ಕುರುಕಲು ತಿಂಡಿ ಚಪಲದಿಂದ ಆರೋಗ್ಯಕ್ಕೆ ಅಪಾಯ

By manu
Subscribe to Boldsky

ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ಮಾತು ಇತ್ತೀಚೆಗೆ ಹಳತಾಗುತ್ತಿದೆ. ಯುವಜನತೆ ಹೆಚ್ಚು ನಗರಜೀವನದತ್ತ ವಾಲುತ್ತಿದ್ದಾರೆ. ಜೀವನಶೈಲಿ ಬದಲಾಗುತ್ತಾ ಹೋದಂತೆ ನಮ್ಮ ಆಹಾರಕ್ರಮಗಳೂ ಬದಲಾಗುತ್ತಿವೆ. ಅದರಲ್ಲೂ ಹಿಂದಿನ ಐದು ವರ್ಷಗಳಲ್ಲಿ ಆಹಾರಕ್ರಮದ ಬಗ್ಗೆ ಜನರು ನೋಡುವ ದೃಷ್ಟಿಕೋನ ಕೊಂಚ ಬದಲಾಗಿದೆ. ಮಾಧ್ಯಮ ಮತ್ತು ಕೈಗಟಕಿರುವ ಮಾಹಿತಿ ತಂತ್ರಜ್ಞಾನದ ಮೂಲಕ ಯಾವ ಆಹಾರಗಳು ಕೆಟ್ಟವು ಯಾವುವು ಒಳ್ಳೆಯವು ಎಂಬುದನ್ನು ಕಂಡುಕೊಳ್ಳಬಹುದಾದುದರಿಂದ ಸಮಾಜದ ಕೆಲವರಾದರೂ ತಮ್ಮ ಆಹಾರಗಳ ಬಗ್ಗೆ ಕೊಂಚ ಎಚ್ಚರಿಕೆ ವಹಿಸುತ್ತಿದ್ದಾರೆ.

Health and nutrition consciousness has become more common in the last five years. With the escalating costs of health care, the spread of immunity system-weakening conditions and allover bad well-being, people are looking at better diets and routine workouts. Wheat product sales have risen and individuals are now more centered on calorie consumption, zero trans-fat and digestion enzymes that are selected on antacids.
 
ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯ ಪರಿಣಾಮವಾಗಿ ನಮ್ಮ ಆಹಾರಕ್ರಮಗಳೂ ಬಹಳಷ್ಟು ಬದಲಾವಣೆ ಹೊಂದಿವೆ. ಸಿದ್ಧ ಆಹಾರಗಳಿಗೆ ಹಿಂದೆಂದೂ ಇಲ್ಲದ ಬೇಡಿಕೆ ಕುದುರಿದೆ. ಗ್ರಾಮೀಣ ಆಹಾರಗಳು ಮೂಲೆಗುಂಪಾಗಿವೆ. ಒಳಗಿನ ಆಹಾರಕ್ಕಿಂತಲೂ ಆಹಾರದ ಪ್ಯಾಕೆಟ್ಟು ಮತ್ತು ಇದನ್ನು ಪ್ರಚಾರಗೊಳಿಸಿದ ಜಾಹೀರಾತು ಎಷ್ಟು ಫಲಪ್ರದವಾಗಿದೆ ಎಂಬುದೇ ಇದರ ಮಾರಾಟದ ಗುಟ್ಟಾಗಿದೆಯೇ ವಿನಃ ಇದು ನಿಜವಾಗಿಯೂ ಆರೋಗ್ಯಕರವೇ ಅನಾರೋಗ್ಯಕರವೇ ಎಂದು ಜನರು ಹೆಚ್ಚಾಗಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.

