Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಓಟ್ಸ್ ತಿನ್ನಲು ಈ ವಿಧಾನವನ್ನು ಅನುಸರಿಸಿ!
ಓಟ್ಸ್ ಈಗಂತೂ ಸೂಪರ್‌ಫುಡ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮಧುಮೇಹ ರಕ್ತದೊತ್ತಡ, ತೂಕ ನಿವಾರಣೆ, ಕೊಬ್ಬ ಕರಗಿಸುವಿಕೆ ಹೀಗೆ ಒಂದಿಲ್ಲೊಂದು ಸ್ವಾಸ್ಥ್ಯವನ್ನು ಉಂಟುಮಾಡುತ್ತಾ ಮಾನವ ಸ್ನೇಹಿಯಾಗಿದೆ ಈ ಓಟ್ಸ್.
ಆದರೆ ಕೆಲವರಿಗೆ ಇದರ ಸಪ್ಪೆ ರುಚಿ ಅಷ್ಟೊಂದು ಒಗ್ಗುವುದಿಲ್ಲ. ನಿತ್ಯವೂ ಒಂದೇ ಮಾದರಿಯ ಆಹಾರವನ್ನು ಸೇವಿಸುವುದು ಖಂಡಿತ ಬೇಸರವನ್ನು ಉಂಟುಮಾಡಬಹುದು. ಹಾಗಿದ್ದರೂ ಈ ಓಟ್ಸ್ ಅನ್ನು ರುಚಿಯಾಗಿ ಸೇವಿಸಬಹುದು. ಹೇಗೆಂದು ನಿಮ್ಮ ಚಿಂತೆಯಾದರೆ ಆ ಚಿಂತೆ ಪರಿಹರಿಸಲೆಂದೇ ಇಂದಿನ ಈ ಲೇಖನ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ವಾವ್! ಮಸಾಲಾ ಚಹಾ ಟೇಸ್ಟ್ ಮಾಡಿರುವಿರಾ?
ಹೌದು ಓಟ್ಸ್ ಅನ್ನು ನಿಮಗೆ ಬೇಕಾದಂತೆ ರುಚಿಯಾಗಿ ತಯಾರಿಸಬಹುದು ಆದರೆ ಮಾಡುವ ವಿಧಾನ ನಿಮ್ಮ ಕೈಯಲ್ಲಿದೆ. ಓಟ್ಸ್ ಅನ್ನು ಬೆಳಗ್ಗಿನ ಆಹಾರವಾಗಿ ಮಾತ್ರ ಸೇವಿಸುತ್ತಾರೆ. ಆದರೆ ಇದನ್ನು ರುಚಿಯಾಗಿ ತಯಾರಿಸಿದಿರೆಂದರೆ ಮಧ್ಯಾಹ್ನದ ಊಟ, ರಾತ್ರಿಯ ಊಟಕ್ಕೆ ಕೂಡ ಓಟ್ಸ್ ಸೂಪರ್ ಆಹಾರವಾಗುತ್ತದೆ.
ಆದರೆ ಇದರ ತಯಾರಿಯಲ್ಲಿ ನೀವು ಬೆರೆಸುವ ಅಂಶಗಳತ್ತ ಗಮನಕೊಡುವುದು ಪ್ರಮುಖವಾಗಿರುತ್ತದೆ.
ಓಟ್ಸ್ ಅನ್ನು ವಿಭಿನ್ನವಾಗಿ ತಯಾರಿಸುವ ನಿಮ್ಮ ಆಲೋಚನೆ ಖಂಡಿತ ಇದನ್ನು ನಿಮ್ಮ ಮೆಚ್ಚಿನ ಆಹಾರವನ್ನಾಗಿಸುತ್ತದೆ. ಓಟ್ಸ್ ಅಕ್ಕಿ ಅಥವಾ ಗೋಧಿಯಂತೆ ಆರೋಗ್ಯ ಆಹಾರವಾಗಿದ್ದು ನಿಮ್ಮ ಡಯೆಟ್‌ನಲ್ಲಿ ಪ್ರಮುಖ ಪಾತ್ರ ವಹಿಸುವಲ್ಲಿ ನೆರವಾಗುತ್ತದೆ.
ನಿಮಗೆ ತಿಳಿದಿದೆಯೇ? ಚಿಕನ್ ಮತ್ತು ಮೊಟ್ಟೆಯೊಂದಿಗೆ ಕೂಡ ಓಟ್ಸ್ ಅನ್ನು ನಿಮಗೆ ಸೇವಿಸಬಹುದು. ಸ್ವಲ್ಪ ನಿಂಬೆಯನ್ನು ಓಟ್ಸ್‌ಗೆ ಹಿಂಡಿಕೊಂಡು ಇದರ ರುಚಿಯನ್ನು ಮರೆಯದಂತೆ ಮಾಡಿ.
ಬನ್ನಿ ಓಟ್ಸ್ ಅನ್ನು ಇನ್ನಷ್ಟು ರುಚಿಕರವಾಗಿ ತಯಾರಿಸುವ ವಿಧಾನದತ್ತ ಗಮನ ಕೊಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹಣ್ಣುಗಳ ರಾಜ ಮಾವಿನ ವಿವಿಧ ಅವತಾರಗಳು!

