For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಗಣಿ-ಎಲೆಮರೆ ಕಾಯಿಯಂತಿರುವ 'ಒಂದೆಲಗ'

By Super
|

ಬ್ರಾಹ್ಮಿ (Bacopa monnieri) ಎಂದು ಭಾರತದಾದ್ಯಂತ ಕರೆಯಲ್ಪಡುವ ಕನ್ನಡದ ಒಂದೆಲಗ ನೆಲಮಟ್ಟದಲ್ಲಿ ಬೆಳೆಯುವ ಚಿಕ್ಕ ಗಿಡವಾಗಿದ್ದು ಸಾಮಾನ್ಯವಾಗಿ ನೀರು ನಿಂತಿರುವಲ್ಲೆಲ್ಲಾ ಹುಲುಸಾಗಿ ಬೆಳೆಯುತ್ತದೆ. ಇದರ ಎಲೆಗಳು ನೀರು ತುಂಬಿಕೊಂಡು ದಪ್ಪನಾಗಿ ದಟ್ಟ ಹಸಿರು ಬಣ್ಣ ಹೊಂದಿದ್ದರೆ ಹೂವುಗಳು ಬಿಳಿಯ ಬಣ್ಣದ್ದಾಗಿದ್ದು ಐದು ಎಸಳುಗಳಿಂದ ಕೂಡಿವೆ. ಈ ಎಲೆ ಮತ್ತು ಹೂವುಗಳಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ನೆನಪಿನ ಶಕ್ತಿ ವರ್ಧಕ-ಒಂದೆಲಗದ ತಂಬುಳಿ

ಇದರಲ್ಲಿರುವ ಪೋಷಕಾಂಶಗಳ ಪಟ್ಟಿಯಲ್ಲಿ ಪ್ರಮುಖವಾದವು ಎಂದರೆ Brahmine, Herpestine, ಫ್ಲೇವನಾಯ್ಡುಗಳು, ಸಾಪೋಯಿನ್, ಸ್ಟೆರಾಲ್, ಆಲ್ಕಲಾಯ್ಡ್, ಬೆಟ್ಯೂಲಿಕ್ ಆಮ್ಲ (Betulic acid), stimastorol, betasitosterol, bacoside, ಮತ್ತು bacopasaponins. ಇದರ ಔಷಧೀಯ ಗುಣಗಳನ್ನು ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದ ಕಂಡುಕೊಂಡಿದ್ದು ಸ್ಮರಣ ಶಕ್ತಿ ಹೆಚ್ಚಿಸಲು, ಆರೋಗ್ಯ ವೃದ್ಧಿಸಲು, ಕಾಮೋತ್ತೇಜಕವಾಗಿ ಹಾಗೂ ಇನ್ನೂ ಹಲವಾರು ತೊಂದರೆಗಳಿಗೆ ಔಷಧಿಯ ರೂಪದಲ್ಲಿ ಬಳಸಲ್ಪಡುತ್ತಾ ಬಂದಿದೆ. ಆಯುರ್ವೇದ ಕಂಡುಕೊಂಡಂತೆ ಇದರ ಆರೋಗ್ಯಕರ ಪ್ರಯೋಜನಗಳಲ್ಲಿ ಪ್ರಮುಖವಾದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ತಲೆಗೂದಲು ಉದುರುವುದನ್ನು ತಡೆಗಟ್ಟುತ್ತದೆ

ತಲೆಗೂದಲು ಉದುರುವುದನ್ನು ತಡೆಗಟ್ಟುತ್ತದೆ

ತಲೆಗೂದಲ ಬುಡವನ್ನು ದೃಢಗೊಳಿಸಲು ಬ್ರಾಹ್ಮಿಗಿಂತ ಉತ್ತಮವಾದ ಪೋಷಕವಸ್ತು ಇನ್ನೊಂದಿಲ್ಲ. ಅಂತೆಯೇ ಬ್ರಾಹ್ಮಿ ತೈಲವನ್ನು ತಲೆಗೂದಲ ಬುಡಕ್ಕೆ ಮಸಾಜ್ ಮಾಡುವ ಮೂಲಕ ಕೂದಲ ಬುಡಗಳು ಹೆಚ್ಚಿನ ಪೋಷಣೆ ಪಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಲೆಗೂದಲು ಉದುರುವುದನ್ನು ತಡೆಗಟ್ಟುತ್ತದೆ

