Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಒತ್ತಡ ರಹಿತ ಸುಂದರ ಜೀವನಕ್ಕೆ ಐದು ಸೂತ್ರಗಳು
ಇಂದಿನ ಬ್ಯುಸಿ ವೇಳಾಪಟ್ಟಿಯಲ್ಲಿ ಸುಂದರ ನಗು ಕಾಣುವುದು ಕೂಡ ಅಪರೂಪವಾಗಿಬಿಟ್ಟಿದೆ. ಎಲ್ಲದರಲ್ಲೂ ಧಾವಂತ. ಆತುರವಾಗಿ ಕೆಲಸ ಮಾಡಿ ಮುಗಿಸುವ ಚಡಪಡಿಕೆ. ಸಮಯದ ಓಟದೊಂದಿಗೆ ನಾವು ಕೂಡ ನಮ್ಮ ದಿನಚರಿಯನ್ನು ಓಡಿಸಿಕೊಂಡು ಹೋಗುತ್ತಿದ್ದೇವೆ. ವಾರಪೂರ್ತಿ ಮುಖವನ್ನು ಗಂಟು ಹಾಕಿಕೊಂಡೇ ಕೆಲಸ ಮುಗಿಸಿ ವಾರಾಂತ್ಯದ ವೇಳೆಯಲ್ಲಿ ಸುಂದರ ನಗು ಮೂಡಿಸಲು ಕಷ್ಟಪಡುತ್ತೇವೆ. ಯಾರು ಮಾತನಾಡಿದರೂ ಕಿರಿಕಿರಿ.
ಮನೆಯಲ್ಲೂ ಎಲ್ಲರ ಮೇಲೆ ಕೂಗಾಟ. ಸಿಡುಕಿನಿಂದಲೇ ದಿನದ ಆರಂಭ ಮತ್ತು ಸಿಡುಕಿನಿಂದಲೇ ದಿನದ ಅಂತ್ಯ. ಇಂತಹ ಜೀವನ ಪದ್ಧತಿಗೆ ಇತಿಶ್ರೀ ಹಾಡುವುದು ಹೇಗೆ? ಒಂದಿಲ್ಲೊಂದು ಒತ್ತಡ ನಮ್ಮ ಜೀವನದ ಪಥವನ್ನು ಬದಲಾಯಿಸಿಬಿಟ್ಟಿದೆ. ಸಿಟ್ಟು, ಉದ್ವೇಗ, ಭಯ ಯಾವಾಗ ಬೇಕಾದರೂ ನಮ್ಮಲ್ಲಿ ಕಾಣಿಸಿಕೊಳ್ಳಬಹುದಾದ ಪರಿಸ್ಥಿತಿಯನ್ನು ನಾವು ಏರ್ಪಡಿಸಿಕೊಂಡಿದ್ದೇವೆ.
ಹಾಗಿದ್ದರೆ ಇದನ್ನು ಬದಲಾಯಿಸುವುದು ಅದೂ ನಿಮ್ಮ ಕೈಯಲ್ಲೇ ಇದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಮುಖದಲ್ಲಿ ಸುಂದರ ನಗುವನ್ನು ಮೂಡಿಸುವ ಕೆಲವೊಂದು ಮೌಲ್ಯಗಳೊಂದಿಗೆ ಬಂದಿರುವೆವು. ಬನ್ನಿ ಅದು ಏನು ಎಂಬುದನ್ನು ನೋಡೋಣ.

ನಗು
ನಿಮ್ಮೊಳಗಿನ ಚಿಂತನೆಯನ್ನು ಧನಾತ್ಮಕವಾಗಿ ಬದಲಾಯಿಸುವ ಶಕ್ತಿ ನಗುವಿಗಿದೆ. ಮನಸ್ಸು ಬಿಚ್ಚಿ ನಗುವುದರಿಂದ ಏನು ಲಾಭ ಎಂಬುದನ್ನು ಹಲವಾರು ಅನ್ವೇಷಣೆಗಳು ತಿಳಿಸಿವೆ. ಸಮಸ್ಯೆ ಇದ್ದಲ್ಲಿ ಅದನ್ನು ನಗುಮುಖದಿಂದ ಸ್ವೀಕರಿಸಿ. ನಿರಾಳವಾಗುತ್ತದೆ ಮತ್ತು ಸಮಸ್ಯೆ ಪರಿಹಾರಕ್ಕೆ ನಿಮಗೆ ಉಪಾಯ ಕೂಡ ದೊರೆಯುತ್ತದೆ. ಸುಂದರ ನಗುವಿನಿಂದ ಕಷ್ಟ- ಸುಖದ ಜಗತ್ತನ್ನೇ ಗೆಲ್ಲಿರಿ!

ಆಳವಾದ ಉಸಿರಾಟ
ನೀರು ಮತ್ತು ಆಹಾರವಿಲ್ಲದೆ ಒಂದು, ಎರಡು ದಿನಗಳ ಕಾಲ ನಿಮಗೆ ಬದುಕಬಹುದು. ಆದರೆ ಗಾಳಿ ಇಲ್ಲದೆ ಅರ್ಧ ಸೆಕೆಂಡ್ ಕೂಡ ನೀವು ಬದುಕಿರಲಾರಿರಿ. ದೀರ್ಘ ಮತ್ತು ಆಳವಾದ ಉಸಿರಾಟ ಪ್ರಕ್ರಿಯೆ ದೇಹದಲ್ಲಿ ಆಮ್ಲಜನಕದ ಸಂಚಲನೆಯನ್ನು ಹೆಚ್ಚಿಸುತ್ತದೆ, ನಿಮ್ಮನ್ನು ತಾಜಾ ಮತ್ತು ಹೆಚ್ಚು ಚಟುವಟಿಕೆಯಿಂದ ಇರಿಸುತ್ತದೆ. ಒತ್ತಡದಿಂದ ಮುಕ್ತರಾಗಲು ಮತ್ತು ಮನಸ್ಸನ್ನು ಪ್ರಶಾಂತಗೊಳಿಸಲು ಇದೊಂದು ಉತ್ತಮ ವಿಧಾನ. ಇದು ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವಲ್ಲಿ ಕೂಡ ಪರಿಣಾಮಕಾರಿ. ಇದರಿಂದಾಗಿ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತಪ್ಪುತ್ತದೆ.

