For Quick Alerts
ALLOW NOTIFICATIONS  
For Daily Alerts

  ಕಂಪ್ಯೂಟರ್ ಮೌಸ್ ಬಳಕೆ: ತಪ್ಪನ್ನು ತಿದ್ದಿ, ಆರೋಗ್ಯ ಕಾಪಾಡಿಕೊಳ್ಳಿ!

  By Manu
  |

  ಇಂದು ಕಂಪ್ಯೂಟರ್ ಇಲ್ಲದ ಕ್ಷೇತ್ರವೇ ಇಲ್ಲವಾಗಿದೆ. ಎಲ್ಲೆಲ್ಲಿ ಕಂಪ್ಯೂಟರ್ ಇದೆಯೋ ಅಲ್ಲೆಲ್ಲಾ ಮಾನಿಟರ್, ಕೀಬೋರ್ಡ್, ಮೌಸ್ ಗಳು ಅನಿವಾರ್ಯ. ಇವುಗಳ ಬಳಕೆ ಹೆಚ್ಚಿದಂತೆಯೇ ಇವುಗಳನ್ನು ಸರಿಯಾಗಿ ಬಳಸದೇ ನಮ್ಮ ದೇಹ ಹಲವು ತೊಂದರೆಗಳಿಗೂ ಎದುರಾಗುತ್ತದೆ.   

  ಉದಾಹರಣೆಗೆ ಕಂಪ್ಯೂಟರ್ ಪರದೆ ಸೂಕ್ತ ಸ್ಥಳದಲ್ಲಿ ಇಲ್ಲದೇ ಮೇಲೆ ಕೆಳಗೆ ಅಥವಾ ಅಗತ್ಯಕ್ಕಿಂತ ಹೆಚ್ಚು ದೂರದಲ್ಲಿದ್ದ ಕಾರಣ ಎದುರಾಗುವ ಬೆನ್ನು ನೋವು, ಕೀಬೋರ್ಡ್ ಸರಿಯಾದ ಜಾಗದಲ್ಲಿಲ್ಲದೇ ಇರುವ ಕಾರಣ ಎದುರಾಗುವ ಮೊಣಕೈ ನೋವು ಮತ್ತು ಮೌಸ್ ಬಳಕೆಯನ್ನು ಎರಾಬಿರ್ರಿಯಾಗಿ ಮಾಡುವ ಕಾರಣ ಎದುರಾಗುವ ಮಣಿಕಟ್ಟಿನ ನೋವು.    ನಿರಂತರ ಕಂಪ್ಯೂಟರ್ ಬಳಸುವುವಾಗ ಕಣ್ಣುಗಳ ರಕ್ಷಣೆಗೆ 10 ಸಲಹೆಗಳು

  ಮಣಿಕಟ್ಟು ನಮ್ಮ ದೇಹದ ಅತಿ ಸೂಕ್ಷ್ಮ ಸಂಧುಗಳಲ್ಲಿ ಒಂದಾಗಿದೆ. ನಮ್ಮ ಬೆರಳುಗಳಿಗೆ ಹಾದು ಹೋಗಿರುವ ನರಗಳೆಲ್ಲಾ ಮಣಿಕಟ್ಟಿನಲ್ಲಿ ಅತಿ ಕಡಿಮೆ ಸ್ಥಳದಲ್ಲಿ ಸಾಂದ್ರೀಕೃತಗೊಂಡಿರುವ ಕಾರಣ ಮಣಿಕಟ್ಟಿನ ಮೇಲಿನ ಭಾರ ಅಪಾಯಕಾರಿಯಾಗಿದೆ. 

  ಮೌಸ್ ಹಿಡಿಯಲು ಒಂದು ಸರಿಯಾದ ವಿಧಾನವಿದೆ. ಅದೆಂದರೆ ಮಣಿಕಟ್ಟಿನ ಕೆಳಗೆ ಚಿಕ್ಕ ಆಧಾರವೊಂದನ್ನು ಇರಿಸಿ ಹಸ್ತ ಮಡಚದೇ ಬೆರಳುಗಳನ್ನೂ ಮಡಚದೇ ಸುಲಭವಾಗಿ ಹಿಡಿಯುವುದು. ಹೀಗೆ ಹಿಡಿಯಬೇಕೆಂತಲೇ ಇದನ್ನು ಈ ರೀತಿಯಾಗಿ ವಿನ್ಯಾಸಮಾಡಲಾಗಿದ್ದು ಇದರ ರೂಪ ನಮ್ಮ ಗಣಪನ ವಾಹನವನ್ನೇ ಹೋಲುವ ಕಾರಣ ಇದಕ್ಕೆ ಮೌಸ್ ಎಂದೇ ಹೆಸರಿಡಲಾಗಿದೆ.  ಕಂಪ್ಯೂಟರ್ ನಿಂದ 5 ಪ್ರಮುಖ ಆರೋಗ್ಯ ಸಮಸ್ಯೆ

