For Quick Alerts
ALLOW NOTIFICATIONS  
For Daily Alerts

ಇನ್ನು ಎದೆಯುರಿ ಸಮಸ್ಯೆಗೆ ದಯವಿಟ್ಟು ಕಂಗಾಲಾಗದಿರಿ!

By Manu
|

ಕೆಲವೊಮ್ಮೆ ಹೃದಯದ ಬಳಿ ಎದೆಯ ನಟ್ಟನಡುವೆ ಚೂರಿಯಿಂದ ಇರಿದಂತೆ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ. ಇದರ ಬಗ್ಗೆ ಮಾಹಿತಿ ಇಲ್ಲದವರು ತಮ್ಮ ಹೃದಯದಲ್ಲಿಯೇ ತೊಂದರೆ ಇದೆ, ಹೃದಯಾಘಾತವಾಗುತ್ತಿದೆ ಎಂಬಂತೆ ಗಾಬರಿಗೊಳ್ಳುತ್ತಾರೆ. ವಾಸ್ತವವಾಗಿ ಹೃದಯದಲ್ಲಿ ನೋವು ಕಾಣಿಸಿಕೊಂಡರೆ ಎದೆಯ ನಟ್ಟ ನಡುವಿನಲ್ಲಲ್ಲ, ಕೊಂಚ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನಟ್ಟನಡುವಿನಲ್ಲಿ ಉರಿ ಅಥವಾ ತೀಕ್ಷ್ಣವಾದ ನೋವು ಕಾಣಿಸಿಕೊಂಡರೆ ಅದು ಬಹುತೇಕ ಎದೆಯುರಿಯ (heartburn) ಪ್ರಭಾವವಾಗಿರಬಹುದು. ಇದು ಹೊಟ್ಟೆಯ ಮೇಲ್ಭಾಗದಿಂದ ಹಿಡಿದು ಗಂಟಲವರೆಗೂ ವ್ಯಾಪಿಸಬಹುದು.

ಇದಕ್ಕೆ ಮುಖ್ಯ ಕಾರಣ ನಮ್ಮ ಜಠರದಲ್ಲಿ ಅತ್ಯಂತ ಆಮ್ಲೀಯವಾದ ಜಠರರಸದಲ್ಲಿ ಆಹಾರ ಜೀರ್ಣವಾದ ಬಳಿಕ ಕರಗಿದ ದ್ರವ ಕರುಳುಗಳ ಮೂಲಕ ಮುಂದೆ ಹೋಗಬೇಕು. ಆದರೆ ವಿವಿಧ ಕಾರಣಗಳಿಂದಾಗಿ ಈ ಆಮ್ಲೀಯ ದ್ರವ ಅನ್ನನಾಳದ ಮೂಲಕ ಹೊಟ್ಟೆಯಿಂದ ಗಂಟಲಿನತ್ತ ಹೊರಡುತ್ತದೆ. ಕರಗಿರುವ ಆಮ್ಲದ ಕಾರಣ ಅನ್ನನಾಳದ ಒಳಭಾಗದಲ್ಲಿ ಉರಿ ತರಿಸುತ್ತದೆ. ಇದೇ ಎದೆಯುರಿ.

ಇದರ ಮುಖ್ಯ ಲಕ್ಷಣಗಳೆಂದರೆ ವಾಕರಿಕೆ, ಹೊಟ್ಟೆ ಉಬ್ಬರಿಸುವುದು, ಉಸಿರಾಟದಲ್ಲಿ ತೊಂದರೆ ಮತ್ತು ಬಾಯಿಯಲ್ಲಿ ಬರುವ ಹುಳಿರುಚಿಯಾಗಿದೆ. ಎದೆಯುರಿಯ ನಿಯಂತ್ರಣಕ್ಕಾಗಿ ಸಾಕಷ್ಟು ಮನೆಮದ್ದುಗಳಿದ್ದು ಅವುಗಳನ್ನು ಬಳಸಿ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.ಶುಂಠಿ, ಬಾದಾಮಿ, ವಿನೇಗರ್ ಎದೆಯುರಿಯನ್ನು ನಿಯಂತ್ರಣದಲ್ಲಿರಿಸುವ ಮನೆಮದ್ದುಗಳಾಗಿದೆ. ಇವುಗಳಂತೆ ಇನ್ನೂ ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳಿದ್ದು ಅವುಗಳನ್ನು ಬಳಸಿ ಎದೆಯುರಿಯನ್ನು ನಿಯಂತ್ರಿಸಬಹುದಾಗಿದೆ. ಹಾಗಿದ್ದರೆ ಆ ಮದ್ದುಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‎ಗಳಿಂದ ತಿಳಿದುಕೊಳ್ಳಿ...

