Latest Updates
-
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು!
ವಾಟ್ಸಾಪ್, ಫೇಸ್‌ಬುಕ್‌ಗಳಿಂದ ದೂರವಿರಿ, ಕಣ್ತುಂಬ ನಿದ್ದೆ ಮಾಡಿ!
ನಿಸರ್ಗ ನಮಗೆ ಹಗಲು ರಾತ್ರಿಗಳನ್ನು ಕೊಟ್ಟಿರುವುದು ಹಗಲು ಕೆಲಸ ಮಾಡಲೆಂದು ಹಾಗೂ ರಾತ್ರಿ ವಿಶ್ರಮಿಸಲೆಂದು ಎಂದು ಎಲ್ಲಾ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಆದರೆ ಇಂದು ನಾವೇನು ಮಾಡುತ್ತಿದ್ದೇವೆ?
ನಮ್ಮ ಇಂದಿನ ದೈನಂದಿನ ಕೆಲಸಗಳಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳೂ ಕಡಿಮೆಯೇ. ಆಫೀಸ್ ಅಥವಾ ನಮ್ಮ ದೈನಿಂದಿನ ಕಾರ್ಯ ಮುಗಿಸಿ ಮನೆಗೆ ಬಂದ ಬಳಿಕ ವಿರಾಮದ ಬದಲು ನಮ್ಮ ಚಟುವಟಿಕೆಗಳು ಬದಲಾಗುತ್ತಾ ಹೋಗುತ್ತವೆ.
ಆಧುನಿಕ ಉಪಕರಣಗಳು ಎಲ್ಲರ ಕೈಯಲ್ಲಿ ಆಟಿಕೆಯಾಗಿ ಬಂದ ಮೇಲಂತೂ ಈಮೇಲ್ ಕಳುಹಿಸುವುದು, ಟೀವಿ ವೀಕ್ಷಿಸುವುದು, ಗೇಮ್ ಆಡುವುದು ಇವೆಲ್ಲಾ ಒಂದೆರಡು ಗಂಟೆಗಳಿಗೆ ಸೀಮಿತಗೊಂಡರೆ ವಾಟ್ಸಾಪ್ ಮೊದಲಾದ ಸಾಮಾಜಿಕ ತಾಣಗಳಲ್ಲಿ ಕಳೆಯುವ ಸಮಯಕ್ಕೆ ಮಿತಿಯೇ ಇಲ್ಲ. ಅಂತೆಯೇ ಇವೆಲ್ಲಾ ನಮ್ಮ ರಾತ್ರಿಯ ಸಮಯವನ್ನೆಲ್ಲಾ ಕಬಳಿಸಿ ನಿದ್ದೆ ಮಾಡಬೇಕಾದ ಹೊತ್ತಿನಲ್ಲಿ ಜಾಗೃತಿಯಿಂದಿರುವಂತಾಗುತ್ತದೆ. ಅಧಿಕ ನಿದ್ದೆ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!
ಅಂತೂ ಬಲವಂತವಾಗಿ ತಡರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಬೇಗ ಏಳಲೂ ಸೋಮಾರಿತನವಾಗಿ ತಡವಾಗಿ ಏಳುವುದು, ಎದ್ದಬಳಿಕವೂ ಮಂಪರು ಆವರಿಸಿದ್ದು ಯಾವುದೇ ವ್ಯಾಯಾಮವಿಲ್ಲದೇ, ಬೆಳಗ್ಗಿನ ಸೂರ್ಯನ ಕಿರಣಗಳ ಶಕ್ತಿಯಿಲ್ಲದೆ, ಮುಂಜಾನೆಯ ತಾಜಾ ಹವೆಯ ಪುಳಕವಿಲ್ಲದೇ ತರಾತುರಿಯಲ್ಲಿ ಕಛೇರಿಗೆ ಧಾವಿಸಿದ ಬಳಿಕವೂ ಕೃತಕವಾದ ಉತ್ಸಾಹ ತೋರುವುದು, ಚಟುವಟಿಕೆಗಳಲ್ಲಿ ಮನಸ್ವೀ ಭಾಗಿಯಾಗದೇ ಇರುವುದು
ಮೊದಲಾದವು ತಡರಾತ್ರಿ ಮಲಗುವ ಎಲ್ಲರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಆದರೆ ನಿಸರ್ಗ ನಮಗೇಕೆ ಬೇಗನೇ ಮಲಗಿ ಬೇಗನೇ ಏಳಿ ಎಂದು ಹೇಳುತ್ತಿದೆ ಗೊತ್ತೇ? ಕೆಳಗಿನ ಸ್ಲೈಡ್ ಶೋ ನೋಡಿ, ಇಂದಿನಿಂದಲೇ ರಾತ್ರಿ ಬೇಗನೇ ಮಲಗುವ ಪಣ ತೊಡಿ...

