Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತಿಯಾದ ಪಿತ್ತರಸ ಸ್ರವಿಸುವುದನ್ನು ಕಡಿಮೆ ಮಾಡಲು ಸಲಹೆಗಳು
ಪಿತ್ತಜನಕಾಂಗವು ಹೊರಹಾಕುವ ದ್ರವ ಪಿತ್ತರಸವು ಆಹಾರ ಜೀರ್ಣವಾಗಲು ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತದೆ. ಪಿತ್ತಿಜನಕಾಂಗದಲ್ಲಿ ಉತ್ಪತ್ತಿಯಾಗುವ ಪಿತ್ತರಸವು ಗಾಲ್ ಕೋಶದಲ್ಲಿ ಹೋಗಿ ಸಂಗ್ರಹವಾಗುತ್ತದೆ.
ಪಿತ್ತರಸದಲ್ಲಿ ಶೇ. 80-90ರಷ್ಟು ನೀರು ಮತ್ತು ಶೇ. 10-20ರಷ್ಟು ಪಿತ್ತರಸ ಉಪ್ಪು, ಕೊಬ್ಬು, ಲೋಳೆ ಮತ್ತು ಅಜೈವಿಕ ಲವಣಗಳನ್ನು ಹೊಂದಿದೆ. ದೇಹದ ಅಗತ್ಯತೆ ಹಾಗೂ ಕ್ರಿಯೆಗೆ ಅನುಗುಣವಾಗಿ ಪಿತ್ತರಸದ ಉತ್ಪತ್ತಿ ಮತ್ತು ವಿಸರ್ಜನೆಯಾಗುತ್ತದೆ. ಪಿತ್ತಜನಕಾಂಗದಲ್ಲಿ ಯಾವುದೇ ಕ್ರಿಯೆ ನಡೆದಾಗ ಪಿತ್ತರಸವು ಸ್ರವಿಸುತ್ತದೆ.
ಪಿತ್ತರಸವು ಅತಿಯಾಗಿ ಉತ್ಪತ್ತಿಯಾದರೆ ಆಗ ವಾಕರಿಕೆ ಮತ್ತು ವಾಂತಿಯಾಗಬಹುದು. ಅನಾರೋಗ್ಯಕರ ಆಹಾರ ಕ್ರಮ, ಅನಿಯಮಿತವಾಗಿರುವ ಜೀವನಶೈಲಿ ಮತ್ತು ದೇಹವು ಯಾವುದಾದರೂ ಜೀರ್ಣಾಂಗ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ಪಿತ್ತರಸವು ಅತಿಯಾಗಿ ಉತ್ಪತ್ತಿಯಾಗುತ್ತದೆ.
ಪಿತ್ತರಸವು ಅತಿಯಾಗಿ ಉತ್ಪತ್ತಿಯಾಗುವುದರಿಂದ ಅಜೀರ್ಣ, ವಾಕರಿಕೆ, ವಾಂತಿ ಮತ್ತು ಕೆಲವೊಂದು ಸಲ ಮನಸ್ಥಿತಿ ಬದಲಾವಣೆ ಮತ್ತು ಮಾನಸಿಕ ಖಿನ್ನತೆ ಉಂಟಾಗಬಹುದು. ಇದರಿಂದ ಅತಿಯಾದ ಪಿತ್ತರಸ ಉತ್ಪಾದನೆಗೆ ಕೆಲವೊಂದು ಔಷಧಿ ಮಾಡುವುದು ತುಂಬಾ ಮುಖ್ಯ. ಈ ಲೇಖನದಲ್ಲಿ ಅತಿಯಾದ ಪಿತ್ತರಸ ಸ್ರವಿಸುವಿಕೆಗೆ ಕೆಲವೊಂದು ಸಲಹೆಗಳನ್ನು ಚರ್ಚಿಸಲಾಗಿದೆ.

ವ್ಯಾಯಾಮ
ಎಲ್ಲಾ ರೋಗಗಳಿಗೆ ವ್ಯಾಯಾಮ ಒಳ್ಳೆಯ ಮದ್ದು. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹವನ್ನು ಫಿಟ್ ಮತ್ತು ಎಲ್ಲಾ ರೋಗಗಳಿಂದ ದೂರವಿಡಬಹುದು. ಪಿತ್ತರಸ ಸ್ರವಿಸುವುದನ್ನು ಕಡಿಮೆ ಮಾಡಲು ನೀವು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಊಟದ ಬಳಿಕದ ನಡಿಗೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕೆಲವೊಂದು ಯೋಗಾಸನ ಮತ್ತು ನಿಯಮಿತವಾಗಿ ಜಿಮ್ ಗೆ ಹೋಗಿ ಕೆಲವೊಂದು ವ್ಯಾಯಾಮ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿ ದೇಹದಲ್ಲಿ ಪಿತ್ತರಸ ಸ್ರವಿಸುವುದನ್ನು ನಿರ್ವಹಿಸಲು ನೆರವಾಗುತ್ತದೆ.

