For Quick Alerts
ALLOW NOTIFICATIONS  
For Daily Alerts

ಕಂಪ್ಯೂಟರ್ ನಿಂದ 5 ಪ್ರಮುಖ ಆರೋಗ್ಯ ಸಮಸ್ಯೆ

|
Health Problems From Computer
ಮಾಹಿತಿ ಹಂಚಿಕೆಯಿಂದ ಹಿಡಿದು ಸ್ನೇಹಿತರಿಗೆ ಹಾಯ್ ಬಾಯ್ ಹೇಳುವುದು ಕೂಡ ಕಂಪ್ಯೂಟರ್ ಮುಖಾಂತರವೆ. ಕಂಪ್ಯೂಟರ್ ಇಲ್ಲ ಅಂದರೆ ಕೆಲಸ ಕಾರ್ಯಗಳು ಮುಂದೆ ಹೋಗುವುದೆ ಇಲ್ಲ ಎಂಬಂತಹ ಪರಿಸ್ಥಿತಿ ಈಗ.

ಮಾಹಿತಿ ವಿನಿಮಯದಿಂದದ ಕೆಲಸ ಕಾರ್ಯ ಸುಲಭವಾಗುವಂತೆ ಮಾಡುವಲ್ಲಿ ಕಂಪ್ಯೂಟರ್ ಕೊಡುಗೆ ಅಪಾರವಾದರೂ , ಕಂಪ್ಯೂಟರ್ ನಿಂದ ಆರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ. ಕಂಪ್ಯೂಟರ್ ಬಳಸಿ ಆರೋಗ್ಯ ಹಾಳಾಗುವುದನ್ನು ಕಂಪ್ಯೂಟರ್ ಸಂಬಂಧಿ ರೋಗಗಳು ಎಂದು ಕರೆದರೂ ತಪ್ಪಾಗಲಾರದು.

ಕಂಪ್ಯೂಟರ್ ಬಳಸುವುದರಿಂದ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

1. ಕೈ ಬೆರಳಿನಲ್ಲಿ ನೋವು:
ಕಂಪ್ಯೂಟರ್ ನಿರಂತರವಾಗಿ ಬಳಸಿದಾಗ ಕೈ ಬೆರಳುಗಳು ಮೌಸ್ ಮತ್ತು ಕೀಬೋರ್ಡ್ ನ ಮೇಲೆಯೆ ಇರುವುದರಿಂದ ಕ್ರಮೇಣ ಬೆರಳಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಬೆರಳುಗಳನ್ನು ಸರಿಯಾಗಿ ಮಡಚಲು ಸಹ ಆಗುವುದಿಲ್ಲ. ಇಂತಹ ಸಮಸ್ಯೆಗಳು ಹಿಂದೆಲ್ಲಾ ವಯಸ್ಸಾದವರಲ್ಲಿ ಮಾತ್ರ ಕಂಡು ಬರುತ್ತಿತ್ತು. ಆದರೆ ಈಗೆಲ್ಲಾ ಮಧ್ಯ ವಯಸ್ಸು ದಾಟುತ್ತಿದ್ದ ಹಾಗೆ ಕಾಣಿಸತೊಡಗುತ್ತದೆ. ಎಲ್ಲಾ ಕಂಪ್ಯೂಟರ್ ಮಹಿಮೆ!

2. ತೋಳಿನ ನೋವು:
ಸಾಫ್ಟ್ ವೇರ್ ಉದ್ಯೋಗಿಗಳಲ್ಲಿ ತೋಳು ನೋವು ಸಾಮಾನ್ಯ ಸಮಸ್ಯೆ. ದಿನವು ಆಫೀಸ್ ಗೆ ಹೋಗುವಾಗ ಲ್ಯಾಪ್ ಟಾಪ್ ವಿಕ್ರಮಾದಿತ್ಯನ ಭುಜದಲ್ಲಿರುವ ಬೇತಾಳದಂತೆ ಇವರ ಭುಜದಲ್ಲಿ ನೇತಾಡುತ್ತಿರುತ್ತದೆ. ಈ ಲ್ಯಾಪ್ ಟಾಪ್ ಭಾರ ಹೊರುವುದರಿಂದ ತೋಳು ಮತ್ತು ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

