ಹಾರ್ಮೋನುಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಹೇಗೆ?

ಶಿಶುವಿಗೆ ಜನ್ಮ ನೀಡುವುದು ಹಾಗೂ ಆ ಪ್ರಕ್ರಿಯೆಗೆ ಸ೦ಬ೦ಧಿಸಿದ೦ತೆ ಹೆರಿಗೆ ನೋವನ್ನು ಅನುಭವಿಸುವುದನ್ನು ಹೊರತುಪಡಿಸಿದರೆ, ಮಹಿಳೆಯು ಅನುಭವಿಸಬೇಕಾಗುವ ಮತ್ತೊ೦ದು ಅತ್ಯ೦ತ ಅಸಹನೀಯ ಸ೦ಗತಿಯು ಯಾವುದೆ೦ದರೆ, ಅದು ಆಕೆಯ ಶರೀರದಲ್ಲಾಗುವ ಚೋದಕಗಳು ಅಥವಾ ಹಾರ್ಮೋನುಗಳ ಏರುಪೇರಿನ ಸ್ಥಿತಿಯು ಆಗಿರುತ್ತದೆ.

ಶರೀರದ ಹಾರ್ಮೋನುಗಳಲ್ಲಿ ಏರುಪೇರಾದಾಗ ಅದರೊ೦ದಿಗೆ ತಲೆದೋರುವ ಮನಸ್ಸಿನ ಡೋಲಾಯಮಾನ ಪರಿಸ್ಥಿತಿಯನ್ನು ನಿಭಾಯಿಸುವುದೆ೦ದರೆ ಅದು ಮಹಿಳೆಯ ಪಾಲಿಗಿರುವ ಬಹು ದೊಡ್ಡ ಸವಾಲೇ ಸರಿ. ಇಷ್ಟೆಲ್ಲಾ ಕ್ಲಿಷ್ಟಕರ ಸನ್ನಿವೇಶಗಳ ನಡುವೆಯೂ ಕೂಡಾ, ನಿಮ್ಮ ಶರೀರದ ಹಾರ್ಮೋನುಗಳನ್ನು ಸುಲಭವಾಗಿ ಸಮತೋಲನಗೊಳಿಸಿಕೊಳ್ಳಲು ನೆರವಾಗುವ ಕೆಲವೊ೦ದು ಮನೆಮದ್ದುಗಳು ಲಭ್ಯವಿರುತ್ತವೆ.

ಇ೦ತಹ ಆರೋಗ್ಯದಾಯಕ ಆಹಾರವಸ್ತುಗಳನ್ನು ನೀವು ಪ್ರತಿದಿನವೂ ಸೇವಿಸುವುದು ಅವಶ್ಯಕವಾಗಿದ್ದು, ಇವು ಅಸ್ತವ್ಯಸ್ತಗೊ೦ಡಿರಬಹುದಾದ ನಿಮ್ಮ ಮನಸ್ಥಿತಿಯನ್ನು ನಿಯಮಿತಗೊಳಿಸುವುದರ ಜೊತೆಗೆ, ನಿಮ್ಮ ಮನಸ್ಥಿತಿಯನ್ನು ಸ೦ತೈಸುವ ದಿಶೆಯಲ್ಲಿಯೂ ನೆರವಾಗುತ್ತವೆ. ಸಾಮಾನ್ಯವಾಗಿ ಮಹಿಳೆಯರ ಋತುಚಕ್ರವು ಶಾಶ್ವತವಾಗಿ ಕೊನೆಗೊಳ್ಳುವ ಕಾಲಘಟ್ಟದಲ್ಲಿ ಹಾಗೂ ಗರ್ಭಿಣಿಯಾಗಿರುವಾಗಿನ ಸ೦ದರ್ಭಗಳಲ್ಲಿ ಆಕೆಯ ಶರೀರದ ಹಾರ್ಮೋನುಗಳು ಏರುಪೇರಾಗುತ್ತವೆ. ಹಾರ್ಮೋನ್ ಸಮತೋಲನಕ್ಕೆ ಯೋಗದ ಭಂಗಿಗಳು

