Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೇನು-ಬೆಳ್ಳುಳ್ಳಿಯ ಜೋಡಿ-ಮಾಡಲಿದೆ ಕಮಾಲಿನ ಮೋಡಿ!
ಜೇನು ಮತ್ತು ಬೆಳ್ಳುಳ್ಳಿ ಪ್ರತ್ಯೇಕವಾಗಿ ಆರೋಗ್ಯಕ್ಕೆ ಹಲವು ರೀತಿಯಾದ ಉಪಕಾರವನ್ನು ಮಾಡುತ್ತವೆ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಇವೆರಡನ್ನೂ ಬೆರೆಸಿ ಸೇವಿಸಿದಾಗ ಎಲ್ಲಾ ಗುಣಗಳು ಗುಣಾಕಾರಗೊಂಡು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ.
ದಿನದ ಯಾವುದೇ ಕೆಲಸವನ್ನು ಲವಲವಿಕೆಯಿಂದ ಇದ್ದರೆ ಮಾತ್ರ ಸುಲಭವಾಗಿ ನಿರ್ವಹಿಸಲು ಸಾಧ್ಯ. ಲವಲವಿಕೆ ಇಲ್ಲದಿರುವುದು, ಚಿಕ್ಕ ಪುಟ್ಟ ಕೆಲಸಕ್ಕೂ ಸೋಮಾರಿತನ ಆವರಿಸುವುದು ಮೊದಲಾದವು ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಸೂಚನೆಯಾಗಿರಲೂಬಹುದು. ಸಿಹಿ ಜೇನುತುಪ್ಪವೇ, ಏನು ನಿನ್ನ ಹನಿಗಳ ಲೀಲೆ..!
ಇದು ಒಂದು ಅಪಾಯಕರ ಸೂಚನೆಯಾಗಿದ್ದು ಗಾಳಿಯಲ್ಲಿರುವ ಸಾಮಾನ್ಯ ವೈರಸ್ಸು ಬ್ಯಾಕ್ಟೀರಿಯಾಗಳ ಧಾಳಿಗೆ ಸುಲಭವಾಗಿ ತುತ್ತಾಗಿ ಕೆಲವಾರು ಕಾಯಿಲೆಗಳು ಆವರಿಸಿಕೊಳ್ಳಬಹುದು. ಒಂದು ವೇಳೆ ನಿಮಗೂ ಇದೇ ತೊಂದರೆ ಕಾಣಿಸಿಕೊಂಡಿದ್ದರೆ ಇಂದಿನ ಲೇಖನದಲ್ಲಿ ನೀಡಿರುವ ಸುಲಭವಾದ ವಿಧಾನವನ್ನು ಅನುಸರಿಸುವ ಮೂಲಕ ಈ ಕೊರತೆಯನ್ನು ಸಮರ್ಥವಾಗಿ ತುಂಬಿ ಆರೋಗ್ಯವನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ. ಸುಳಿವು ನೀಡದೇ ಕಾಡುವ ರೋಗಕ್ಕೆ ರಾಮಬಾಣ-ಬೆಳ್ಳುಳ್ಳಿ
ಇದಕ್ಕೆ ಬಳಸಲಾಗಿರುವ ಸಾಮಾಗ್ರಿಗಳಿಗೇನೂ ದೂರ ಹೋಗಬೇಕಾಗಿಲ್ಲ, ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವ ಜೇನು ಮತ್ತು ಬೆಳ್ಳುಳ್ಳಿಗಳೇ ಇದಕ್ಕೆ ಸಾಕು. ಜೇನು ಮತ್ತು ಬೆಳ್ಳುಳ್ಳಿ ಪ್ರತ್ಯೇಕವಾಗಿ ಆರೋಗ್ಯಕ್ಕೆ ಹಲವು ರೀತಿಯಾದ ಉಪಕಾರವನ್ನು ಮಾಡುತ್ತವೆ ಎಂದು ನಮಗೆಲ್ಲಾ ಗೊತ್ತಿದೆ. ಆದರೆ ಇವೆರಡನ್ನೂ ಬೆರೆಸಿ ಸೇವಿಸಿದಾಗ ಎಲ್ಲಾ ಗುಣಗಳು ಗುಣಾಕಾರಗೊಂಡು ಅತಿ ಹೆಚ್ಚಿನ ಪ್ರಯೋಜನವನ್ನು ನೀಡುತ್ತವೆ. ಮನೆ ಔಷಧ: ಬೆಳ್ಳುಳ್ಳಿ ಹಾಗೂ ಜೇನುತುಪ್ಪದ ಜಬರ್ದಸ್ತ್ ಪವರ್
ಇದಕ್ಕಾಗಿ ಬೆಳ್ಳುಳ್ಳಿಯ ಒಂದೆರಡು ಎಸಳುಗಳ ಸಿಪ್ಪೆ ಸುಲಿದು ಜಜ್ಜಿ ಇದನ್ನು ಕೊಂಚ ಜೇನಿನೊಂದಿಗೆ ಬೆರೆಸಿ ಹಾಗೇ ಸೇವಿಸಬೇಕು. (ಯಾವುದಕ್ಕೂ ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ) ಅತಿ ಉತ್ತಮ ಪರಿಣಾಮಕ್ಕಾಗಿ ಪ್ರತಿದಿನ ಬೆಳಿಗ್ಗೆದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸುಮಾರು ಒಂದು ದೊಡ್ಡ ಚಮಚದಷ್ಟು ಪ್ರಮಾಣವನ್ನು ಸತತವಾಗಿ ಏಳು ದಿನಗಳ ಕಾಲ ಸೇವಿಸುತ್ತಾ ಬಂದರೆ ರೋಗ ನಿರೋಧಕ ಶಕ್ತಿ ಉತ್ತಮಗೊಂಡು ಹಲವಾರು ಕಾಯಿಲೆಗಳು ದೂರವಾಗಿರುವುದನ್ನು ಕಾಣಬಹುದು. ಬನ್ನಿ, ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.....

ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ
ಈ ಅದ್ಭುತ ಮಿಶ್ರಣದಲ್ಲಿರುವ ಖನಿಜಾಂಶಗಳು ರಕ್ತದಲ್ಲಿ ಬೆರೆತಾಗ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಒಟ್ಟಾರೆ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಇದರಲ್ಲಿರುವ ಹಲವಾರು ಪೋಷಕಾಂಶಗಳನ್ನು ಬಳಸಬೇಕಾದರೆ ದೇಹ ಅನಿವಾರ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ದಹಿಸಬೇಕಾಗಿ ಬರುತ್ತದೆ. ಇದು ಪ್ರತ್ಯಕ್ಷವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ರಕ್ತದೊತ್ತಡ ನಿಯಂತ್ರಿಸುತ್ತದೆ...
ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶವು ಪ್ರಬಲವಾದ ಆಂಟಿ ಆಕ್ಸಿಡೆಂಟ್ ಆಗಿದ್ದು ರಕ್ತನಾಳಗಳನ್ನು ಸಡಿಲಗೊಳಿಸಲು ನೆರವು ನೀಡುತ್ತದೆ. ಇದರಿಂದ ಪೆಡಸಾಗಿದ್ದ ರಕ್ತನಾಳಗಳ ಒಳಗಿನಿಂದ ರಕ್ತಪ್ರವಹಿಸಲು ಹೆಚ್ಚಿನ ಒತ್ತಡದ ಅಗತ್ಯವಿದ್ದುದು ಈಗ ಸಡಿಲಗೊಂಡಿರುವ ಕಾರಣ ಹೆಚ್ಚಿನ ಒತ್ತಡದ ಅಗತ್ಯವಿಲ್ಲದೇ ಅಧಿಕ ರಕ್ತದೊತ್ತಡ ತಹಬಂದಿಗೆ ಬರುತ್ತದೆ.