ಸೇಬು ಓಟ್ಸ್ ಪೋರಿಡ್ಜ್ಳ
ಸೇಬು ಐರನ್ ಹಾಗೂ ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಿಮ್ಮ ದಿನಚರಿಯನ್ನು ಓಟ್ಸ್ ಹಾಗೂ ಸೇಬು ಬೆರೆತ ಪೋರಿಡ್ಜ್‌ನೊಂದಿಗೆ ಪ್ರಾರಂಭಿಸಿ.

ಲಿಂಬೆ ಹಾಗೂ ಓಟ್ಸ್:
ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಇಷ್ಟದ ಯಾವುದನ್ನೇ ಓಟ್ಸ್‌ಗೆ ಬೆರೆಸಲು ಸಾಧ್ಯವಿಲ್ಲ. ತಾಜಾ ಲಿಂಬೆಯನ್ನು ನಿಮಗೆ ಓಟ್ಸ್‌ಗೆ ಬೆರೆಸಿ ಆಸ್ವಾದಿಸಬಹುದು. ಲಿಂಬೆ ಹಾಗೂ ಜೇನು ಬೆರೆತ ಓಟ್ಸ್ ಮಧುಮೇಹಿಗಳಲ್ಲಿ ಚಮತ್ಕಾರವನ್ನೇ ಉಂಟುಮಾಡಬಹುದು.

ಓಟ್‌ಮೀಲ್ ಸೂಪ್:
ನೀವು ಕಾಯಿಲೆಯವರಾಗಿದ್ದು, ಜ್ವರದಿಂದ ಈಗತಾನೇ ಚೇತರಿಸಿಕೊಂಡವರಾದಲ್ಲಿ, ಓಟ್‌ಮೀಲ್ ಸೂಪ್ ನಿಮಗೆ ಅತ್ಯದ್ಭುತ ಆಹಾರವಾಗಿದೆ. ತರಕಾರಿ ಅಥವಾ ಚಿಕನ್ ಮಿಶ್ರ ಮಾಡಿಕೊಂಡು ಓಟ್ಸ್‌ನೊಂದಿಗೆ ಬೇಯಿಸಿ. ನಿಮ್ಮ ಪರಿಪೂರ್ಣ ಊಟ ಇದರಿಂದ ನಿಮಗೆ ದೊರಕುತ್ತದೆ.

ಮಸಾಲಾ ಓಟ್ಸ್:
ಹೆಚ್ಚಿನ ಜನರು ಓಟ್ಸ್ ಅನ್ನು ಅದರ ಸಪ್ಪೆ ರುಚಿಗೆ ಇಷ್ಟಪಡುವುದಿಲ್ಲ. ನಿಮ್ಮ ಇಷ್ಟದ ಮಸಾಲೆಯನ್ನು ಸೇರಿಸಿ ಇದನ್ನು ಸ್ವಾದಿಷ್ಟಗೊಳಿಸಬಹುದು ಅವೆಂದರೆ ಚಾಟ್ ಮಸಾಲಾ, ಕರಿಮೆಣಸು, ಜೀರಿಗೆ ಹುಡಿ, ಡ್ರೈ ಮ್ಯಾಂಗೋ ಪೌಡರ್ ಇತ್ಯಾದಿ.

