ಹಳ್ಳಿಗಾಡಿನ ಪಾನೀಯ, ಕೊಬ್ಬು ಕರಗಿಸುವಲ್ಲಿ ಎತ್ತಿದ ಕೈ...

By manu

ಸ್ಥೂಲಕಾಯದವರಿಗೆ ಇರುವುದು ಸಮಾನವಾದ ಚಿಂತೆ, ಈ ಸೊಂಟವನ್ನು ಹೇಗಪ್ಪಾ ಕರಗಿಸುವುದು? ವಿಶೇಷವಾಗಿ ಮಹಿಳೆಯರಿಗೆ ಈ ಚಿಂತೆ ಹೆಚ್ಚು. ಇಸ್ ಕಮರೇ ಕೋ ಕಮರ್ ಕೈಸೇ ಬನಾಯೇಂಗೇ? ಎನ್ನುವ ಚಿಂತೆ ಹೆಚ್ಚಿನ ಸ್ಥೂಲದೇಹಿ ಮಹಿಳೆಯರಿಗೆ. ದೇಹದಲ್ಲಿ ಕೊಬ್ಬು ಮೊತ್ತ ಮೊದಲಾಗಿ ಸೊಂಟದ ಸುತ್ತ ಸಂಗ್ರಹಿಸಲು ಪ್ರಾರಂಭವಾದರೂ ಬಳಕೆಯ ವಿಷಯ ಬಂದಾಗ ಕಟ್ಟಕಡೆಯದಾಗಿ ಬಳಸಲ್ಪಡುವುದೇ ಸೊಂಟ ಸುಲಭವಾಗಿ ಕರಗದಿರುವ ಗುಟ್ಟು.

ಇದಕ್ಕೆ ತಕ್ಕ ಕ್ರಮ ಎಂದರೆ ಈಗ ಸೇವಿಸುತ್ತಿರುವ ಆಹಾರದಲ್ಲಿ ನಿಯಂತ್ರಣ ಮತ್ತು ಈಗಿರುವ ಚಟುವಟಿಕೆಗಿಂತಲೂ ಹೆಚ್ಚಿನ ದೈಹಿಕ ಶ್ರಮ. ಆಹಾರದಲ್ಲಿ ನಿಯಂತ್ರಣ ಎಂದರೆ ದಿನದ ಅಗತ್ಯಕ್ಕೆ ಸಾಕಾಗುವಷ್ಟು ಮಾತ್ರ ಆಹಾರ ಸೇವಿಸುವುದು ಮತ್ತು ಇದರಿಂದ ಸಿಕ್ಕ ಶಕ್ತಿಗಿಂತಲೂ ಹೆಚ್ಚು ವ್ಯಯವಾಗುವಂತಹ ದೈಹಿಕ ಚಟುವಟಿಕೆ ನಡೆಸುವ ಮೂಲಕ ನಿತ್ಯವೂ ಕೊಂಚಕೊಂಚವಾಗಿ ಕೊಬ್ಬು ಕರಗುತ್ತಾ ನಿಧಾನವಾಗಿ ಸೊಂಟವೂ ಕರಗುತ್ತದೆ. ಮಾರುಕಟ್ಟೆಯಲ್ಲಿ ಲಿಪೋಸಕ್ಷನ್, ವೇಟ್ ಸರ್ಜರಿ ಮೊದಲಾದ ವಿಧಾನಗಳೂ ಇವೆ. ನಾಲ್ಕೇ ದಿನದಲ್ಲಿ ಕೊಬ್ಬು ಕರಗಿಸುವ ಪವರ್ ಈ ಜ್ಯೂಸ್‌ನಲ್ಲಿದೆ!