ಶುಂಠಿ

ಶುಂಠಿ

ಜೀರ್ಣಕ್ರಿಯೆ ಅಸಮತೋಲನಗಳ ವಿರುದ್ಧ ಸೂಕ್ತವಾಗಿ ಕಾರ್ಯನಿರ್ವಹಿಸುವಲ್ಲಿ ಶುಂಠಿಯ ಪಾತ್ರ ಹಿರಿದಾದುದು. ಎದೆಯುರಿಯ ಶಮನಕ್ಕೆ ಅಥವಾ ಆಸಿಡ್‎ನ ಹಿಮ್ಮುಖ ಹರಿವಿಗೆ ಇದು ಹೆಚ್ಚು ಪರಿಣಾಮಕಾರಿ ಎಂದೆನಿಸಿದೆ. ನಿಮ್ಮ ಆಹಾರದಲ್ಲಿ ಶುಂಠಿಯನ್ನು ಬಳಸಿಕೊಳ್ಳುವುದು ಅಂತೆಯೇ ಅದನ್ನು ಹಾಗೆಯೇ ತಿನ್ನುವುದರಿಂದ ಕೂಡ ಪ್ರಯೋಜವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಸಾಕಷ್ಟು ನೀರು ಸೇವನೆ

ಸಾಕಷ್ಟು ನೀರು ಸೇವನೆ

ದೇಹದಿಂದ ವಿಷವನ್ನು ಹೊರಹಾಕಲು ನೀರು ಸಹಕಾರಿಯಾಗಿದೆ. ಎದೆಯುರಿಗೆ ನೀರು ಸೇವನೆ ಕೂಡ ಅತ್ಯುಪಯುಕ್ತವಾದುದು. ಎದೆಯುರಿಯುಂಟಾದಾಗ ಆತ/ಆಕೆ ಕೂಡಲೇ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು. ಸ್ವಲ್ಪ ಉಪ್ಪುನ್ನು ಹಾಕಿ ನೀರನ್ನು ಸೇವಿಸುವುದರಿಂದ ಪರಿಣಾಮ ತೀವ್ರವಾಗಿರುತ್ತದೆ.

ಬಾದಾಮಿ

ಬಾದಾಮಿ

ತನ್ನ ತೈಲಾಂಶಗಳಿಂದ ಶ್ರೀಮಂತವಾಗಿರುವ ಬಾದಾಮಿ ಎದೆಯುರಿಗೆ ತಕ್ಷಣದ ಉಪಚಾರವನ್ನು ನಡೆಸುತ್ತದೆ. ಬಾದಾಮಿಯನ್ನು ಸೇವಿಸುವುದರಿಂದ ಎದೆಯುರಿ ನಿಯಂತ್ರಣಕ್ಕೆ ಬರುತ್ತದೆ ಅಂತೆಯೇ ಇದರಿಂದಾಗಿ ಉಂಟಾಗುವ ನೋವು ತಗ್ಗಿ ಆಸಿಡಿಟಿ ಕಡಿಮೆಯಾಗುತ್ತದೆ.

ವಿನೇಗರ್ ಸೇವನೆ

ವಿನೇಗರ್ ಸೇವನೆ

ವಿನೇಗರ್ ಸೇವನೆ ಮೂಲಕ ಕೂಡ ಎದೆಯುರಿಯನ್ನು ಹತೋಟಿಗೆ ತರಬಹುದಾಗಿದೆ. ಒಂದು ಚಮಚದಷ್ಟು ವಿನೇಗರ್ ಅನ್ನು ಸೇವಿಸುವುದು ಎದೆಯುರಿಯನ್ನು ಮತ್ತು ಆಸಿಡಿಟಿಯನ್ನು ನಿಯಂತ್ರಣಕ್ಕೆ ತರುತ್ತದೆ.

