Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ನರನಾಡಿಗಳಲ್ಲಿ ಹೊಸ ಚೈತನ್ಯ ಹೊಮ್ಮಿಸುವ ಪದ್ಮಾಸನದ ಒಳಗುಟ್ಟೇನು?
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಯೋಗಾಸನಗಳು ಅತ್ಯುತ್ತಮವಾಗಿವೆ. ಸಾವಿರಾರು ವರ್ಷದ ಇತಿಹಾಸವಿರುವ ಯೋಗಾಭ್ಯಾಸ ಇಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದೆ. ಹುಟ್ಟಿರುವ ದೇಶದಲ್ಲಿಯೇ ಹೆಚ್ಚಿನ ಜನರ ಪ್ರಶಂಸೆಗೆ ಒಳಗಾಗದಿರುವುದು ಒಂದು ವಿಪರ್ಯಾಸವೇ ಸರಿ. ಯಾವುದೇ ಯೋಗ ಶಿಕ್ಷಕರೂ ಪ್ರಥಮವಾಗಿ ಕಲಿಸುವ ಆಸನವೆಂದರೆ ಪದ್ಮಾಸನ.
ನೋಡಲಿಕ್ಕೆ ಸುಲಭವೆಂದು ಕಂಡುಬಂದರೂ ಚಕ್ಕಲಮಕ್ಕಲ ಕುಳಿತು ಎರಡೂ ಪಾದಗಳು ವಿರುದ್ಧ ಕಾಲಿನ ತೊಡೆಯ ಮೇಲೆ ಬರುವಂತೆ ತಿರುಚಬೇಕಾದುದರಿಂದ ಕೆಲವೇ ನಿಮಿಷಗಳಲ್ಲಿ ಮಂಡಿಯ ಸಂದುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಈ ನೋವೇ ನಿಮ್ಮ ಸಂದುಗಳಿಗೆ ಉತ್ತಮವಾದ ವ್ಯಾಯಾಮವಾಗಿದೆ.
ನಮ್ಮ ನಡುವಿನ ಹೆಚ್ಚಿನ ಜನರು ಆರಂಭಶೂರರಾಗಿದ್ದಾರೆ. ಯಾವುದೇ ಹೊಸ ವಿದ್ಯೆಯನ್ನು ಕಲಿಯುವಾಗ ಪ್ರಾರಂಭದಲ್ಲಿ ತೋರುವ ಉತ್ಸುಕತೆಯನ್ನು ಮುಂದಿನ ದಿನಗಳಲ್ಲಿ ತೋರುವುದಿಲ್ಲ. ಯೋಗಾಭ್ಯಾಸದಲ್ಲಿಯೂ ಹಾಗೇ. ಏಕೆಂದರೆ ಪದ್ಮಾಸನ ಎಲ್ಲಾ ಆಸನಗಳಿಗೆ ಮೂಲ ಎಂದು ಹೇಳುವ ಯೋಗಶಿಕ್ಷಕರ ಮಾತು ಇತರ ಆಸನಗಳು ಇದಕ್ಕಿಂತಲೂ ಘೋರವಾದ ನೋವು ನೀಡುತ್ತದೆ ಎಂಬಂತೆ ಅರ್ಥೈಸಿಕೊಳ್ಳುವ ಜನರು ನಿಧಾನವಾಗಿ ಈ ತಂಟೆಯೇ ಬೇಡವೆಂದು ಯೋಗಾಸನದಿಂದ ವಿಮುಖರಾಗುತ್ತಾರೆ. ಆದರೆ ಯಾವುದೇ ಒಳ್ಳೆಯ ಕಾರ್ಯವಾಗಬೇಕಾದರೆ ಕೊಂಚ ಕಷ್ಟಪಡಬೇಕಾದುದು ಸಹಜ. ಆರೋಗ್ಯವನ್ನು ವೃದ್ಧಿಸುವ ಬಾಬಾ ರಾಮ್‌ದೇವ್ ಯೋಗಾಸನಗಳು!

