Latest Updates
-
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ! -
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು?
ಇನ್ನು ಸಣ್ಣ- ಪುಟ್ಟ ಕಾಯಿಲೆಗೆ ವೈದ್ಯರ ಬಳಿ ಓಡಬೇಡಿ!
ಹಳ್ಳಿಕಡೆಗಳಲ್ಲಿ ಕಾಯಿಲೆಗೂ ಇಂಜೆಕ್ಷನ್‌ಗೂ ಹತ್ತಿರದ ಸಂಬಂಧವಿದೆ. ವೈದ್ಯರು ಎಲ್ಲಿಯವರೆಗೆ ಒಂದು ಸೂಜಿ ಚುಚ್ಚುವುದಿಲ್ಲವೋ ಹಳ್ಳಿಯವರ ಆರೋಗ್ಯ ಸುಧಾರಿಸುವುದಿಲ್ಲ. ಏಕೆಂದರೆ ಅವರ ಮನಸ್ಸು ಇಂಜೆಕ್ಷನ್ ಚುಚ್ಚಿದರೇ ಜ್ವರ ಕಡಿಮೆಯಾಗುವುದು ಎಂದು ಬಲವಾಗಿ ನಂಬಿಬಿಟ್ಟಿದೆ. ಈ ನಂಬಿಕೆಯನ್ನೇ ಉಪಯೋಗಿಸಿಕೊಂಡ ವೈದ್ಯರು ಡಿಸ್ಟಿಲ್ಡ್ ನೀರನ್ನೇ ಚುಚ್ಚಿದರೂ ರೋಗಿಗಳು ನಿಜವಾಗಿಯೂ ಗುಣಹೊಂದುವುದು ನಮ್ಮ ಮೆದುಳಿನ ಒಂದು ಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಂದು ಹಲವರನ್ನು ಕಾಡುತ್ತಿರುವ ಖಿನ್ನತೆ, ಒಂಟಿತನ ಮೊದಲಾದವುಗಳಿಗೆ ಮನಃಶಾಸ್ತ್ರಜ್ಞರು ಸಾಕುಪ್ರಾಣಿಯೊಂದಿಗೆ ಕೆಲವು ಸಮಯ ಕಳೆಯುವಂತಹ ಸುಲಭ ಉಪಾಯ ನೀಡುತ್ತಾರೆ. ಎಂತೆಂತಹ ಮಾತ್ರೆ, ಚಿಕಿತ್ಸೆಗಳಿಗೂ ಬಗ್ಗದ ಈ ತೊಂದರೆ ನೆಚ್ಚಿನ ನಾಯಿಯೊಂದಿಗೆ ಕೆಲವು ಕ್ಷಣ ಇದ್ದಾಗ ಖಿನ್ನತೆ ಮಂಗಮಾಯವಾಗಿರುವುದು ಕಂಡುಬಂದಿದೆ. ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು
ಇಂತಹದ್ದೇ ಹಲವಾರು ಚಿಕ್ಕಪುಟ್ಟ ವಿಷಯಗಳು ನಮ್ಮ ಆರೋಗ್ಯವನ್ನು ಚಮತ್ಕಾರಿಯಾಗಿ ಉತ್ತಮಗೊಳಿಸಬಲ್ಲವು. ಇದನ್ನು ಪ್ರಯೋಗಿಸುವವರೆಗೂ ಇದರ ಮಹತ್ವವನ್ನು ಅರಿಯದೇ ಹೋಗುತ್ತೇವೆ. ಆದರೆ ಇದಕ್ಕೆ ಕೊಂಚ ಕಾಲಾವಕಾಶ ಅಗತ್ಯ. ಒಂದೆರಡು ದಿನಗಳಲ್ಲಿಯೇ ಗುಣಪಡಿಸಬಲ್ಲ ಮಾತ್ರೆ ಮತ್ತು ಔಷಧಿಗಳಿಗೆ ಹೆಚ್ಚಿನ ಮಹತ್ವ ನೀಡುವ ನಾವು ಈ ಚಿಕ್ಕಪುಟ್ಟ ಚಮತ್ಕಾರಗಳನ್ನು ಕಡೆಗಣಿಸುತ್ತಾ ಬಂದಿದ್ದೇವೆ. ಸಂಪೂರ್ಣವಾಗಿ ಮರೆಯುವ ಮೊದಲು ಇದರಲ್ಲಿ ಕೆಲವು ಪ್ರಮುಖವಾದುದನ್ನು ಪ್ರಯೋಗಿಸಿಕೊಂಡು ಫಲಪಡೆಯಲು ಕೆಳಗಿನ ಸ್ಲೈಡ್ ಶೋ ನೆರವು ನೀಡಲಿದೆ..