ತಲೆಗೂದಲು ಉದುರುವುದನ್ನು ತಡೆಗಟ್ಟುತ್ತದೆ

ಇದರಿಂದ ಕೂದಲು ಉದುರುವುದನ್ನು ತಡೆಗಟ್ಟುವುದು ಮಾತ್ರವಲ್ಲ, ಕೂದಲು ಉದ್ದವಾಗಿ ಬೆಳೆಯಲು, ತಲೆಹೊಟ್ಟು ನಿವಾರಿಸಲು, ತಲೆಯ ತುರಿಕೆ, ಸೀಳಿದ ಕೂದಲ ತುದಿ, ತಲೆಯ ಚರ್ಮ ಪಕಳೆಯಂತೆ ಏಳುವುದು ಮೊದಲಾದ ತೊಂದರೆಗಳನ್ನೂ ಸಮರ್ಥವಾಗಿ ತಡೆಗಟ್ಟಬಹುದು.

ತಲೆಯ ಚರ್ಮಕ್ಕೆ ಪೋಷಣೆ ನೀಡುತ್ತದೆ

ತಲೆಯ ಚರ್ಮಕ್ಕೆ ಪೋಷಣೆ ನೀಡುತ್ತದೆ

ಬ್ರಾಹ್ಮಿ ತೈಲವನ್ನು ಕೊಂಚ ಬಿಸಿಮಾಡಿ ತಲೆಗೆ ಹಾಕಿ ಮಸಾಜ್ ಮಾಡುವ ಮೂಲಕ ತಲೆಯ ಚರ್ಮಕ್ಕೆ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ರಕ್ತದ ಸಂಚಾರವೂ ಹೆಚ್ಚುತ್ತದೆ. ಇದರಿಂದ ತಲೆಗೂದಲ ಬುಡಗಳಿಗೆ ಹೆಚ್ಚಿನ ಪೋಷಕಾಂಶಗಳು ಲಭಿಸುವ ಮೂಲಕ ಹೊಸ ಕೂದಲುಗಳು ಬೆಳೆಯುವಂತೆ ತಲೆಯ ಚರ್ಮ ಫಲವತ್ತತೆ ಪಡೆಯುತ್ತದೆ.

ತಲೆಗೂದಲ ಉದುರುವಿಕೆ (Alopecia) ತಡೆಯುತ್ತದೆ

ತಲೆಗೂದಲ ಉದುರುವಿಕೆ (Alopecia) ತಡೆಯುತ್ತದೆ

ಕೆಲವೊಂದು ಔಷಧಿಗಳ ಪರಿಣಾಮವಾಗಿ ತಲೆಗೂದಲು ಉದುರುತ್ತದೆ. ಕ್ಯಾನ್ಸರ್ ನ ಚಿಕಿತ್ಸೆಯಾದ ಖೀಮೋಥೆರಪಿಯಲ್ಲಿ ಈ ನಷ್ಟ ಶಾಶ್ವತವಾದರೆ ಕೆಲವು ಸಂದರ್ಭಗಳಲ್ಲಿ ನಮ್ಮ ರೋಗ ನಿರೋಧಕ ವ್ಯವಸ್ಥೆಯೇ ತಾತ್ಕಾಲಿಕವಾಗಿ ಒಂದು ಭಾಗದ ಕೂದಲನ್ನು ಉದುರಿಸುತ್ತದೆ.

