Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ಸೋನಾಕ್ಷಿ ಸಿನ್ಹಾರ ತೂಕ ಇಳಿಸುವ ರಹಸ್ಯಗಳನ್ನು ನೀವೂ ತಿಳಿಯಿರಿ!
ಸಾಮಾನ್ಯ ಮಹಿಳೆಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳೂ ಕೂಡ ತೂಕ ಇಳಿಸುವ ಮಂತ್ರವನ್ನು ಈಗ ಜಪಿಸುತ್ತಿದ್ದಾರೆ. ಸೋನಂ ಕಪೂರ್‌ನಿಂದ ಹಿಡಿದು ಕರೀನಾ ವರೆಗೆ ಎಲ್ಲರೂ ತಮ್ಮ ದೇಹ ತೂಕವನ್ನು ಕಳೆದುಕೊಂಡು ಸಪೂರ ಮೈಮಾಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈಗೀಗ ಬಾಲಿವುಡ್‌ನ ಲಕ್ಕಿ ನಟಿಯೆಂದೇ ಪರಿಗಣಿಸಲ್ಪಟ್ಟ ಸೋನಾಕ್ಷಿ ಸಿನ್ಹಾ ಕೂಡ ಡಯೆಟ್ ಮಂತ್ರವನ್ನು ಅನುಸರಿಸಿ 30 ಕೆಜಿಯಷ್ಟು ತೂಕವನ್ನು ಕಳೆದುಕೊಂಡಿದ್ದಾರೆ. ಆರಂಭದಲ್ಲಿ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದ ಸೋನಾಕ್ಷಿ ಬಾಲಿವುಡ್‌ನ ಸ್ಲಿಮ್ ನಟಿಯರಿಗೆ ಸವಾಲಾಗಿದ್ದರು.
ಬೊಜ್ಜು ಹೊಟ್ಟೆ ಕರಗಿಸುವ ಐದು ಗಿಡಮೂಲಿಕೆಗಳು
ಝೀರೋ ಸೈಜ್ ಅನ್ನು ಮೆಂಟೇನ್ ಮಾಡದೇ ಇದ್ದ ದೇಹಸಿರಿಯಲ್ಲೇ ತಮ್ಮ ಅಭಿಮಾನಿಗಳ ಮನಗೆದ್ದ ಸೋನಾಕ್ಷಿ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದವರು. ಪ್ರತಿಯೊಂದು ಚಿತ್ರದಲ್ಲಿ ನಟಿಸುತ್ತಿದ್ದಂತೆ ತಮ್ಮ ದೇಹ ತೂಕವನ್ನು ಕಳೆದುಕೊಳ್ಳುವ ಮನಸ್ಸನ್ನು ಸೋನಾಕ್ಷಿ ಮಾಡಿದ್ದಾರೆ.
ಸೋನಾಕ್ಷಿ ತಮ್ಮ ಮುಂಬರುವ ಚಿತ್ರಕ್ಕಾಗಿ 10 ಕೆಜಿಯಷ್ಟು ತೂಕವನ್ನು ಕಳೆದುಕೊಂಡಿದ್ದು ತಮ್ಮ ವರ್ಕ್‌ಔಟ್ ಬಗೆಗಿನ ಹಲವಾರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಸೋನಾಕ್ಷಿ ತೂಕ ಇಳಿಸುವವರಿಗೆ ಸುಲಭ ಸರಳ ವಿಧಾನಗಳನ್ನು ತಿಳಿಸಿಕೊಟ್ಟಿದ್ದಾರೆ.
ಪವರ್ ಯೋಗ, ಸೀಮಿತ ಆಹಾರ, ವ್ಯಾಯಾಮ ಹೀಗೆ ದೈಹಿಕ ಚಟುವಟಿಕೆಯನ್ನು ಕ್ರಮಬದ್ಧವಾಗಿ ಪಾಲಿಸುತ್ತಾ ಬಂದಿದ್ದಾರೆ. ನೀವೂ ಸೋನಾಕ್ಷಿಯಂತೆ ಕರ್ವಿ ಫಿಗರ್ ಅನ್ನು ಪಡೆಯಬೇಕೆಂಬ ಹಂಬಲದಲ್ಲಿರುವಿರಾದರೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
ಹೊಟ್ಟೆ ಬೊಜ್ಜು ಕರಗಿಸಲು ಪಾಲಿಸಬೇಕಾದ ನಿಯಮಗಳಿವು

ವರ್ಕ್‌ಔಟ್:
ಬಾಲಿವುಡ್‌ನ ಪ್ರತಿಯೊಬ್ಬ ಪ್ರತಿಭಾವಂತ ನಟಿಯ ರಹಸ್ಯ ಮುಂಜಾನೆದ್ದು ಮಾಡುವ ವರ್ಕ್‌ಔಟ್ ಆಗಿದೆ. ವಾರದಲ್ಲಿ 4-5 ದಿನಗಳ ಕಾಲ ಸೋನಾಕ್ಷಿ ವರ್ಕ್‌ಔಟ್ ಮತ್ತು ತೂಕ ಇಳಿಸುವ ತರಬೇತಿಯನ್ನು ಪಡೆಯುತ್ತಿದ್ದಾರೆ.