ಮೊಟ್ಟೆ ಹಾಗೂ ಓಟ್ಸ್ ಪೋರಿಡ್ಜ್:
ಓಟ್ಸ್ ಮತ್ತು ಮೊಟ್ಟೆಯನ್ನು ಪೋರಿಡ್ಜ್‌ನಂತೆ ಬೆಳಗ್ಗಿನ ತಿಂಡಿಯಲ್ಲಿ ನಿಮಗೆ ಸೇವಿಸಬಹುದು. ಇವೆರಡೂ ಸೇರಿದರೆ ಉತ್ತಮ ಬ್ರೇಕ್‌ಫಾಸ್ಟ್ ನಿಮ್ಮದಾಗುತ್ತದೆ.

ಓಟ್ಸ್ ಇಡ್ಲಿ:
ಸಾಮಾನ್ಯವಾಗಿ ಇಡ್ಲಿಯನ್ನು ಅಕ್ಕಿ ಹಿಟ್ಟಿನಿಂದ ತಯಾರಿಸುತ್ತಾರೆ. ಅಕ್ಕಿಯ ಬದಲಿಗೆ ಓಟ್ಸ್ ಬಳಸಿ ತರಕಾರಿಯನ್ನು ಮಿಶ್ರ ಮಾಡಿಕೊಂಡು ಹಬೆಯಾಡುವ ರುಚಿಕರ ಇಡ್ಲಿಯನ್ನು ನಿಮಗೆ ಸೇವಿಸಬಹುದು.

ಓಟ್ಸ್ ಚಿಕನ್ ಕರಿಯೊಂದಿಗೆ:
ಭಾರತೀಯ ಮನೆಗಳಲ್ಲಿ ಚಿಕನ್ ಪದಾರ್ಥ ಸಾಮಾನ್ಯವಾಗಿದೆ. ಅನ್ನದ ಬದಲಿಗೆ ಚಿಕನ್ ಪದಾರ್ಥವನ್ನು ಓಟ್ಸ್‌ನೊಂದಿಗೆ ಸೇವಿಸಬಹುದು.

ಓಟ್ಸ್ ಹಾಗೂ ಡ್ರೈ ಫ್ರುಟ್ಸ್ ಕಾಂಬಿನೇಶನ್:
ನಟ್ಸ್ ನಿಮಗೆ ಬುದ್ಧಿವಂತಿಕೆ ಹಾಗೂ ಶಕ್ತಿಯನ್ನು ನೀಡುತ್ತದೆ. ಬಾದಾಮಿ, ಪಿಸ್ತಾ, ಗೇರುಬೀಜ, ದ್ರಾಕ್ಷಿಗಳ ಟೋಪಿಂಗ್ ಅನ್ನು ಓಟ್ಸ್‌ನೊಂದಿಗೆ ಬೆರೆಸಿ ಸವಿಯಿರಿ.

ಓಟ್ಸ್ ಫ್ರುಟ್ ಸಲಾಡ್:
ಓಟ್ಸ್‌ಗೆ ಫ್ರುಟ್ಸ್ ಹೇಳಿಮಾಡಿಸಿದ್ದು. ವಿವಿಧ ಸಂಖ್ಯೆಯ ಹಣ್ಣುಗಳನ್ನು ಬೆರೆಸಿ ಓಟ್ಸ್ ಅನ್ನು ಸ್ವಾದಿಷ್ಟ ಹಾಗೂ ಪರಿಪೂರ್ಣವಾಗಿಸಬಹುದು. ಬೆರ್ರಿ, ಬಾಳೆಹಣ್ಣು, ಚೆರ್ರಿ ಹಾಗೂ ಪೀಚ್ ಹಣ್ಣುಗಳು ನಿಮ್ಮ ಬಳಕೆಯಲ್ಲಿರಲಿ.