  ಅಂದರೆ ಯಾವುದೇ ಕಾರಣಕ್ಕೂ ಮಣಿಕಟ್ಟಿನ ಮೇಲೆ ಭಾರ ಬೀಳಕೂಡದು. ಒಂದು ವೇಳೆ ನೀವು ಇಡಿಯ ದಿನ ಮೌಸ್ ಬಳಸುವ ಉದ್ಯೋಗದಲ್ಲಿರುವಿರಾದರೆ ಕೆಳಗೆ ನೀಡಿರುವ ಅಮೂಲ್ಯ ಮಾಹಿತಿಗಳು ನೀವು ಅರಿಯದೇ ಮಾಡುತ್ತಿರುವ ತಪ್ಪನ್ನು ತಿದ್ದಿ ಮುಂದೆಂದೋ ಆಗಬಹುದಾದ ದೊಡ್ಡ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.....  

  ಮಣಿಕಟ್ಟಿನ ಕೆಳಗಿನ ಗಡಸು

  ಮಣಿಕಟ್ಟಿನ ಕೆಳಗಿನ ಗಡಸು

  ಸತತವಾಗಿ ಮೌಸ್ ಬಳಸುವವರ ಮಣಿಕಟ್ಟಿನ ಕೊಂಚ ಮೇಲೆ ಅಂದರೆ ಕಿರುಬೆರಳಿನ ಕೆಳಗೆ ಚರ್ಮ ಗಡಸಾಗಿರುತ್ತದೆ. ಇದು ಹಸ್ತವನ್ನು ಮೌಸ್ ಪ್ಯಾಡ್ ಮೇಲೆ ಸತತವಾಗಿ ಮುಂದೆ ಹಿಂದೆ ಮೌಸ್ ಓಡಿಸುವ ಮೂಲಕ ಈ ಭಾಗವೂ ಉಜ್ಜಿ ಆಗಿರುವ ಗಡಸುತನ. ಕೆಲವರಲ್ಲಿ ಇದು ಕಲೆಯಂತೆ ಕಪ್ಪಗೂ ಆಗಿರುತ್ತದೆ.

  ಮಣಿಕಟ್ಟಿನ ಕೆಳಗಿನ ಗಡಸು

  ಮಣಿಕಟ್ಟಿನ ಕೆಳಗಿನ ಗಡಸು

  ಇದನ್ನು ತಡೆಯಲು ಸರಿಯಾದ ಉಪಾಯವೆಂದರೆ ಮೌಸ್ ಪ್ಯಾಡ್ ಮತ್ತು ರಿಸ್ಟ್ ಪ್ಯಾಡ್ ಎಂಬ ಮಣಿಕಟ್ಟಿನ ದಿಂಬು ಬಳಸುವುದು (ಇವೆರಡೂ ಒಂದೇ ಫಲದಲ್ಲಿರುವ ಮೌಸ್ ಪ್ಯಾಡ್ ಇನ್ನೂ ಉತ್ತಮ) ಕಾಲಕಾಲಕ್ಕೆ ಎಡಗೈಗೆ ಮೌಸ್ ಬಳಸುವುದೂ ಇನ್ನೊಂದು ಕ್ರಮ. ಆದರೆ ಇದರಿಂದ ನಮ್ಮ ಸಾಮಾನ್ಯ ವೇಗ ಕಡಿಮೆಯಾಗುವ ಕಾರಣ ಧಾವಂತವಿಲ್ಲದ ಕೆಲಸದ ಸಮಯದಲ್ಲಿ ಎಡಗೈ (ಎಡಗೈ ಅಭ್ಯಾಸವಿರುವವರಲ್ಲಿ ಬಲಗೈ) ಬಳಸಬಹುದು.

  ಮೊಣಕೈಯಲ್ಲಿ ನೋವು

  ಮೊಣಕೈಯಲ್ಲಿ ನೋವು

  ಕಂಪ್ಯೂಟರ್ ಮುಂದೆ ಕುಳಿತಾಗ ನಮ್ಮ ಮೊಣಕೈಗಳು ಕುರ್ಚಿಯ ಕೈಗಳ ಮೇಲೆ ಯಾವುದೇ ಒತ್ತಡವಿಲ್ಲದೇ ಕುಳಿತುಕೊಳ್ಳುವಂತಾಗಬೇಕು. ಇದೇ ಕಾರಣಕ್ಕೆ ಇಂದು ಲಭ್ಯವಿರುವ ಕಂಪ್ಯೂಟರ್ ಮೇಜಿನ ಜೊತೆ ಕುಳಿತುಕೊಳ್ಳುವ ಕುರ್ಚಿಯ ಈ ಕೈಗಳನ್ನೂ ಮೇಲೆ ಕೆಳಗೆ ಮಾಡುವಂತೆ ನಿರ್ಮಿಸಿರಲಾಗಿರುತ್ತದೆ. ಒಂದು ವೇಳೆ ಕೈಗಳಿಗೆ ಯಾವುದೇ ಆಧಾರವಿಲ್ಲದೇ ಮೌಸ್ ನಡೆಸುತ್ತಿದ್ದರೆ ಕೊಂಚ ಕಾಲಕ್ಕೇ ಮೊಣಕೈಯಲ್ಲಿ ನೋವು ಬರುತ್ತದೆ.