ಸಿದ್ಧ ಆಹಾರಗಳಲ್ಲಿ ಬಳಸಿರುವ ಸಂರಕ್ಷಕ, ವಿವಿಧ ಬಗೆಯ ರುಚಿಕಾರಕಗಳು ಆಹಾರವನ್ನು ಆ ಸಮಯಕ್ಕೆ ರುಚಿಯಾಗಿಸಿದರೂ ಇವುಗಳ ಪರಿಣಾಮ ಕಾಲಕ್ರಮೇಣ ದೇಹದ ಮೇಲೆ ನಿಧಾನವಾಗಿ ಆಗುತ್ತದೆ. ರೋಗ ನಿರೋಧಕ ಶಕ್ತಿಯು ಕುಂದುವುದು, ಒಟ್ಟಾರೆ ಆರೋಗ್ಯ ಕುಂಠಿತಗೊಳ್ಳುವುದು ಇತ್ಯಾದಿ ಎದುರಾಗುತ್ತವೆ. ಇದನ್ನು ಮನಗಂಡ ಕೆಲವರು ಮಾತ್ರ ಆರೋಗ್ಯಕರ ಆಹಾರಗಳತ್ತ ಒಲವು ತೋರುತ್ತಿದ್ದಾರೆ. ಇಡಿಯ ಗೋಧಿಯ ಹಿಟ್ಟಿಗೆ ಈಗ ಹೆಚ್ಚಿನ ಬೇಡಿಕೆ ಬರುತ್ತಿದೆ. ಗೋಧಿಹಿಟ್ಟಿನಿಂದ ನಾರು ತೆಗೆದ ಮೈದಾಹಿಟ್ಟಿನ ಬಳಕೆ ನಡೆಯುತ್ತಿದ್ದರೂ ಇಡಿಯ ಗೋಧಿಯ ಹಿಟ್ಟಿನ ಬಳಕೆ ಹೆಚ್ಚುತ್ತಿರುವುದು ಸಮಾಧಾನಕರ ಸಂಗತಿ.

Health and nutrition consciousness has become more common in the last five years. With the escalating costs of health care, the spread of immunity system-weakening conditions and allover bad well-being, people are looking at better diets and routine workouts. Wheat product sales have risen and individuals are now more centered on calorie consumption, zero trans-fat and digestion enzymes that are selected on antacids.
 
ಇವೆಲ್ಲವನ್ನೂ ಗಮನಿಸಿದರೆ ಜನರು ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸುತ್ತಿರುವುದು ತಿಳಿದುಬರುತ್ತದೆ. ಅನಾರೋಗ್ಯಕರ ಆಹಾರಗಳಿಗೆ ಅನ್ಯಥಾ ಹಣ ಸುರಿದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಕೊಂಚ ಬೆಲೆ ಹೆಚ್ಚಾದರೂ ಸರಿ, ಆರೋಗ್ಯಕರ ಆಹಾರವನ್ನೇ ಸೇವಿಸಿ ಆರೋಗ್ಯ ಉತ್ತಮಗೊಳಿಸುವುದು ಇಂದಿನ ಜನರ ಲೆಕ್ಕಾಚಾರವಾಗಿದೆ. ಆದರೂ ಇಂದು ಜಗತ್ತಿನಲ್ಲಿ ಅನಾರೋಗ್ಯಕರ ಸಿದ್ಧ ಆಹಾರಗಳನ್ನೇ ನೆಚ್ಚಿರುವ ಮಿಲಿಯಾಂತರ ಜನರಿದ್ದಾರೆ. ಏಕೆಂದರೆ ಇವರ ಪ್ರಕಾರ ಈ ಆಹಾರಗಳು ಅವರಿಗೇನೂ ಮಾಡುತ್ತಿಲ್ಲ. ಎಷ್ಟೋ ವರ್ಷಗಳಿಂದ ತಿನ್ನುತ್ತಾ ಬಂದಿದ್ದರೂ ಏನೂ ಆಗಿಲ್ಲ. ಇದನ್ನು ತಿನ್ನುತ್ತಾ ಬಂದವರಿಗೂ ಏನೂ ಆಗಿಲ್ಲ, ಹಾಗಿದ್ದ ಮೇಲೆ ಏಕೆ ಬಿಡಬೇಕು?

