹೆಚ್ಚಾಗಿ ಧರಿಸಲಾಗುತ್ತದೆ.

 ಬೆಳ್ಳಿ ವಿಷಕಾರಕವಲ್ಲ

ಬೆಳ್ಳಿ ವಿಷಕಾರಕವಲ್ಲ

ಕೆಲವು ಲೋಹಗಳನ್ನು ಸೇವಿಸಲು ಸಾಧ್ಯವಿಲ್ಲ. ಏಕೆಂದರೆ ಇವು ವಿಷವಾಗಿವೆ. ಪ್ಲಾಸ್ಟಿಕ್ ಸಹಾ ಲಘುವಾದ ವಿಷ. ಆದರೆ ಬೆಳ್ಳಿ ಮಾತ್ರ ಯಾವುದೇ ವಿಷಕರ ಅಂಶವಿಲ್ಲದ ಅಪ್ಪಟ ಸುರಕ್ಷಿತ ಲೋಹ. ಇದು ಆಮ್ಲಜನಕದೊಡನೆ ಬೆರೆಯುವುದಿಲ್ಲ. ಹಾಗಾಗಿ ಇದಕ್ಕೆ ತುಕ್ಕು ಹಿಡಿಯುವುದಿಲ್ಲ. ಹೆಚ್ಚಿನ ಲೋಹಗಳು ಆಮ್ಲಜನಕದೊಡನೆ ಬೆರೆದು ಆಕ್ಸೈಡ್ ರೂಪ ತಳೆದ ಬಳಿಕ ಘೋರವಿಷವಾಗುತ್ತವೆ. ಬೆಳ್ಳಿ ಸುರಕ್ಷಿತವಾಗಿರುವ ಕಾರಣಕ್ಕೇ ಬೆಳ್ಳಿಯ ಅತಿ ತೆಳ್ಳಗಿನ ಪದರವನ್ನು ಸಿಹಿತಿಂಡಿಗಳ ಮೇಲೆ ಪದರವನ್ನಾಗಿಸಿ ಸೇವಿಸಲಾಗುತ್ತದೆ.

ಬೆಳ್ಳಿ ಎಂದಿಗೂ ಹಾಳಾಗುವುದಿಲ್ಲ

ಬೆಳ್ಳಿ ಎಂದಿಗೂ ಹಾಳಾಗುವುದಿಲ್ಲ

ಬೆಳ್ಳಿಯ ತಟ್ಟೆ ಜೀವನಪರ್ಯಂತ ಕೆಲಸಕ್ಕೆ ಬರುತ್ತದೆ. ಆದ್ದರಿಂದ ಇದನ್ನು ಒಂದು ಬಾರಿಗೆ ಹೂಡಬಹುದಾದ ಹೂಡಿಕೆಯಂತೆಯೂ ಪರಿಗಣಿಸಬಹುದು. ಉಳಿದ ಲೋಹಗಳ ತಟ್ಟೆ ಲೋಟಗಳು ಕಾಲಕ್ರಮೇಣ ಸವೆದು ಸವಕಲಾಗಿ ಬದಲಿಸಬೇಕಾಗಿ ಬರುತ್ತದೆ. ಆದರೆ ಬೆಳ್ಳಿ ತಟ್ಟೆಯನ್ನು ಜೀವನಪರ್ಯಂತ ಮೂಲಸ್ಥಿತಿಯಲ್ಲಿಯೇ ಉಳಿಸಿಕೊಳ್ಳುವಂತೆ ಉಪಯೋಗಿಸಬಹುದು ಹಾಗೂ ಮುಂದಿನ ತಲೆಮಾರಿನವರೂ ಬಳಸಬಹುದು. ಇದರ ಮೂಲ ಬೆಲೆ ಹೆಚ್ಚು ಎಂಬ ಒಂದೇ ಕಾರಣ ಬಿಟ್ಟರೆ ಇವನ್ನು ಬಳಸದೇ ಇರಲು ಬೇರಾವ ಕಾರಣವೂ ಇಲ್ಲ. ಅಲ್ಲದೇ ಇದನ್ನು ಯಾವಾಗ ಬೇಕಾದರೂ ಮಾರಾಟ ಮಾಡಬಹುದು.

English summary

Benefits Of Eating In Silver Vessels!

If you have observed, many Indians still use silver plates to eat and use silver containers to store food. If you have thought that could just be a status symbol then you must know about the benefits of eating in silver vessels. Yes, silver is a lot better in the kitchen compared to many other metals or plastic. Yes, there are some very good benefits of using silver vessels.
Subscribe Newsletter