For Quick Alerts
ALLOW NOTIFICATIONS  
For Daily Alerts

ದೇಹದ ಲಿವರ್ ಬಗ್ಗೆ ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

By Hemanth
|

ದೇಹದ ಹೊರಗಡೆ ಇರುವಂತಹ ಕಣ್ಣು, ಮೂಗು ಇತ್ಯಾದಿಗಳಿಗೆ ಸ್ವಲ್ಪ ನೋವಾದರೂ ಅಥವಾ ಅವುಗಳಲ್ಲಿ ಬಾವು ಕಾಣಿಸಿಕೊಂಡರೆ ನಮಗೆ ತಕ್ಷಣ ತಿಳಿದುಬರುತ್ತದೆ. ಅದೇ ರೀತಿ ದೇಹದ ಒಳಗಡೆ ಇರುವ ಪ್ರಮುಖ ಅಂಗಾಂಗಗಳಾದ ಕಿಡ್ನಿ, ಯಕೃತ್ ಮತ್ತು ಹೃದಯದ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ಅವುಗಳಿಗೆ ಸಣ್ಣ ಮಟ್ಟಿಗೆ ಏನೇ ಆದರೂ ತಿಳಿಯುವುದು ಕಷ್ಟ. ಆದರೆ ನಮ್ಮ ದೇಹದ ಪ್ರತಿಯೊಂದು ಭಾಗಗಳ ಬಗ್ಗೆ ಸರಿಯಾದ ಜ್ಞಾನವಿದ್ದರೆ ಆಗ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯ. ಒಣದ್ರಾಕ್ಷಿ ನೆನೆಸಿದ ನೀರು- ದೇಹದ ಲಿವರ್‌‌ನ ಆಯಸ್ಸು ನೂರು!

ಯಕೃತ್ತಿನ ಕಾಯಿಲೆಯನ್ನು ಉಪಚರಿಸುವ ಮನೆಮದ್ದುಗಳು

ಹೊಟ್ಟೆಯ ಬಲ ಭಾಗದಲ್ಲಿರುವಂತಹ ಯಕೃತ್ ಯಾನೆ ಲಿವರ್ ಜೀರ್ಣಕ್ರಿಯೆ, ಪೋಷಕಾಂಶಗಳ ಹೀರುವಿಕೆ ಹಾಗೂ ಆಹಾರದ ಸಂಸ್ಕರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯಿಂದ ಬರುವಂತಹ ರಕ್ತವನ್ನು ಯಕೃತ್ ಶುದ್ಧೀಕರಿಸಿ ದೇಹದ ಇತರ ಭಾಗಗಳಿಗೆ ಸರಬರಾಜು ಇರುತ್ತದೆ. ಯಕೃತ್ ಬಗ್ಗೆ ನೀವು ತಿಳಿಯಬೇಕಾದ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ, ಮುಂದೆ ಓದಿ...

ವಾಸ್ತವ#1

ವಾಸ್ತವ#1

ಮಾನವ ದೇಹದಲ್ಲಿರುವ ಅತ್ಯಂತ ದೊಡ್ಡ ದೇಹದೊಳಗಿನ ಅಂಗವೆಂದರೆ ಅದು ಯಕೃತ್. ಕೆಂಪುಬಣ್ಣವನ್ನು ಹೊಂದಿರುವಂತಹ ಯಕೃತ್ ಆರೋಗ್ಯವಂತ ವ್ಯಕ್ತಿಯಲ್ಲಿ ಸುಮಾರು 1.3 ಕೆ.ಜಿ. ಭಾರ ಹೊಂದಿರುತ್ತದೆ.

ವಾಸ್ತವ#2

ವಾಸ್ತವ#2

ಯಕೃತ್ ಕೇವಲ ಒಂದು ಅಂಗವಲ್ಲದೆ ಅದೊಂದು ಗ್ರಂಥಿ ಕೂಡ. ಜೀರ್ಣಕ್ರಿಯೆಗೆ ಬೇಕಾಗುವಂತಹ ಪಿತ್ತರಸವನ್ನು ಇದು ಬಿಡುಗಡೆ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಪಿತ್ತರಸ ಸೇರಿಕೊಂಡು ದೇಹಕ್ಕೆ ಶಕ್ತಿ ಒದಗುವುದು.