ಆಮ್ಲಯುಕ್ತ ಪದಾರ್ಥಗಳನ್ನು ಕಡೆಗಣಿಸಿ
ನಿಮ್ಮಲ್ಲಿ ಅತಿಯಾಗಿ ಪಿತ್ತರಸ ಸ್ರವಿಸುತ್ತಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಆಮ್ಲಯುಕ್ತ ಪದಾರ್ಥಗಳನ್ನು ಕಡೆಗಣಿಸಬೇಕು. ಕಾಫಿ, ಸಿಟ್ರಸ್ ಹಣ್ಣಿನ ಜ್ಯೂಸ್, ನಿಂಬೆರಸವನ್ನು ರಾತ್ರಿ ಊಟದ ಬಳಿಕ ಕುಡಿಯುವುದನ್ನು ಕಡೆಗಣಿಸಿ. ಆ್ಯಸಿಡಿಟಿ ಉಂಟುಮಾಡುವ ಮತ್ತು ಅತಿಯಾದ ಪಿತ್ತರಸ ಸ್ರವಿಸಲು ಕಾರಣವಾಗುವ ಆಹಾರಗಳನ್ನು ಕಡೆಗಣಿಸಿ.

ನೀರು
ಅತಿಯಾದ ಪಿತ್ತರಸ ಸ್ರವಿಸುವುದನ್ನು ತಡೆಯಲು ದೇಹದಲ್ಲಿ ಅತ್ಯವಿದ್ದಷ್ಟು ನೀರಿನಾಂಶ ಕಾಪಾಡಬೇಕು. ಆಹಾರ ಜೀರ್ಣವಾಗಲು ನೀರು ನೆರವಾಗುತ್ತದೆ. ಇದರಿಂದ ಪಿತ್ತರಸವು ಕಡಿಮೆ ಸ್ರವಿಸುತ್ತದೆ. ದಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿದರೆ ಪಿತ್ತರಸ ಕಡಿಮೆಯಾಗುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ನೀರು ಕುಡಿದರೆ ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆ ಸುಧಾರಿಸಿ, ಹೊಟ್ಟೆ ಉಬ್ಬರ, ಜಠರ, ವಾಕರಿಕೆ ಮತ್ತು ಅಹಿತಕರ ಭಾವನೆಯ ಸಮಸ್ಯೆಯಿಂದ ದೂರವಿಡುತ್ತದೆ.

ಕೊಬ್ಬಿನ ಆಹಾರಗಳು
ಆಹಾರದ ಪ್ರಮಾಣವನ್ನು ಗಮನಿಸುವಷ್ಟೇ ಮುಖ್ಯವಾಗಿ ಒಳ್ಳೆಯ ಗುಣಮಟ್ಟದ ಆಹಾರ ತಿನ್ನುವುದು ಕೂಡ ಅಷ್ಟೇ ಮುಖ್ಯ. ಅಧಿಕ ಕೊಬ್ಬು ಹೊಂದಿರುವ ಎಣ್ಣೆಯುಕ್ತ ಮತ್ತು ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳು ಜೀರ್ಣವಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಿಂದ ಅತಿಯಾದ ಪಿತ್ತರಸ ಸ್ರವಿಸಲ್ಪಡುತ್ತದೆ. ಹೆಚ್ಚು ಕೊಬ್ಬಿನಾಂಶವಿರುವ ಆಹಾರವನ್ನು ಕಡಿಮೆ ಮಾಡುವುದು ಒಳ್ಳೆಯ ಟಿಪ್ಸ್. ಇದರಲ್ಲಿ ಜಂಕ್ ಫುಡ್, ಚೀಸ್ ಯುಕ್ತ ಆಹಾರ ಮತ್ತು ಸಕ್ಕರೆಯುಕ್ತ ಆಹಾರ ಸೇರಿದೆ.

ಆರೋಗ್ಯಕರ ಜೀವನಶೈಲಿ
ಅತಿಯಾದ ಪಿತ್ತರಸ ಸ್ರವಿಸುವ ಪರಿಣಾಮ ವಾಕರಿಕೆ ಮತ್ತು ಅಹಿತಕರ ಭಾವನೆ ಉಂಟಾಗುತ್ತದೆ. ಒಬ್ಬ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವನೆ ಮಾಡಿದಾಗ ಅತಿಯಾದ ಪಿತ್ತರಸ ಸ್ರವಿಸುತ್ತದೆ. ಇದರಿಂದ ಯಾವಾಗಲೂ ನೀವು ತಿನ್ನುವ ಆಹಾರದ ಪ್ರಮಾಣದ ಬಗ್ಗೆ ಗಮನವಿರಲಿ. ಮಲಗುವ ಮೊದಲು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸಬಾರದು. ಅಗತ್ಯಕ್ಕಿಂತ ಹೆಚ್ಚು ಆಹಾರ ತಿನ್ನಬೇಡಿ ಮತ್ತು ಆಹಾರ ಒಳಸೇರಿಸಲು ಒತ್ತಡ ಹಾಕಬೇಡಿ. ಸಮಯಕ್ಕೆ ಸರಿಯಾಗಿ ಊಟ ಮಾಡಿ ಮತ್ತು ಸಣ್ಣ ಪ್ರಮಾಣದಲ್ಲಿ ಊಟ ಮಾಡುವುದು ಅತಿಯಾಗಿ ಪಿತ್ತರಸ ಸ್ರವಿಸದಂತೆ ಮಾಡಲು ಒಳ್ಳೆಯ ಸಲಹೆ.



Click it and Unblock the Notifications