  ಮೊಣಕೈಯಲ್ಲಿ ನೋವು

  ಮೊಣಕೈಯಲ್ಲಿ ನೋವು

  ಇದನ್ನು ತಡೆಯಲು ನಿಮ್ಮ ಕುರ್ಚಿಯ ಕೈಗಳ ಎತ್ತರಕ್ಕೆ ಸರಿಯಾಗಿ ಮೌಸ್ ಮತ್ತು ಕೀಬೋರ್ಡ್ ಗಳನ್ನು ಇರಿಸುವುದು. ಕೊಂಚ ಕೆಳಗಿದ್ದರೂ ಪರವಾಗಿಲ್ಲ, ಆದರೆ ಎತ್ತರದಲ್ಲಿರಕೂಡದು. ಕೀಬೋರ್ಟ್ ಸುಮಾರು ಮೂವತ್ತು ಡಿಗ್ರಿ ಕೋನದಲ್ಲಿ ಓರೆಯಾಗಿದ್ದು ಮೊಣಕೈ ಕುರ್ಚಿಯ ಕೈಮೇಲೆ ಇದ್ದಾಗ ಇದನ್ನೇ ಕೇಂದ್ರವಾಗಿಸಿ ಹಸ್ತವನ್ನು ಬಲಭಾಗದತ್ತ ತಿರುಗಿಸಿದರೆ ಮೌಸ್ ಸುಲಭವಾಗಿ ಸಿಗುವಂತಿರಬೇಕು.

  ಕುತ್ತಿಗೆ ಮತ್ತು ಭುಜದಲ್ಲಿ ನೋವು

  ಕುತ್ತಿಗೆ ಮತ್ತು ಭುಜದಲ್ಲಿ ನೋವು

  ಕಂಪ್ಯೂಟರ್ ಮುಂದೆ ಇಡಿಯ ದಿನ ಕುಳಿತು ಹೊರಬರುವವರನ್ನು ಕೊಂಚ ಗಮನಿಸಿದರೆ ಇವರೆಲ್ಲರಿಗೂ ಕೊಂಚವಾದರೂ ಬೆನ್ನು, ಭುಜನೋವುಗಳು ಕಾಡುತ್ತಿವೆ ಎಂದು ಗೊತ್ತಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಮಾನಿಟರ್ ನೋಡುವ ಭರದಲ್ಲಿ ಕೊಂಚವೇ ಬಗ್ಗುತ್ತೇವೆ. ಇದು ನಮ್ಮ ಭುಜ, ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚಿನ ಸೆಳೆತ ನೀಡುತ್ತದೆ.

  ಕುತ್ತಿಗೆ ಮತ್ತು ಭುಜದಲ್ಲಿ ನೋವು

  ಕುತ್ತಿಗೆ ಮತ್ತು ಭುಜದಲ್ಲಿ ನೋವು

  ಸತತವಾಗಿ ಹೀಗೇ ಮಾಡುತ್ತಿರುವ ಕಾರಣ ದಿನದ ಕೊನೆಯಲ್ಲಿ ಈ ನೋವೆಲ್ಲಾ ಒಂದುಗೂಡಿ ದೊಡ್ಡನೋವಾಗಿ ಹೊರಹೊಮ್ಮುತ್ತದೆ. ಇದಕ್ಕೆ ಪರಿಹಾರವೆಂದರೆ ಈ ಸೆಳೆತಕ್ಕೆ ವಿರುದ್ದವಾದ ಕೆಲವು ವ್ಯಾಯಾಮಗಳನ್ನು ಆಗಾಗ ಮಾಡುತ್ತಿರುವುದು. ಭುಜಗಳನ್ನು ಹಿಂದೆ ವಾಲಿಸುವುದು. ಬಲಗೈ ಬಲಹಣೆಗೆ ಒತ್ತಿ ಕುತ್ತಿಗೆಯನ್ನು ಬಲಭಾಗಕ್ಕೆ ಒತ್ತುವುದು, ಎರಡೂ ಕೈಗಳನ್ನು ಕೈಗಳ ಹಿಂದೆ ಕಟ್ಟಿ ತಲೆಯನ್ನು ಹಿಂದಕ್ಕೆ ವಾಲಿಸಲು ಒತ್ತಡ ನೀಡುವುದು ಮೊದಲಾದ ವ್ಯಾಯಾಮಗಳನ್ನು ಮಾಡುತ್ತಿರಬೇಕು. ಒಂದು ವೇಳೆ ಕುತ್ತಿಗೆಗೆ ಚಳಕು (ತೀಕ್ಷ್ಣ ನೋವು) ಬಂದಿದ್ದರೆ ಮಾತ್ರ ಎಂದಿಗೂ ಸೆಳೆತದ ವ್ಯಾಯಾಮ ಮಾಡಬಾರದು. ವೈದ್ಯರ ಬಳಿ ತೆರಳಿ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು.