ದೇಹಕ್ಕೆ ಮರುಚೈತನ್ಯ ನೀಡುತ್ತದೆ
ನಮ್ಮ ದೇಹದಲ್ಲಿನ ಕೆಲವು ಚಟುವಟಿಕೆಗಳು ನಿದ್ದೆಯಬಳಿಕವೂ ನಡೆಯುತ್ತಿರುತ್ತವೆ. ಉಸಿರಾಟ, ಜೀರ್ಣಕ್ರಿಯೆ ಮೊದಲಾದವು. ಎಲ್ಲಾ ಐಚ್ಛಿಕ ಅಂಗಗಳು (voluntary)ವಿಶ್ರಾಂತಿ ಪಡೆದರೆ ಅನೈಚ್ಛಿಕ (invouluntary) ಅಂಗಗಳು ಕೆಲಸ ನಿರ್ವಹಿಸುತ್ತಲೇ ಇರುತ್ತವೆ. ಇದರಲ್ಲಿ ಮುಖ್ಯವಾದುದು ದಿನದ ಚಟುವಟಿಕೆಯಿಂದ ಸ್ನಾಯು ಮತ್ತಿತರ ಜೀವಕೋಶಗಳು ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಮರುಪೂರೈಕೆ ಮಾಡುವುದು. ಇದು ರಾತ್ರಿ ನಿದ್ದೆ ಹತ್ತಿದ ಬಳಿಕ ಪ್ರಾರಂಭವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೇಹಕ್ಕೆ ಮರುಚೈತನ್ಯ ನೀಡುತ್ತದೆ
ಈ ಹೊತ್ತಿನಲ್ಲಿ ಬಲವಂತವಾಗಿ ನಾವು ದೇಹವನ್ನು ಎಚ್ಚರಗೊಳಿಸಿಕೊಂಡೇ ಇದ್ದರೆ ಈ ಕೆಲಸಗಳು ಆಗುವುದಾದರೂ ಹೇಗೆ? ರಾತ್ರಿ ನಿದ್ದೆ ಬಂದ ಬಳಿಕವೂ ಈ ಕೆಲಸ ಆಗಬಹುದಲ್ಲಾ ಎಂಬ ಮೊಂಡು ವಾದ ಬೇಡ. ಆ ಹೊತ್ತಿನಲ್ಲಿ ವಿವಿಧ ರಸದೂತಗಳನ್ನು ಸ್ರವಿಸಿ ದೇಹದ ಇತರ ಕಾರ್ಯಗಳನ್ನು ಮಾಡಬೇಕಾದ ಜವಾಬ್ದಾರಿ ಇದೆ. ಇದೂ ವ್ಯತ್ಯಯಗೊಂಡರೆ? ನಿಮ್ಮ ಬೆಳಗ್ಗಿನ ಮಂಪರಿಗೆ ಇದೇ ಕಾರಣ!

ಬೆಳಗ್ಗೆದ್ದ ತಾಜಾತನ ಇಲ್ಲವಾಗುತ್ತದೆ
ನಮಗೆಲ್ಲರಿಗೂ ಸುಮಾರು ಆರರಿಂದ ಎಂಟು ಘಂಟೆಯ ಪೂರ್ಣಪ್ರಮಾಣದ ನಿದ್ದೆ ಬೇಕೇ ಬೇಕು. ತಡರಾತ್ರಿ ಮಲಗಿದರೆ ದೇಹದ ನೈಸರ್ಗಿಕ ಚಟುವಟಿಕೆಗಳಲ್ಲಿ ಬಾಧತೆಯುಂಟಾಗಿ ರಾತ್ರಿ ನಡೆಯಬೇಕಾಗಿದ್ದ ಕೆಲಸಗಳೆಲ್ಲಾ ಬೆಳಿಗ್ಗೆ ನಡೆಸುವಂತಾಗುವುದರಿಂದ ಬೆಳಿಗ್ಗೆ ಎದ್ದ ಬಳಿಕವೂ ಆ ಕೆಲಸಗಳು ಪೂರ್ಣವಾಗದೇ ಇತರ ಕೆಲಸಗಳಿಗೆ ಪೂರ್ಣಪ್ರಮಾಣದ ರಕ್ತಪೂರೈಕೆ ಸಾಧ್ಯವಾಗದೇ ಚಟುವಟಿಕೆಗೆ ಅಗತ್ಯವಾದ ಶಕ್ತಿ ಇರುವುದಿಲ್ಲ. ಇದನ್ನೇ ನಾವು ತಾಜಾತನ ಇಲ್ಲದಿರುವುದು ಎನ್ನುತ್ತೇವೆ. ಒಂದು ವೇಳೆ ರಾತ್ರಿ ಬೇಗನೇ ಮಲಗಿದರೆ ಬೆಳಿಗ್ಗೆ ಬೇಗನೇ ಎದ್ದಾಗ ಈ ಎಲ್ಲಾ ಚಟುವಟಿಕೆಗಳು ಸೂಕ್ತಕಾಲದಲ್ಲಿ ಮುಕ್ತಾಯಗೊಂಡು ಬೆಳಗ್ಗಿನ ಚಟುವಟಿಕೆಗಳಿಗೆ ಪೂರ್ಣಪ್ರಮಾಣದ ಶಕ್ತಿಯನ್ನು ಒದಗಿಸುವುದರಿಂದ ತಾಜಾತನದ ಅನುಭವವಾಗುತ್ತದೆ. ಮೆದುಳಿಗೂ ಪೂರ್ಣಪ್ರಮಾಣದ ರಕ್ತ ಲಭಿಸುವುದರಿಂದ ಮನಸ್ಸೂ ಪ್ರಫುಲ್ಲಿತವಾಗಿರುತ್ತದೆ.