ಆದರೆ ಇವು ದುಬಾರಿಯಾಗಿದ್ದು ಹಲವು ಅಡ್ಡಪರಿಣಾಮಗಳನ್ನೂ ಹೊಂದಿದೆ. ಆದ್ದರಿಂದ ಕೊಂಚ ತಡವಾಗಿ ಆದರೂ ಪರವಾಗಿಲ್ಲ, ಆರೋಗ್ಯಕರ ಮತ್ತು ಸುಲಭವಾದ ವಿಧಾನವನ್ನೇ ಅನುಸರಿಸುವುದು ಉತ್ತಮ. ಈ ನಿಟ್ಟಿನಲ್ಲಿ ಆಹಾರದಲ್ಲಿ ನಿಯಂತ್ರಣದ ಜೊತೆಗೇ ಜೀರ್ಣಗೊಳ್ಳಲು ಹೆಚ್ಚಿನ ಕೊಬ್ಬನ್ನು ಕಬಳಿಸುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳುವುದು ಜಾಣತನದ ಕ್ರಮವಾಗಿದೆ.

ಜಾಣರಿಗಾಗಿ ಕೆಲವು ಪೇಯಗಳು ಲಭ್ಯವಿವೆ. ಇವು ವ್ಯಾಯಮಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಜೀರ್ಣಗೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಎರಡು ಕಡೆಗಳಿಂದ ತೂಕ ಇಳಿಯಲು ನೆರವಾಗುತ್ತದೆ. ಇದೇ ಕಾರಣಕ್ಕೆ ಇವುಗಳಿಗೆ ಪ್ರಬಲ ಎಂಬ ವಿಶೇಷಣವನ್ನೂ ಬಳಸಲಾಗಿದೆ. ಈ ಪೇಯಗಳನ್ನು ಬಿಸಿಯಾಗಿ ದಿನದ ಪ್ರಥಮ ಆಹಾರವಾಗಿ ಸೇವಿಸಿದರೆ ಇದರ ಪರಿಣಾಮ ಗರಿಷ್ಠ ಪ್ರಮಾಣದಲ್ಲಿರುತ್ತದೆ. ರಾತ್ರಿ ಊಟದ ಬಳಿಕದ ಸೇವನೆ ಇನ್ನಷ್ಟು ಪರಿಣಾಮಕಾರಿಯಾಗಿದೆ. ಇಂತಹ ಒಟ್ಟು ಐದು ಪೇಯಗಳನ್ನು ಆರಿಸಿಕೊಳ್ಳಲಾಗಿದ್ದು ಇದರಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಸಾಮಾನ್ಯ ತರಕಾರಿಗಳಲ್ಲ, ಕೊಬ್ಬು ಕರಗಿಸುವಲ್ಲಿ ಎತ್ತಿದಕೈ

ಆದರೆ ಬರೆಯ ಪೇಯ ಕುಡಿದರೆ ಸಾಕಾಗದು, ದಿನದ ಇತರ ಹೊತ್ತಿನಲ್ಲಿ ಸೇವಿಸಲಾಗುವ ಆಹಾರಗಳೂ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರು ಇರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತಿರುವುದು, ಕಾಲಕಾಲಕ್ಕೆ ಮೂತ್ರವಿಸರ್ಜಿಸುತ್ತಿರುವುದು, ದೇಹದಲ್ಲಿ ವಿಷಕಾರಿ ವಸ್ತುಗಳನ್ನು ಹೆಚ್ಚಿಸುವ ಯಾವುದೇ ಆಹಾರ ಸೇವಿಸದಿರುವುದು, ಕೊಬ್ಬಿನ ಪ್ರಮಾಣ ಕನಿಷ್ಠಕ್ಕಿಳಿಸುವುದು ಮೊದಲಾದವೂ ಅಗತ್ಯವಾಗಿವೆ. ಬನ್ನಿ, ಈ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯೋಣ...

