For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ದಾಲ್ಚಿನ್ನಿ-ಜೇನಿನ ಜೋಡಿಯನ್ನು ಎಷ್ಟು ಹೊಗಳಿದರೂ ಸಾಲದು!

By Arshad
|

ದಾಲ್ಚಿನ್ನಿಪುಡಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದೆಂದರೆ ಯೂಟ್ಯೂಬ್ ನಲ್ಲಿ ದಾಲ್ಚಿನ್ನಿ ಪುಡಿಯನ್ನು ತಿನ್ನಲು ಎಸಗುವ ಸವಾಲು ಹಾಗೂ ಇದನ್ನು ಸೇವಿಸಿದವರು ಬಾಯಿಗೆ ಹಾಕಿಕೊಂಡು ಪಡುವ ಪಟಾಲು. ಗಂಟಲಿಗೆ ಹೋದ ಈ ಪುಡಿ ತಕ್ಷಣವೇ ವಿಸ್ಫೋಟಗೊಂಡಂತೆ ಅನ್ನಿಸುವ ಭಾರೀ ಕೆಮ್ಮು ಹಾಗೂ ಕಣ್ಣೀರು ನೋಡುವವರಿಗೆ ನಗು ಬರಿಸಿದರೂ ತಿಂದವರಿಗೆ ಮಾತ್ರ ಪ್ರಾಣಸಂಕಟ. ಆದರೆ ಈ ಕೆಮ್ಮು, ಕಣ್ಣೀರುಗಳೇ ದಾಲ್ಚಿನ್ನಿಪುಡಿಯ ಪ್ರಭಾವ ಎಂದು ತಿಳಿದುಕೊಂಡರೆ ಇದು ದೊಡ್ಡ ತಪ್ಪಾಗುತ್ತದೆ.

ಏಕೆಂದರೆ ವಾಸ್ತವವಾಗಿ ದಾಲ್ಚಿನ್ನಿ ಪುಡಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಕೆಮ್ಮು ಎದುರಾಗುತ್ತದೆಯೇ ವಿನಃ ಚಿಕ್ಕ ಪ್ರಮಾಣದಲ್ಲಲ್ಲ. ಹೆಚ್ಚಿನ ಪ್ರಮಾಣದಲ್ಲಿ ದಾಲ್ಚಿನ್ನಿ ಪುಡಿ ಬೇಡ ನಿರಪಾಯಾಕಾರಿಯಾದ ಅಕ್ಕಿಹಿಟ್ಟನ್ನು ಸೇವಿಸಿದರೂ ಭಾರೀ ಕೆಮ್ಮು ಎದುರಾಗುತ್ತದೆ. ದಾಲ್ಚಿನ್ನಿಯನ್ನು ಭಾರತೀಯರು ಮಾತ್ರವಲ್ಲ, ಚೀನೀಯರು ಹಾಗೂ ರೆಡ್ ಇಂಡಿಯನ್ನರೂ ಸಾವಿರಾರು ವರ್ಷಗಳಿಂದ ಅಡುಗೆ ಹಾಗೂ ಔಷಧಿಗಾಗಿ ಬಳಸುತ್ತಾ ಬಂದಿದ್ದಾರೆ.

ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಜೇನು ಸಹಾ ಸಾವಿರಾರು ವರ್ಷಗಳಿಂದ ಔಷಧಿಯ ರೂಪದಲ್ಲಿ ಬಳಕೆಯಾಗುತ್ತಾ ಬಂದಿದೆ. ಇವೆರಡು ಅದ್ಭುತ ಸಾಮಾಗ್ರಿಗಳು ಜೊತೆಗೂಡಿದರೆ? ಇದರ ಪ್ರಯೋಜನಗಳು ದುಪ್ಪಟ್ಟಲ್ಲ ಹಲವಾರು ಪಟ್ಟು ಹೆಚ್ಚುತ್ತದೆ. ಎಲ್ಲವನ್ನೂ ಒಂದೇ ಲೇಖನದಲ್ಲಿ ಪ್ರಕಟಿಸಲು ಬಹಳ ದೀರ್ಘವಾದ ಕಾರಣ ಇದನ್ನು ಎರಡು ಭಾಗಗಳಾಗಿ ನೀಡುತ್ತಿದ್ದೇವೆ. ಇದರಲ್ಲಿ ಪ್ರಥಮ ಭಾಗ ಇಂದು ನಿಮ್ಮ ಮುಂದಿದೆ. ಬನ್ನಿ, ಈ ದಾಲ್ಚಿನ್ನಿ-ಜೇನಿನ ಜೋಡಿಯ ಕಮಾಲ್ ಏನಿದೆ ನೋಡೋಣ...

 ದಾಲ್ಚಿನ್ನಿಯಲ್ಲಿ ಉಳಿದ ಎಲ್ಲಾ ಮಸಾಲೆಗಳಿಗಿಂತಲೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ

ದಾಲ್ಚಿನ್ನಿಯಲ್ಲಿ ಉಳಿದ ಎಲ್ಲಾ ಮಸಾಲೆಗಳಿಗಿಂತಲೂ ಹೆಚ್ಚಿನ ಆಂಟಿ ಆಕ್ಸಿಡೆಂಟುಗಳಿವೆ

ಸಂಶೋಧನೆಗಳಿಂದ ಕಂಡುಕೊಂಡ ಪ್ರಕಾರ ದಾಲ್ಚಿನ್ನಿಯಲ್ಲಿ 41ಕ್ಕೂ ಹೆಚ್ಚು ಪೋಷಕಾಂಶಗಳಿದ್ದು ಪ್ರತಿಯೊಂದೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ದಾಲ್ಚಿನ್ನಿ ಮರದ ತೊಗಟೆಯನ್ನು ಸಂಗ್ರಹಿಸಿ ಒಣಗಿಸಿ ನುಣ್ಣಗೆ ಪುಡಿ ಮಾಡಲಾಗುತ್ತದೆ. ಒಂದು ವೇಳೆ ವಿಶ್ವದ ಎಲ್ಲಾ ಆಹಾರವಸ್ತುಗಳನು ಒಂದುಗೂಡಿಸಿ ಇವುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪಟ್ಟಿ ಮಾಡಿದರೆ ದಾಲ್ಚಿನ್ನಿ ಏಳನೆಯ ಸ್ಥಾನ ಪಡೆಯುತ್ತದೆ. ಒಂದು ವೇಳೆ ಕೇವಲ ಮಸಾಲೆಪದಾರ್ಥಗಳನ್ನು ಪರಿಗಣಿಸಿದರೆ ದಾಲ್ಚಿನ್ನಿಯಲ್ಲಿ ಅತಿ ಹೆಚ್ಚಿನ ಸಾಂದ್ರತೆಯ ಆಂಟಿ ಆಕ್ಸಿಡೆಂಟುಗಳಿವೆ. ಈ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ಕುಂದಿಸಿ ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಹಾಗೂ ಕೊಬ್ಬಿನ ಕಣಗಳನ್ನು ಉತ್ಕರ್ಷಣಗೊಳಿಸುತ್ತದೆ. ಇವೆಲ್ಲವೂ ವೃದ್ದಾಪ್ಯವನ್ನು ದೂರಾಗಿಸಲು ನೆರವಾಗುತ್ತವೆ. ಜೊತೆಗೇ ಹೃದಯದ ತೊಂದರೆ, ಮೆದುಳಿನ ಮೇಲೆ ನಡೆಸುವ ಆಘಾತ ಹಾಗೂ ಇತರ ಅಂಗಗಳ ಮೇಲೆ ನಡೆಯುವ ಘಾಸಿಯನ್ನೂ ತಡೆಯುತ್ತದೆ.

