Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಬೀಟ್‌ರೂಟ್-ಕಿತ್ತಳೆ ಹಣ್ಣಿನ ಜ್ಯೂಸ್‌ನಲ್ಲಿರುವ ಪವರ್....
ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೆ ಕಾಫಿ, ಟೀ ಸೇವಿಸುವುದು ಸಾಮಾನ್ಯ. ಡಾಕ್ಟರ್ ಬಳಿ ಹೋಗಿ ನಮಗೆ ಇರುವ ಒಂದು ಐದು ಸಮಸ್ಯೆಯನ್ನು ಹೇಳಿಕೊಂಡರೆ, ಅವರು ಹೇಳುವ ಪರಿಹಾರಗಳಲ್ಲಿ ಐದರಲ್ಲಿ ಒಂದು ಕಾಫಿ-ಟೀ ಸೇವಿಸಬೇಡಿ ಎಂದಿರುತ್ತದೆ. ಆ ಮಟ್ಟಿಗೆ ನಮ್ಮ ಅನಾರೋಗ್ಯಕ್ಕೆ ಈ ಕಾಫಿ-ಟೀಗೆ ಅಷ್ಟು ಮಟ್ಟಿಗಿನ ನಂಟು. ಹಿಂದಿನ ಕಾಲದಲ್ಲಿ ನಮ್ಮವರು ಈ ಕಾಫಿ-ಟೀ ಗಳನ್ನು ಸೇವಿಸುತ್ತಿರಲಿಲ್ಲ.
ಇವೆಲ್ಲಾ ಇತ್ತೀಚಿನ ಶತಮಾನಗಳಲ್ಲಿ ಭಾರತಕ್ಕೆ ಬಂದವು. ಇತ್ತೀಚಿನ ದಶಕಗಳಲ್ಲಿ ನಮ್ಮ ಮನೆಗಳಿಗೆ ಕಾಲಿಟ್ಟವು. ಆದರೆ ಈಗ ನಮ್ಮ ಪಾಲಿಗೆ ಬಿಟ್ಟು ಹೋಗದ ಚಟಗಳಾಗಿ ಪರಿಣಮಿಸಿವೆ. ಸರಿ ಇವುಗಳನ್ನು ಬಿಟ್ಟು ಆರೋಗ್ಯಕರವಾಗಿರುವುದು ಯಾವುದನ್ನಾದರು ಸೇವಿಸಬೇಕು ಬೆಳ್ಳಂಬೆಳಗ್ಗೆ ಎಂದುಕೊಳ್ಳುವವರಿಗೆ ನಮ್ಮ ಆಯ್ಕೆ ಯಾವುದೆಂದರೆ ಕಿತ್ತಳೆ ಮತ್ತು ಬೀಟ್ ರೂಟ್ ರಸ.

ಹೌದು ಕಿತ್ತಳೆ ಮತ್ತು ಬೀಟ್‌ರೂಟ್ ರಸವು ನಮ್ಮ ಆರೋಗ್ಯವನ್ನು ಸುಧಾರಿಸುವ ಅಂಶಗಳನ್ನು ಒಳಗೊಂಡಿರುತ್ತವೆ. ಇವುಗಳನ್ನು ಬೆಳಗ್ಗೆಯೇ ಸೇವಿಸುವುದರಿಂದ ನಿಮ್ಮ ಇಡೀ ದಿನ ಉಲ್ಲಾಸಕಾರಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಬನ್ನಿ ಇನ್ನು ತಡ ಮಾಡದೆ ಈ ಜ್ಯೂಸ್ ತಯಾರಿಸುವ ಬಗೆಯನ್ನು ತಿಳಿದುಕೊಳ್ಳೋಣ. ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...
ಅಗತ್ಯವಾಗಿರುವು ಪದಾರ್ಥಗಳು
*ಬೀಟ್‌ರೂಟ್ - ½
*ಕಿತ್ತಳೆ ರಸ- ½ ಕಪ್
½ ಕಪ್ ಕಿತ್ತಳೆ ರಸಕ್ಕೆ ಕೆಲವು ಬೀಟ್‌ರೂಟ್‌ಗಳನ್ನು ಬೆರೆಸಿಕೊಂಡು ಬ್ಲೆಂಡರಿನಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಈ ರಸವನ್ನು ಶೋಧಿಸಿಕೊಳ್ಳಿ. ಬೆಳಗ್ಗೆಯೇ ಇದನ್ನು ಸೇವಿಸಿ. ಇದರಿಂದ ನಿಮಗೆ ಹಲವಾರು ಡಿಸಾರ್ಡರ್‌ಗಳು ಬರುವುದು ತಪ್ಪುತ್ತದೆ. ಬನ್ನಿ ಯಾವ ಯಾವ ಆರೋಗ್ಯಕಾರಿ ಪ್ರಯೋಜನಗಳು ಇದನ್ನು ಸೇವಿಸುವುದರಿಂದ ಬರುತ್ತದೆ ಎಂದು ನೋಡೋಣ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ನೈಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಅಂಶಗಳು ಈ ಜ್ಯೂಸಿನಲ್ಲಿ ಸ್ವಾಭಾವಿಕವಾಗಿ ದೊರೆಯುತ್ತದೆ. ಇವು ರಕ್ತನಾಳಗಳನ್ನು ಹಿಗ್ಗಿಸಲು ನೆರವಾಗುತ್ತವೆ. ಆ ಮೂಲಕ ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.