ತಲೆಗೂದಲ ಉದುರುವಿಕೆ (Alopecia) ತಡೆಯುತ್ತದೆ

ತಲೆಗೂದಲ ಉದುರುವಿಕೆ (Alopecia) ತಡೆಯುತ್ತದೆ

Alopecia ಎಂಬ ಈ ಸ್ಥಿತಿ ಆರೋಗ್ಯ ಸುಧಾರಿಸಿದ ಬಳಿಕ ಈ ಸ್ಥಳದಲ್ಲಿ ಮತ್ತೆ ಹೊಸ ಕೂದಲು ಹುಟ್ಟುತ್ತದೆ. ಬ್ರಾಹ್ಮಿ ಎಣ್ಣೆಯಲ್ಲಿ ಆಂಟಿ ಆಕ್ಸಿಡೆಂಟುಗಳ ರೂಪದಲ್ಲಿರುವ ಪೋಷಕಾಂಶಗಳು ಕೂದಲು ಮರುಹುಟ್ಟಲು ಸಹಕರಿಸುವ ಮೂಲಕ ತಾತ್ಕಾಲಿಕ ಬಕ್ಕತನವನ್ನು ಶೀಘ್ರವಾಗಿ ನಿವಾರಿಸುತ್ತವೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಬ್ರಾಹ್ಮಿ ಎಣ್ಣೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ಸಮರ್ಥವಾಗಿವೆ. ವಿಶೇಷವಾಗಿ ಚರ್ಮದ ಹೊರಪದರ (epidermis ಅಥವಾ epithilial layer)ದಲ್ಲಿ ಅಂಟಿಕೊಂಡಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮ ಹೊಸ ಜೀವಕೋಶಗಳನ್ನು ಪಡೆಯುವ ಮೂಲಕ ಸಹಜಕಾಂತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಅಷ್ಟೇ ಅಲ್ಲ, ಚರ್ಮದ ಕೆಳಪದರ (ಹೈಪೋಡರ್ಮಿಸ್) ಮತ್ತು connective tissueಗಳಲ್ಲಿ ರಕ್ತಪರಿಚಲನೆ, ತೈಲಗಳ ಉತ್ಪಾದನೆ ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯ ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಚರ್ಮವ್ಯಾಧಿಗಳಾದ ಸೋರಿಯಾಸಿಸ್ (psoriasis), ತುರಿಕೆ (eczema), ಕೀವು (abscess) ಮತ್ತು ವ್ರಣ (ulceration) ಗಳಾಗುವುದನ್ನು ತಡೆಯುತ್ತದೆ ಹಾಗೂ ಈಗಾಗಲೇ ಇದ್ದರೆ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

ಸರಿಯಾಗಿ ನಿದ್ದೆ ಬರದಿದ್ದರೆ...

ಸರಿಯಾಗಿ ನಿದ್ದೆ ಬರದಿದ್ದರೆ...

ತಲೆಯ ಚರ್ಮವನ್ನು ಬ್ರಾಹ್ಮಿ ತೈಲದಿಂದ ಮಸಾಜ್ ಮಾಡಿ ಕೊಂಚ ನಡೆದಾಡಿ ಒಂದು ಲೋಟ ಹಾಲು ಕುಡಿದು ಮಲಗಿದಾಗ ಗಾಢ ನಿದ್ದೆ ಆವರಿಸುವುದನ್ನು ಕಂಡುಕೊಳ್ಳಲಾಗಿದೆ. ಉತ್ತಮ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯ ನಿದ್ರಾರಾಹಿತ್ಯದ ಕಾರಣ ಮನೋವಿಕಲ್ಪ, ಖಿನ್ನತೆ, ಒತ್ತಡ ಮೊದಲಾದವುಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸರಿಯಾಗಿ ನಿದ್ದೆ ಬರದಿದ್ದರೆ...

ಸರಿಯಾಗಿ ನಿದ್ದೆ ಬರದಿದ್ದರೆ...

ಅಷ್ಟೇ ಅಲ್ಲ, ಕೆಲವು ಮಕ್ಕಳು ಅಗತ್ಯಕ್ಕಿಂತಲೂ ಹೆಚ್ಚು ಚುರುಕಾಗಿರುವುದು (hyperactive) ಅಪಾಯಕ್ಕೆ ಎದುರಾಗಬಹುದಾದುದರಿಂದ ಮಕ್ಕಳ ತಲೆಗೂ ಬ್ರಾಹ್ಮಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಸಹಜ ಸ್ಥಿತಿಗೆ ತರಲು ಸಾಧ್ಯ.