ಇದೊಂದು ಶಕ್ತಿಶಾಲಿ ಉರಿಯೂತ ನಿವಾರಕವಾಗಿದೆ

ಇದೊಂದು ಶಕ್ತಿಶಾಲಿ ಉರಿಯೂತ ನಿವಾರಕವಾಗಿದೆ

ದಾಲ್ಚಿನ್ನಿಯಲ್ಲಿ ಹಲವು ಫ್ಲೇವನಾಯ್ಡುಗಳಿದ್ದು ಇವೆಲ್ಲವೂ ಉರಿಯೂತವನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಆದ್ದರಿಂದ ದೇಹದ ಯಾವುದೇ ಭಾಗದಲ್ಲಿ ಊತವಿದ್ದರೆ ಒಂದು ಚಿಕ್ಕ ಚಮಚ ದಾಲ್ಚಿನ್ನಿಯನ್ನು ಎರಡು ಚಿಕ್ಕ ಚಮಚ ಜೇನಿನೊಂದಿಗೆ ಬೆರೆಸಿ ಕುಡಿದರೆ ಊತ ಮಾತ್ರವಲ್ಲ, ಸ್ನಾಯುಗಳ ನೋವು ಹಾಗೂ ಇತರ ಅಲರ್ಜಿಗಳೂ ಕಡಿಮೆಯಾಗುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಸೆಡೆತದ ನೋವನ್ನು ಕಡಿಮೆ ಮಾಡಲು ಈ ವಿಧಾನ ಅತ್ಯುತ್ತಮವಾಗಿದೆ.

ಹೃದಯದ ತೊಂದರೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಹೃದಯದ ತೊಂದರೆಗಳ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ

ಹಲವಾರು ಅಧ್ಯಯನಗಳಲ್ಲಿ ಕಂಡುಕೊಂಡಿರುವ ಪ್ರಕಾರ ದಾಲ್ಚಿನ್ನಿಯ ಸೇವನೆಯ ಪರಿಣಾಮವಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ. ಇದಕ್ಕೆ ಕಾರಣ ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ಅಥವಾ LDL ಗಳನ್ನು ಕಡಿಮೆ ಮಾಡುವುದಾಗಿದೆ. ಇದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಹಾಗೂ ವಿಶೇಷವಾಗಿ atherosclerosis ಎಂಬ ಹೃದಯರೋಗದಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ, ದಾಲ್ಚಿನ್ನಿಯ ಸೇವನೆಯಿಂದ ಅಧಿಕ ರಕ್ತದೊತ್ತಡವೂ ಕಡಿಮೆಯಾಗುತ್ತದೆ ಹಾಗೂ ಪರಿಣಾಮವಾಗಿ ಹೃದಯ ತನ್ನ ಮೊದಲ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ತನ್ಮೂಲಕ ಹೃದಯಾಘಾತ ಅಥವಾ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.

