For Quick Alerts
ALLOW NOTIFICATIONS  
For Daily Alerts

ಮನೆ ಔಷಧ: ಬೆಳ್ಳುಳ್ಳಿ ಹಾಗೂ ಜೇನುತುಪ್ಪದ ಜಬರ್ದಸ್ತ್ ಪವರ್

ಬೆಳ್ಳುಳ್ಳಿಯ ಕೆಲವೊಂದು ಎಸಲುಗಳನ್ನು ಪಡೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಹಾಕಿ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಿ. ಈಗ ಮನೆಮದ್ದು ಸ್ವೀಕರಿಸಲು ತಯಾರಾಗಿದೆ.

By Manu
|

ಅಡುಗೆ ಮನೆಯಲ್ಲಿಯೇ ಸಿಗುವ ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಕೆಲವೊಂದು ರೋಗಗಳನ್ನು ನಿವಾರಿಸಬಹುದು ಹಾಗೂ ತಡೆಬಹುದು. ಸಣ್ಣ ಸಣ್ಣ ಕಾಯಿಲೆಗಳನ್ನು ನಿವಾರಿಸುವುದು ಹಿಂದಿನಿಂದಲೂ ನಮ್ಮ ಅಡುಗೆ ಮನೆಯಲ್ಲಿಯೇ ಇದ್ದ ಸಾಂಬಾರ ಪದಾರ್ಥಗಳಿಂದ.

ಇಂದಿಗೂ ಹೆಚ್ಚಿನ ಜನರು ಸಾಂಬಾರ ಪದಾರ್ಥಗಳನ್ನು ಬಳಸಿ ರೋಗಗಳನ್ನು ತಡೆಗಟ್ಟುತ್ತಾರೆ. ಕೆಲವೊಂದು ಆರೋಗ್ಯಕರ ಆಹಾರಗಳು ನಮ್ಮ ಮನೆಯಲ್ಲಿಯೇ ಇದೆ. ಇದನ್ನು ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದರಲ್ಲಿ ಬೆಳ್ಳುಳ್ಳಿಯೂ ಒಂದಾಗಿದೆ. ಸತತ ಏಳು ದಿನ ಬೆಳ್ಳುಳ್ಳಿ-ಜೇನು ಸೇವಿಸಿ, ಆರೋಗ್ಯ ವೃದ್ಧಿಸಿ!

Garlic Paste With Honey

ಬೆಳ್ಳುಳ್ಳಿಯಲ್ಲಿರುವ ಕೆಲವೊಂದು ಆರೋಗ್ಯಕಾರಿ ಗುಣಗಳು ನಮ್ಮ ಆರೋಗ್ಯವನ್ನು ರಕ್ಷಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಬೆಳ್ಳುಳ್ಳಿಯ ಕೆಲವೊಂದು ಎಸಲುಗಳನ್ನು ಪಡೆದುಕೊಂಡು ಅದನ್ನು ಮಿಕ್ಸಿಗೆ ಹಾಕಿ. ಸ್ವಲ್ಪ ನೀರು ಹಾಕಿ ಅದನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಒಂದು ಚಮಚ ಜೇನುತುಪ್ಪವನ್ನು ಹಾಕಿಕೊಳ್ಳಿ. ಈಗ ಮನೆಮದ್ದು ಸ್ವೀಕರಿಸಲು ತಯಾರಾಗಿದೆ. ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಹಾಕಿರುವ ಮನೆಮದ್ದಿನಿಂದ ಯಾವ ಲಾಭಗಳು ಇವೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳುವ.

