Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿನಿತ್ಯ ವೇದ ಮಂತ್ರ ಪಠಿಸಿ, ದೀರ್ಘಾಯುಷ್ಯ ಪಡೆಯಿರಿ
ಮಂತ್ರಕ್ಕಿಂತ ಉಗುಳು ಜಾಸ್ತಿ ಎಂಬುದೊಂದು ಕನ್ನಡದ ಗಾದೆ. ಅಗತ್ಯಕ್ಕಿಂತಲೂ ಅನಗತ್ಯವಾದುದೇ ಹೆಚ್ಚಿದ್ದಾಗ ಈ ಗಾದೆಯನ್ನು ಬಳಸಲಾಗುತ್ತದೆ. ಆದರೆ ಮಂತ್ರದ ಪಠಣದ ಮಹತ್ವವನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ. ಇದು ಕೇವಲ ಧಾರ್ಮಿಕ ಅಥವಾ ದೈವಿಕ ಮಹತ್ವವನ್ನು ಮಾತ್ರ ಪಡೆದಿದ್ದ. ಬದಲಿಗೆ ಶರೀರದ ತೇಜೋಶಕ್ತಿಯನ್ನು ಹೆಚ್ಚಿಸಲು ಧ್ವನಿ, ಶ್ವಾಸ ಮತ್ತು ಲಯಬದ್ಧತೆಯಿಂದ ಪದಗಳನ್ನು ಸ್ಪಷ್ಟವಾಗಿ ಉಚ್ಛರಿಸುವ ಮೂಲಕ ಸಾಧ್ಯ. ಲವಲವಿಕೆಯ ಜೀವನಶೈಲಿಗೆ 'ಓಂಕಾರ ಮಂತ್ರ ಪಠಿಸಿ'
ಮಂತ್ರಗಳ ಪಠಣದಿಂದ ಮನೋವೃತ್ತಿ ಹಾಗೂ ಶಾರೀರಿಕವಾಗಿ ಎರಡೂ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಮಂತ್ರಗಳನ್ನು ಹೇಗೆ ಪಠಿಸಬೇಕು ಎಂಬುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ವಿವರಿಸಲಾಗಿದೆ. ಸಂಕಷ್ಟಗಳ ಸರಮಾಲೆಯೇ ಬರಲಿ ಮಂತ್ರದ ಕೃಪೆ ನಮ್ಮ ಮೇಲೆ ಇರಲಿ!
ಮಂತ್ರಗಳನ್ನು ಮೂಲತಃ ವೇದಗಳಲ್ಲಿ ಬರೆಯಲಾಗಿದ್ದು ಪ್ರತಿ ಮಂತ್ರವೂ 24 ಉಚ್ಛಾರಗಳನ್ನು ಹೊಂದಿದೆ. ಪ್ರತಿ ಉಚ್ಛಾರವೂ ದೇಹದ ಒಂದಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಚೇತೋಹಾರಿಯಾಗಿದೆ, ಮುಂದೆ ಓದಿ...

ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಕೆಲವು ಮಂತ್ರಗಳ ಪಠಣ ಕಷ್ಟಕರವಾಗಿದ್ದು ಇದನ್ನು ಪಠಿಸಲು ನಾಲಿಗೆಗೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಇದರೊಂದಿಗೆ ಧ್ವನಿಪೆಟ್ಟಿಗೆ, ತುಟಿಗಳು ಮತ್ತು ಧ್ವನಿ ಹೊರಡಿಸಲು ಅಗತ್ಯವಾದ ಇತರ ಅಂಗಗಳಿಗೂ ಹೆಚ್ಚಿನ ಒತ್ತಡ ಬೀಳುತ್ತದೆ. ಮಂತ್ರಪಠನಣದ ಮೂಲಕ ಉಂಟಾಗುವ ಕಂಪನ ಹೈಪೋಥಲಮಸ್ ಎಂಬ ಗ್ರಂಥಿಯನ್ನು ಪ್ರಚೋದಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪಠಣದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಈ ಪ್ರಚೋದನೆಯಿಂದ ಸ್ರವಿಸುವ ಹಾರ್ಮೋನುಗಳು ದೇಹದ ಹಲವು ಕಾರ್ಯಗಳಿಗೆ ಅಗತ್ಯವಾಗಿದ್ದು ರೋಗ ನಿರೋಧಕ ಶಕ್ತಿಯೂ ಇದರಲ್ಲೊಂದಾಗಿದೆ. ಮನಸ್ಸನ್ನು ಸಂತೋಷಕರವಾಗಿರಿಸಲು ಅಗತ್ಯವಿರುವ ಹಾರ್ಮೋನುಗಳೂ ಬಿಡುಗಡೆಯಾಗುತ್ತವೆ. ಆದ್ದರಿಂದ ಮಂತ್ರೋಚ್ಛಾರಣೆಯ ಬಳಿಕ ಒಂದು ರೀತಿಯ ಆಹ್ಲಾದತೆ, ತನ್ಮಯತೆ ಮತ್ತು ಪರವಶತೆಯನ್ನು ಅನುಭವಿಸಬಹುದು. ಮನ ಆನಂದದಿಂದ ಇದ್ದಷ್ಟೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಆರೋಗ್ಯ ಇನ್ನಷ್ಟು ಉತ್ತಮವಾಗುತ್ತದೆ.