ಡಯೆಟ್ - ಬ್ರೇಕ್‌ಫಾಸ್ಟ್:
ಸಿರೆಲ್ ಮತ್ತು ಹಾಲು ಅಥವಾ ಪೂರ್ಣ ಗೋಧಿ ಟೋಸ್ಟ್ ಅನ್ನು ಸೇವಿಸುತ್ತಾರೆ. ಕೆಲವೊಮ್ಮೆ ಕೋರ್ನ್ ಅನ್ನು ಸೇವಿಸುವ ಸೋನಾಕ್ಷಿ ಪ್ರೋಟೀನ್ ಹಾಗೂ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ತೆಗೆದುಕೊಳ್ಳುತ್ತಾರೆ.

ಮಿಡ್ - ಮಾರ್ನಿಂಗ್:
ಸ್ವಲ್ಪ ಡ್ರೈ ಫ್ರುಟ್ಸ್ ಮತ್ತು ಒಂದು ಕಪ್‌ನಷ್ಟು ಗ್ರೀನ್ ಟೀಯನ್ನು ಸೋನಾಕ್ಷಿ ಸೇವಿಸುತ್ತಾರೆ. ಗ್ರೀನ್ ಟೀ ತೂಕ ಇಳಿಸುವುದಕ್ಕೆ ಸಹಾಯ ಮಾಡುವ ಪೇಯವಾಗಿದ್ದು ಆರೋಗ್ಯಕರ ಹಾಗೂ ಸೌಂದರ್ಯ
ಪ್ರಯೋಜನಗಳನ್ನು ಒದಗಿಸುತ್ತದೆ.

ಮಧ್ಯಾಹ್ನ
ಮನೆಯಲ್ಲೇ ತಯಾರಿಸಿದ ರೋಟಿ ಹಾಗೂ ಸಬ್ಜಿಯನ್ನು ಸೇವಿಸುವ ಸೋನಾಕ್ಷಿ ತಾಜಾ ಸಲಾಡ್ ಅನ್ನು ಮಧ್ಯಾಹ್ನದೂಟಕ್ಕೆ ಸೇವಿಸುತ್ತಾರೆ.

ಸಾಯಂಕಾಲ:
ಕಪ್‌ನಷ್ಟು ಹಣ್ಣುಗಳು ಮತ್ತು ಅಥವಾ ಗ್ರೀನ್ ಟೀ ಯನ್ನು ಮಾತ್ರ ಸೋನಾಕ್ಷಿ ಸಾಯಂಕಾಲಕ್ಕೆ ತೆಗೆದುಕೊಳ್ಳುತ್ತಾರೆ.

ರಾತ್ರಿಯೂಟ:
ಮಲಗುವುದಕ್ಕೆ ಮುಂಚೆ 3-4 ಗಂಟೆಗಿಂತ ಮೊದಲೇ ಸೋನಾಕ್ಷಿ ರಾತ್ರಿಯೂಟವನ್ನು ಸೇವಿಸುತ್ತಾರೆ. ಅನ್ನ, ದಾಲ್, ಪಲ್ಯ ಮತ್ತು ಸಲಾಡ್‌ಗಳನ್ನು ಸೋನಾಕ್ಷಿ ರಾತ್ರಿಗೆ ಸೇವಿಸುತ್ತಾರೆ.

ಹಾಟ್ ಯೋಗ:
ತೂಕವನ್ನು ಉಳಿಸಲು ಮತ್ತು ಆರೋಗ್ಯಕರವಾಗಿರಲು ಯೋಗ ಒಂದು ಉತ್ತಮ ವಿಧಾನವಾಗಿದೆ. ವಾರಕ್ಕೆ ಮೂರು ಬಾರಿ ಸೋನಾಕ್ಷಿ ಯೋಗವನ್ನು ಅಭ್ಯಾಸ ಮಾಡುತ್ತಾರೆ. ಇದರಿಂದ ಅವರಿಗೆ ದೇಹ ತೂಕವನ್ನು ನಿರ್ವಹಿಸಲು ಮತ್ತು ಸಪೂರ ಮೈ ಮಾಟವನ್ನು ಪಡೆಯಲು ಸಾಧ್ಯವಾಗಿದೆ.

ನೀರು:
ದಿನಪೂರ್ತಿ ದೇಹವನ್ನು ಹೈಡ್ರೇಟ್ ಆಗಿ ಇರಿಸಲು ನೀರನ್ನು ಕುಡಿಯುವುದು ಅತ್ಯವಶ್ಯಕ. ನೀರು ನಿಮ್ಮ ದೇಹದಲ್ಲಿ ರೋಗನಿರೋದಕ ಸಾಮರ್ಥ್ಯವನ್ನು ಹೆಚ್ಚಿಸಿ ನಿಮ್ಮನ್ನು ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಗ್ರೀನ್ ಟೀ:
ಸೋನಾಕ್ಷಿ ಗ್ರೀನ್ ಟೀಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳಿದ್ದು ತೂಕ ಇಳಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಹಾಗೂ ಹೊಳೆಯುವ ತ್ವಚೆಯನ್ನು ಪಡೆಯಲು ಸಹಕಾರಿಯಾಗಿದೆ.



Click it and Unblock the Notifications
