Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಲೆನೋವು ಶೀತಕ್ಕೆ ರಾಮಬಾಣ- ಈ ಕಹಿ ತರಕಾರಿಗಳು
ಬೇಸಿಗೆಯಲ್ಲಿ ತಲೆನೋವು ಕಾಣಿಸಿಕೊಳ್ಳುವುದು ಸಹಜವೇ ಆಗಿದ್ದರೂ ಇದು ಇಂಚಿಂಚಾಗಿ ನಿಮ್ಮನ್ನು ಇನ್ನಷ್ಟು ದುರ್ಬಲರನ್ನಾಗಿಸುತ್ತದೆ. ಸುಡುವ ಬಿಸಲು ನೆತ್ತಿಯನ್ನು ಸುಟ್ಟು ಹಾಕುತ್ತಿದ್ದರೆ ಇನ್ನೊಂದೆಡೆ ತಡೆ ಇಲ್ಲದೆ ಹರಿಯುವ ಬೆವರು ನಿಮಗೆ ಇನ್ನಷ್ಟು ಆಯಾಸ ತರುತ್ತದೆ. ಈ ಸಮಯದಲ್ಲಿ ಮನೆಮದ್ದುಗಳ ಉಪಚಾರವನ್ನೇ ತಲೆನೋವಿನ ಉಪಶಮನಕ್ಕೆ ಮಾಡಿಕೊಳ್ಳಬೇಕು. ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು
ಇಂದಿನ ಲೇಖನದಲ್ಲಿ ನಾವು ನೀಡಿರುವ ನೈಸರ್ಗಿಕ ಉತ್ಪನ್ನಗಳು ಸೋಂಕನ್ನು ನಿವಾರಿಸಿ ತಲೆನೋವು ಪುನಃ ನಿಮ್ಮನ್ನು ಕಾಡದಂತೆ ಎಚ್ಚರಿಕೆ ವಹಿಸುತ್ತದೆ. ಸ್ವಭಾವದಲ್ಲಿ ಕಹಿ ಗುಣವನ್ನು ಈ ಉತ್ಪನ್ನಗಳು ಪಡೆದುಕೊಂಡಿದ್ದರೂ, ನೀರು ಅಥವಾ ಎಳನೀರಿನಿಂದ ಇದನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಬೇವು ಶೀತ ಮತ್ತು ತಲೆನೋವಿನ ಬಾಧೆಯಿಂದ ನಿಮಗೆ ಶೀಘ್ರ ಉಪಶಮವನ್ನು ನೀಡುತ್ತದೆ. ಇದರ ಎಲೆಯಿಂದ ತಯಾರಿಸಲಾದ ಜ್ಯೂಸ್ ಮೂಗು, ಎದೆ ಮತ್ತು ತಲೆಯಲ್ಲಿರುವ ಎಲ್ಲಾ ಸೋಂಕನ್ನು ನಿವಾರಿಸುತ್ತದೆ. ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು
ನಿರಂತರವಾಗಿ ಉಂಟಾಗುವ ಸೋಂಕನ್ನೂ ನಿವಾರಿಸಲೂ ಇದು ಸಹಕಾರಿ. ಬನ್ನಿ ತಲೆಭಾರವಾಗುತ್ತಿದೆ ಎಂಬ ಭಾವನೆ ನಿಮಗುಂಟಾಗುತ್ತಿದೆ ಎಂದಾದಲ್ಲಿ ಇಂತಹುದ್ದೇ ಕೆಲವು ಮನೆಮದ್ದುಗಳನ್ನು ನಾವು ನೀಡುತ್ತಿದ್ದು ಇದು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತದೆ ಎಂಬುದನ್ನು ಅರಿತುಕೊಳ್ಳಿ...