ಉತ್ತಮಗೊಳ್ಳುವ ಪ್ರಜ್ಞಾಪೂರ್ವಕ ಕಾರ್ಯಗಳು
ಬೆಳಿಗ್ಗೆದ್ದ ಬಳಿಕ ನಮ್ಮ ದೈನಂದಿನ ಬಹುತೇಕ ಎಲ್ಲಾ ಕೆಲಸಗಳಲ್ಲಿ ನಮ್ಮ ಪ್ರಜ್ಞೆ ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತದೆ. ಚಿಕ್ಕ ಉದಾಹರಣೆ ಎಂದರೆ ಬೆಳಿಗ್ಗೆ ಬಸ್ಸು ಹತ್ತುವಾಗ ಮೊದಲ ಮೆಟ್ಟಿಲು ಏರುವುದು. ಆ ಸಮಯದಲ್ಲಿ ನಮ್ಮ ಪ್ರಜ್ಞೆ ಮೆಟ್ಟಿಲ ಮೇಲೆ ಮೊದಲ ಪಾದವನ್ನಿಟ್ಟು, ಬಳಿಕ ಇನ್ನೊಂದು ಪಾದವನ್ನಿರಿಸಿ ಒಳಗಡಿಯಿರಿಸುವುದರಲ್ಲಿ ಪೂರ್ಣವಾಗಿ ಜಾಗೃತಗೊಂಡಿರಬೇಕು. ಈ ಸಮಯದಲ್ಲಿ ಮೊದಲ ಪಾದ ಇರಿಸುವಾಗ ಮಂಪರಿನಲ್ಲಿ ಅರ್ಧಪಾದ ಮಾತ್ರ ಮೆಟ್ಟಿಲ ಮೇಲಿಟ್ಟರೆ? ಅದೇ ಸಮಯದಲ್ಲಿ ಬಸ್ ಹೊರಟರೆ? ಬೆಳಗ್ಗಿನ ತಾಜಾತನದ ಅಗತ್ಯತೆ ಈಗ ಅರಿವಾಯಿತೇ? ಇದಕ್ಕಾಗಿ ನಿದ್ದೆ ಅತ್ಯಂತ ಅಗತ್ಯವಾಗಿದೆ.

ವಿವಿಧ ವ್ಯಾಧಿಗಳನ್ನು ಬರುವುದರಿಂದ ತಡೆಯುತ್ತದೆ
ಹೃದಯರೋಗಿಗಳ ಅಭ್ಯಾಸವನ್ನು ಕಲೆಹಾಕಿದ ಸಂಶೋಧನೆಯ ಪ್ರಕಾರ ಹೃದಯರೋಗಕ್ಕೆ ಅವರ ದೈನಂದಿನ ಅಭ್ಯಾಸಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಇದರಲ್ಲಿ ಪ್ರಮುಖವಾದುದು ಬೆಳಿಗ್ಗೆ ತಡವಾಗಿ ಏಳುವುದು. ಹಲವು ಹೃದಯ ಸಂಬಂಧಿ ಕಾಯಿಲೆಗಳು, ಕೆಲವು ವಿಧದ ಕ್ಯಾನ್ಸರ್ ಗಳು ಮೊದಲಾದವು ಆವರಿಸುವ ಸಂಭವ ಬೆಳಿಗ್ಗಿನ ತಾಜಾತನದ ಕೊರತೆಯಿಂದ ಹೆಚ್ಚುತ್ತದೆ ಎಂದು ಈ ಸಂಶೋಧನೆ ತಿಳಿಸುತ್ತದೆ.ಅದೇ ಬೆಳಗ್ಗೆ ಬೇಗನೆದ್ದು ತಾಜಾ ಹವೆ ಮತ್ತು ಸೂರ್ಯನ ಕಿರಣಗಳನ್ನು ಪಡೆದವರ ಆರೋಗ್ಯ ಉತ್ತಮವಾಗಿರುವುದನ್ನೂ ಈ ಸಂಶೋಧನೆ ದೃಢಪಡಿಸುತ್ತದೆ.