ಮನಸ್ಸು ನಿರಾಳವಾಗುತ್ತದೆ
ಮನಸ್ಸು ಉದ್ವೇಗಗೊಂಡಿದ್ದಾಗ ಮನಸ್ಸಿನ ಚಿತ್ತವನ್ನು ಬೇರೆಡೆಗೆ ಹೊರಳಿಸಿ ಎಂದು ಮನಃಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಆದರೆ ಇದು ಹೇಳಿದಷ್ಟು ಸುಲಭವಾಗಿ ಸಾಧಿಸಲು ಸಾಧ್ಯವಿಲ್ಲ. ಆದರೆ ಮಂತ್ರಗಳನ್ನು ಪಠಿಸಿದಾಗ ಕೆಲವು ಹಾರ್ಮೋನುಗಳು ಬಿಡುಗಡೆಯಾಗಿ ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ತನ್ಮೂಲಕ ದೇಹವನ್ನು ಸಡಿಲಗೊಳಿಸಿ ನಿರಾಳತೆ ಸಾಧ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನಸ್ಸು ನಿರಾಳವಾಗುತ್ತದೆ
ಬಳಿಕ ತಣ್ಣನೆಯ ಮನಸ್ಸಿನಿಂದ ಸಮಸ್ಯೆಯನ್ನು ಅವಲೋಕಿಸಿ ಉತ್ತಮವಾದ ನಿರ್ಧಾರ ತಳೆಯಲು ಸಾಧ್ಯವಾಗುತ್ತದೆ. ಈ ವಿಧಾನ ಒಂದು ತರಹ ಟ್ರಾಂಕ್ವಿಲೈಸರ್ ನಂತೆ ಕೆಲಸ ಮಾಡುತ್ತದೆ.

ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ
ನಮ್ಮ ದೇಹದಲ್ಲಿ ಹಲವು ಶಕ್ತಿಕೇಂದ್ರಗಳಿವೆ. ಇವನ್ನು ಚಕ್ರಗಳು ಎಂದು ಕರೆಯಲಾಗುತ್ತದೆ. ದೇಹದ ಸಮರ್ಪಕ ಕಾರ್ಯನಿರ್ವಹಣೆಗಾಗಿ ಈ ಚಕ್ರಗಳಿಂದ ಸೂಕ್ತ ಪ್ರಮಾಣದ ಶಕ್ತಿ ಪ್ರವಹಿಸುತ್ತಾ ಇರಬೇಕು. ಒಂದು ವೇಳೆ ಈ ಶಕ್ತಿಗಳ ಪ್ರಮಾಣದಲ್ಲಿ ಏರುಪೇರಾದರೆ ದೇಹದ ಕಾರ್ಯನಿರ್ವಹಣೆಯೂ ಏರುಪೇರಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚಕ್ರಗಳನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ
ಇದರಿಂದ ಮಾನಸಿಕ ಮತ್ತು ದೈಹಿಕ ತೊಂದರೆಗಳು ಎದುರಾಗುತ್ತವೆ. ಮಂತ್ರಪಠಣದಿಂದ ಈ ಚಕ್ರಗಳ ಶಕ್ತಿಗಳು ಮೊದಲಿನ ಸ್ಥಿತಿಗೆ ಬರಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ದೇಹ ಕಾಯಿಲೆಯಿಲ್ಲದ ಉತ್ತಮ ಆರೋಗ್ಯವನ್ನು ಹೊಂದುತ್ತದೆ.

ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ
ಒಂದು ಹೊತ್ತಿನಲ್ಲಿ ಒಂದು ಕೆಲಸವನ್ನು ಮಾತ್ರ ಮಾಡಿ ಎಂದು ಸುಭಾಷಿತವೊಂದು ಹೇಳುತ್ತದೆ. ಒಂದು ಕಾಲದಲ್ಲಿ ಒಂದು ಕೆಲಸದತ್ತ ತಮ್ಮ ಪೂರ್ಣಪ್ರಮಾಣದ ಗಮನವನ್ನು ಹರಿಸುವುದಕ್ಕೇ ಏಕಾಗ್ರತೆ ಎಂದು ಕರೆಯುತ್ತಾರೆ. ಮಂತ್ರಪಠಣದಿಂದ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಕಲಿಯುವಿಕೆಯನ್ನು ಸುಲಭವಾಗಿಸುತ್ತದೆ
ಏಕೆಂದರೆ ಮಂತ್ರಪಠಣ ಸಮರ್ಪಕವಾಗಲು ಏಕಾಗ್ರತೆ ಅತ್ಯಗತ್ಯವಾಗಿದ್ದು ಮಂತ್ರಪಠಣ ಸಾಧ್ಯವಾದರೆ ಬೇರೆಲ್ಲಾ ಕೆಲಸಗಳಿಗೂ ಏಕಾಗ್ರತೆ ಸಾಧಿಸುವುದು ಸುಲಭವಾಗುತ್ತದೆ. ಇದರಿಂದಾಗಿ ಹೊಸ ವಿಷಯಗಳನ್ನು ಕಲಿಯುವುದು ಸುಲಭವಾಗುತ್ತದೆ. ಜಾಣ್ಮೆ, ಸ್ಮರಣಶಕ್ತಿ, ಮೇಧಾವಿತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.

ಹೃದಯದ ಕ್ಷಮತೆ ಹೆಚ್ಚುತ್ತದೆ
ಮಂತ್ರಪಠಣದ ಮೂಲಕ ವ್ಯಗ್ಯಗೊಂಡಿದ್ದ ಮೆದುಳು ಅತಿ ಕ್ಷಿಪ್ರವಾಗಿ ನಿರಾಳವಾಗುತ್ತದೆ ಹಾಗೂ ಉಸಿರಾಟ ಸಹಾ ಸರಾಗಗೊಳ್ಳುತ್ತದೆ. ವ್ಯಗ್ರಗೊಂಡಿದ್ದ ಸಮಯದಲ್ಲಿ ಮೆದುಳು ಅಪಾರವಾದ ಪ್ರಮಾಣದ ರಕ್ತವನ್ನು ಬೇಡುತ್ತದೆ. ಇದು ಹೃದಯದ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೃದಯದ ಕ್ಷಮತೆ ಹೆಚ್ಚುತ್ತದೆ
ಕೆಟ್ಟ ಸುದ್ದಿ ಕೇಳಿದ ಸಮಯದಲ್ಲಿ ಹೃದಯಾಘಾತವಾಗಿ ಮರಣಗಳು ಸಂಭವಿಸುವುದೂ ಇದೇ ಕಾರಣಕ್ಕೆ. ಮಂತ್ರಪಠಣದ ಮೂಲಕ ಮೆದುಳನ್ನು ನಿರಾಳಗೊಳಿಸಿ ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಯಾಗಿಸಿ ಆಯಸ್ಸು ಹೆಚ್ಚಿಸಬಹುದು.

ಮಾನಸಿಕ ದುಗುಡವನ್ನು ಕಡಿಮೆಯಾಗಿಸುತ್ತದೆ
ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡದ ಕಾರಣದಿಂದಾಗಿ ಎದುರಾಗುವ ಉದ್ವೇಗ, ದುಗುಡಗಳನ್ನೂ ಮಂತ್ರಪಠಣದಿಂದ ಕಡಿಮೆಯಾಗಿಸಿಕೊಳ್ಳಬಹುದು. ನಿಯಮಿತವಾಗಿ ಮಂತ್ರವನ್ನು ಪಠಿಸುತ್ತಾ ಬರುವ ಮೂಲಕ ಒತ್ತಡ ಮೂಲಕ ಮೆದುಳಿಗೆ ಮತ್ತು ದೇಹಕ್ಕೆ ಆಗಿದ್ದ ಘಾಸಿಯನ್ನು ಕಡಿಮೆಗೊಳಿಸಿ ಮೊದಲಿನ ಆರೋಗ್ಯವನ್ನು ಮತ್ತೊಮ್ಮೆ ಪಡೆಯಬಹುದು.

