For Quick Alerts
ALLOW NOTIFICATIONS  
For Daily Alerts

ಬಾರ್ಲಿ ನೀರು, ಇದುವೇ ನಮ್ಮ ಆರೋಗ್ಯದ ಬೇರು

By Manjula Balaraj
|

ನೋಡಲು ಗೋಧಿಯಂತೆಯೇ ಇರುವ ಬಾರ್ಲಿ ಹೆಸರು ಇತ್ತೀಚಿನ ದಿನಗಳಲ್ಲಿ ಚಿರಪರಿಚಿತವಾಗಿ ಬಿಟ್ಟಿದೆ. ಇದಕ್ಕೆಲ್ಲಾ ಕಾರಣ ಬಾರ್ಲಿಯ ಬಗ್ಗೆ ನಾವೆಲ್ಲಾ ತಿಳಿದುಕೊಂಡಿರುವ ತಪ್ಪು ತಿಳುವಳಿಕೆ. ಹೌದು, ಸಾಮಾನ್ಯವಾಗಿ ಬಾರ್ಲಿಯನ್ನು ಕೊಳೆಸಿದ ಬಳಿಕ ಬಿಯರ್ ಮೊದಲಾದ ಮದ್ಯಗಳನ್ನು ಮಾಡಲು ಉಪಯೋಗಿಸುವುದರಿಂದ ಬಾರ್ಲಿಯನ್ನು ಒಂದು ಅನಾರೋಗ್ಯಕರ ಆಹಾರವೆಂದೇ ಹೆಚ್ಚಿನವರು ತಿಳಿದ್ದಾರೆ. ಆದರೆ ಅಗತ್ಯ ಬಿದ್ದಾಗ ಮಾತ್ರ ಔಷಧಿಗಾಗಿ ಬಳಸಲಾಗುವ ಬಾರ್ಲಿ ವಾಸ್ತವವಾಗಿ ಅತಿ ಆರೋಗ್ಯಕರ ಆಹಾರವಾಗಿದೆ.

ಬಾರ್ಲಿಯನ್ನು ಕುದಿಸಿ ಸೋಸಿ ತಣಿಸಿದ ನೀರು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸಲು ಬಳಕೆಯಾಗುತ್ತದೆ ಎಂಬ ಮಾಹಿತಿ ನಿಮ್ಮನ್ನು ಚಕಿತಗೊಳಿಸುತ್ತದೆ. ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ...

ಬಾರ್ಲಿ ನೀರನ್ನು ತಯಾರು ಮಾಡುವುದು ಹೇಗೆ?

ಬಾರ್ಲಿ ನೀರನ್ನು ತಯಾರು ಮಾಡುವುದು ಹೇಗೆ?

ಬಾರ್ಲಿ ನೀರನ್ನು ಒಂದು ಸಲಕ್ಕೆ ಮಾಡಿಯೂ ಕುಡಿಯಬಹುದು ಅಥವಾ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ತಯಾರಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟುಕೊಂಡು ಪ್ರತಿದಿನ ಬಳಸಲೂಬಹುದು. ಒಂದು ಸಲದ ಉಪಯೋಗಕ್ಕೆ ಒಂದು ಲೋಟ ನೀರಿಗೆ ಎರಡು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಸೇರಿಸಿ ಕುದಿಸಿ. ಒಂದೆರಡು ನಿಮಿಷ ಕುದಿಸಿದ ಬಳಿಕ ಒಂದೆರಡು ಕಾಳುಗಳನ್ನು ಹಿಚುಕಿ ನೋಡಿ ಪೂರ್ಣವಾಗಿ ಬೆಂದಿದ್ದರೆ ಒಲೆಯಿಂದ ಇಳಿಸಿ. ಕೆಲವೊಮ್ಮೆ ಹೆಚ್ಚು ಒಣಗಿರುವ ಬಾರ್ಲಿ ಪೂರ್ಣವಾಗಿ ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಾರ್ಲಿ ನೀರನ್ನು ತಯಾರು ಮಾಡುವುದು ಹೇಗೆ?