ದಾಲ್ಚಿನ್ನಿ ಟೀ

ದಾಲ್ಚಿನ್ನಿ ಟೀ

ದಾಲ್ಚಿನ್ನಿ ಅಥವಾ ಚೆಕ್ಕೆ ಒಂದು ಸಾಂಬಾರ ಪದಾರ್ಥವಾಗಿದ್ದು ಅಡುಗೆಯಲ್ಲಿ ಸುವಾಸನೆ ಮತ್ತು ರುಚಿಗಾಗಿ ಬಳಸಲಾಗುತ್ತದೆ. ಆದರೆ ಇದು ಜೀರ್ಣಕ್ರಿಯೆಯಲ್ಲಿ ನೆರವಾಗುವ ಜೊತೆಗೇ ಕೊಬ್ಬನ್ನು ಕರಗಿಸಲೂ ಸಮರ್ಥವಾಗಿದೆ. ಅಂದರೆ ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಕೆಯಾಗುತ್ತದೆ. ದಾಲ್ಚಿನ್ನಿ ಹಲವು ರೀತಿಯಲ್ಲಿ ಆರೋಗ್ಯಕ್ಕೂ ಪೂರಕವಾಗಿದೆ. ಇದನ್ನು ಕಪ್ಪು ಟೀ ಜೊತೆಗೆ ಸೇವಿಸಿದರೆ ತೂಕ ಇಳಿಸಿಕೊಳ್ಳಲು ಹೆಚ್ಚು ನೆರವು ಸಿಕ್ಕಂತಾಗುತ್ತದೆ. ಈ ಟೀ ತಯಾರಿಸುವುದೂ ಬಹಳ ಸುಲಭವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದಾಲ್ಚಿನ್ನಿ ಟೀ

ದಾಲ್ಚಿನ್ನಿ ಟೀ

ಪ್ರತಿದಿನ ಬೆಳಿಗ್ಗೆ ಒಂದು ಕಪ್ ಕಪ್ಪು ಚಹಾ, ಅಂದರೆ ಹಾಲಿಲ್ಲದ ಟೀ ಯಲ್ಲಿ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಬಿಸಿಬಿಸಿಯಾಗಿಯೇ ಖಾಲಿಹೊಟ್ಟೆಯಲ್ಲಿ ಕುಡಿಯುವ ಮೂಲಕ ಮತ್ತು ರಾತ್ರಿ ಮಲಗುವ ಮುನ್ನ ಒಂದು ಕಪ್ ಕುಡಿಯುವ ಮೂಲಕ ತೂಕ ಶೀಘ್ರವೇ ಇಳಿಯಲು ಸಾಧ್ಯವಾಗುತ್ತದೆ. ಕೊಂಚ ಖಾರ ಎನಿಸಿದರೆ ಒಂದು ಚಿಕ್ಕ ಚಮಚ ಜೇನು ಸೇರಿಸಬಹುದು. ಆದರೆ ಸಕ್ಕರೆ ಬೇಡ.

ಹಸಿರು ಟೀ

ಹಸಿರು ಟೀ

ಹಸಿರು ಟೀ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ತೂಕ ಇಳಿಸುವ ಜೊತೆಗೇ ಕ್ಯಾನ್ಸರ್ ತಡೆಗಟ್ಟಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಸಿರು ಟೀ ಉತ್ತಮವಾಗಿದೆ. ಪ್ರತಿದಿನ ಹಸಿರು ಟೀ ಸೇವನೆ ಮತ್ತು ದಿನದ ಇತರ ಹೊತ್ತಿನಲ್ಲಿ ಹಾಲಿನ ಮತ್ತು ಸಕ್ಕರೆಯ ಪೇಯಗಳನ್ನು ವರ್ಜಿಸುವ ಮೂಲಕ ತೂಕ ಇಳಿಕೆ ಶೀಘ್ರವಾಗಿ ಸಾಧ್ಯವಾಗುತ್ತದೆ.