ಪದ್ಮಾಸನದಿಂದ ಮೊಣಗಂಟಿನ ನೋವನ್ನೇ ಪ್ರಮುಖವಾಗಿ ಕಂಡವರು ಇದರ ಇತರ ಸದ್ಗುಣಗಳನ್ನು ನೋಡೇ ಇರಲಿಲ್ಲ. ಹಿಂದಿನ ಕಾಲದಲ್ಲಿ ಋಷಿಮುನಿಗಳು ಪದ್ಮಾಸನದಲ್ಲಿ ಕುಳಿತೇ ತಪಸ್ಸು ಮಾಡುತ್ತಾ ವರ್ಷಗಟ್ಟಲೆ ದಿನ ಕಳೆಯುತ್ತಿದ್ದರು. ಅವರ ದೇಹವನ್ನು ಸುಸ್ಥಿತಿಯಲ್ಲಿಡಲು ಪದ್ಮಾಸನ ನೆರವಾಗಿತ್ತು. ಈ ಸದ್ಗುಣಗಳನ್ನು ಅರಿತ ಯೋಗ ಶಿಕ್ಷಕರು ಪ್ರತಿದಿನ ನಿರಂತರವಾಗಿ ಕೊಂಚಕಾಲಕ್ಕಾದರೂ ಈ ಆಸನವನ್ನು ಅಭ್ಯಾಸ ಮಾಡಲು ತಿಳಿಸುತ್ತಾರೆ. ಈ ಸದ್ಗುಣಗಳ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.
ಇಡಿಯ ದೇಹವನ್ನು ಚಾಚಲು ನೆರವಾಗುತ್ತದೆ
ಪದ್ಮಾಸನದಲ್ಲಿರುವಾಗ ಇಡಿಯ ದೇಹ ಒಂದು ಸೆಳೆತಕ್ಕೆ ಒಳಗಾಗಿ ರಕ್ತಸಂಚಾರ ಹೆಚ್ಚುತ್ತದೆ. ಸೊಂಟ ಮತ್ತು ಪಾದದ ಕೀಲುಗಳು ಅತಿಹೆಚ್ಚಿನ ಸೆಳೆತಕ್ಕೊಳಗಾಗಿ ಈ ಭಾಗದಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರ ಲಭ್ಯವಾಗುತ್ತದೆ. ಇದು ಆ ಭಾಗಗಳಿಗೆ ಉತ್ತಮ ಪೋಷಣೆ ನೀಡುತ್ತದೆ. ಬೆನ್ನುಮೂಳೆ ನೇರವಾಗಿರುವುದರಿಂದ ಮೆದುಳುಹುರಿ ಮತ್ತು ಬೆನ್ನಿನ ಸ್ನಾಯುಗಳು ಉತ್ತಮ ಪೋಷಣೆ ಪಡೆಯುತ್ತವೆ. ಮೊಣಕಾಲಿನ ಗಂಟಿನ ಬಳಿ ಕಾಲುಗಳು ಒಳಭಾಗಕ್ಕೆ ಹೆಚ್ಚು ಸೆಳೆತಗೊಂಡಿರುವುದರಿಂದ ಕೊಂಚಕಾಲದಲ್ಲಿಯೇ ನೋವು ಪ್ರಾರಂಭವಾಗುತ್ತದೆ. ಇಲ್ಲಿನ ನರಗಳು ಒತ್ತಿಕೊಂಡಿರುವುದೇ ಇದಕ್ಕೆ ಕಾರಣ. ಆದರೆ ಕೆಲಕಾಲದ ಅಭ್ಯಾಸದಿಂದ ಈ ನರಗಳು ವಿಸ್ತರಿಸಿ ಹೆಚ್ಚಿನ ರಕ್ತಸಂಚಾರ ಸಾಧ್ಯವಾಗುತ್ತದೆ. ಪರಿಣಾಮವಾಗಿ ವೃದ್ಯಾಪ್ಯದಲ್ಲಿ ಕಾಲುಗಂಟಿನ ನೋವು ಕಾಣಿಸಿಕೊಳ್ಳುವ ಪ್ರಮೇಯ ಕಡಿಮೆಯಾಗುತ್ತದೆ.
