For Quick Alerts
ALLOW NOTIFICATIONS  
For Daily Alerts

ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

By Super
|

ಜ್ವರ ವಾಸ್ತವವಾಗಿ ಒಂದು ವ್ಯಾಧಿಯಲ್ಲ, ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಕಾರ್ಯವಿಧಾನ. ಸಾಮಾನ್ಯವಾಗಿ ತೇವಗೊಂಡ ಗಾಳಿಯ ಮೂಲಕ (ವಿಶೇಷವಾಗಿ ಮಳೆಗಾಲದಲ್ಲಿ) ಫ್ಲೂ ಜ್ವರಕ್ಕೆ ಕಾರಣವಾದ ವೈರಸ್ಸುಗಳು ಸುಲಭವಾಗಿ ನಮ್ಮ ಶ್ವಾಸದ ಮೂಲಕ ದೇಹವನ್ನು ಪ್ರವೇಶಿಸಿ ಧಾಳಿ ಮಾಡುತ್ತವೆ. ಆಗ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ದೇಹದ ಬಿಸಿಯನ್ನು ಹೆಚ್ಚಿಸಿ ರಕ್ತಪರಿಚಲನೆ ಹೆಚ್ಚಿಸಿ ಈ ವೈರಸ್ಸುಗಳ ವಿರುದ್ದ ಹೋರಾಡುತ್ತದೆ. ಔಷಧ ಇಲ್ಲದೆ ಜ್ವರ ಕಡಿಮೆಗೊಳಿಸುವುದು ಹೇಗೆ?

ಬಿಳಿರಕ್ತಕಣಗಳು ಪ್ರತಿ ವೈರಸ್ಸಿನೊಂದಿಗೆ ಹೋರಾಡಿ ವೀರಮರಣವನ್ನಪ್ಪುತ್ತವೆ ಹಾಗೂ ನಮ್ಮ ದೇಹವನ್ನು ಈ ವೈರಸ್ಸುಗಳಿಂದ ಕಾಪಾಡುತ್ತವೆ. ಆದರೆ ಈ ಕ್ರಿಯೆಯಲ್ಲಿ ವೈರಸ್ಸುಗಳ ಸಂಖ್ಯೆ ಜಾಸ್ತಿಯಾದರೆ ದೇಹದ ತಾಪಮಾನವೂ ಅತಿ ಹೆಚ್ಚಾಗುವುದರಿಂದ ದೇಹದ ಇತರ ಕಾರ್ಯಗಳಿಗೆ ಧಕ್ಕೆಯುಂಟಾಗಿ ಅಪಾಯ ಎದುರಾಗುವ ಸಂಭವವಿದೆ. ವಿಶೇಷವಾಗಿ ದೇಹವಿನ್ನೂ ಪೂರ್ಣವಾಗಿ ಬೆಳವಣಿಗೆ ಪಡೆದಿರದ ಮಕ್ಕಳಲ್ಲಿ ಹೆಚ್ಚಿನ ತಾಪಮಾನ ಅಪಾಯಕಾರಿಯಾಗಿದೆ. ಎಚ್ಚರ: ಪ್ರಾಣ ಕಂಟಕ 'ಏರಿಳಿತ ಜ್ವರ'ದ ಮೂಲ ಅರಿಯಿರಿ!

ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸಿ ಜ್ವರ ಹಾಗೂ ನೆಗಡಿಯನ್ನು ಸ್ವಾಭಾವಿಕವಾಗಿ ಕಡಿಮೆಗೊಳಿಸಲು ಹಲವು ಮನೆಮದ್ದುಗಳು ಲಭ್ಯವಿದ್ದು ನಮ್ಮ ಹಿರಿಯರಿಂದ ಪ್ರಮಾಣಿಸಲ್ಪಟ್ಟರುವುದರಿಂದ ಇವನ್ನು ಸುರಕ್ಷಿತವಾಗಿ ಬಳಸಬಹುದು. ಅಂತಹ ಪ್ರಮುಖ ಹತ್ತು ಮನೆಯೌಷಧಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ವಿನೇಗರ್ (ಶಿರ್ಕಾ ಅದ್ದಿದ) ಬಟ್ಟೆಯಿಂದ ಮೈ ತೋಯಿಸಿ

