ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜಿದರೆ, ಹಲ್ಲುಗಳ ಸಮಸ್ಯೆಯೇ ಕಾಡದು!

By: Arshad
Subscribe to Boldsky

ಇಂದು ಜನಜೀವನದಲ್ಲಿ ಹಾಸುಹೊಕ್ಕಿರುವ ಟೂಥ್ ಬ್ರಷ್‌ಗಳು ಬರುವ ಮುನ್ನ ಭಾರತೀಯರೆಲ್ಲಾ ಬೇವಿನ ಕಡ್ಡಿಯಿಂದಲೇ ಹಲ್ಲುಜ್ಜಿಕೊಳ್ಳುತ್ತಿದ್ದರು. ಬೇವು ಎಂದರೆ ಕಹಿ, ಇದನ್ನು ಹೇಗಪ್ಪಾ ಸಹಿಸಿಕೊಳ್ಳುತ್ತಿದ್ದರು ಎಂದು ಯೋಚಿಸುವವರಿಗೆ ಅಚ್ಚರಿ ಕಾದಿದೆ. ಏಕೆಂದರೆ ಈ ಕಹಿಯಲ್ಲಿಯೂ ಅದ್ಭುತವಾದ ಆರೋಗ್ಯಕರ ಗುಣಗಳಿವೆ. ಈ ಗುಣಗಳನ್ನು ಅನುಭವಿಸಿದ ಹಿರಿಯರು ಅಲ್ಲಲ್ಲಿ ಇಂದಿಗೂ ಬೇವಿನ ಕಡ್ಡಿಯಲ್ಲಿಯೇ ಹಲ್ಲುಜ್ಜುತ್ತಿದ್ದಾರೆ. 

ಆಶ್ಚರ್ಯ:ವೈದ್ಯ ಲೋಕವನ್ನೇ ತಲ್ಲಣಗೊಳಿಸಿದ ಬೇವಿನ ಬೀಜ!

ಬಾಯಿಯ ಸ್ವಚ್ಛತೆಗೆ ಬೇವಿನ ಕಡ್ಡಿಯನ್ನು ಬಳಸುತ್ತಾ ಬಂದಿರುವವರ ಬಾಯಿಯ ಆರೋಗ್ಯ ಇತರರಿಗಿಂತಲೂ ಉತ್ತಮವಾಗಿರುವುದನ್ನು ಕೆಲವು ಸಂಶೋಧನೆಗಳೇ ದೃಢಪಡಿಸಿವೆ. ಬೇವಿನ ಮರದಲ್ಲಿ ಸುಮಾರು ನೂರಾಮೂವತ್ತಕ್ಕೂ ಹೆಚ್ಚು ಉಪಯುಕ್ತ ಪೋಷಕಾಂಶಗಳಿವೆ. ಇದೇ ಕಾರಣಕ್ಕೆ ಬೇವಿನ ಮರದ ಪ್ರತಿಯೊಂದೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. 

ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ

ಬೇವಿನ ಎಲೆ, ತೊಗಟೆ, ಬೇರು, ಹೂವು, ಹಣ್ಣು, ಕಡ್ಡಿ ಎಲ್ಲವನ್ನೂ ಇಂದಿಗೂ ಹಳ್ಳಿಗಳಲ್ಲಿ ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಬೇವಿನಲ್ಲಿ ಕ್ಯಾನ್ಸರ್ ನಿವಾರಕ, ಬ್ಯಾಕ್ಟೀರಿಯಾ ನಿವಾರಕ, ವೈರಸ್ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟು ಗುಣಗಳಿವೆ. ಬೇವಿನ ಕಡ್ಡಿಯ ಉಪಯೋಗದಿಂದ ಬಾಯಿಯ ಆರೋಗ್ಯಕ್ಕೆ ಲಭ್ಯವಾಗುವ ಪ್ರಯೋಜನಗಳನ್ನು ಇಂದಿನ ಲೇಖನದಲ್ಲಿ ಸಂಗ್ರಹಿಸಲಾಗಿದ್ದು ನಿಮ್ಮ ಅಚ್ಚರಿಯನ್ನು ಇನ್ನಷ್ಟು ಹೆಚ್ಚಿಸಲಿದೆ....

ಇದನ್ನು ಬಳಸುವುದು ಹೇಗೆ?

ಇದನ್ನು ಬಳಸುವುದು ಹೇಗೆ?