ನೇರ ಭಂಗಿ
ಉತ್ತಮವಾದ ನೇರ ಭಂಗಿಯನ್ನು ನಾವು ನಿರ್ವಹಿಸುವುದೂ ಕೂಡ ಆರೋಗ್ಯಕ್ಕೆ ನಾಂದಿಯಾಗಿದೆ. ನೇರವಾಗಿ ನಿಂತುಕೊಳ್ಳುವುದು ದೈಹಿಂಕ ಭಂಗಿಯನ್ನು ಮಾತ್ರ ನೀಡದೇ ನಿಮ್ಮ ಶಕ್ತಿಯನ್ನು ವೃದ್ಧಿಸುತ್ತದೆ ಜೊತೆಗೆ ನಿಮ್ಮ ಉತ್ತಮ ಮೂಡ್‌ಗೂ ಇದು ಸಹಕಾರಿ. ನೀವು ನೇರವಾಗಿ ನಿಂತಾಗ, ಒತ್ತಡವನ್ನು ಹೇರುವ ನರಗಳು ಕುಗ್ಗಿ ನಿಮ್ಮನ್ನು ದೃಢ ಮತ್ತು ಆತ್ಮವಿಶ್ವಾಸಿಯನ್ನಾಗಿಸುವ ನರಗಳು ಉದ್ದೀಪನಗೊಳ್ಳುತ್ತವೆ. ನಿಮ್ಮ ಭಂಗಿಯನ್ನು ಬದಲಾಯಿಸುವುದು ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಮೂಡ್ ಅನ್ನು ಸ್ವಾಸ್ಥ್ಯವಾಗಿರಿಸುತ್ತದೆ.

ಧ್ಯಾನದ ಮೊರೆ ಹೋಗಿ
ಧ್ಯಾನ ಬರೀ ಋಷಿ-ಮುನಿಗಳಿಗೆ ಮಾತ್ರ ಅಲ್ಲ. ಇದನ್ನು ಯಾವ ವಯಸ್ಸಿನವರಾದ್ರೂ, ಯಾವ ವೇಳೆಯಲ್ಲಿ ಬೇಕಾದ್ರೂ ಮಾಡಬಹುದು. ಉದ್ವಿಘ್ನಗೊಂಡ ಮನಸ್ಸನ್ನು ಶಾಂತಗೊಳಿಸಿ ಪುನಃ ಚೈತನ್ಯ
ಗೊಳಸುವುದಲ್ಲದೆ ಹೃದಯ ಬಡಿತವನ್ನು ನಿಧಾನಿಸಿ ಆಮ್ಲಜನಕದ ಸರಬರಾಜನ್ನು ನಿಯಮಿತಗೊಳಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಮೆದುಳಿನಿಂದ ಹೊಮ್ಮುವ ತರಂಗಗಳ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ. ನಿಮಗೆ ಸರಿ ಎನ್ನಿಸುವಂತೆ ಕುಳಿತು, ಕಣ್ಣು ಮುಚ್ಚಿ ಹತ್ತರಿಂದ ಒಂದರವರೆಗೆ ಎಣಿಸುತ್ತಾ ಮನಸ್ಸನ್ನು ಕೇಂದ್ರೀಕರಿಸಬೇಕು. ಹೀಗೆ ಮಾಡುವಾಗ ಉಸಿರಾಟ ನಿಧಾನವಾಗಿರಲಿ. ಇದನ್ನೇ 10-15 ನಿಮಿಷ ಪುನರಾವರ್ತಿಸಿ

ಧನಾತ್ಮಕ ಆಲೋಚನೆ
ವು ಧನಾತ್ಮಕವಾಗಿ ಇದ್ದಷ್ಟೂ ಸುತ್ತಲಿನ ಜಗತ್ತು ನಮಗೆ ಸುಂದರವಾಗಿಯೇ ಕಾಣಿಸುತ್ತದೆ. ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂಬ ಭಾವನೆ ನಮ್ಮಲ್ಲಿದ್ದರೆ ನಿಧಾನವಾಗಿ ನಮ್ಮನ್ನು ನಾವು ಒತ್ತಡದಿಂದ ವಿಮುಕ್ತಿಗೊಳಿಸಬಹುದು. ನಮ್ಮ ಆರೋಗ್ಯಕ್ಕೆ ಮಾತ್ರ ನಾವು ಗಮನ ಕೊಡದೇ ಜೀವನವನ್ನು ಸುಧಾರಿಸುವ ವಿಧಕ್ಕೂ ಆದ್ಯತೆ ನೀಡಿದಲ್ಲಿ ಸ್ವರ್ಗಕ್ಕೆ ಮೂರೇ ಗೇಣು ಎಂಬ ಆತ್ಮವಿಶ್ವಾಸ ನಮ್ಮಲ್ಲಿ ಮೂಡುತ್ತದೆ



Click it and Unblock the Notifications
