For Quick Alerts
ALLOW NOTIFICATIONS  
For Daily Alerts

ಪವರ್‌ಫುಲ್ ಜ್ಯೂಸ್: ಇದು ಬರೋಬ್ಬರಿ 7 ಕಾಯಿಲೆಗಳಿಗೆ ರಾಮಬಾಣ!

By Arshad
|

ಸಾಮಾನ್ಯವಾಗಿ ನಾವೆಲ್ಲರೂ ಮುಂದಿನ ದಿನಗಳಿಗೆಂದು ಕೊಂಚ ಹಣವನ್ನು ಒಟ್ಟುಗೂಡಿಸುತ್ತಾ ಇರುತ್ತೇವೆ. ಇದರ ಉದ್ದೇಶ ಭವಿಷ್ಯದ ಭದ್ರತೆಯ ಜೊತೆಗೇ ವಯಸ್ಸಾದಾಗ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಾಗಬಹುದು, ಈ ಚಿಕಿತ್ಸೆಗಳು ದುಬಾರಿಯೂ ಆಗಿರಬಹುದು ಎಂದು ನಾವೆಲ್ಲರೂ ಲೆಕ್ಕಾಚಾರ ಹಾಕುತ್ತೇವೆ. ಈ ಲೆಕ್ಕಾಚಾರ ಒಂದು ರೀತಿಯಲ್ಲಿ ಸರಿಯಾದರೂ ಜಾಣತನದ ಕ್ರಮವಲ್ಲ. ಏಕೆಂದರೆ ಕಾಯಿಲೆ ಬಂದ ಬಳಿಕ ದುಬಾರಿ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬರದಂತೆ ಈಗಲೇ ಸೂಕ್ತ ಮುನ್ನೆಚ್ಚರಿಕೆ ವಹಿಸುವುದೇ ಜಾಣತನ. ಮಧುಮೇಹಿಗಳಿಗೆ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ...

ಅದರಲ್ಲೂ ಈ ಕಾರ್ಯಕ್ಕೆ ಯಾವುದೇ ಅಡ್ಡಪರಿಣಾಮವಿಲ್ಲದ, ಮನೆಯಲ್ಲಿಯೇ ತಯಾರಿಸಿದ ಮನೆಮದ್ದಿನ ಬಳಕೆ ಇನ್ನಷ್ಟು ಹೆಚ್ಚಿನ ಜಾಣತನದ ಕ್ರಮವಾಗಿದೆ. ಇದನ್ನು ಸಾಧ್ಯವಾಗಿಸಲು ಹೆಚ್ಚಿನ ಖರ್ಚೂ ಇಲ್ಲ. ನೈಸರ್ಗಿಕ ಮತ್ತು ಸುಲಭವಾಗಿ ಲಭ್ಯವಿರುವ ಸಾಮಾಗ್ರಿಗಳನ್ನೇ ಬಳಸಿರುವ ಕಾರಣ ಅತಿ ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚಿನ ಆರೋಗ್ಯ ಪಡೆದಂತಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಲು ಟಿಪ್ಸ್

ಈ ಸುಲಭಸಾಮಾಗ್ರಿಗಳು ನಮ್ಮ ಅಡುಗೆ ಮನೆಯಲ್ಲಿಯೇ ಲಭ್ಯವಿವೆ. ಪ್ರತಿ ಸಾಮಾಗ್ರಿಯಲ್ಲಿಯೂ ಪ್ರತ್ಯೇಕ ಔಷಧೀಯ ಗುಣಗಳಿದ್ದು ಹಲವು ಕಾಯಿಲೆಗಳಿಗೆ ಅತ್ಯುತ್ತಮವಾದ ಪರಿಹಾರ ಒದಗಿಸುತ್ತವೆ. ಇಂತಹ ಒಂದು ಪ್ರಬಲ ಮನೆಮದ್ದು ಎಂದರೆ ಆಲೂಗಡ್ಡೆ ರಸ ಮತ್ತು ಜೇನಿನ ಮಿಶ್ರಣ. ಈ ಅದ್ಭುತ ಮಿಶ್ರಣದ ನಿಯಮಿತ ಸೇವನೆಯಿಂದ ಕನಿಷ್ಠ ಏಳು ಬಗೆಯ ತೊಂದರೆಗಳಿಗೆ ಚಿಕಿತ್ಸೆ ನೀಡಬಹುದು. ಬನ್ನಿ, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ: ಆರೋಗ್ಯ ಟಿಪ್ಸ್: ಸಾಂಬಾರು ಪದಾರ್ಥಗಳ ಅಸಾಧಾರಣ ಗುಣಗಳು