ಬೆಲ್ ಪೆಪ್ಪರ್ಸ್ ಹಾಗೂ ಓಟ್ಸ್:
ಬೆಲ್ ಪೆಪ್ಪರ್ಸ್ ಉತ್ಕರ್ಷಣ ನಿರೋಧಿ ಹಾಗೂ ಉತ್ತಮ ಸಾಂಬಾರು ಪದಾರ್ಥವಾಗಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು ಆರೋಗ್ಯಪೂರ್ಣ ಸ್ನಾಕ್ ಆಗಿ ಓಟ್ಸ್‌ನೊಂದಿಗೆ ಮಿಶ್ರ ಮಾಡಿ ಸೇವಿಸಬಹುದು.

ಓಟ್ಸ್ ಊತಪ್ಪಮ್:
ಊತಪ್ಪವನ್ನು ಅಕ್ಕಿ ಹಿಟ್ಟಿನಿಂದ ಸಾಮಾನ್ಯವಾಗಿ ತಯಾರಿಸುತ್ತಾರೆ. ನೀವು ಮಧುಮೇಹಿಗಳಾಗಿದ್ದಲ್ಲಿ ಅಥವಾ ತೂಕ ಇಳಿಸುವ ಇರಾದೆವುಳ್ಳವರಾಗಿದ್ದರೆ ಓಟ್ಸ್‌ನಿಂದ ಊತಪ್ಪವನ್ನು ತಯಾರಿಸಿ ಸೇವಿಸಿ ಮತ್ತು ಕಾರ್ಬೋಹೈಡ್ರೇಟ್ ಸೇವನೆಯನ್ನು ಮಿತಿಗೊಳಿಸಿ.

ಓಟ್ಸ್ ಪಾಯಸ:
ಆರೋಗ್ಯಪೂರ್ಣ ಹಾಗೂ ನ್ಯೂಟ್ರೀಶನ್ ಬೆರೆತ ಪಾಯಸವಾಗಿದೆ ಓಟ್ಸ್ ಪಾಯಸ. ಸಕ್ಕರೆಯ ಬದಲಿಗೆ ಜೇನು ಮತ್ತು ಅಕ್ಕಿಯ ಬದಲಿಗೆ ಓಟ್ಸ್ ಬಳಸಿ ರುಚಿಕರ ಪಾಯಸವನ್ನು ನಿಮಗೆ ತಯಾರಿಸಬಹುದು.

ಓಟ್ಸ್ ದೋಸಾ:
ದೋಸೆ ದಕ್ಷಿಣ ಭಾರತೀಯ ಬ್ರೇಕ್‌ಫಾಸ್ಟ್ ಆಗಿದ್ದು ಅಕ್ಕಿಹಿಟ್ಟಿನಿಂದ ಈ ತಿಂಡಿಯನ್ನು ತಯಾರಿಸಲಾಗುತ್ತದೆ. ಅಕ್ಕಿಯ ಬದಲಿಗೆ ಓಟ್ಸ್ ಹಿಟ್ಟನ್ನು ಬಳಸಿ ರುಚಿಕರ ದೋಸೆಯನ್ನು ಬ್ರೇಕ್‌ಫಾಸ್ಟ್‌ಗೆ ತಯಾರಿಸಿಕೊಳ್ಳಬಹುದು.

ಓಟ್ಸ್ ಕಿಚಡಿ:
ಕಿಚಡಿ ಎಂದರೆ ಅಕ್ಕಿ ಹಾಗೂ ಬೇಳೆಯ ಮಿಶ್ರಣ ಎಂದಾಗಿದೆ. ಓಟ್ಸ್ ಅನ್ನು ಕೂಡ ಬೇಳೆಯೊಂದಿಗೆ ಬೇಯಿಸಿ ಪ್ರೋಟೀನ್ ಭರಿತ ಮಧ್ಯಾಹ್ನದೂಟವನ್ನು ಸವಿಯಿರಿ.



Click it and Unblock the Notifications