ಮನಸ್ಸು ಶಾಂತಗೊಳ್ಳುತ್ತದೆ
ಪದ್ಮಾಸನದ ಭಂಗಿಯಲ್ಲಿ ಬೆನ್ನುಮೂಳೆ ಅತಿ ನೆಟ್ಟಗಿರುವುದರಿಂದ ಇದರೊಳಗಿರುವ ಮೆದುಳುಹುರಿಯ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ನಮ್ಮ ದೇಹದ ಹಲವು ಕೆಲಸಗಳನ್ನು (ವಿಶೇಷವಾಗಿ ನಿತ್ಯದ ಕೆಲಸಗಳನ್ನು, ಉದಾಹರಣೆಗೆ ನೀರುಳ್ಳಿ ಕತ್ತರಿಸಿ ಅಭ್ಯಾಸವಿರುವವರು ಎತ್ತಲೋ ನೋಡುತ್ತಾ ಸುಲಲಿತವಾಗಿ ಕತ್ತರಿಸುತ್ತಾರೆ. ಅಭ್ಯಾಸವಿಲ್ಲದವರಿಗಿದು ಅಸಾಧ್ಯ. ಈ ಕೆಲಸವನ್ನು ಮೆದುಳುಬಳ್ಳಿ ಕೈಗೆತ್ತಿಕೊಳ್ಳುತ್ತದೆ) ಮೆದುಳುಬಳ್ಳಿ ನೆರವೇಸಿರುವುದರಿಂದ ಹಾಗೂ ಕುತ್ತಿಗೆಯೂ ನೆಟ್ಟಗಿರುವುದರಿಂದ ಮೆದುಳಿಗೆ ಲಭ್ಯವಾಗುವ ರಕ್ತದ ಪ್ರಮಾಣ ಗರಿಷ್ಟವಾಗಿರುತ್ತದೆ. ಎರಡೂ ಕಾರಣಗಳಿಂದ ಮೆದುಳಿನ ಮೇಲಿನ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತಗೊಳ್ಳುತ್ತದೆ.
ನರಪ್ರಚೋದನೆಯ ಪ್ರತಿಕ್ರಿಯೆಯನ್ನು ಚುರುಕುಗೊಳಿಸುತ್ತದೆ
ನಮ್ಮ ಚಟುವಟಿಕೆಗಳಲ್ಲಿ ನರಪ್ರಚೋದನೆಯ ಪ್ರತಿಕ್ರಿಯೆ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಕ್ರೀಡೆಗಳಲ್ಲಿ ದೇಹದ ಸಕಲ ಅಂಗಗಳನ್ನು ಮೆದುಳು ತಕ್ಷಣ ತಯಾರಿ ಮಾಡಬೇಕಾಗುತ್ತದೆ. ಈ ಕ್ರಿಯೆಗೆ ನರಪ್ರಚೋದನೆಯ ಪ್ರತಿಕ್ರಿಯೆ ಎಂದು ಕರೆಯುತ್ತಾರೆ. (reflex system). ಕ್ರಿಕೆಟ್ ಆಟದಲ್ಲಿ ಭಾರೀ ಸ್ನಾಯುಗಳಿರುವ ವ್ಯಕ್ತಿಗಳಿಗಿಂತಲೂ ಆಟದ ಅಗತ್ಯಕ್ಕೆ ತಕ್ಕಂತೆ ಥಟ್ಟನೆ ಪ್ರತಿಕ್ರಿಯೆ ನೀಡುವ ವ್ಯಕ್ತಿಗಳೇ ಆಯ್ಕೆಯಾಗುವುದಕ್ಕೆ ಈ ಕ್ಷಮತೆಯೇ ಕಾರಣ. ಪದ್ಮಾಸನದ ಮೂಲಕ ಈ ಕ್ಷಮತೆ ಹೆಚ್ಚುತ್ತದೆ. ಪರಿಣಾಮವಾಗಿ ಉತ್ತಮ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ನಿದ್ರಾದೇವಿಯ ಕಬಂಧ ಬಾಹುವಿಗೆ ಸೆಳೆದೊಯ್ಯುವ ಯೋಗಾಸನಗಳು
ಬೆನ್ನುಹುರಿಗೆ ಉತ್ತಮವಾಗಿದೆ
ಪದ್ಮಾಸನದಲ್ಲಿ ಬೆನ್ನುಮೂಳೆ ನೆಟ್ಟಗಿರುವುದರಿಂದ ಬೆನ್ನುಹುರಿಗೆ ಅತ್ಯಂತ ಕಡಿಮೆ ಸೆಳೆತವುಂಟಾಗಿ ಉತ್ತಮ ಪೋಷಣೆ ಪಡೆಯುತ್ತದೆ.
