Latest Updates
-
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ!
ಬಿಸಿ ನೀರಿಗೆ ಲಿಂಬೆರಸ ಸೇರಿಸಿ ಕುಡಿದರೆ ಹತ್ತಾರು ಲಾಭ!
ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆದುಕೊಂಡು ಹೋಗಿ ಒಂದು ಕಪ್ ಕಾಫಿ ಅಥವಾ ಚಾ ಕುಡಿಯುತ್ತೇವೆ. ಇದು ಹಿಂದಿನಿಂದಲೂ ನಮಗೆ ಅಭ್ಯಾಸವಾಗಿ ಹೋಗಿದೆ. ಕೆಲವರು ಹಾಸಿಗೆ ಬಿಟ್ಟು ಏಳುವ ಮೊದಲೇ ಮುಖವನ್ನು ತೊಳೆಯದೆ ಚಾ ಅಥವಾ ಕಾಫಿ ಸೇವನೆ ಮಾಡುತ್ತಾರೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ಮೂಡುತ್ತಿರುವ ಇಂದಿನ ದಿನಗಳಲ್ಲಿ ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಅದರಲ್ಲೂ ಬೆಳಗ್ಗೆ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿಕೊಂಡು ಕುಡಿದರೆ ಅದು ಅದ್ಭುತವನ್ನೇ ಮಾಡಲಿದೆ. ಲಿಂಬೆ ಜ್ಯೂಸ್, ಇದುವೇ ಶಕ್ತಿಯ ಆಗರ- ಚಾಲೆಂಜ್‌ಗೆ ರೆಡಿನಾ?

ಬಿಸಿ ನೀರು ಮತ್ತು ಲಿಂಬೆರಸವು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಉತ್ತಮಪಡಿಸಿ ತೂಕ ಕಳೆದುಕೊಳ್ಳಲು ನೆರವಾಗುವುದು. ಇದು ಕೊಬ್ಬನ್ನು ಕರಗಿಸಿ ನೀವು ಸಪೂರವಾಗಿ ಕಾಣುವಂತೆ ಮಾಡುವುದು. ಲಿಂಬೆರಸದಲ್ಲಿ ಹೀರಿಕೊಳ್ಳಬಲ್ಲ ನಾರಿನಾಂಶ ಮತ್ತು ಪೆಕ್ಟಿನ್ ಇದ್ದು, ಇದು ತೂಕ ಕಳೆದುಕೊಳ್ಳಲು ನೆರವಾಗುವುದು.
ಬೆಳಿಗ್ಗೆ ಬಿಸಿ ನೀರಿಗೆ ಲಿಂಬೆರಸವನ್ನು ಹಾಕಿ ಕುಡಿಯುವುದರಿಂದ ಕರುಳಿನ ಕ್ರಿಯೆಯು ಸರಾಗವಾಗಿ ಆಗಿ ಮಲಬದ್ಧತೆ ನಿವಾರಣೆಯಾಗುವುದು. ಇದರಲ್ಲಿ ಜೀರ್ಣಾಂಗವ್ಯೂಹವನ್ನು ಉತ್ತೇಜಿಸುವ ಸಾಮರ್ಥ್ಯವಿದೆ ಮತ್ತು ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವಂತೆ ಮಾಡಿ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು.
ಬೆಳಿಗ್ಗೆ ಎದ್ದು ಬಿಸಿ ನೀರಿನೊಂದಿಗೆ ಲಿಂಬೆರಸ ಹಾಕಿ ಕುಡಿದರೆ ಅದರಿಂದ ಜೀರ್ಣಶಕ್ತಿಯು ಹೆಚ್ಚುವುದು. ಲಿಂಬೆರಸವು ಯಕೃತ್ ಹೆಚ್ಚು ಪಿತ್ತರಸವನ್ನು ಉತ್ಪಾದಿಸಿ ಜಟಿಲವಾಗಿರುವ ಆಹಾರವನ್ನು ಕರಗಿಸಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಗೆ ನೆರವಾಗುವುದು. ಇದು ಹೊಟ್ಟೆಯನ್ನು ಸರಿಯಾಗಿಟ್ಟುಕೊಂಡು ಎದೆಯುರಿ, ಹೊಟ್ಟೆಯುಬ್ಬರವನ್ನು ದೂರವಿಡುವುದು.
ಬಿಸಿ ನೀರು ಮತ್ತು ಲಿಂಬೆರಸದ ಮಿಶ್ರಣವು ದುಗ್ಧನಾಳವನ್ನು ಸ್ವಚ್ಛಗೊಳಿಸುವುದು. ಇದು ದುಗ್ದನಾಳದಲ್ಲಿ ಸಂಗ್ರವಾಗಿರುವಂತಹ ಹಲವಾರು ರೀತಿಯ ವಿಷಕಾರಿ ಅಂಶಗಳು ಮತ್ತು ಕಲ್ಮಶಗಳನ್ನು ಹೊರಹಾಕುವುದು. ಇದು ದೇಹದ ಪಿಎಚ್ ಮಟ್ಟವನ್ನು ಸಮತೋಲದಲ್ಲಿಡುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಬಿಸಿನೀರು ಮತ್ತು ಲಿಂಬೆರಸವು ಯಕೃತ್‌ಗೆ ನೆರವಾಗುವುದು. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!
ನಿಶ್ಯಕ್ತಿಯನ್ನು ಹೋಗಲಾಡಿಸಲು ಬಿಸಿ ನೀರು ಮತ್ತು ಲಿಂಬೆರಸವು ತುಂಬಾ ಪರಿಣಾಮಕಾರಿ. ಇದು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ. ಲಿಂಬೆರಸದ ಸುವಾಸನೆಯು ನೈಸರ್ಗಿಕ ಶಾಮಕವಾಗಿದೆ ಮತ್ತು ಇದು ಮನಸ್ಸಿನ್ನು ಉಲ್ಲಾಸಿತಗೊಳಿಸುತ್ತದೆ. ಬಿಸಿ ನೀರು ಮತ್ತು ಲಿಂಬೆರಸದ ಮಿಶ್ರಣವು ತ್ವಚೆಗೆ ಕಾಂತಿ ನೀಡುವುದು. ಇದು ರಕ್ತವನ್ನು ಶುದ್ಧೀಕರಿಸಿ ಸುಂದರ ತ್ವಚೆಯನ್ನು ಪಡೆಯಲು ಸಹಕರಿಸುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