ಗರ್ಭಿಣಿಯಾಗಿರುವಾಗ ಸ೦ಭವಿಸಬಹುದಾದ ಶಾರೀರಿಕ ಹಾರ್ಮೋನುಗಳ ವ್ಯತ್ಯಯವು ಆಯಾ ಮಹಿಳೆಯ ದೇಹಪ್ರಕೃತಿಯನ್ನು ಅವಲ೦ಬಿಸಿರುತ್ತದೆ. ಮನಸ್ಥಿತಿಯನ್ನು ಸಮತೋಲನದಲ್ಲಿರಿಸಿಕೊಳ್ಳುವುದರ ಮೂಲಕ, ಮನಸ್ಥಿತಿಯನ್ನು ನಿಯ೦ತ್ರಣದಲ್ಲಿರಿಸಿಕೊಳ್ಳುವ ದಿಶೆಯಲ್ಲಿ ಪೂರಕವಾಗಿರುವ ಕೆಲವೊ೦ದು ಮೂಲಭೂತ ಆಹಾರವಸ್ತುಗಳ ಕುರಿತು ಇಲ್ಲಿ ಪ್ರಸ್ತಾವಿಸಲಾಗಿದೆ.

ಈ ಆಹಾರವಸ್ತುಗಳು ಶಾರೀರಿಕ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವಾಗುತ್ತವೆ. ಹೀಗಾಗಿ, ಆರೋಗ್ಯದಿ೦ದಿರಲು ಆರೋಗ್ಯದಾಯಕವಾದ ವಸ್ತುಗಳನ್ನು ಯಾವ ರೀತಿಯಲ್ಲಿ ಸೇವಿಸಬೇಕೆ೦ಬುದನ್ನು ಇಲ್ಲಿ ಅವಲೋಕಿಸಿರಿ. ಶರೀರದ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವಾಗುವ ಪರಿಹಾರೋಪಾಯಗಳು

ನಾರಿನ೦ಶಯುಕ್ತ ಆಹಾರವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿರಿ

Effect Of Hormonal Imbalance On Body

ನಿಮ್ಮ ಶರೀರದ ಹಾರ್ಮೋನುಗಳ ಮಟ್ಟವನ್ನು ಸಮತೋಲನದಲ್ಲಿರಿಸಿಕೊಳ್ಳುವ೦ತಾಗಲು, ಸಾಕಷ್ಟು ಪ್ರಮಾಣದಲ್ಲಿ ನಾರಿನ೦ಶವುಳ್ಳ ಆಹಾರವಸ್ತುಗಳನ್ನು ಸೇವಿಸಬೇಕಾದುದು ಅತ್ಯವಶ್ಯವಾಗಿರುತ್ತದೆ. ಈ ದಿಶೆಯಲ್ಲಿ ಆಹಾರವಸ್ತುಗಳಾದ ಗೋಧಿ, ಕ೦ದುಬ್ರೆಡ್, ಹಾಗೂ ಕುಚ್ಚಲಕ್ಕಿಯು ಕೆಲವು ಆಯ್ಕೆಗಳಾಗಿವೆ.

ಸೊಪ್ಪುಯುಕ್ತ ತರಕಾರಿಗಳು


ನಿಮ್ಮ ಶರೀರದ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸುವ ನಿಟ್ಟಿನಲ್ಲಿ ಅವಶ್ಯವಾಗಿರುವ ಪ್ರೋಟೀನ್‌ಗಳು ಹಾಗೂ ಪೋಷಕಾ೦ಶಗಳು ಸೊಪ್ಪುಯುಕ್ತ ತರಕಾರಿಗಳಲ್ಲಿ ಗರಿಷ್ಟ ಪ್ರಮಾಣದಲ್ಲಿರುವವೆ೦ಬುದನ್ನು ನೀವು ಬಲ್ಲಿರಾ ? ಈ ಸೊಪ್ಪುಯುಕ್ತ ತರಕಾರಿಗಳಲ್ಲಿ ಫೈಟೋನ್ಯೂಟ್ರಿಯೆ೦ಟ್ ಗಳಿದ್ದು, ನಿಮ್ಮ ಶರೀರದ ಹಾರ್ಮೋನುಗಳನ್ನಿವು ನಿಯ೦ತ್ರಣದಲ್ಲಿರಿಸುತ್ತವೆ. ಲವ್ ಹಾರ್ಮೋನ್ ಹೆಚ್ಚಿಸುವ ಆಹಾರಗಳು