ಮಧುಮೇಹದ ವಿರುದ್ಧ ಪ್ರಬಲವಾಗಿದೆ

ಮಧುಮೇಹದ ವಿರುದ್ಧ ಪ್ರಬಲವಾಗಿದೆ

ಕೆಲವಾರು ಅಧ್ಯಯನಗಳಲ್ಲಿ ಕಂಡುಕೊಂಡಂತೆ ದಾಲ್ಚಿನ್ನಿಯಲ್ಲಿರುವ ಕೆಲವು ಸಂಯುಕ್ತಗಳು ಅಲನೈಸ್ ಎಂಬ ಕಿಣ್ವದ ಪ್ರಭಾವವನ್ನು ತಡೆಯಲು ಶಕ್ತವಾಗಿವೆ. ಈ ಅಲನೈನ್ ಜೀರ್ಣಕ್ರಿಯೆಯ ಬಳಿಕ ಜೀರ್ಣಾಂಗಗಳಿಂದ ರಕ್ತವನ್ನು ಹೀರಿಕೊಳ್ಳಲು ನೆರವಾಗುತ್ತದೆ. ಮಧುಮೇಹಿಗಳ ದೇಹದಲ್ಲಿ ಜೀರ್ಣಾಂಗಗಳಿಂದ ಥಟ್ಟನೇ ಸಕ್ಕರೆ ರಕ್ತಕ್ಕೆ ಸೇರಬಾರದು. ಹಾಗಾಗಿ ಈ ಕಿಣ್ವದ ಪ್ರಭಾವ ಕಡಿಮೆ ಮಾಡುವ ಮೂಲಕ ರಕ್ತದಲಿ ಸಕ್ಕರೆ ನಿಧಾನವಾಗಿ ಸೇರುತ್ತದೆ. ಈ ಮೂಲಕ ಟೈಪ್ 2 ಮಧುಮೇಹಿಗಳ ಆರೋಗ್ಯ ಸುಧಾರಣೆಯಾಗುತ್ತದೆ ಹಾಗೂ ಇವರ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಉತ್ತಮಗೊಳಿಸುತ್ತದೆ.

ಮೆದುಳಿನ ಸವೆತ ಹಾಗೂ ಮರೆಗುಳಿತನದಿಂದ ರಕ್ಷಿಸುತ್ತದೆ

ಮೆದುಳಿನ ಸವೆತ ಹಾಗೂ ಮರೆಗುಳಿತನದಿಂದ ರಕ್ಷಿಸುತ್ತದೆ

ಮೆದುಳಿನ ಸವೆತದ ಕಾರಣ ಎದುರಾಗುವ ಆಲ್ಝೀಮರ್ಸ್ ಹಾಗೂ ಪಾರ್ಕಿನ್ಸಸ್ ಕಾಯಿಲೆಗಳು ದೇಹದಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ನಿಧಾನವಾಗಿ ಸಂಗ್ರಹಗೊಳ್ಳುವ ಮೂಲಕ ಕಾಣಿಸಿಕೊಳ್ಳುತ್ತದೆ. ವರ್ಷಗಟ್ಟಲೇ ಕಾಲ ಈ ಕಣಗಳು ರಾಸಾಯನಿಕವಾಗಿ ಮೆದುಳಿನ ಆರೋಗ್ಯಕರ ಅಂಗಾಂಶಗಳು ಅನುವಂಶಿಕವಾಗಿ ತಿರುಚಿಕೊಳ್ಳುವಂತೆ ಮಾಡುತ್ತದೆ. ಪರಿಣಾಮವಾಗಿ ಕ್ಯಾನ್ಸರ್ ಅಥವಾ ಮರೆಗುಳಿತನ (impaired cognitive function) ಮೊದಲಾದ ಮೆದುಳಿಗೆ ಸಂಬಂಧಿಸಿದ ತೊಂದರೆಗಳು ಎದುರಾಗುತ್ತವೆ. ದಾಲ್ಚಿನ್ನಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ಫ್ರೀ ರ್‍ಯಾಡಿಕಲ್ ಕಣಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಈ ತೊಂದರೆಗಳಿಂದ ರಕ್ಷಿಸುತ್ತದೆ.

ಕ್ಯಾನ್ಸರ್ ತಡೆಗಟ್ಟುತ್ತದೆ

ಕ್ಯಾನ್ಸರ್ ತಡೆಗಟ್ಟುತ್ತದೆ

ಇದರಲ್ಲಿರುವ ಪ್ರಬಲ ಸಂಯುಕ್ತಗಳನ್ನು ಒಟ್ಟಾರೆಯಾಗಿ cinnamaldehyde ಎಂದು ಕರೆಯಲಾಗುತ್ತದೆ. ಇವುಗಳು ಈಗತಾನೇ ಕ್ಯಾನ್ಸರ್‌ಗೆ ತುತ್ತಾಗಿರುವ ಜೀವಕೋಶಗಳನ್ನು ಕೊಂದು ಕೇವಲ ಆರೋಗ್ಯಕರ ಜೀವಕೋಗಳನ್ನು ಉಳಿಸಿಕೊಳ್ಳುವ ಗುಣ ಹೊಂದಿದೆ. ಇದರಿಂದ ಕೆಲವರು ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಸಂಶೋಧನೆಗಳಿಂದ ಕಂಡುಕೊಂಡ ಪ್ರಕಾರ ದಾಲ್ಚಿನ್ನಿಯ ನಿಯಮಿತ ಸೇವನೆಯಿಂದ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಪ್ರಬಲ ಬ್ಯಾಕ್ಟೀರಿಯಾ ನಿವಾರಕವಾಗಿದೆ