ವಿನೇಗರ್ (ಶಿರ್ಕಾ ಅದ್ದಿದ) ಬಟ್ಟೆಯಿಂದ ಮೈ ತೋಯಿಸಿ

ಉಗುರುಬೆಚ್ಚನೆಯ ನೀರಿಗೆ ಕೊಂಚ ಶಿರ್ಕಾ ಸೇರಿಸಿ ಈ ನೀರನ್ನು ಅದ್ದಿದ ಅಗಲವಾದ ಬಟ್ಟೆಯನ್ನು ಹಿಂಡಿ ಮೈಮೇಲೆ ಐದರಿಂದ ಹತ್ತು ನಿಮಿಷ ಹರಡಿ.

ಪಲ್ಲೆಹೂವನ್ನು ಬೇಯಿಸಿ ಒಳಭಾಗವನ್ನು ಸೇವಿಸಿ

ಪಲ್ಲೆಹೂವನ್ನು ಬೇಯಿಸಿ ಒಳಭಾಗವನ್ನು ಸೇವಿಸಿ

ಹಸಿರು ಕಮಲದಂತಿರುವ ಪಲ್ಲೆಹೂವು (artichoke) ಗಳನ್ನು ನೀರಿನಲ್ಲಿ ಬೇಯಿಸಿ ತಣಿದ ಬಳಿಕ ಎಲೆಗಳ ಬುಡಭಾಗವನ್ನು ತಿನ್ನಿಸಿ.

ಬಿಸಿನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುಡಿಸಿ

ಬಿಸಿನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುಡಿಸಿ

ಒಂದು ಕಪ್ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚದಷ್ಟು ಜಜ್ಜಿದ ತುಳಸಿ ಎಲೆಗಳನ್ನು ಹಾಕಿ ಐದು ನಿಮಿಷಗಳವರೆಗೆ ಹಾಗೇ ಇಡಿ (ಮತ್ತೆ ಕುದಿಸಬೇಡಿ). ಬಳಿಕ ಇದನ್ನು ಸೋಸಿ ಸಾಧ್ಯವಿದ್ದಷ್ಟು ಬಿಸಿಯಾಗಿಯೇ ದಿನಕ್ಕೆ ನಾಲ್ಕು ಅಥಾವಾ ಐದು ಬಾರಿ ಕುಡಿಸಿ. ಜ್ವರ ಮರುದಿನವೇ ಕಡಿಮೆಯಾಗುವುದು ಗಮನಕ್ಕೆ ಬರುತ್ತದೆ. ಈ ಅವಧಿಯಲ್ಲಿ ಹೆಚ್ಚಿಗೆ ಬೆವರಿದಷ್ಟೂ ಜ್ವರ ಇಳಿಯುವ ಸಂಕೇತವಾಗಿದೆ. ತುಳಸಿ ಎಲೆಗಳು ಲಭ್ಯವಿಲ್ಲದಿದ್ದರೆ ಪುದಿನಾ, ಕಾಡುಮಲ್ಲಿಗೆ (elderflower) ಅಥವಾ ಚಿಕ್ಕಚಿಕ್ಕ ಹೂಗಳ yarrow ಗಿಡದ ಎಲೆಗಳನ್ನೂ ಬಳಸಬಹುದು.

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಪಾದದಡಿ ಹಸಿ ಈರುಳ್ಳಿ ಕಟ್ಟಿ

ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಗಳನ್ನಾಗಿಸಿ. ಎರಡೂ ಪಾದಗಳ ಕೆಳಗೆ ಒಂದೊಂದು ಬಿಲ್ಲೆಗಳನ್ನಿಟ್ಟು ಬೆಚ್ಚಗಿನ ಮಫ್ಲರ್ ಅಥವಾ ಬಟ್ಟೆಯನ್ನು ಸುತ್ತಿ ರಾತ್ರಿ ಮಲಗಿಸಿ. ಬೆಳಿಗ್ಗೆ ಜ್ವರ ಕಡಿಮೆಯಾಗುತ್ತದೆ.