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಆಲೂಗಡ್ಡೆ (ಮಧ್ಯಮ ಗಾತ್ರ)

*ಜೇನು - 1 ದೊಡ್ಡಚಮಚ

ತಯಾರಿಕಾ ಮತ್ತು ಸೇವನೆಯ ವಿಧಾನ

ತಯಾರಿಕಾ ಮತ್ತು ಸೇವನೆಯ ವಿಧಾನ

*ಆಲೂಗಡ್ಡೆಯ ಸಿಪ್ಪೆ ನಿವಾರಿಸಿ ಚಿಕ್ಕ ತುಂಡುಗಳನ್ನಾಗಿಸಿ ಮಿಕ್ಸಿಯ ಬ್ಲೆಂಡರಿನಲ್ಲಿ ಕೊಂಚ ಉಗುರುಬೆಚ್ಚನೆಯ ನೀರು ಸೇರಿಸಿ ನುಣ್ಣಗೆ ಅರೆಯಿರಿ. ನಿಮಗೆ ಕುಡಿಯಲು ಎಷ್ಟು ಗಾಢ ಸಾಕು ಅನ್ನಿಸುತ್ತದೆಯೋ ಅಷ್ಟು ನೀರು ಸೇರಿಸಿ.

*ಈ ನೀರನ್ನು ಒಂದು ಲೋಟದಲ್ಲಿ ಸಂಗ್ರಹಿಸಿ. ಸೋಸುವುದು ಅಗತ್ಯವಿಲ್ಲ.

* ತದನಂತರ ಈ ದ್ರವಕ್ಕೆ ಜೇನು ಸೇರಿಸಿ ಮಿಶ್ರಣಮಾಡಿ ಚೆನ್ನಾಗಿ ಕದಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಯಾರಿಕಾ ಮತ್ತು ಸೇವನೆಯ ವಿಧಾನ

ತಯಾರಿಕಾ ಮತ್ತು ಸೇವನೆಯ ವಿಧಾನ

ಇನ್ನು ಇಂತಹ ಅದ್ಭುತ ದ್ರವವನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರದ ಬಳಿಕ ಒಂದು ಲೋಟ ಟೀ ಕಾಫಿ ಬದಲಿಗೆ ಕುಡಿಯಿರಿ. ಮಧ್ಯಾಹ್ನದ ಊಟದವರೆಗೆ ನೀರಿನ ಹೊರತು ಬೇರೆ ಪೇಯಗಳನ್ನು ಸೇವಿಸಬೇಡಿ.

ಈ ದ್ರವದ ನಿಯಮಿತ ಸೇವನೆಯಿಂದ ಯಾವ ಯಾವ ಕಾಯಿಲೆಗಳು ದೂರಾಗುತ್ತವೆ ಎಂಬುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ಮಧುಮೇಹ

ಮಧುಮೇಹ

ಆಲೂಗಡ್ಡೆ ರಸ ಮತ್ತು ಜೇನಿನ ಈ ಅದ್ಭುತ ಮಿಶ್ರಣ ರಕ್ತದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುವ ಗುಣ ಹೊಂದಿದೆ. ಇದು ಮಧುಮೇಹಿಗಳಿಗೆ ವರದಾನವಾಗಿದ್ದು ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

ಜಠರದುರಿತ (ಗ್ಯಾಸ್ಟ್ರಿಕ್)

ಜಠರದುರಿತ (ಗ್ಯಾಸ್ಟ್ರಿಕ್)

ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗುವ ಕಾರಣ ಎದುರಾಗುವ ಜಠರದುರಿ (ಗ್ಯಾಸ್ಟ್ರಿಕ್), ಹುಳಿತೇಗು ಮೊದಲಾದವು ಕಡಿಮೆಯಾಗುತ್ತದೆ. ಈ ದ್ರವ ಕ್ಷಾರೀಯವಾಗಿದ್ದು ಹೊಟ್ಟೆಯಲ್ಲಿರುವ ಪ್ರಬಲ ಆಮ್ಲವನ್ನು ತಟಸ್ಥಗೊಳಿಸುತ್ತದೆ.