ಸಲಹೆ1: ಸುಸ್ತಾಗಿದ್ದಾಗ ಕಿತ್ತಳೆ ತಿನ್ನಿ
ದಿನದ ಒತ್ತಡದಿಂದ ದೇಹ ಜರ್ಝರಿತವಾಗಿದ್ದಾಗ ಕಿತ್ತಳೆ ಹಣ್ಣೊಂದನ್ನು ತಿನ್ನುವ ಮೂಲಕ ಅಥವಾ ಸಿಪ್ಪೆಯನ್ನು ಕಿವುಚಿ ಅದರ ಸುವಾಸನೆಯನ್ನು ಹೀರುವ ಮೂಲಕ ಈ ಒತ್ತಡದಿಂದ ಶರೀರ ಶೀಘ್ರವೇ ಹೊರಬರುತ್ತದೆ.

ಸಲಹೆ 2: ಪಾಲಕ್ ಮತ್ತು ಮೊಟ್ಟೆ ತಿನ್ನಿರಿ
ಕ್ರೀಡೆಯಲ್ಲಿ ಅತ್ಯಗತ್ಯವಾದ ನರಪ್ರಚೋದನೆಯ ಪ್ರತಿಕ್ರಿಯೆ ಕುಂಠಿತಗೊಂಡಿದೆ ಎನ್ನಿಸುತ್ತಿದೆಯೇ, ಕೊಂಚ ದಿನ ನಿಯಮಿತವಾಗಿ ಪಾಲಕ್ ಮತ್ತು ಮೊಟ್ಟೆಯನ್ನು ಸೇವಿಸುತ್ತಾ ಬನ್ನಿ.

ಸಲಹೆ 3: ಕೆಮ್ಮು ಕಾಡುತ್ತಿದೆಯೇ, ಅನಾನಸು ತಿನ್ನಿ
ಅನಾನಸಿನಲ್ಲಿರುವ ಬ್ರೋಮಿಲೈನ್ ಎಂಬ ಪೋಷಕಾಂಶ ಕೆಮ್ಮಿಗೆ ಕಾರಣವಾಗುವ ಬ್ಯಾಕ್ಟ್ರೀರಿಯಾಗಳನ್ನು ಕೊಲ್ಲುವ ಗುಣವಿರುವುದರಿಂದ ಕೆಮ್ಮು ಶೀಘ್ರವೇ ಹತೋಟಿಗೆ ಬರುತ್ತದೆ.

ಸಲಹೆ 4: ಕಾಫಿ ಕುಡಿದ ಬಳಿಕ ನೀರು ಕುಡಿಯಿರಿ!
ಕಾಫಿ ಹೀರಿದ ಬಳಿಕ ಒಂದು ಗುಟುಕು ನೀರನ್ನಾದರೂ ಕುಡಿಯುವುದರಿಂದ ಹಲ್ಲುಗಳು ಕಪ್ಪಗಾಗುವುದನ್ನು ತಡೆದಂತಾಗುತ್ತದೆ.

ಸಲಹೆ 5: ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ನಾನಗೃಹದಲ್ಲಿ ಹಾಡಿ
ಸ್ನಾನಗೃಹದಲ್ಲಿ ಗಟ್ಟಿಯಾಗಿ ಹಾಡುವವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದೆಂದು ಸಾಬೀತಾಗಿದೆ. ಹಾಡುವ ಮೂಲಕ ಹೆಚ್ಚುವ ರಕ್ತದೊತ್ತಡ ಮನಸ್ಸಿನ ದುಗುಡಗಳನ್ನು ಕಡಿಮೆಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

ಸಲಹೆ 6: ಬೆಳಗ್ಗಿನ ಉಪಾಹಾರದೊಂದಿಗೆ ಬಾಳೆಹಣ್ಣು ತಿನ್ನಿ
ಇಡಿಯ ದಿನ ಉಲ್ಲಾಸದಿಂದಿರಲು ಬೆಳಗ್ಗಿನ ಉಪಾಹಾರದೊಂದಿಗೆ ಒಂದು ಬಾಳೆಹಣ್ಣನ್ನೂ ಸೇವಿಸಿ.