ಲಿಂಬೆರಸ ಸೇರಿಸಿದ ನೀರು

ಲಿಂಬೆರಸ ಸೇರಿಸಿದ ನೀರು

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಲಿಂಬೆರಸ ಮತ್ತು ಕೊಂಚ ಉಪ್ಪು ಸೇರಿಸಿ ಕದಡಿ ಕುಡಿದರೆ ತೂಕ ಇಳಿಕೆ ಶೀಘ್ರವಾಗಿ ಆಗಲು ಸಾಧ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆರಸ ಸೇರಿಸಿದ ನೀರು

ಲಿಂಬೆರಸ ಸೇರಿಸಿದ ನೀರು

ಜೊತೆಗೇ ರಾತ್ರಿ ಮಲಗುವ ಮುನ್ನ ಇನ್ನೊಂದು ಲೋಟ ಕುಡಿದರೆ ಇನ್ನಷ್ಟು ಉತ್ತಮ. ಈ ವಿಧಾನವನ್ನು ಅನುಸರಿಸಿದ ಬಳಿಕ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗುತ್ತಾ ಬರುವುದು ಗೋಚರಿಸುತ್ತದೆ.

ಕೋಸಿನ ರಸ

ಕೋಸಿನ ರಸ

ತೂಕ ಇಳಿಕೆಯ ವಿಷಯ ಬಂದಾಗ ಕೋಸಿನ ರಸ ಸಹಾ ಒಂದು ಉತ್ತಮ ಆಯ್ಕೆಯಾಗಿದೆ. ಆದರೆ ಇದರ ರುಚಿ ಕೊಂಚ ಒಗರಾಗಿರುವ ಕಾರಣ ಹೆಚ್ಚಿನವರು ಇದನ್ನು ಕುಡಿಯಲು ಇಷ್ಟಪಡುವುದಿಲ್ಲ.

ಕೋಸಿನ ರಸ

ಕೋಸಿನ ರಸ

ಆದರೆ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದರೆ ಉತ್ತಮ ಪರಿಣಾಮ ಕಂಡುಬರುತ್ತದೆ. ವಿಶೇಷವಾಗಿ ಇದು ಮಹಿಳೆಯರಿಗೆ ಹೆಚ್ಚು ಸೂಕ್ತವಾಗಿದೆ.

ಈರುಳ್ಳಿ ರಸ

ಈರುಳ್ಳಿ ರಸ

ಈರುಳ್ಳಿಯ ವಾಸನೆಯೇ ಇಷ್ಟೊಂದು ಕಟುವಾಗಿರಬೇಕಾದರೆ ಇದರ ರಸ ಇನ್ನೆಷ್ಟು ಘಾಟು ಇರಬಹುದು? ಆದರೆ ತಜ್ಞರ ಅನುಭವದ ಪ್ರಕಾರ ಕ್ಯಾಲೋರಿಗಳನ್ನು ಬಳಸಿ ತೂಕ ಕಡಿಮೆ ಮಾಡಿಕೊಳ್ಳಲು ಬಿಸಿಯಾದ ಈರುಳ್ಳಿ ರಸಕ್ಕಿಂತ ಇನ್ನೊಂದು ಉತ್ತಮ ಪೇಯವಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈರುಳ್ಳಿ ರಸ

ಈರುಳ್ಳಿ ರಸ

ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಕೇವಲ ಅರ್ಧ ಲೋಟ ಈರುಳ್ಳಿ ರಸವನ್ನು ಕೊಂಚ ಬಿಸಿಮಾಡಿ ಮೂಗು ಮುಚ್ಚಿ ಕುಡಿದುಬಿಟ್ಟರೆ ಸಾಕು, ಕೊಬ್ಬು ನಿಧಾನವಾಗಿ ಕರಗತೊಡಗಿ ಕೆಲವೇ ದಿನಗಳಲ್ಲಿ ಸಿಂಹಕಟಿಯನ್ನು ಪಡೆಯಬಹುದು.

English summary

Hot Drinks That Cut Those Calories: 5 Powerful Drinks For That Fat

Weight loss is on everyone's mind, especially the ladies. To lose weight, one must be dedicated to their goal and should stick to a diet. Losing weight the right and natural way is healthy for the body and, at the same time, it will do the body good instead of opting for unnatural and expensive options. There are many people who turn to liposuction and other weight loss surgeries, now, though they are worth it, these methods will drive a hole in your pocket as well as may cause an injury to the other organs as well.
X
Desktop Bottom Promotion