ಖಿನ್ನತೆಯನ್ನು ನಿವಾರಿಸುತ್ತದೆ
ಬದುಕಿನ ಸೋಲು ಅಥವಾ ಈಡೇರದ ಯಾವುದೋ ಬಯಕೆ ಹೆಚ್ಚಿನವರಲ್ಲಿ ಖಿನ್ನತೆಯನ್ನು ಉಂಟುಮಾಡುತ್ತದೆ. ಇದರಿಂದಾಗಿ ಮಾನಸಿಕ ಒತ್ತಡ, ಹಸಿವಾಗದಿರುವುದು, ನಿರುತ್ಸಾಹ ಮೊದಲಾದವು ಕಂಡುಬರುತ್ತದೆ. ಈ ಹೊತ್ತಿನಲ್ಲಿ ಮಂತ್ರ ಪಠಿಸುವ ಮೂಲಕ ಮೆದುಳಿಗೆ ಲಭ್ಯವಾಗುವ ಕಂಪನಗಳು ಸಕಾರಾತ್ಮಕ ಭಾವನೆಯನ್ನು ಬಡಿದೆಬ್ಬಿಸುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಖಿನ್ನತೆಯನ್ನು ನಿವಾರಿಸುತ್ತದೆ
ಸೋಲನ್ನು ಎದುರಿಸುವ, ಇನ್ನಷ್ಟು ಹೆಚ್ಚು ಸಾಮರ್ಥ್ಯ ಪಡೆದುಕೊಳ್ಳುವತ್ತ ಚಿತ್ತ ಹರಿಯುತ್ತದೆ. ಈ ಕಂಪನಗಳಿಂದ ಬಿಡುಗಡೆಯಾಗುವ ಹಾರ್ಮೋನುಗಳ ಪ್ರಭಾವದಿಂದ ಇದು ಸಾಧ್ಯವಾಗುತ್ತದೆ.

ತೇಜಸ್ಸನ್ನು ಹೆಚ್ಚಿಸುತ್ತದೆ
ಮಂತ್ರೋಚ್ಛಾರಣೆಯ ಕಾಲದಲ್ಲಿ ಉಂಟಾಗುವ ಕಂಪನಗಳು ಮುಖದ ಕೆಲವು ಪ್ರಮುಖ ಭಾಗಗಳಲ್ಲಿ ಹೆಚ್ಚಿನ ಪ್ರಚೋದನೆ ಮೂಡಿಸಿ ಈ ಭಾಗಗಳಲ್ಲಿ ರಕ್ತಪರಿಚಲನೆ ಹೆಚ್ಚುವಂತೆ ಮಾಡುತ್ತದೆ. ಪರಿಣಾಮವಾಗಿ ಇಲ್ಲಿನ ವಿಷಕಾರಿ ವಸ್ತುಗಳು ನಿವಾರಣೆಯಾಗುತ್ತದೆ ಮತ್ತು ಆ ಸ್ಥಳದಲ್ಲಿ ಹೊಸ ರಕ್ತ ಮತ್ತು ಶಕ್ತಿ ತುಂಬಿಕೊಳ್ಳುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಲಯಬದ್ದವಾಗಿ ಪಠಿಸಬೇಕಾದ ಅನಿವಾರ್ಯತೆ ಚರ್ಮದ ಜೀವಕೋಶಗಳಿಗೆ ನಿಯಮಿತವಾಗಿ ಆಮ್ಲಜನಕವನ್ನು ಪೂರೈಸುತ್ತದೆ. ತನ್ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ತೇಜಸ್ಸು ಸಹಾ ಹೆಚ್ಚುತ್ತದೆ.

ಅಸ್ತಮಾ ತೊಂದರೆಯನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ
ಶ್ವಾಸನಾಳಗಳು ಕಿರಿದಾಗಿದ್ದು ಇದರ ಮೂಲಕ ಎದುರಾಗುವ ಅಸ್ತಮಾ ರೋಗಕ್ಕೂ ಮಂತ್ರಗಳ ಪಠಣ ತಕ್ಕಮಟ್ಟಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಮಂತ್ರೋಚ್ಛಾರಣೆಯ ಸಮಯದಲ್ಲಿ ಶ್ವಾಸಕೋಶದಿಂದ ಹೊರಟ ವಾಯು ಕೊಂಚ ಹೆಚ್ಚಿನ ಒತ್ತಡದಲ್ಲಿ ಶ್ವಾಸನಾಳಗಳ ಮೂಲಕ ಹೊರಹೋಗಬೇಕಾದ ಅನಿವಾರ್ಯತೆ ಇರುವ ಕಾರಣ ಸಂಕುಚಿತಗೊಂಡಿದ್ದ ಶ್ವಾಸನಾಳಗಳು ಒಳಗಿನಿಂದ ಹಿಗ್ಗಲು ಸಾಧ್ಯವಾಗುತ್ತದೆ. ಇದು ತಕ್ಕಮಟ್ಟಿಗೆ ಅಸ್ತಮಾ ರೋಗವನ್ನು ನಿವಾರಿಸಲು ನೆರವಾಗುತ್ತದೆ.



Click it and Unblock the Notifications