ಗಂಟಲ ಬೇನೆ ಕಡಿಮೆಗೊಳಿಸುತ್ತದೆ
ಈ ಮಿಶ್ರಣ ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದ್ದು ವಿಶೇಷವಾಗಿ ಗಂಟಲ ಒಳಭಾಗದ ತೇವವಿರುವ ಭಾಗದಲ್ಲಿ ಉಂಟಾಗಿರುವ ಸೋಂಕನ್ನು ನಿವಾರಿಸಲು ನೆರವಾಗುವ ಮೂಲಕ ಗಂಟಲ ಬೇನೆ ಮತ್ತು ಇತರ ಸಂಬಂಧಿತ ತೊಂದರೆಗಳನ್ನು ನಿವಾರಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಈ ಮಿಶ್ರಣ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಜೀರ್ಣಕ್ರಿಯೆ ಸುಲಭ ಮತ್ತು ಸರಾಗವಾಗಿ ನಡೆಯಲು ನೆರವಾಗುತ್ತದೆ. ಅಲ್ಲದೇ ಆಮಶಂಕೆಯ ತೊಂದರೆ ಇದ್ದರೆ ಈ ಮಿಶ್ರಣ ಉತ್ತಮ ಔಷಧಿಯೂ ಆಗಿದೆ.

ಕೆಮ್ಮು ಮತ್ತು ಶೀತವನ್ನು ಕಡಿಮೆ ಮಾಡುತ್ತದೆ
ಜೇನು ಮತ್ತು ಬೆಳ್ಳುಳ್ಳಿ ಎರಡರಲ್ಲಿಯೂ ಅತಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಉತ್ತಮವಾದ ಸೂಕ್ಷ್ಮಜೀವಿ ನಿವಾರಕಗಳೂ ಆಗಿವೆ. ಈ ಗುಣಗಳು ಶೀತ ಮತ್ತು ಕೆಮ್ಮಿಗೆ ಕಾರಣವಾಗುವ ವೈರಸ್ಸು ಮತ್ತು ಈ ಮೂಲಕ ಎದುರಾಗುವ ಸೋಂಕನ್ನು ನಿವಾರಿಸಲು ಸಮರ್ಥವಾಗಿದ್ದು ಶೀತ ಕೆಮ್ಮು ಉಂಟಾಗಿದ್ದರೆ ದಿನಕ್ಕೆ ಮೂರು ಹೊತ್ತು ಕೊಂಚ ಕೊಂಚವಾಗಿ ಸೇವಿಸುವ ಮೂಲಕ ಶೀಘ್ರ ಉಪಶಮನ ಪಡೆಯಬಹುದು.

ಶಿಲೀಂಧ್ರದ ಸೋಂಕಿನಿಂದ ರಕ್ಷಿಸುತ್ತದೆ
ಜೇನು ಮತ್ತು ಬೆಳ್ಳುಳ್ಳಿ ಎರಡೂ ಉತ್ತಮವಾದ ಬ್ಯಾಕ್ಟೀರಿಯಾನಿವಾರಕಗಳಾಗಿದ್ದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಅತ್ಯುತ್ತಮವಾದ ರಕ್ಷಣೆಯನ್ನು ನೀಡುತ್ತವೆ.

ದೇಹದಿಂದ ಕಲ್ಮಶಗಳನ್ನು ಹೊರಹಾಕುತ್ತದೆ
ಜೇನು ಮತ್ತು ಬೆಳ್ಳುಳ್ಳಿಯ ಜೋಡಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ಸಮರ್ಥವಾಗಿವೆ. ದೇಹದ ವಿವಿಧ ಭಾಗಗಳಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಿ ಹೊರದೂಡುವ ಮೂಲಕ ದೇಹವನ್ನು ಶುದ್ಧ ಮತ್ತು ಆರೋಗ್ಯಕರವಾಗಿರಿಸಲು ಈ ಜೋಡಿ ನೆರವಾಗುತ್ತದೆ.



Click it and Unblock the Notifications