ಬೇವು
ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು, ಇದಕ್ಕೆ ಒಂದು ಚಮಚ ಬೇವಿನ ಹುಡಿಯನ್ನು ಹಾಕಿ. ಮಿಶ್ರಣವನ್ನು ಚೆನ್ನಾಗಿ ಕಲಸಿ ಮತ್ತು ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ. ಇದು ಶೀತದಿಂದ ಕಟ್ಟಿರುವ ಮೂಗನ್ನು ನಿವಾರಿಸಿ ತಲೆಬೇನೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆಯಲ್ಲಿರುವ ಸೋಂಕು ನಿವಾರಣೆಗೂ ಬೇವು ಸಹಕಾರಿ ಎಂದೆನಿಸಿದ್ದು ಇದನ್ನು ಸೇವಿಸುವುದರಿಂದ ಹಲವಾರು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

ಹಾಗಲಕಾಯಿ
ಕಹಿಯಾದ ತರಕಾರಿ ಎಂದೇ ಖ್ಯಾತವಾಗಿರುವ ಹಾಗಲಕಾಯಿ ತನ್ನ ಔಷಧೀಯ ಗುಣಗಳಿಂದ ಖ್ಯಾತವಾದುದು. ಹಾಗಲಕಾಯಿಯನ್ನು ಬೇಯಿಸುವಾಗ ಇದಕ್ಕೆ ಮೆಣಸು ಮತ್ತು ಅರಿಶಿನ ಹುಡಿಯನ್ನು ಬೇಕಾದಷ್ಟು ಹಾಕಬೇಕಾಗುತ್ತದೆ. ತಲೆಯಲ್ಲಿರುವ ನೋವನ್ನು ನಿವಾರಿಸಲು ಹಾಗಲಕಾಯಿ ಸಹಕಾರಿಯಾದುದು. ದಿನಕ್ಕೆ ಎರಡು ಬಾರಿ ಈ ತರಕಾರಿಯನ್ನು ಸೇವಿಸಿ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.

ಕಿತ್ತಳೆ ಸಿಪ್ಪೆ
ಒಂದು ಲೋಟ ಹಾಲಿಗೆ ಬೇಕಾದಷ್ಟು ಕಿತ್ತಳೆ ಸಿಪ್ಪೆಯ ಹುಡಿಯನ್ನು ಸೇರಿಸಿ. ಹಾಲಿನಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ. ಇದರಲ್ಲಿರುವ ಸಿಟ್ರಸ್ ಸುವಾಸನೆ ಮತ್ತು ಅಂಶಗಳು ಶೀತ ಮತ್ತು ತಲೆನೋವನ್ನು ನಿವಾರಿಸುವಲ್ಲಿ ಸಹಕಾರಿ.

ಕೇಲ್
ವಿಟಮಿನ್ ಕೆ ಮತ್ತು ಕ್ಯಾಲ್ಶಿಯಮ್ ಅನ್ನು ಹೊಂದಿರುವ ಕೇಲ್‌ನಿಂದ ಆರೋಗ್ಯಕರ ಸಲಾಡ್ ಅನ್ನು ಸಿದ್ಧಪಡಿಸಿ ಸೇವಿಸಬಹುದಾಗಿದೆ. ತಲೆನೋವಿನಿಂದ ಶೀತದ ಸಮಸ್ಯೆಯನ್ನೂ ಇದು ನಿವಾರಿಸುತ್ತದೆ. ಸ್ವಲ್ಪ ಕರಿಮೆಣಸು ಮತ್ತು ಉಪ್ಪನ್ನು ರುಚಿಗೆ ಬೇಕಾದಷ್ಟು ಹಾಕಿಕೊಳ್ಳಬಹುದಾಗಿದೆ ಇದು ಉತ್ತಮ ಸ್ವಾದವನ್ನು ಸಲಾಡ್‌ಗೆ ನೀಡುತ್ತದೆ.

ಪಾಲಾಕ್
ವಿಟಮಿನ್ ಕೆ ಅಂಶವನ್ನು ಪಾಲಾಕ್ ಒಳಗೊಂಡಿದ್ದು ಹಸಿರು ತರಕಾರಿಯಾಗಿರುವ ಇದು ಬೇಸಿಗೆಯ ಶೀತ ಮತ್ತು ತಲೆನೋವನ್ನು ನಿವಾರಿಸುವ ಪವರ್ ಫುಲ್ ಮದ್ದಾಗಿದೆ. ಈ ಎಲೆಗಳಿಂದ ಸ್ಮೂತಿಯನ್ನು ತಯಾರಿಸಿಕೊಂಡು ಸೇವಿಸಬಹುದು ಮತ್ತು ಪ್ರತೀ ದಿನ ಬೆಳಗ್ಗೆ ಇದನ್ನು ಸೇವಿಸಬಹುದಾಗಿದೆ.



Click it and Unblock the Notifications