  ಕೈಗಳಲ್ಲಿ ನೋವು

  ಕೈಗಳಲ್ಲಿ ನೋವು

  ಇಡಿಯ ದಿನ ಮೌಸ್ ಮತ್ತು ಕೀಪ್ಯಾಡ್ ಗಳಲ್ಲಿ ಕೆಲಸ ಮಾಡುವವರಿಗೆ ಕೈಗಳಲ್ಲಿ ನೋವು ಸಾಮಾನ್ಯವಾಗಿರುತ್ತದೆ. ಏಕೆಂದರೆ ಟೈಪಿಂಗ್ ಹಾಗೂ ಮೌಸ್ ಅನ್ನು ಕ್ಲಿಕ್ ಮಾಡಲು ನಮ್ಮ ಕೆಲವೇ ಸ್ನಾಯುಗಳ ಬಳಕೆಯಾಗುತ್ತಿದ್ದರೂ ಇದೇ ಸ್ನಾಯುಗಳ ಮೇಲೆ ಸತತವಾಗಿ ಇಡಿಯ ದಿನ ಒತ್ತಡ ಬೀಳುವ ಕಾರಣ ಈ ಸ್ನಾಯುಗಳು ದಣಿಯುತ್ತವೆ. ಆದರೆ ಸರಿಯಾದ ಭಂಗಿಯಲ್ಲಿ ಕುಳಿತು ಕನಿಷ್ಟ ಒತ್ತಡ ನೀಡುವ ಮೂಲಕ ಈ ನೋವನ್ನೂ ಕನಿಷ್ಟಗೊಳಿಸಬಹುದು. ಇದಕ್ಕೆ ಕೀಬೋರ್ಡ್ ಮತ್ತು ನಮ್ಮ ಮೊಣಕೈ ಸರಿಯಾದ ಎತ್ತರದಲ್ಲಿರಬೇಕು.

  ಕೈಗಳಲ್ಲಿ ನೋವು

  ಕೈಗಳಲ್ಲಿ ನೋವು

  ಅಲ್ಲದೇ ಮಣಿಕಟ್ಟಿನ ಬಳಿ ಮೇಲಕ್ಕೂ ಅಥವಾ ಕೆಳಕ್ಕೂ ಕೊಂಚವೂ ಮಡಚಿರಬಾರದು. ಮಾನಿಟರ್ ನ ಕೇಂದ್ರ ನಮ್ಮ ಕಣ್ಣುಗಳ ನೇರದಲ್ಲಿರಬೇಕು. ಮಾನಿಟರ್ ಕೊಂಚವೇ ಹಿಂದೆ ವಾಲಿಕೊಂಡಿರಬೇಕು. ಕುರ್ಚಿಯ ಬೆನ್ನು ತೀರಾ ಹಿಂದೆ ಬಾಗಿರಬಾರದು, ತೀರಾ ನೇರವಾಗಿಯೂ ಇರಬಾರದು. ಕುಳಿತುಕೊಳ್ಳುವಾಗ ಬೆನ್ನಿನ ಕೆಳಭಾಗ ಆದಷ್ಟು ಕುರ್ಚಿಯ ಹಿಂದೆ ತಾಕುವಂತೆ ಕುಳಿತುಕೊಳ್ಳಬೇಕು. ಈ ಎಲ್ಲಾ ಕ್ರಮಗಳಿಂದ ಇಡಿಯ ದಿನದ ಕಂಪ್ಯೂಟರ್ ಬಳಕೆಯಿಂದಲೂ ಲವಲವಿಕೆಯಿಂದಿರಬಹುದು.

   

  English summary

  ways to prevent side effects of using a mouse

  Anyone with a desk job who doesn’t get enough physical movement is at a high risk of back pain or arm pain. Moreover, using the mouse day in and out exerts pressure on the wrist as well. So if you spend most of your time on a computer, here are few tips that might help you to lower your risk of wrist pain, scarring and other health effects...
  Story first published: Wednesday, November 23, 2016, 23:05 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more