ಪ್ರಬಲ ಬ್ಯಾಕ್ಟೀರಿಯಾ ನಿವಾರಕವಾಗಿದೆ

ದಾಲ್ಚಿನ್ನಿಯಲ್ಲಿರುವ ಪೋಷಕಾಂಶಗಳು ವಿವಿಧ ರೀತಿಯ ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್ಸುಗಳು ಹಾಗೂ ಪರಾವಲಂಬಿ ಕ್ರಿಮಿಗಳ ವಿರುದ್ದ ಹೋರಾಡುವ ಗುಣ ಹೊಂದಿದೆ. ಇದೇ ಕಾರಣಕ್ಕೆ ದಾಲ್ಚಿನ್ನಿಯಿಂದ ಹಿಂಡಿ ತೆಗೆದಿರುವ ಅವಶ್ಯಕ ತೈಲವನ್ನು ವಿವಿಧ ಮುಖಲೇಪ ಹಾಗೂ ಮಾರ್ಜಕಗಳಲ್ಲಿ ಬಳಸಲಾಗುತ್ತದೆ ಹಾಗೂ ಮೊಡವೆಗಳ ಚಿಕಿತ್ಸೆ ಹಾಗೂ ಚರ್ಮವ್ಯಾಧಿಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

 ಬಾಯಿಯ ದುರ್ವಾಸನೆಯನ್ನು ಇಲ್ಲವಾಗಿಸುತ್ತದೆ

ಬಾಯಿಯ ದುರ್ವಾಸನೆಯನ್ನು ಇಲ್ಲವಾಗಿಸುತ್ತದೆ

ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಬಾಯಿಯ ದುರ್ವಾಸನೆಯನ್ನು ತೊಲಗಿಸುತ್ತದೆ. ಹಾಗೂ ಈ ಮೂಲಕ ಒಸಡಿನ ತೊಂದರೆ ಹಾಗೂ ಹಲ್ಲುಗಳಲ್ಲಿ ಕುಳಿಗಳಾಗುವುದರಿಂದ ರಕ್ಷಿಸುತ್ತದೆ. ಈ ಕುಳಿಗಳಲ್ಲಿ ಸಿಲುಕಿದ್ದ ಆಹಾರಕಣಗಳನ್ನು ಈ ಬ್ಯಾಕ್ಟೀರಿಯಾಗಳು ಕೊಳೆಸುವ ಕಾರಣದಿಂದ ಬಾಯಿಯಲ್ಲಿ ದುರ್ವಾಸನೆ ಮೂಡುತ್ತದೆ. ಅಲ್ಲದೇ ಬಾಯಿಯಲ್ಲಿ ಪುದಿನಾದಂತೆಯೇ ತಣ್ಣನೆಯ ಅನುಭವ ಮೂಡಿಸುತ್ತದೆ. ಈ ಪ್ರಯೋಜನವನ್ನು ಕಂಡುಕೊಂಡ ಹಿರಿಯರು ಊಟದ ಬಳಿಕ ಒಂದು

ಚೂರು ದಾಲ್ಚಿನ್ನಿಯನ್ನು ಅಗಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಶಿಲೀಂಧ್ರದ ಸೋಂಕಿನಿಂದ ರಕ್ಷಿಸುತ್ತದೆ