ಮಾನಸಿಕ ತೊಂದರೆಗಳಿಂದಲೂ ರಕ್ಷಿಸುತ್ತದೆ

ಮಾನಸಿಕ ತೊಂದರೆಗಳಿಂದಲೂ ರಕ್ಷಿಸುತ್ತದೆ

ಬ್ರಾಹ್ಮಿ ಎಣ್ಣೆಯಲ್ಲಿರುವ ನೈಟ್ರಿಕ್ ಆಕ್ಸೈಡ್ ನ ಕಾರಣ ಮೆದುಳಿಗೆ ಉತ್ತಮ ಪೋಷಣೆ ದೊರಕುತ್ತದೆ. ಇದು ಮೆದುಳು ಸಕಾರಾತ್ಮಕವಾಗಿ ಚಿಂತಿಸಲು, ಏಕಾಗ್ರತೆ ಹೆಚ್ಚಿಸಲು, ಸ್ಮರಣಶಕ್ತಿ ಹೆಚ್ಚಿಸಲು, ಮಾನಸಿಕವಾಗಿ ಎಚ್ಚರದಿಂದಲು ನೆರವಾಗುತ್ತದೆ. ಅಲ್ಲದೇ ತಾತ್ಕಾಲಿಕ ಮರೆವು, ಆಲ್ಝೀಮರ್ಸ್ ಕಾಯಿಲೆ ಬರದಂತೆ ತಡೆಗಟ್ಟಲೂ ನೆರವಾಗುತ್ತದೆ.

ಮಾನಸಿಕ ಒತ್ತಡ ನಿವಾರಿಸಲು

ಮಾನಸಿಕ ಒತ್ತಡ ನಿವಾರಿಸಲು

ಮಾನಸಿಕ ಒತ್ತಡಕ್ಕೆ ಕಾರ್ಟಿಸೋಲ್ ಎಂಬ ಹಾರ್ಮೋನು ಪ್ರಮುಖ ಕಾರಣವಾಗಿದೆ. ಬ್ರಾಹ್ಮಿ ಎಣ್ಣೆ ಒತ್ತಡವನ್ನು ಸೆಳೆದುಕೊಳ್ಳಬಲ್ಲ ಒಂದು ಸ್ಪ್ರಿಂಗ್ ನಂತೆ ಕಾರ್ಯನಿರ್ವಹಿಸುತ್ತದೆ (adaptogen). ಪರಿಣಾಮವಾಗಿ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಹಾಗೂ ಮನೋಭಾವ ಉತ್ತಮಗೊಳ್ಳುತ್ತದೆ. ಈ ಶಕ್ತಿಯನ್ನು ಬರೆಯ ಬ್ರಾಹ್ಮಿ ಎಣ್ಣೆಗಿಂತಲೂ ಬ್ರಾಹ್ಮಿ-ತುಳಸಿ ಎಲೆಗಳ ಮಿಶ್ರಣದಿಂದ ತಯಾರಾದ ಎಣ್ಣೆ ಇನ್ನಷ್ಟು ಸಮರ್ಪಕವಾಗಿ ನಿರ್ವಹಿಸುತ್ತವೆ.

ಸ್ಮರಣ ಶಕ್ತಿ ಹೆಚ್ಚಿಸಲು

ಸ್ಮರಣ ಶಕ್ತಿ ಹೆಚ್ಚಿಸಲು

ಮೆದುಳಿನ ಕೆಳಭಾಗದಲ್ಲಿ ಮಧ್ಯೆ ಇರುವ hippocampus ಎಂಬ ಭಾಗ ನಮ್ಮ ಸ್ಮರಣಶಕ್ತಿಯನ್ನು ಹೊಂದಿದ್ದು ಈ ಭಾಗಕ್ಕೆ ಉತ್ತಮ ಪೋಷಣೆ ಸಿಗುವ ಮೂಲಕ ಮೆದುಳಿನ ಕ್ಷಮತೆ ಹೆಚ್ಚಿಸುತ್ತದೆ. ಬ್ರಾಹ್ಮಿಯಲ್ಲಿರುವ ಪೋಷಕಾಂಶಗಳು ಮೆದುಳಿಗೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಸ್ಮರಣಶಕ್ತಿ, ಏಕಾಗ್ರತೆ, ಜಾಣ್ಮೆ, ತಾರ್ಕಿಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಬ್ರಹ್ಮಿ ಪುಡಿಯಲ್ಲಿರುವ ಪೋಷಕಾಂಶಗಳು ಅತಿಚಟುವಟಿಕೆಯ ಮಕ್ಕಳಲ್ಲಿ (Attention Deficit Hyperactivity Disorder) ಉತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತವೆ.