ತಿಂಗಳ ದಿನಗಳಲ್ಲಿ ಶೀಘ್ರ ಉಪಶಮನ ದೊರಕುತ್ತದೆ
ಮಹಿಳೆಯರು ತಮ್ಮ ಮಾಸಿಕ ದಿನಗಳಲ್ಲಿ ಪದ್ಮಾಸನವನ್ನು ಆಚರಿಸುವುದರಿಂದ ನೋವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು. ಪದ್ಮಾಸನದ ಮೂಲಕ ಸೊಂಟದ ಸ್ನಾಯುಗಳು ಹೊರಭಾಗಕ್ಕೆ ಸೆಳೆಯುವುದರಿಂದ ನೋವು ನೀಡುವ ಸ್ನಾಯುಗಳು ನಿರಾಳಗೊಳ್ಳುತ್ತವೆ ಹಾಗೂ ರಕ್ತಸಂಚಾರ ಹೆಚ್ಚುತ್ತದೆ. ಪರಿಣಾಮವಾಗಿ ನೋವು ಶೀಘ್ರವೇ ಕಡಿಮೆಯಾಗುತ್ತದೆ. ಕಚೇರಿಯಲ್ಲೇ
ಮಾಡಬಹುದಾದ ಆರು ಯೋಗಾಸನಗಳು
ಸೊಂಟ, ಮೊಣಕಾಲು, ಪಾದ, ಕುತ್ತಿಗೆ, ಭುಜದ ಗಂಟುಗಳಿಗೆ ಉತ್ತಮವಾಗಿದೆ.
ಪದ್ಮಾಸನದಲ್ಲಿ ಕುಳಿತುಕೊಳ್ಳುವ ಮೂಲಕ ಸೊಂಟ, ಮೊಣಕಾಲು, ಪಾದ, ಕುತ್ತಿಗೆ, ಭುಜದ ಗಂಟುಗಳು ಹೆಚ್ಚಿನ ಸೆಳೆತಕ್ಕೊಳಗಾಗುತ್ತವೆ. ಜೊತೆಗೇ ನರಗಳೂ ಸೆಳೆತಕ್ಕೊಳಗಾಗುತ್ತವೆ. ಪ್ರಾರಂಭದಲ್ಲಿ ಕೊಂಚ ನೋವು ಅನ್ನಿಸಿದರೂ ಕೆಲವು ದಿನಗಳ ಬಳಿಕ ಕಡಿಮೆಯಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ನರಗಳೂ ಕೊಂಚ ಬೆಳೆದು ಕೊಂಚ ದಪ್ಪನಾಗುತ್ತವೆ. ಇದರಿಂದ ಗಂಟುಗಳಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ನಿಯಮಿತವಾಗಿ ಪದ್ಮಾಸನವನ್ನು ಆಚರಿಸುತ್ತಾ ಬರುವುದರಿಂದ ಎಲ್ಲಾ ಗಂಟುಗಳು ಸುಸ್ಥಿತಿಯಲ್ಲಿದ್ದು ವೃದ್ಧಾಪ್ಯದಲ್ಲಿ ಗಂಟುಗಳ ನೋವು ಬರುವುದನ್ನು ತಪ್ಪಿಸಿದಂತಾಗುತ್ತದೆ. ಈ ಆಸನವನ್ನು ಸ್ವತಃ ಹಾಕುವ ಬದಲು ಸಮರ್ಥ ಯೋಗಶಿಕ್ಷಕರನ್ನು ಸಂಪರ್ಕಿಸಿ ಅವರ ಸಲಹೆಗಳನ್ನು ಅನುಸರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