ಬೇವಿನ ಕಡ್ಡಿಯಲ್ಲಿರುವ ರಸದಲ್ಲಿಯೇ ಇದರ ಗುಣಗಳಿವೆ. ಇದನ್ನು ಪಡೆಯಲು ಬೇವಿನ ಕಡ್ಡಿಯ ತುದಿಯನ್ನು ಜಗಿದು ನಾರನ್ನೆಲ್ಲಾ ಬಿಡಿ ಬಿಡಿಯಾಗಿಸಬೇಕು. ಈ ಕಾರ್ಯದಲ್ಲಿ ನಾರಿನ ಬಿಡಿಯಾದ ಎಳೆ ಟೂಥ್ ಬ್ರಷ್ ನ ಕೂದಲುಗಳಂತೆ ಕಾರ್ಯನಿರ್ವಹಿಸುತ್ತದೆ ಹಾಗೂ ಹಲ್ಲುಗಳ ನಡುವೆ ಸಿಲುಕಿದ್ದ ಆಹಾರಕಣಗಳನ್ನು ಹೊರಗೆಳೆಯುತ್ತದೆ. ಇದರಿಂದ ಇಳಿಯುವ ರಸ ಕೊಳೆಯನ್ನು ಸಡಿಲಿಸಿ ನಿವಾರಿಸಲು ಹಾಗೂ ಒಸಡುಗಳನ್ನು ದೃಢಗೊಳಿಸಲು ನೆರವಾಗುತ್ತದೆ.

ಹಲ್ಲುಗಳನ್ನೂ ಬಿಳಿಯಾಗಿಸುತ್ತದೆ.

ಹಲ್ಲುಗಳನ್ನೂ ಬಿಳಿಯಾಗಿಸುತ್ತದೆ.

ನಮ್ಮ ಚರ್ಮದಂತೆಯೇ ಹಲ್ಲುಗಳೂ ಸಹಜವರ್ಣವನ್ನು ಹೊಂದಿವೆ. ಕೆಲವರ ಹಲ್ಲು ನೈಸರ್ಗಿಕವಾಗಿ ಬಿಳಿಯಾಗಿದ್ದರೆ ಕೆಲವರದ್ದು ಹಳದಿಯಾಗಿರುತ್ತವೆ. ಹಳದಿಬಣ್ಣವನ್ನು ಲೋಪವೆಂಬಂತೆ ಬಿಂಬಿಸಿ ಬಿಳಿಯಾಗಿಸುವ ಕಳ್ಳಪ್ರಸಾದನಗಳು ಹಲ್ಲುಗಳನ್ನು ಸವೆಸಿ ಆರೋಗ್ಯವನ್ನೇ ಕಸಿಯುತ್ತವೆ. ಆದರೆ ಬೇವು ಹಲ್ಲಿನ ಸಹಜವರ್ಣವನ್ನು ಉಳಿಸಿ ಹಲ್ಲುಗಳ ಆರೋಗ್ಯವನ್ನು ಜೀವಮಾನವಿಡೀ ಕಾಪಾಡುತ್ತದೆ.

ಬೇವಿನ ಕಡ್ಡಿ ಎಷ್ಟು ದೊಡ್ಡದಿರಬೇಕು?

ಬೇವಿನ ಕಡ್ಡಿ ಎಷ್ಟು ದೊಡ್ಡದಿರಬೇಕು?

ಸಾಮಾನ್ಯವಾಗಿ ಗೆಲ್ಲಿನ ತುದಿಯ, ಕಿರುಬೆರಳಿನಷ್ಟು ದಪ್ಪದ ಸುಮಾರು ಹದಿನೈದು ಸೆಂ.ಮೀ ಉದ್ದದ ಕಡ್ಡಿ ಸಾಕಾಗುತ್ತದೆ. ಇದರ ಒಂದು ತುದಿಯ ತೊಗಡೆಯನ್ನು ಸುಮಾರು ಮೂರು ಸೆಂ.ಮೀ ನಷ್ಟು ಕತ್ತರಿಸಿ ನಿವಾರಿಸಿ ಉಳಿದ ಒಳಭಾಗದ ತಿರುಳನ್ನು ಹಲ್ಲುಗಳಿಂದ ಜಗಿದು ಬಿಡಿಬಿಡಿಯಾಗಿಸಿ ಬ್ರಶ್ ನಂತೆ ಮಾಡಿಕೊಳ್ಳಬೇಕು. ಈ ನಾರುಗಳಿಂದ ಎಲ್ಲಾ ಹಲ್ಲುಗಳ ನಡುವೆ ಓಡಾಡಿಸಿ ಸ್ವಚ್ಛಗೊಳಿಸಬೇಕು.

ಜಗಿಯುವುದೇಕೆ ಅಗತ್ಯ?

ಜಗಿಯುವುದೇಕೆ ಅಗತ್ಯ?