ವಾಸ್ತವ#3

ವಾಸ್ತವ#3

ಆಲ್ಕೋಹಾಲ್ ನಿಂದ ಉಂಟಾಗುವಂತಹ ಯಕೃತ್ ನ ತೀವ್ರ ರೋಗ ಮಾತ್ರ ಯಕೃತ್ ಗೆ ಬರುವ ರೋಗವೆಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಯಕೃತ್ ಗೆ ಹೆಪಟೈಟಿಸ್, ಯಕೃತ್ ಕ್ಯಾನ್ಸರ್, ಯಕೃತ್ ವೈಫಲ್ಯತೆ, ಪಿತ್ತಗಲ್ಲು ಇತ್ಯಾದಿ ರೋಗಗಳು ಕಾಣಿಸಿಕೊಳ್ಳಬಹುದು.

ವಾಸ್ತವ#4

ವಾಸ್ತವ#4

ದೇಹದ ವಿವಿಧ ಕಾರ್ಯಗಳಿಗೆ ಯಕೃತ್ ಬೇಕಾಗಿರುವ ಕಾರಣದಿಂದಾಗಿ ಯಕೃತ್ ಹೊರತು ವ್ಯಕ್ತಿಗೆ ಜೀವಿಸಲು ಸಾಧ್ಯವಿಲ್ಲ.

ವಾಸ್ತವ#5

ವಾಸ್ತವ#5

ಮಾವನ ದೇಹದಲ್ಲಿ ಪುನರ್ ನಿರ್ಮಾಣವಾಗುವ ಅಂಗಾಂಗವೆಂದರೆ ಅದು ಯಕೃತ್ ಮಾತ್ರ. ಯಾಕೃತ್ ತನ್ನನ್ನು ತಾನೇ ಸರಿಪಡಿಸಿಕೊಂಡು ಮರುನಿರ್ಮಾಣವಾಗುತ್ತಾ ಇರುತ್ತದೆ. ಯಕೃತ್ ನ ಮನರುನಿರ್ಮಾಣವು ವ್ಯಕ್ತಿಯ ವಯಸ್ಸು ಹಾಗೂ ಆರೊಗ್ಯದ ಮೇಲೆ ನಿರ್ಭರವಾಗಿದೆ.

ವಾಸ್ತವ#6

ವಾಸ್ತವ#6

ದಾನಿಯ ಕೇವಲ ಸ್ವಲ್ಪ ಭಾಗ ಯಕೃತ್ ನ್ನು ಪಡೆದುಕೊಂಡು ವೈದ್ಯರು ಯಕೃತ್ ನ ಕಸಿ ಮಾಡಬಲ್ಲರು.

ವಾಸ್ತವ#7

ವಾಸ್ತವ#7

ಕಾಳುಗಳು, ನಾರಿನಾಂಶವಿರುವ ಆಹಾರ ಮತ್ತು ತರಕಾರಿಯಂತಹ ಆರೋಗ್ಯಕರ ಆಹಾರ ಕ್ರಮವು ಯಕೃತ್‌ಗೆ ಒಳ್ಳೆಯದು. ಅತಿಯಾಗಿ ಕೆಂಪು ಮಾಂಸವನ್ನು ತಿನ್ನುವುದು ಯಕೃತ್‌ನ ಆರೋಗ್ಯಕ್ಕೆ ಅಪಾಯಕಾರಿ.

English summary

Surprising Facts About Your Liver You Never Knew!

The liver, located on the right side of the stomach, is responsible for various functions that include digesting, absorbing and processing food. Also, the liver filters the blood coming in from the digestive tract, before passing it on to the other parts of the body. So, here is a list of surprising facts on the liver that you can make yourself aware of, have a look!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more