3. ಬೆನ್ನು ಮತ್ತು ಕುತ್ತಿಗೆ ನೋವು:
ಕಂಪ್ಯೂಟರ್ ನ ಮುಂದೆ 8 ಗಂಟೆಗಿಂತ ಅಧಿಕ ಕಾಲ ಕೂರುವುದರಿಂದ ಬೆನ್ನು ಮತ್ತು ಕುತ್ತಿಗೆ ನೋವು ಬರುತ್ತದೆ, ಹೀಗೆ ನೋವು ಬಂದಾಗ ನೋವು ನಿವಾರಕ ಮುಲಾಮ್ ಗಳನ್ನು ಹಚ್ಚಿದರೂ ಕಡಿಮೆಯಾಗುವುದಿಲ್ಲ.

4. ಕಣ್ಣಿನ ಸಮಸ್ಯೆ: ಕಂಪ್ಯೂಟರ್ ಸ್ಕ್ರೀನ್ ಅನ್ನು ಎವೆ ಬಿಡದೆ ನೋಡುವುದರಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತವೆ. ಕೆಲಸದ ಒತ್ತಡದಲ್ಲಿ ಕಣ್ಣು ಪರದೆಯಿಂದ ಸರಿಸಲು ಸಮಯವಿರುವುದಿಲ್ಲ. ಇದರಿಂದ ಕಣ್ಣಿನ ಮೇಲೆ ವಿಪರೀತ ಒತ್ತಡ ಬೀರಿ,ಕ್ರಮೇಣ ಇದು ದೃಷ್ಟಿ ದೋಷವನ್ನು ತರುತ್ತದೆ.

5. ಮಕ್ಕಳಾಗದಿರುವಿಕೆ: ಇಂದಿನ ಅನೇಕ ದಂಪತಿಗಳಲ್ಲಿ ಮಕ್ಕಳಾಗದಿರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ ಇದಕ್ಕೆ ಲ್ಯಾಪ್ ಟಾಪ್ ಕೂಡ ಒಂದು ಕಾರಣ. ಲ್ಯಾಪ್ ಟಾಪ್ ತೊಡೆಯ ಮೇಲೆ ಇಟ್ಟು ಬಳಕೆ ಮಾಡುವುದರಿಂದ ವೀರ್ಯಾಣು ನಾಶವಾಗಿ ಮಕ್ಕಳು ಆಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಪ್ರತಿ ನಿತ್ಯ ವ್ಯಾಯಾಮವನ್ನು ಮಾಡುವುದು, ಕಣ್ಣಿಗೆ ವಿಶ್ರಾಂತಿಯನ್ನು ನೀಡುವುದು, ಮತ್ತು ಲ್ಯಾಪ್ ಟಾಪ್ ಬಳಸುವಾಗ ಯಾವುದಾದರೂ ಟೇಬಲ್ ಮೇಲೆ ಇಟ್ಟು ಬಳಸುವುದರಿಂದ ಇಂತಹ ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ.

English summary

Computer Related Disorders | Health Problems From Computer | ಕಂಪ್ಯೂಟರ್ ಸಂಬಂಧಿ ಕಾಯಿಲೆಗಳು | ಕಂಪ್ಯೂಟರ್ ನಿಂದ ಆರೋಗ್ಯ ಸಮಸ್ಯೆಗಳು

It is an accepted fact now that technology is making us sick at the same pace with which it is bettering our lives. Regular and excessive use of computers, laptops, tablets and other cyber related technology bring some of unique computer disorders.
Story first published: Wednesday, November 30, 2011, 15:46 [IST]
X
Desktop Bottom Promotion