ಕಡ್ಡಿಯನ್ನು ಜಗಿಯುವುದರಲ್ಲಿಯೇ ಇದರ ಮಹತ್ವ ಅಡಗಿದೆ. ಬೇವಿನ ಕಡ್ಡಿಯನ್ನು ಜಗಿದಾಗ ಒಸರುವ ರಸ ಬಾಯಿಯಲ್ಲಿರುವ ಲಾಲಾರಸದೊಂದಿಗೆ ಮಿಳಿತಗೊಂಡು ಅದ್ಭುತವಾದ ಬ್ಯಾಕ್ಟೀರಿಯಾ ನಿರೋಧಕ ದ್ರವವಾಗುತ್ತದೆ. ಇವು ಬ್ಯಾಕ್ಟೀರಿಯಾಗಳನ್ನು ತಕ್ಷಣವೇ ಕೊಂದು ಬಾಯಿಯ ಸ್ವಚ್ಚತೆ ಕಾಪಾಡುತ್ತವೆ. ಅಲ್ಲದೇ ಈ ದ್ರವಕ್ಕೆ ಕೆನ್ನೆಯ ಒಳಭಾಗ, ಒಸಡು, ನಾಲಿಗೆ ಮೊದಲಾದ ಕಡೆಗಳಲ್ಲಿ ಉರಿಯೂತದಿಂದ ಎದುರಾಗಿದ್ದ ಗುಳ್ಳೆ, ಕಡಿತ ಮೊದಲಾದವುಗಳನ್ನು ಶಮನಗೊಳಿಸುವ ಶಕ್ತಿಯೂ ಇದೆ. ಆದರೆ ಈ ದ್ರವವನ್ನು ನುಂಗದೇ ಉಗಿದುಬಿಡಬೇಕು. ಬಳಿಕ ಕೇವಲ ತಣ್ಣೀರಿನಲ್ಲಿ ಮುಕ್ಕಳಿಸಿಕೊಂಡರೆ ಸಾಕು.

ಆದರೆ ಇದರ ಬಳಕೆಯಲ್ಲಿ ಎಚ್ಚರ ಅಗತ್ಯ...

ಆದರೆ ಇದರ ಬಳಕೆಯಲ್ಲಿ ಎಚ್ಚರ ಅಗತ್ಯ...

ಇದರ ನಾರುಗಳು ಕೊಂಚ ದೃಢವಾಗಿರುವ ಕಾರಣ ಹಲ್ಲುಗಳ ಮೇಲೆ ದುಷ್ಪರಿಣಾಮ ಬೀರದೇ ಇದ್ದರೂ ಮೃದುವಾಗಿರುವ ಒಸಡುಗಳನ್ನು ಘಾಸಿಗೊಳಿಸಬಹುದು. ಆದ್ದರಿಂದ ಒಸಡುಗಳ ಮೇಲೆ ಈ ನಾರುಗಳ ಒತ್ತಡ ಬೀಳದಂತೆ ಎಚ್ಚರ ವಹಿಸಬೇಕು. ಹಲ್ಲುಗಳ ನಡುವೆ ಕೆಲವು ನಾರುಗಳು ತುಂಡಾಗಿ ಸಿಲುಕಿಕೊಳ್ಳಬಹುದು. ಇವುಗಳನ್ನು ಮುಕ್ಕಳಿಸಿ ನಿವಾರಿಸಬೇಕು.

ನಾಲಿಗೆಯ ಸ್ವಚ್ಛತೆ

ನಾಲಿಗೆಯ ಸ್ವಚ್ಛತೆ

ಒಂದು ಬೇವಿನ ಕಡ್ಡಿಯನ್ನು ಒಂದು ಬಾರಿ ಮಾತ್ರ ಬಳಸಬಹುದು. ಏಕೆಂದರೆ ಒಂದು ಬಾರಿಯ ಉಪಯೋಗದಲ್ಲಿಯೇ ಇದರ ರಸವೆಲ್ಲಾ ಇಳಿದಿರುತ್ತದೆ. ಮುಂದಿನ ಬಾರಿ ಹೊಸ ಕಡ್ಡಿಯನ್ನೇ ಉಪಯೋಗಿಸಬೇಕು. ಆದ್ದರಿಂದ ಉಪಯೋಗಿಸಿದ ಕಡ್ಡಿಯನ್ನು ಅಡ್ಡಲಾಗಿ ಸೀಳಿ ಕತ್ತರಿಸಿದ ಅಂಚನ್ನು ನಾಲಿಗೆಯ ಮೇಲೆ ಆಡಿಸಿ ಸ್ವಚ್ಚಗೊಳಿಸಬಹುದು. (ಟಂಗ್ ಕ್ಲೀನರ್ ನಂತೆ)

English summary

Benefits Of Brushing With A Neem Stick

Some studies even claim that people who rely on neem can reduce the risk of certain dental problems. There are more than 130 active compounds present in the neem tree. That is why almost all parts of the neem tree are said to be useful in some or the other way.
Story first published: Friday, June 30, 2017, 7:01 [IST]
Subscribe Newsletter