ಅಪಸ್ಮಾರವನ್ನು (epilepsy) ಕಡಿಮೆಗೊಳಿಸುತ್ತದೆ

ಅಪಸ್ಮಾರವನ್ನು (epilepsy) ಕಡಿಮೆಗೊಳಿಸುತ್ತದೆ

ಅಪಸ್ಮಾರಕ್ಕೆ ಬ್ರಾಹ್ಮಿ ಎಲೆಗಳನ್ನು ಬಹಳ ಹಿಂದಿನಿಂದ ಬಳಸಿಕೊಳ್ಳಲಾಗುತ್ತಾ ಬರಲಾಗಿದೆ. ಇದೊಂದು ಮೆದುಳಿಗೆ ಸಂಬಂಧಿಸಿದ ತೊಂದರೆಯಾಗಿದ್ದು ಥಟ್ಟನೇ ಪ್ರಜ್ಞೆ ಕಳೆದುಕೊಳ್ಳುವುದು, ತಾರ್ಕಿಕ ಚಿಂತನೆ ಕಡಿಮೆಯಾಗುವುದು ಮೊದಲಾದವು ಇದರ ಲಕ್ಷಣಗಳು ಬ್ರಾಹ್ಮಿ ಮತ್ತು ವಾಛಾ ಎಂಬ ಇನ್ನೊಂದು ಗಿಡಮೂಲಿಕೆಯನ್ನು ಬೆರೆಸಿ ರೋಗಿಗೆ ನೀಡುವ ಮೂಲಕ ಉತ್ತಮ ಪರಿಹಾರ ಕಂಡುಕೊಳ್ಳಬಹುದು.

ಅಪಸ್ಮಾರವನ್ನು (epilepsy) ಕಡಿಮೆಗೊಳಿಸುತ್ತದೆ

ಅಪಸ್ಮಾರವನ್ನು (epilepsy) ಕಡಿಮೆಗೊಳಿಸುತ್ತದೆ

ಈ ಮಿಶ್ರಣದಲ್ಲಿರುವ bacosides A ಮತ್ತು B ಎಂಬ ರಾಸಾಯನಿಕಗಳು ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುವ ಸಾಮರ್ಥ್ಯವಿದೆ. ಅಲ್ಲದೇ ಘಾಸಿಗೊಂಡ ನರತಂತು ಅಥವಾ ನ್ಯೂರಾನ್ ಗಳನ್ನೂ ರಿಪೇರಿಗೊಳಿಸುವ ಕ್ಷಮತೆ ಹೊಂದಿದೆ. ಇವೆಲ್ಲವೂ ಅಪಸ್ಮಾರದಿಂದ ದೇಹ ಎದುರಿಸುವ neuro-degeneration ಅಥವಾ ನರಗಳ ಶಿಥಿಲಗೊಳ್ಳುವಿಕೆಯನ್ನು ಕಡಿಮೆಗೊಳಿಸಿ ನಿಧಾನವಾಗಿ ಚೇತರಿಸಲು ಸಹಕರಿಸುತ್ತವೆ.

ಬ್ರಾಹ್ಮಿಯ ಇತರ ಔಷಧೀಯ ಗುಣಗಳು

ಬ್ರಾಹ್ಮಿಯ ಇತರ ಔಷಧೀಯ ಗುಣಗಳು

ಬ್ರಾಹ್ಮಿಯಲ್ಲಿ ಹಲವಾರು ಇತರ ಔಷಧೀಯ ಗುಣಗಳೂ ಇವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ರಕ್ತಪರಿಚಲನೆಯನ್ನು ಉತ್ತಮಗೊಳಿಸುವುದು, ತನ್ಮೂಲಕ ಯಕೃತ್, ಶ್ವಾಸಕೋಶ, ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸುವುದು, ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸುವ ಮೂಲಕ ಕಾಮೋತ್ತೇಜಕವಾಗುವುದು, ನಿಮಿರು ದೌರ್ಬಲ್ಯ ಕಡಿಮೆಗೊಳಿಸುವುದು, ಸಂಧಿವಾತ, ಕೆಟ್ಟ ಕೊಲೆಸ್ಟ್ರಾಲ್, ನಿದ್ರಾಹೀನತೆ ಮೊದಲಾದುಗಳಿಂದ ರಕ್ಷಿಸುವುದು, ಸ್ಮರಣಶಕ್ತಿ ಹೆಚ್ಚಿಸುವುದು, ಮಾನಸಿಕ ಸುಸ್ತು ಪರಿಹಾರ, ಮಲಬದ್ಧತೆ, ಶ್ವಾಸಕೋಶ ಪೂರ್ಣವಾಗಿ ಶ್ವಾಸ ಎಳೆದುಕೊಳ್ಳಲು ಅಸಮರ್ಥವಾಗುವ ತೊಂದರೆ, ಉರಿಯೂತ, ಕೆಮ್ಮು, ಅಸ್ತಮಾ, ಮೊದಲಾದ ತೊಂದರೆಗಳಿಂದ ಪರಿಹಾರ ನೀಡುತ್ತದೆ. ಅಲ್ಲದೇ ಇದು ಉತ್ತಮ ಖಿನ್ನತಾ ನಿವಾರಕ ಹಾಗೂ ರ್‍ಹೂಮಾಟಿಕ್ ನೋವು (ಗಂಟುಗಳ ನೋವು) ನಿವಾರಕವೂ ಆಗಿದೆ.