ಶಿರ್ಕಾ ಅದ್ದಿದ ಬಟ್ಟೆಯಿಂದ ಹಣೆಯನ್ನು ಒರೆಸಿ

ಶಿರ್ಕಾ ಅದ್ದಿದ ಬಟ್ಟೆಯಿಂದ ಹಣೆಯನ್ನು ಒರೆಸಿ

ಜ್ವರ ತೀವ್ರವಾಗಿದ್ದರೆ ಉಗುರುಬೆಚ್ಚನೆಯ ನೀರಿಗೆ ಸ್ವಲ್ಪ ಶಿರ್ಕಾ (ವಿನೇಗರ್) ಸೇರಿಸಿ ಸ್ವಚ್ಛವಾದ ಬಟ್ಟೆಯನ್ನು ಮುಳುಗಿಸಿ ಹಿಂಡಿ ಹಣೆಯ ಮೇಲಿಸಿರಿ. ಕೊಂಚ ಹೊತ್ತಿನ ಬಳಿಕ ಹಿಂಡಿ ತೆಗೆದು ಮತ್ತೊಮ್ಮೆ ಮುಳುಗಿಸಿ ಹಣೆಯ ಮೇಲಿರಿಸಿ. ಜ್ವರ ಕಡಿಮೆಯಾಗುವವರೆಗೂ ಈ ವಿಧಾನವನ್ನು ಅನುಸರಿಸುತ್ತಿರಿ.

ಸಾಸಿವೆ ಕುದಿಸಿದ ನೀರು ಕುಡಿಸಿ

ಸಾಸಿವೆ ಕುದಿಸಿದ ನೀರು ಕುಡಿಸಿ

ಒಂದು ಲೋಟ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚ ಸಾಸಿವೆ ಸೇರಿಸಿ ಐದು ನಿಮಿಷ ಹಾಗೇ ಬಿಡಿ. ಬಳಿಕ ಸೋಸಿದ ನೀರನ್ನು ಸಾಧ್ಯವಿದ್ದಷ್ಟು ಬಿಸಿಯಾಗಿಯೇ ಕುಡಿಸಿ.

ಶಿರ್ಕಾದಲ್ಲಿ ಮುಳುಗಿಸಿದ ಆಲುಗಡ್ಡೆಯ ಬಿಲ್ಲೆಗಳನ್ನು ಹಣೆಯ ಮೇಲಿರಿಸಿ

ಶಿರ್ಕಾದಲ್ಲಿ ಮುಳುಗಿಸಿದ ಆಲುಗಡ್ಡೆಯ ಬಿಲ್ಲೆಗಳನ್ನು ಹಣೆಯ ಮೇಲಿರಿಸಿ

ಒಂದು ಆಲುಗಡ್ಡೆಯನ್ನು ತೆಳುವಾದ ಬಿಲ್ಲೆಗಳನ್ನಾಗಿಸಿ ಶಿರ್ಕಾ ಸೇರಿಸಿದ ಉಗುರುಬೆಚ್ಚನೆಯ ನೀರಿನಲ್ಲಿ ಹತ್ತು ನಿಮಿಷ ಮುಳುಗಿಸಿ. ಬಳಿಕ ಈ ಬಿಲ್ಲೆಗಳನ್ನು ಹಣೆಯಿಡೀ ಆವರಿಸುವಂತೆ ಹರಡಿ ಇದರ ಮೇಲೊಂದು ಒಣ ಬಟ್ಟೆಯನ್ನು ಹರಡಿ. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಜ್ವರ ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ.