ಪ್ರತಿರೋಧಕ ಶಕ್ತಿ ಹೆಚ್ಚಳ
ಒಳ್ಳೆಯ ಆರೋಗ್ಯ ಬೇಕಾದರೆ ಪ್ರತಿರೋಧಕ ಶಕ್ತಿಯು ಬಲಷ್ಠವಾಗಿರಬೇಕು. ಪ್ರತಿರೋಧಕ ಶಕ್ತಿಯು ಬಲಿಷ್ಠವಾಗಿದ್ದರೆ ನಮ್ಮ ದೇಹಕ್ಕೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಸೂಕ್ಷ್ಮಾಣು ಜೀವಿಗಳಿಂದ ಬರುವಂತಹ ರೋಗಗಳನ್ನು ತಡೆಯಬಹುದು. ಇದರಿಂದ ರೋಗ ಪೀಡಿತರಾಗುವುದು ಕಡಿಮೆಯಾಗಬಹುದು. ಬೆಳ್ಳುಳ್ಳಿ ಮತ್ತು ಜೇನುತುಪ್ಪದಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ. ಇದರಿಂದ ನೀವು ಆರೋಗ್ಯ ಹಾಗೂ ಚಟುವಟಿಕಯಿಂದ ಇರಬಹುದು. ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?

ಅಧಿಕ ರಕ್ತದೊತ್ತಡ ತಡೆಯುವುದು
ಅಪಧಮನಿಗಳ ಗೋಡೆಗಳಿಗೆ ರಕ್ತವು ತೀವ್ರ ರಭಸದಿಂದ ಸಾಗಿದಾಗ ಉಂಟಾಗುವ ಸಮಸ್ಯೆಯನ್ನು ಅಧಿಕರಕ್ತದೊತ್ತಡವೆಂದು ಕರೆಯಲಾಗುತ್ತದೆ. ಇದರಿಂದಾಗಿ ತಲೆನೋವು, ನಿಶ್ಯಕ್ತಿ, ಹೃದಯ ರಕ್ತನಾಳದ ಸಮಸ್ಯೆಗಳು, ಪಾರ್ಶ್ವವಾಯು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬೆಳ್ಳುಳ್ಳಿ ಮತ್ತು ಜೇನುತುಪ್ಪದ ಮಿಶ್ರಣವು ರಕ್ತನಾಳಗಳನ್ನು ಹಿಗ್ಗಿಸಿ ರಕ್ತವು ಸರಾಗವಾಗಿ ಸಾಗುವಂತೆ ಮಾಡುತ್ತದೆ. ಇದರಿಂದ ರಕ್ತದೊತ್ತಡವು ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡ ತಡೆಯಲು ಗಿಡಮೂಲಿಕೆಗಳು

ಮೆದುಳಿನ ಆರೋಗ್ಯ ಸುಧಾರಣೆ
ಬೆಳ್ಳುಳ್ಳಿಯಲ್ಲಿರುವಂತಹ ಅಲಿಸಿನ್ ಎನ್ನುವಂತಹ ಅಂಶ ಮತ್ತು ಜೇನಿನಲ್ಲಿರುವ ಆರೋಗ್ಯಕರ ಆ್ಯಂಟಿಆಕ್ಸಿಡೆಂಟ್ ಗಳು ಮೆದುಳಿನ ಕೋಶಗಳಿಗೆ ಪೋಷಕಾಂಶವನ್ನು ಒದಗಿಸುವುದು. ಇದರಿಂದ ಮೆದುಳಿನ ಆರೋಗ್ಯವು ಉತ್ತಮವಾಗುವುದು. ಬೆಳ್ಳುಳ್ಳಿಯಲ್ಲಿರುವ ಕೆಲವೊಂದು ಅಂಶಗಳು ಮೆದುಳಿನ ಕೋಶಗಳನ್ನು ಆರೋಗ್ಯವಾಗಿಟ್ಟು ಬುದ್ಧಿಮಾಂದ್ಯತೆ ಮತ್ತು ಅಲ್ಝೆಮರ್ ನಂತಹ ರೋಗಗಳು ಬರದಂತೆ ತಡೆಯುತ್ತದೆ.

English summary

What Happens When You Drink Garlic Paste With Honey?

Looking for an exceptional home remedy that can help tackle a number of health issues, at one go? If yes, then you must try this natural home remedy, today! As we know, we do not have to venture too far away in search of healthy foods, as our own kitchen and garden hold ingredients that can give us great health! Many of us may turn away at the strong odour of garlic
X
Desktop Bottom Promotion