ಮೂತ್ರಪಿಂಡದಲ್ಲಿರುವ ಕಲ್ಲು

ಮೂತ್ರಪಿಂಡದಲ್ಲಿರುವ ಕಲ್ಲು

ಈ ದ್ರವ ಒಂದು ಉತ್ತಮ ಪಚನಕಾರಿಯಾಗಿದ್ದು ಜೀರ್ಣಾಂಗಗಳಿಂದ ಮತ್ತು ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ವಿಶೇಷವಾಗಿ ಮೂತ್ರಪಿಂಡಗಳಲ್ಲಿ ಸಂಗ್ರಹವಾಗಿದ್ದ ನೈಟ್ರಿಕ್ ಆಮ್ಲವನ್ನು ವಿಸರ್ಜಿಸುವ ಮೂಲಕ ಮೂತ್ರಪಿಂಡಗಳಲ್ಲಿ ಮೂಡಬಹುದಾಗಿದ್ದ ಕಲ್ಲುಗಳಾಗದಂತೆ ತಡೆಯುತ್ತದೆ.

ಯಕೃತ್‌ನ (ಲಿವರ್) ರಕ್ಷಣೆ

ಯಕೃತ್‌ನ (ಲಿವರ್) ರಕ್ಷಣೆ

ಈ ಅದ್ಭುತ ರಸ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುವ ಮೂಲಕ ಯಕೃತ್ ನ ಕ್ಷಮತೆಯನ್ನೂ ಹೆಚ್ಚಿಸುತ್ತದೆ. ಹೆಚ್ಚಿನ ಕ್ಷಮತೆ ಪಡೆಯುವ ಮೂಲಕ ಯಕೃತ್ ವೈಫಲ್ಯದ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

ಚರ್ಮದ ತೊಂದರೆಗಳು

ಚರ್ಮದ ತೊಂದರೆಗಳು

ಈ ದ್ರವ ಒಂದು ಉತ್ತಮ ತೇವಕಾರಕವಾಗಿದ್ದು ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ಒಳಗಿನಿಂದ ನೀಡುತ್ತದೆ. ಇದು ವಿಶೇಷವಾಗಿ ಒಣಚರ್ಮದವರಿಗೆ ವರದಾನವಾಗಿದೆ. ಚರ್ಮದಲ್ಲಿ ಆರ್ದ್ರತೆಯ ಕೊರತೆಯಿಂದ ಎದುರಾಗುವ ತೊಂದರೆಗಳು ಮತ್ತು ಸೋರಿಯಾಸಿಸ್ ನಂತಹ ಚರ್ಮ ರೋಗವನ್ನೂ ಬರದಂತೆ ರಕ್ಷಿಸಬಹುದು.

ಮೆದುಳಿನ ಕ್ಷಮತೆ

ಮೆದುಳಿನ ಕ್ಷಮತೆ

ಈ ದ್ರವದಲ್ಲಿ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಬಿ6 ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ನರವ್ಯವಸ್ಥೆಯನ್ನು ಉತ್ತಮಗೊಳಿಸುವ ಮೂಲಕ ಖಿನ್ನತೆ, ಉದ್ವೇಗ ಮತ್ತು ಕೊಂಚ ಮಟ್ಟಿಗೆ ADHDಯಂತಹ ತೊಂದರೆಯಿಂದಲೂ ರಕ್ಷಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ದ್ರವದಲ್ಲಿರುವ ಹಲವು ಪೋಷಕಾಂಶಗಳು ಮತ್ತು ವಿಟಮಿನ್ನುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

English summary

This Homemade Juice Can Treat Diabetes, Gastritis And More!

Most of us tend to save up money for the future, as we fear that diseases are inevitable and we know that we will need the money for all the expensive treatments. Imagine a situation in which you did not have to spend money on expensive hospitals or better yet, find a way to treat ailments from the comfort of your home! That would be wonderful, right? Well, as far fetched as it may sound, there is a possibility of that happening, if you turn to natural remedies!
X
Desktop Bottom Promotion