ಅಷ್ಟಕ್ಕೂ ಈ ಸಿದ್ಧ ಆಹಾರಗಳು ಹೆಚ್ಚಾಗಿ ಅಗತ್ಯಕ್ಕಿಂತಲೂ ಪ್ರತಿಷ್ಠೆ ಉಳಿಸಿಕೊಳ್ಳುವ ಮಾಧ್ಯಮಗಳೇ ಆಗಿವೆ. ಉದಾಹರಣೆಗೆ ಒಂದು ಪಾರ್ಟಿಯಲ್ಲಿ ಊಟಕ್ಕಾಗಿ ಖ್ಯಾತ ಸಂಸ್ಥೆಯ ಬರ್ಗರ್ ತರಿಸುವ ಬದಲು ಅದಕ್ಕೂ ಕಡಿಮೆ ಬೆಲೆಯಲ್ಲಿ, ಆದರೆ ಇದನ್ನೂ ಹೆಚ್ಚು ರುಚಿಕರವಾಗಿರುವ ಬರ್ಗರ್ ತಂದರೆ ಹೇಗೆ ಎಂದು ಪ್ರಶ್ನಿಸಿದವರನ್ನೇ ಉಳಿದವರು ಅನುಮಾನದಿಂದ ನೋಡುತ್ತಾರೆ. ಕಡೆದೆ ವಿವೇಕ ಪ್ರತಿಷ್ಠೆಯ ಎದುರು ಸೋಲುತ್ತದೆ.

Health and nutrition consciousness has become more common in the last five years. With the escalating costs of health care, the spread of immunity system-weakening conditions and allover bad well-being, people are looking at better diets and routine workouts. Wheat product sales have risen and individuals are now more centered on calorie consumption, zero trans-fat and digestion enzymes that are selected on antacids.
 
ಖ್ಯಾತ ಸಂಸ್ಥೆಯ ಅನಾರೋಗ್ಯಕರ ಬರ್ಗರ್ ಮೇಜಿನ ಮೇಲೆ ಬಂದಿಳಿಯುತ್ತದೆ. ಇಂದು ಎಲ್ಲರಿಗೂ ಧಾವಂತ, ಎಲ್ಲರಿಗೂ ಎಲ್ಲಿಗೋ ತಲುಪುವ ಅವಸರ. ಸಾವಧಾನವಾಗಿ ಊಟಮಾಡುವಷ್ಟೂ ಪುರುಸೊತ್ತಿಲ್ಲ. ಈ ಸಂದರ್ಭವನ್ನೇ ಬಳಸಿಕೊಂಡ ಸಂಸ್ಥೆಗಳು ಸಮಯ ವ್ಯರ್ಥವಾಗದಂತೆ ತಿನ್ನಲು ಸಾಧ್ಯವಾಗುವ ತಿಂಡಿಗಳನ್ನೇ ಮಾರುತ್ತಿವೆ. ಹಿರಿಯರ ಈ ಚಾಳಿಗಳನ್ನೇ ಮಕ್ಕಳೂ ಕಲಿತು ಮುಂದೆ ಇದೇ ಆನಾರೋಗ್ಯಕರ ಆಹಾರಗಳಿಗೆ ದಾಸರಾಗುತ್ತಿದ್ದಾರೆ.

ಆದ್ದರಿಂದ ಮಿಂಚಿ ಹೋಗುವ ಮೊದಲೇ ಆರೋಗ್ಯಕರ ಆಹಾರಗಳತ್ತ ವಾಲುವುದು ಆರೋಗ್ಯದ ದೃಷ್ಟಿಯಿಂದ ಯಾರಿಗೂ, ಯಾವತ್ತಾದರೂ ಒಳ್ಳೆಯದೂ, ಅನಿವಾರ್ಯವೂ ಹೌದು. ಧಾವಂತದ ದಿನಗಳಲ್ಲಿ ಇದನ್ನು ಸಾಧಿಸುವುದು ಮಾತ್ರ ಅಷ್ಟು ಸುಲಭವಲ್ಲ. ಆದರೆ ಮನೆಯಲ್ಲಿ ಕೊಂಚವೇ ಸಮಯ ವ್ಯಯಿಸಿ ಮರುದಿನದಲ್ಲಿ ಅನಾರೋಗ್ಯಕರ ಆಹಾರ ತಿನ್ನುವುದರಿಂದ ತಪ್ಪಿಸಿಕೊಳ್ಳಬಹುದು. ಇದಕ್ಕಾಗಿ ಕೆಲವು ಸಲಹೆಗಳು ಇಂತಿವೆ:

* ಕೆಲವು ಹಣ್ಣುಗಳನ್ನು, ಉದಾಹರಣೆಗೆ ದ್ರಾಕ್ಷಿ, ಮಾವು, ಕ್ಯಾರೆಟ್ ಮೊದಲಾದವುಗಳನ್ನು ರಾತ್ರಿಯೇ ಬಿಡಿಸಿ, ಚಿಕ್ಕದಾಗಿ ತುಂಡರಿಸಿ ಸೀಲ್ ಮಾಡಬಹುದಾದ ಪ್ಲಾಸ್ಟಿಕ್ ಪ್ಯಾಕ್ ಅಥವಾ ಡಬ್ಬಿಯೊಂದರಲ್ಲಿ ಗಟ್ಟಿಯಾಗಿ ಮುಚ್ಚಿಡಿ. ಮರುದಿನ ನಿಮ್ಮ ಕಚೇರಿಯ ಚೀಲದಲ್ಲಿ ಇದನ್ನು ಜೊತೆಗೇ ಕೊಂಡುಹೋಗಿ. ಯಾವಾಗ ಹಸಿವಾಯಿತೋ, ಜಾಹೀರಾತೊಂದನ್ನು ಕಂಡಾಗ ಸಿದ್ಧ ಆಹಾರವನ್ನು ತಿನ್ನುವ ಮನಸ್ಸಾಯಿತೋ ಆಗ ನಿಮ್ಮ ಡಬ್ಬಿಯನ್ನು ತೆರೆದು ತುಂಡುಗಳನ್ನು ತಿನ್ನಿ. ಮಕ್ಕಳಿಗೂ ಇದೇ ಅಭ್ಯಾಸ ಮಾಡಿ.

Health and nutrition consciousness has become more common in the last five years. With the escalating costs of health care, the spread of immunity system-weakening conditions and allover bad well-being, people are looking at better diets and routine workouts. Wheat product sales have risen and individuals are now more centered on calorie consumption, zero trans-fat and digestion enzymes that are selected on antacids.

* ಕುದಿಸಿ ಆರಿಸಿದ ಹಾಲಿನಲ್ಲಿ ಕೇಸರಿ ಅಥವಾ ಬಾದಾಮಿ ಮೊದಲಾದವುಗಳನ್ನು ಸೇರಿಸಿ ಚಿಕ್ಕ ಬಿಸಿನೀರು ಸಂಗ್ರಹಿಸುವ ಥರ್ಮಾಸ್ ಬಾಟಲಿಯಲ್ಲಿ ತುಂಬಿಕೊಳ್ಳಿ. ಮರುದಿನ ಹಸಿವಾದಾದ ಇದನ್ನು ಸೇವಿಸಿ.

* ತಾಜಾ ಹಣ್ಣಿನ ರಸವನ್ನೂ ಥರ್ಮಾಸ್ ನಲ್ಲಿ ಶೇಖರಿಸಿ ಹಸಿವಾದಾಗ ಸೇವಿಸಬಹುದು.

ಇತ್ತೀಚೆಗೆ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಆದರೆ ರಾಸಾಯನಿಕಗಳನ್ನು ಬಳಸಿ ಬೆಳೆಯಲಾದ ತರಕಾರಿಗಳು ಅಗ್ಗವಾಗಿರುವ ಕಾರಣ ಹೆಚ್ಚಿನವರು ಇವನ್ನೇ ಕೊಳ್ಳುತ್ತಾರೆ. ಕೊಂಚವಾದರೂ ಸರಿ, ಸಾಧ್ಯವಾದಷ್ಟು ಸಾವಯವ ಉತ್ಪನ್ನಗಳನ್ನು ಕೊಳ್ಳಲು ಮನಸ್ಸು ಮಾಡಿ. ಆದರೆ ಈ ಆಹಾರಗಳಲ್ಲಿ ನಿಮಗೆ ಅಲರ್ಜಿಕಾರಕವಾದುದು ಯಾವುದಾದರೂ ಇದೆಯೇ ಎಂದು ಗಮನಿಸಿ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಇದರ ಬಗ್ಗೆ ಅಲರ್ಜಿ ಇದ್ದರೂ ಆ ತರಕಾರಿಯನ್ನು ಕೊಳ್ಳಬೇಡಿ.

For Quick Alerts
ALLOW NOTIFICATIONS
For Daily Alerts

    English summary

    Take a look at the healthy foods that you can have as snacks

    Health and nutrition consciousness has become more common in the last five years. With the escalating costs of health care, the spread of immunity system-weakening conditions and allover bad well-being, people are looking at better diets and routine workouts. Wheat product sales have risen and individuals are now more centered on calorie consumption, zero trans-fat and digestion enzymes that are selected on antacids.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more