ಕ್ಯಾನ್ಸರ್ ನಿಯಂತ್ರಿಸುತ್ತದೆ
ಅಧ್ಯಯನಗಳ ಪ್ರಕಾರ ಕಿತ್ತಳೆ ಮತ್ತು ಬೀಟ್‌ರೂಟ್ ರಸದಲ್ಲಿ ಫೈಟೋನ್ಯೂಟ್ರಿಯೆಂಟ್‌ಗಳು ಲಭ್ಯವಿರುತ್ತವೆ. ಇವು ಪ್ರೋಸ್ಟೇಟ್, ಸ್ತನ ಮತ್ತು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಮೇಲೆ ಪರಿಣಾಮಕಾರಿಯಾಗಿ ಹೋರಾಡುತ್ತವೆಯಂತೆ.
ಜನನ ಕಾಲದ ನ್ಯೂನತೆಗಳನ್ನು ನಿವಾರಿಸುತ್ತದೆ
ಕಿತ್ತಳೆ ಮತ್ತು ಬೀಟ್‌ರೂಟ್ ರಸವನ್ನು ಗರ್ಭಿಣಿಯರು ಪ್ರತಿ ನಿತ್ಯ ಸೇವಿಸಿದರೆ ಮಗುವಿನ ಜನನ ಕಾಲದ ನ್ಯೂನತೆಗಳನ್ನು ನಿವಾರಿಸಬಹುದಂತೆ. ಇದರಿಂದ ಮಗುವಿಗೆ ಹುಟ್ಟುವ ಮೊದಲೆ ವಿಟಮಿನ್ ಬಿ, ಸಿ, ಮತ್ತು ಫೋಲೆಟ್ ಲಭಿಸುತ್ತದೆ.
ಅಲ್ಸರ್‌ಗಳನ್ನು ನಿವಾರಿಸುತ್ತದೆ
ಈ ಸ್ವಾಭಾವಿಕ್ ಜ್ಯೂಸಿನಲ್ಲಿ ಆಂಟಿ-ಇನ್‌ಫ್ಲಮ್ಮೇಟರಿ ಅಂಶಗಳು ಇದ್ದು, ಇವು ಅಲ್ಸರ್‌ಗಳನ್ನು ನಿವಾರಿಸುತ್ತದೆ ಎಂದು ತಿಳಿದು ಬಂದಿದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಈ ಮನೆ ಮದ್ದಿನಲ್ಲಿ ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಇತರೆ ಪೋಷಕಾಂಶಗಳು ಅಧಿಕವಾಗಿ ಇರುತ್ತವೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನೀವು ಆರೋಗ್ಯಕರವಾಗುತ್ತೀರಿ.
ಅನಿಮಿಯಾಗೆ ಒಳ್ಳೆಯ ಮದ್ದು
ಕಿತ್ತಳೆ ಮತ್ತು ಬೀಟ್‌ರೂಟ್ ರಸವನ್ನು ಸೇವಿಸುವುದರಿಂದ ಅನಿಮಿಯಾ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಂತೆ. ಏಕೆಂದರೆ ಈ ಜ್ಯೂಸ್ ನಿಮ್ಮ ದೇಹವು ಕಬ್ಬಿಣಾಂಶವನ್ನು ಹೀರಿಕೊಳ್ಳುವಂತೆ ಮಾಡುತ್ತದೆ.
ಹೃದ್ರೋಗ ಬರದಂತೆ ತಡೆಯುತ್ತದೆ
ಕಿತ್ತಳೆ ಮತ್ತು ಬೀಟ್‌ರೂಟ್ ರಸವು ನಿಮ್ಮ ರಕ್ತ ನಾಳಗಳಲ್ಲಿ ಕೊಲೆಸ್ಟ್ರಾಲ್ ಕಟ್ಟಿಕೊಳ್ಳುವುದನ್ನು ತಡೆಯುತ್ತವೆ. ಆ ಮೂಲಕ ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