ಬೆಳಿಗ್ಗೆ ಬೇಗನೇ ಏಳುವುದರಿಂದ ಲಭಿಸುವ ಇತರ ಉಪಯೋಗಗಳು
* ಬೆಳಿಗ್ಗೆ ನಿಮಗೆ ಸಿಗುವ ಏಕಾಂತ, ಈ ಏಕಾಂತದಲ್ಲಿ ನಡೆಸುವ ಚಿಂತನೆ, ಪ್ರಾರ್ಥನೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ
* ಸೂರ್ಯನ ಮೊದಲ ಕಿರಣಗಳನ್ನು ವೀಕ್ಷಿಸುವುದರಿಂದ ದೇಹಕ್ಕೆ ಧನಾತ್ಮಕ ಶಕ್ತಿ ದೊರಕುತ್ತದೆ
* ಬೆಳಗ್ಗಿನ ತಾಜಾ ಹವೆಯಲ್ಲಿ ಪ್ರದೂಷಣಾಕಾರಕ ಕಣಗಳು ಅತಿ ಕಡಿಮೆ ಇರುವುದರಿಂದ ಮತ್ತು ಗಿಡಗಳು ರಾತ್ರಿ ಕಳೆದ ಬಳಿಕ ಮುಂಜಾನೆ ಹೊಸದಾಗಿ ಆಮ್ಲಜನಕವನ್ನು ಬಿಡುಗಡೆ ಮಾಡುವುದರಿಂದ ಗಿಡಮರಗಳ ನಡುವಣ ನಡಿಗೆಯ ಮೂಲಕ ಅತ್ಯುತ್ತಮವಾದ ಹವೆ ಲಭಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಳಿಗ್ಗೆ ಬೇಗನೇ ಏಳುವುದರಿಂದ ಲಭಿಸುವ ಇತರ ಉಪಯೋಗಗಳು
* ಯೋಗಾಭ್ಯಾಸ ಸಹಿತ ನಿಮ್ಮ ಯಾವುದೇ ವ್ಯಾಯಾಮಕ್ಕೂ ಬೆಳಗ್ಗಿನ ಸಮಯವೇ ಅತ್ಯುತ್ತಮವಾಗಿದೆ.
* ಬೆಳಗ್ಗಿನ ನಡಿಗೆಯ ಸಮಯದಲ್ಲಿ ಕಣ್ಣಿಗೆ ನೀಡುವ ವ್ಯಾಯಾಮವೂ ಅತ್ಯುತ್ತಮವಾದ ಪರಿಣಾಮ ನೀಡುತ್ತದೆ.
* ತೂಕ ಕಳೆದುಕೊಳ್ಳುವವರಿಗೆ ಬೆಳಗ್ಗಿನ ಸಮಯದ ವ್ಯಾಯಾಮವೇ ಅತ್ಯುತ್ತಮ ಪರಿಣಾಮ ನೀಡುತ್ತದೆ.
* ಬೇಗನೇ ಎದ್ದು ಬೇಗನೇ ಕಛೇರಿ ಅಥವಾ ನಿಮ್ಮ ಕೆಲಸಕಾರ್ಯಗಳಿಗೆ ಹೊರಡುವುದರಿಂದ ಮುಂಜಾನೆಯ ಧಾವಂತ ಮತ್ತು ಅದರಿಂದಾಗುವ ದುಗುಡದಿಂದ ತಪ್ಪಿಸಿಕೊಳ್ಳಬಹುದು.
* ತಡವಾಗಿ ಎದ್ದರೆ ದೇಹದ ವಿಸರ್ಜನಾ ಕಾರ್ಯವೂ ತಡವಾಗಿಯೇ ಆಗುವುದರಿಂದ ತಡವಾದಷ್ಟೂ ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹ ದಟ್ಟನಾಗುತ್ತಾ ಹೋಗುತ್ತದೆ. ತಡವಾಗಿ ಎದ್ದ ಬಳಿಕ ಮೂತ್ರದ ಬಣ್ಣ ನೋಡಿದರೆ ಇದು ಮನದಟ್ಟಾಗುತ್ತದೆ.



Click it and Unblock the Notifications