ಸಲಹೆ 7: ಬಿಸಿಲಿಗೆ ಹೋಗುವ ಮೊದಲು ಟೊಮೇಟೊ ತಿನ್ನಿ
ಬಿಸಿಲಿನಲ್ಲಿ ಹೊರಹೋಗಬೇಕೇ? ಒಂದು ಟೊಮೇಟೊ ಹಣ್ಣನ್ನು ತಿಂದು ಹೊರಡಿ. ಇದರಿಂದ ಬಿಸಿಲಿನ ಝಳವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ.

ಸಲಹೆ 8:ಸುಮ್ಮನೇ ನಿಂತರೂ ಗಂಟೆಗೆ ನೂರಿಪ್ಪತ್ತು ಕ್ಯಾಲೋರಿ ಖರ್ಚಾಗುತ್ತದೆ!
ಎಲ್ಲೆಲ್ಲಿ ನಿಂತಿರುತ್ತೀರೋ, ಆಗಲೂ ದೇಹದಿಂದ ಕೊಂಚ ಕ್ಯಾಲೋರಿಗಳು ಖರ್ಚಾಗುತ್ತಲೇ ಇರುತ್ತವೆ. ಎಷ್ಟು ಎಂದರೆ ಒಂದು ಗಂಟೆಗೆ ನೂರಿಪ್ಪತ್ತು ಕ್ಯಾಲೋರಿ. ಆದ್ದರಿಂದ ನಿಂತಿದ್ದರೆ ಒಳ್ಳೆಯದೇ ಎಂದು ಸಮಾಧಾನಪಟ್ಟುಕೊಳ್ಳಿ.

ಸಲಹೆ 9 ಒತ್ತಡವಿದ್ದರೆ ನಯವಾದ ಮಸಾಜ್ ಪಡೆದುಕೊಳ್ಳಿ
ನಿಮ್ಮ ಮನಸ್ಸಿನ ಒತ್ತಡ ಕಡಿಮೆಗೊಳಿಸಲು ನಿಮ್ಮ ಹಿತೈಷಿಗಳ ಹಿತಸ್ಪರ್ಷ ಉತ್ತಮ ಪರಿಹಾರ ನೀಡುತ್ತದೆ. ಅದರಲ್ಲೂ ನಿಮ್ಮ ಜೀವನಸಂಗಾತಿ ನಯವಾಗಿ ಮಸಾಜ್ ಮಾಡಿದರೆ ಎಂತಹ ಒತ್ತಡವಾದರೂ ದೂರವಾಗುತ್ತದೆ.

ಸಲಹೆ 10: ನಿಮ್ಮ ಕೈಯಲ್ಲಿಲ್ಲದ ಪರಿಸ್ಥಿತಿಗೆ ಉದ್ವೇಗಗೊಳ್ಳಬೇಡಿ
ಹಿಂದೆಂದೋ ಆಗಿದ್ದ ಅಥವಾ ಮುಂದೆ ನಿಮ್ಮ ಕೈಯಲ್ಲಿ ಇಲ್ಲದೇ ಇರುವ ಪರಿಸ್ಥಿತಿಗಳು ನಿಮ್ಮ ಎಣಿಕೆಗೆ ವಿರುದ್ಧವಾಗಿದ್ದರೆ ಉದ್ವೇಗಕ್ಕೆ ಒಳಗಾಗಬೇಡಿ. ಏಕೆಂದರೆ ನಿಮ್ಮ ಕೈಯಲ್ಲಿಲ್ಲದ ಪರಿಸ್ಥಿತಿಯನ್ನು ನೀವು ನಿಯಂತ್ರಿಸಲಾರಿರಿ.



Click it and Unblock the Notifications