ಬಾರ್ಲಿ ನೀರನ್ನು ತಯಾರು ಮಾಡುವುದು ಹೇಗೆ?

ಈ ಸಂದರ್ಭದಲ್ಲಿ ಕೊಂಚ ಹೆಚ್ಚು ನೀರನ್ನು ಸೇರಿಸಿ. ಬಾರ್ಲಿ ಬೆಂದ ಬಳಿಕ ಒಲೆಯಿಂದ ಇಳಿಸಿ ಸ್ವಚ್ಛವಾದ ಬಟ್ಟೆಯ ಮೂಲಕ ಸೋಸಿ. ಬಟ್ಟೆಯನ್ನು ಎರಡೂ ಬದಿಯಿಂದ ಸುರುಳಿ ಸುತ್ತುತ್ತಾ ಒತ್ತಡದಿಂದ ಬಾರ್ಲಿಯ ನೀರನ್ನು ಪೂರ್ಣವಾಗಿ ಹಿಂಡಿಕೊಳ್ಳಿ. ಈ ನೀರು ತಣಿಯಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯ ಬಿಸಿ ಇರುವಂತೆಯೇ ಕುಡಿಯಿರಿ. ನಿಮ್ಮ ಆಯ್ಕೆಯ ರುಚಿಯನ್ನು ಪಡೆಯಲು ಲಿಂಬೆ, ಉಪ್ಪು, ಅಥವಾ ಸಕ್ಕರೆಯನ್ನೂ ಸೇರಿಸಿ ಕುಡಿಯಬಹುದು. ಬನ್ನಿ ಇದರ ಇನ್ನಿತರ ಆರೊಗ್ಯದಾಯಕ ಅಂಶಗಳನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ

ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹರಿಯಲು ನೆರವಾಗುತ್ತದೆ.

ಸಂಧಿವಾತದಿಂದ ರಕ್ಷಣೆ ನೀಡುತ್ತದೆ

ಸಂಧಿವಾತದಿಂದ ರಕ್ಷಣೆ ನೀಡುತ್ತದೆ

ಬಾರ್ಲಿ ಒಂದು ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ. ಇದೇ ಕಾರಣದಿಂದ ಸಂಧಿವಾತದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಧಾನವಾಗಿ ಸಂಧಿವಾತದಿಂದ ಮುಕ್ತಿ ಪಡೆಯಬಹುದು.

ಮಧುಮೇಹಿಗಳಿಗೂ ಉತ್ತಮವಾಗಿದೆ

ಮಧುಮೇಹಿಗಳಿಗೂ ಉತ್ತಮವಾಗಿದೆ

ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಆಹಾರದಲ್ಲಿರುವ ಗ್ಲುಕೋಸ್ ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವ ಗತಿಯನ್ನು ನಿಧಾನಗೊಳಿಸುವ ಕಾರಣ ಮಧುಮೇಹಿಗಳು ಸಹಾ ಸುರಕ್ಷಿತವಾಗಿ ಸೇವಿಸಬಹುದು. ಮಧುಮೇಹಿಗಳ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿದರೆ ಅಪಾಯಕಾರಿಯಾದುದರಿಂದ ಬಾರ್ಲಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಲಭ್ಯವಾಗುವಂತೆ ಮಾಡಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ.

ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ

ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರು ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಪರಿಣಾಮವಾಗಿ ರಕ್ತದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯ ಕಡಿಮೆಯಾಗುತ್ತದೆ

English summary

Drink barley water as a refreshment..!!

Barley Water is a beverage made by boiling barley in water. It makes for a refreshing drink when slightly sweetened and finished off with a dash of lime. Barley Water has a number of health benefits that could surprise you. We tell you how to make Barley water and all the health benefits associated with it.
Story first published: Monday, February 1, 2016, 17:10 [IST]
X
Desktop Bottom Promotion