 ಬ್ರಾಹ್ಮಿಯ ಅಡ್ಡಪರಿಣಾಮಗಳು

ಬ್ರಾಹ್ಮಿಯ ಅಡ್ಡಪರಿಣಾಮಗಳು

ಬ್ರಾಹ್ಮಿ ಒಂದು ಉತ್ತಮ ಔಷಧಿಯಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಇತರ ಔಷಧಿಗಳ ಜೊತೆಗೆ ಸೇವಿಸಿದಾಗ ಕೆಲವು ಅಡ್ಡಪರಿಣಾಮಗಳನ್ನು ಕಾಣಬಹುದು. ಇದರ ಸೇವನೆಯನ್ನು ಕೆಳಗಿನ ಸಂದರ್ಭದಲ್ಲಿ ಮಾಡದಿರುವುದೇ ಉತ್ತಮ. ಅನಿವಾರ್ಯ ಸಂದರ್ಭಗಳಿದ್ದರೆ ವೈದ್ಯರ ಸಲಹೆ ಇಲ್ಲದೇ ಮುಂದುವರೆಯಬಾರದು.

* ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುತ್ತಿರುವ ಸಮಯದಲ್ಲಿ

* ಈಸ್ಟ್ರೋಜೆನ್ ಬದಲಾವಣೆಯ ಚಿಕಿತ್ಸೆಯ ಸಂದರ್ಭದಲ್ಲಿ

* phenothiazine ಎಂಬ ಔಷಧಿಯನ್ನು ಸೇವಿಸುತ್ತಿರುವಾಗ

* ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಹೊಟ್ಟೆ ಕೆಡುವ ಸಂಭವವಿದೆ.

* ಒಂದು ದಿನಕ್ಕೆ ಎರಡು ಚಿಕ್ಕ ಚಮಚಕ್ಕಿಂತ ಹೆಚ್ಚು ಪ್ರಮಾಣವನ್ನು ಸೇವಿಸಬಾರದು.

ಬ್ರಾಹ್ಮಿಯ ಇತರ ಹೆಸರುಗಳು

ಬ್ರಾಹ್ಮಿಯ ಇತರ ಹೆಸರುಗಳು

ಒಂದೆಲಗ ಎಂಬ ಕನ್ನಡದ ಹೆಸರಿನ ಈ ಗಿಡಮೂಲಿಕೆಗೆ ವೈಜ್ಞಾನಿಕವಾಗಿ Bacopa monnieri ಎಂಬ ಹೆಸರಿದ್ದರೂ Bacopa monnieri, Bacopa monniera, Herpestis monniera, Moniera cuneifolia, Jalnaveri, Jalanimba, Sambrani chettu, Thyme-leaved gratiola, Babies tear, Nirbrahmi, Indian Pennywort, Water hyssop, Herb of Grace, Andri, Jal-brahmi, Nira-brahmi ಎಂಬ ಇತರ ಹೆಸರುಗಳೂ ಇವೆ.

ಸ್ಥಳೀಯವಾಗಿ ಇತರ ದೇಶಗಳಲ್ಲಿ waterhyssop, thyme-leafed gratiola, water hyssop, herb of grace, Indian pennywort ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

English summary

Amazing health Benefits Of Brahmi

Brahmi is a creeping herb, generally found in muddy wetlands, enriched with many bio-chemical compounds such as Brahmine, Herpestine, flavonoids, saponins, sterols, alkaloids, Betulic acid, stimastorol, betasitosterol, bacoside, and bacopasaponins.
X
Desktop Bottom Promotion