ಅಲೋವೆರಾ ರಸ

ಅಲೋವೆರಾ ರಸ

ಊಟಕ್ಕೂ ಮೊದಲು ಲೋಳೆಸರದ ರಸದಿಂದ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ಎದೆಯುರಿ ಕಡಿಮೆಯಾಗುತ್ತದೆ. ಇದಕ್ಕಾಗಿ ಲೋಳೆಸರದ ಬೆರಳುಗಾತ್ರದ ಈಗತಾನೇ ಮುರಿದ ಕೋಡನ್ನು ನಯವಾಗಿ ಅರೆದು ಒಂದು ಲೋಟ ನೀರಿನಲ್ಲಿ ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ಎದೆಯುರಿಗೆ ಇದೊಂದು ಅತ್ಯುತ್ತಮವಾದ ಪರಿಹಾರವಾಗಿದೆ.

ಊಟದ ಬಳಿಕ ಬಾಳೆಹಣ್ಣೊಂದನ್ನು ತಿನ್ನಿ

ಊಟದ ಬಳಿಕ ಬಾಳೆಹಣ್ಣೊಂದನ್ನು ತಿನ್ನಿ

ಊಟದ ಬಳಿಕ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣೊಂದನ್ನು ಊಟದ ಬಳಿಕ ತಿನ್ನಿ. (ಈ ಸೂಚನೆಯನ್ನು ಬಾಳೆಹಣ್ಣಿನ ಸಿಪ್ಪೆಯ ಚುಕ್ಕಿಗಳು ತಿಳಿಸುತ್ತವೆ. ಚುಕ್ಕಿಗಳು ಸುಮಾರು ಬೇಳೆಗಾತ್ರದಷ್ಟು ದೊಡ್ಡದಾಗಿರಬೇಕು). ಇದರಿಂದ ಕೂಡಲೇ ಎದೆಯುರಿ ಕಡಿಮೆಯಾಗುತ್ತದೆ.

ಮೆಂತೆ

ಮೆಂತೆ

ಊಟದ ಬಳಿಕ ಅರ್ಧ ಚಿಕ್ಕಚಮಚ ಮೆಂತೆಕಾಳುಗಳನ್ನು ನೀರಿನೊಂದಿಗೆ ಅಗಿಯದೇ ನುಂಗಿ. ಇದು ಗಂಟಲಿನಲ್ಲಿ ಇಳಿಯುತ್ತಿದ್ದಂತೆಯೇ ಆಮ್ಲೀಯವಾದ ದ್ರವದೊಡನೆ ಪ್ರಕ್ರಿಯೆಗೆ ಒಳಗಾಗಿ ಆಮ್ಲದ ಪ್ರಭಾವವನ್ನು ತಗ್ಗಿಸಿ ಮತ್ತೆ ಹೊಟ್ಟೆಯತ್ತ ಬರುವಂತೆ ಮಾಡುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ಈಗ ತಾನೇ ಕಿತ್ತ ನಾಲ್ಕೈದು ತುಳಸಿ ಎಲೆಗಳನ್ನು ಊಟದ ಬಳಿಕ ಜಗಿದು ಸೇವಿಸುವುದರಿಂದಲೂ ಎದೆಯುರಿ ಕಡಿಮೆಯಾಗುತ್ತದೆ. ಈ ಅಭ್ಯಾಸವನ್ನು ಪ್ರತಿದಿನ ರೂಢಿಸಿಕೊಂಡರೆ ಜೀರ್ಣಕ್ರಿಯೆ ಉತ್ತಮಗೊಳ್ಳುವ ಜೊತೆಗೇ ಎದೆಯುರಿ, ಹುಳಿತೇಗು ಮೊದಲಾದ ತೊಂದರೆಗಳಿಂದಲೂ ಮುಕ್ತಿ ಪಡೆಯಬಹುದು.

English summary

Healthy Ways To Beat Heartburn

Heartburn is one of the common health problems faced by almost everyone in their day-to-day lives. It is a pain when it interferes with our everyday life. It is characterised by an uncomfortable burning sensation in the chest behind the breast bone. It is caused ny acid reflux. It is triggered when the stomach acids get into the oesophageal tract.Therefore, in this article, we at Boldsky will be listing out some of the healthy ways to beat heartburn. Read on to know more about it.
Story first published: Thursday, March 31, 2016, 20:52 [IST]
X
Desktop Bottom Promotion