ಶಿಲೀಂಧ್ರದ ಸೋಂಕಿನಿಂದ ರಕ್ಷಿಸುತ್ತದೆ

ಶಿಲೀಂಧ್ರವರ್ಗದಲ್ಲಿ ಒಂದಾದ ಕ್ಯಾಂಡೈಡಾ ಎಂಬ ಶಿಲೀಂಧ್ರದ ಬಗೆಯಾಗಿದ್ದು ಇವು ಭಾರಿ ಸಂಖ್ಯೆಯಲ್ಲಿ ದೇಹದ ಯಾವುದೇ ಭಾಗವನ್ನು ಆವರಿಸಿ ಸೋಂಕು ಹರಡುತ್ತವೆ. ವಿಶೇಷವಾಗಿ ರೋಗ ನಿರೋಧಕ ಶಕ್ತಿ ಕುಂದಿದಾಗ ಅಥವಾ ಹೆಚ್ ಐ ವಿ ರೋಗಿಗಳಲ್ಲಿ ಅಥವಾ ಅಲರ್ಜಿ ಕಡಿಮೆ ಮಾಡಲು ಸ್ಟೆರಾಯ್ಡುಗಳ ಚಿಕಿತ್ಸೆ ಪಡೆಯುತ್ತಿದ್ದಾಗ ಈ ಸೋಂಕು (Candidal infection) ಹೆಚ್ಚಾಗಿ ಹರಡುತ್ತದೆ. ಇದನ್ನು ತಡೆಗಟ್ಟಲು ನಿತ್ಯವೂ ಕೊಂಚ ದಾಲ್ಚಿನ್ನಿ ಪುಡಿ ಸೇವಿಸುತ್ತಾ ಬಂದರೆ ಈ ಸೋಂಕು ಹರಡುವ ಸಾಧ್ಯತೆ

ಅಪಾರವಾಗಿ ಕಡಿಮೆಯಾಗುತ್ತದೆ.

 ಚರ್ಮದ ಆರೈಕೆ ಮಾಡುತ್ತದೆ

ಚರ್ಮದ ಆರೈಕೆ ಮಾಡುತ್ತದೆ

ಇದರ ಸೇವನೆಯಿಂದ ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣಗಳ ಉತ್ಪತ್ತಿ ಹೆಚ್ಚಾಗುತ್ತದೆ ಹಾಗೂ ಪರಿಣಾಮವಾಗಿ ಚರ್ಮದ ಕಾಂತಿ, ಮೃದುತ್ವ ಹಾಗೂ ಸೆಳೆತ

ಉತ್ತಮಗೊಳುತ್ತದೆ. ಅಲ್ಲದೇ ರಕ್ತಸಂಚಾರವನ್ನು ಚರ್ಮದ ಹೊರಪದರಕ್ಕೆ ಸಾಕಷ್ಟು ಹತ್ತಿರಾಗಿಸುವ ಮೂಲಕ ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ. ಈ ಮಾಹಿತಿಗಳು ನಿಮಗೆ ಉಪಯುಕ್ತವೆನಿಸಿದರೆ ಇದು ಇತರರಿಗೂ ಉಪಯುಕ್ತವಾಗಬಹುದಲ್ಲವೇ? ಆದ್ದರಿಂದ ಈ ಮಾಹಿತಿಯನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳುವ ಮೂಲಕ ಅವರೂ ಪ್ರಯೋಜನ ಪಡೆದುಕೊಳ್ಳುವಂತಾಗಲಿ.

English summary

Benefits of Cinnamon and Honey That Will Blow Your Mind!

Cinnamon always brings to my mind that idiotic YouTube challenge where people ingested one spoonful of cinnamon and then exploded into violent coughs and tears. But if you think cinnamon's fame is a byproduct of the splash these incidents made on social media, then you would be wrong. Because in reality, cinnamon has been around for thousands of years in both Ancient Indian and Chinese medicine. And honey has been its companion for centuries when it comes to consuming it!
X
Desktop Bottom Promotion