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ

ಪಾದದಡಿಯಲ್ಲಿ ಲಿಂಬೆಹಣ್ಣು ಕಟ್ಟಿ

ಒಂದು ಲಿಂಬೆಹಣ್ಣನ್ನು ಅಡ್ಡಲಾಗಿ ಕತ್ತರಿಸಿ ಪ್ರತಿ ಅರ್ಧಹಣ್ಣನ್ನು ಪಾದದಡಿ ಇಟ್ಟು ಒದ್ದೆಯಾದ ಹತ್ತಿಯ ಕಾಲುಚೀಲಗಳನ್ನು ಧರಿಸಿ. ಇದರ ಮೇಲೆ ಒಣಗಿದ ಉಣ್ಣೆಯ ಬಟ್ಟೆ ಅಥವಾ ಕಾಲುಚೀಲ ಧರಿಸಿ. ಲಿಂಬೆಹಣ್ಣು ಲಭ್ಯವಿಲ್ಲದಿದ್ದರೆ ಒಂದು ಒದ್ದೆಬಟ್ಟೆಯಲ್ಲಿ ಮೊಟ್ಟೆಯ ಬಿಳಿಭಾಗವನ್ನು ಸವರಿ ಮೊಟ್ಟೆ ಸವರಿದ ಭಾಗ ಪಾದಗಳಿಗೆ ತಾಕುವಂತಿಟ್ಟು ಅದರ ಮೇಲೆ ಉಣ್ಣೆಯ ಕಾಲುಚೀಲ ಧರಿಸಿ. ರಾತ್ರಿ ಧರಿಸಿ ಮಲಗಿದ್ದು ಬೆಳಿಗ್ಗೆದ್ದಾಗ ಜ್ವರ ಕಡಿಮೆಯಾಗುತ್ತದೆ.

ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಪಾದಕ್ಕೆ ಹಚ್ಚಿ

ಆಲಿವ್ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಪಾದಕ್ಕೆ ಹಚ್ಚಿ

ಎರಡು ದೊಡ್ಡ ಚಮಚ ಆಲಿವ್ ಎಣ್ಣೆಗೆ ಎರಡು ದೊಡ್ಡ ಎಸಳು (ಚಿಕ್ಕದಾದರೆ ನಾಲ್ಕು) ಬೆಳ್ಳುಳ್ಳಿಯನ್ನು ಜಜ್ಜಿ ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣವನ್ನು ಎರಡೂ ಪಾದದಡಿಗಳಿಗೆ ಸವರಿ. ಇಡಿಯ ಪಾದವನ್ನು ಸವರಿದ ಬಳಿಕ ಪ್ಲಾಸ್ಟಿಕ್ ಹಾಳೆಯೊಂದನ್ನು ಬಳಸಿ ಪಾದಗಳನ್ನು ಆವರಿಸಿ ಕಟ್ಟಿ. ರಾತ್ರಿ ಮಲಗುವ ಮುನ್ನ ಕಟ್ಟಿದ್ದ ಈ ಲೇಪನ ಮರುದಿನ ಬೆಳಿಗ್ಗೆ ಜ್ವರವಿಳಿಸಲು ನೆರವಾಗುತ್ತದೆ.

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಬಿಸಿನೀರಿಗೆ ಒಣದ್ರಾಕ್ಷಿ ಮತ್ತು ಲಿಂಬೆ ಸೇರಿಸಿ ಕುಡಿಯಿರಿ

ಜ್ವರ ಹೆಚ್ಚಿದ್ದರೆ ಅರ್ಧ ಕಪ್ ನೀರಿಗೆ ಸುಮಾರು ಇಪ್ಪತ್ತೈದು ಒಣದ್ರಾಕ್ಷಿಗಳನ್ನು ಹಾಕಿ ಕೊಂಚಕಾಲ ನೆನೆಸಿ. ಬಳಿಕ ಈ ದ್ರಾಕ್ಷಿಗಳನ್ನು ಜಜ್ಜಿ ಅದೇ ನೀರಿನಲ್ಲಿ ಚೆನ್ನಾಗಿ ಕದಡಿ. ಬಳಿಕ ಈ ನೀರನ್ನು ಸೋಸಿ ಅರ್ಧ ಲಿಂಬೆಹಣ್ಣಿನ ರಸ ಸೇರಿಸಿ ದಿನಕ್ಕೆರಡು ಬಾರಿ ಕುಡಿಯುವುದರಿಂದ ಜ್ವರ ಕೂಡಲೇ ಕಡಿಮೆಯಾಗುತ್ತದೆ.

English summary

Ten home remedies for fever

A fever is your body’s way of fighting an infection during a flu or infection. Suppressing a fever is not advised, as the fever will kill the bacteria and virus. However, high fevers can be dangerous, especially for small children. Natural medicine has numerous treatments to reduce a high fever. have a look
Story first published: Thursday, July 9, 2015, 12:28 [IST]
X
Desktop Bottom Promotion