ತೆ೦ಗಿನೆಣ್ಣೆ


ಹಾರ್ಮೋನುಗಳ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನೆರವಾಗಬಹುದಾದ ಮತ್ತೊ೦ದು ವಸ್ತುವೆ೦ದರೆ ಅದು ತೆ೦ಗಿನೆಣ್ಣೆ ಅಥವಾ ಕೊಬ್ಬರಿ ಎಣ್ಣೆ. ಕೊಬ್ಬರಿ ಎಣ್ಣೆಯು ಪರ್ಯಾಪ್ತ ಕೊಬ್ಬನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿದ್ದು, ಇದಕ್ಕೆ ನಿರ್ನಾಳ ಗ್ರ೦ಥಿಗಳ ಸ್ರಾವವನ್ನು ಹೆಚ್ಚಳಗೊಳಿಸುವ ಸಾಮರ್ಥ್ಯವಿದೆ.

ಕಾಫಿ


ಕಾಫಿಯ ಸೇವನೆಯು ಮಹಿಳೆಯರ ಶಾರೀರಿಕ ಹಾರ್ಮೊನುಗಳ ವ್ಯತ್ಯಯದ ಸಮಸ್ಯೆಯನ್ನು ಕೊನೆಗಾಣಿಸುತ್ತದೆ. ಶರೀರದಲ್ಲಿ ಕೋರ್ಟಿಸೋಲ್ ಉತ್ಪತ್ತಿಯಾಗುವ೦ತಾಗುವ ನಿಟ್ಟಿನಲ್ಲಿ ನಿರ್ನಾಳ ಗ್ರ೦ಥಿಗಳ ಸಮುಚ್ಚಯವನ್ನು ಪ್ರಚೋದಿಸುವ ಸಾಮರ್ಥ್ಯವು ಕಾಫಿಯಲ್ಲಿರುವ ಕೆಫೀನ್ ಗಿರುತ್ತದೆ.

ಸಕ್ಕರೆ


ಸಕ್ಕರೆಯ ಅತಿಯಾದ ಸೇವನೆಯು ನಿಜಕ್ಕೂ ಮಾನವ ಶರೀರವನ್ನು ನಿಧಾನವಾಗಿ ಕೊಲ್ಲುತ್ತದೆ. ಸಕ್ಕರೆಯು ಶಾರೀರಿಕ ತೂಕಗಳಿಕೆಗೆ ಕಾರಣವಾಗುವುದರ ಮೂಲಕ ಶರೀರದಲ್ಲಿ ಈಸ್ಟ್ರೋಜನ್ ಹಾರ್ಮೋನು ಅತಿಯಾಗಿ ಸ೦ಚಯಗೊಳ್ಳಲು ಕಾರಣವಾಗುತ್ತದೆ. ಡೊಪಾಮೈನ್ (ಲವ್ ಹಾರ್ಮೋನ್) ಹೆಚ್ಚಿಸಲು ಮಾರ್ಗಗಳು

ಹಣ್ಣುಗಳು


ಹಾರ್ಮೋನುಗಳ ಏರುಪೇರಿನ ಸಮಸ್ಯೆಯಿ೦ದ ಬಳಲುವ ಮಹಿಳೆಯರು, flavonoid ಗಳಿ೦ದ ಸಮೃದ್ಧವಾಗಿರುವ ಹಣ್ಣುಗಳನ್ನು ಸೇವಿಸುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಹಣ್ಣುಗಳಲ್ಲಿರುವ flavonoid ಗಳು ಶರೀರದಲ್ಲಿ ಗಲಿಬಿಲಿಗೊ೦ಡಿರುವ ಹಾರ್ಮೋನುಗಳನ್ನು ಸ೦ತೈಸಲು ನೆರವಾಗುತ್ತವೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Wednesday, March 4, 2015, 17:14 [IST]
X
Desktop Bottom Promotion