Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಹಸಿ ತರಕಾರಿಯಲ್ಲಿರುವ ಅದ್ಭುತ ಗುಣ ತಿಳಿದಿದೆಯೇ?
ಬೇಯಿಸಿದ ಆಹಾರಕ್ಕಿಂತ ಹಸಿ ಆಹಾರ ತೂಕ ಇಳಿಸಲು ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಹೇಳಲಾಗುತ್ತದೆ. ನೀವು ನಿಮ್ಮ ತೂಕವನ್ನು ಇಳಿಸಬೇಕು ಎಂದುಕೊಂಡಿದ್ದಲ್ಲಿ ಹೆಚ್ಚು ಹಸಿ ಪದಾರ್ಥಗಳನ್ನು ನಿಮ್ಮ ಡಯಟ್ ಲಿಸ್ಟಿಗೆ ಸೇರಿಸಿಕೊಳ್ಳಿ!
ನೀವು ಇದನ್ನು ಬಳಸಿದಾದಲ್ಲಿ ನಿಮ್ಮ ತೂಕ ಎಷ್ಟು ಬೇಗ ಇಳಿಯುತ್ತದೆ ಎಂದು ನೀವೇ ನೋಡಬಹುದು. ಹಸಿ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರೊಟೀನ್ ಮತ್ತು ಖನಿಜಾಂಶಗಳಿರುತ್ತವೆ. ಇವು ನಿಮ್ಮ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ನೀವು ತೂಕ ಕಳೆದುಕೊಳ್ಳಲು ದಿನವೂ ಬಳಸಬಹುದಾದ ಹಸಿ ಆಹಾರಗಳು ಬೇಕಾದಷ್ಟಿವೆ.
ನಿಮ್ಮ ನೆಚ್ಚಿನ ತಾರೆಯರ ಸಪೂರ ಕಾಯದ ಗುಟ್ಟು ಈ ಹಸಿ ಆಹಾರಗಳೇ. ನೀವು ಕೂಡ ಇದನ್ನು ಹೆಚ್ಚಾಗಿ ಬಳಸಿದಲ್ಲಿ ಅವರಂತಾಗಬಹುದು. ತಿನ್ನುವ ಮೊದಲು ಇದನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.
ತೂಕ ತಗ್ಗಲು ನೆರವಾಗುವ ಅಡುಗೆಮನೆ ಸಾಮಗ್ರಿಗಳು

ಸ್ಪಿನಾಚ್:
ನಿಮಗೆ ತೂಕ ಕಳೆದುಕೊಳ್ಳಲು ನೆರವಾಗುವಂತಹ ಅತ್ಯತ್ತಮ ಆಹಾರ. ಇದರಲ್ಲಿ ವಿಟಮಿನ್ ಕೆ ಹೆಚ್ಚಿರುತ್ತದೆ. ಇದು ನಿಮಗೆ ಅತ್ಯವಶ್ಯಕವಾದ ಐರನ್ ಒದಗಿಸುತ್ತದೆ.

ಬೀಟ್ ರೂಟ್:
ಇದು ಅನಿಮಿಯಾದಿಂದ ಬಳಲುತ್ತಿರುವವರಿಗೆ ಉತ್ತಮವಾದ ಆಹಾರ. ಇದನ್ನು ಹಸಿಯಾಗಿ ತಿನ್ನಬಹುದು.

ಕ್ಯಾರೆಟ್:
ಇದು ಕಣ್ಣುಗಳಿಗೆ ಒಳ್ಳೆಯದು. ಅಷ್ಟೇ ಅಲ್ಲ ಇದು ನಿಮ್ಮ ದೇಹದ ಚೈತನ್ಯವನ್ನು ಕಾಪಾಡುತ್ತದೆ. ನಿಮಗೆ ಸೋಮಾರಿತನ ಕಾಡಿದಾಗ ಒಂದು ಕ್ಯಾರೆಟ್ ತಿನ್ನಿ ಚೈತನ್ಯ ತಾನೇ ತಾನಾಗಿ ಮೈತುಂಬಿಕೊಳ್ಳುತ್ತದೆ.

ಸೌತೆಕಾಯಿ:
ಇದನ್ನು ಎಲ್ಲ ಬಗೆಯ ಸಲಾಡ್ ಗಳಲ್ಲಿ ಕಾಣಬಹುದು. ಹಸಿಯಾಗಿ ತಿನ್ನಬಹುದಾದ ತರಕಾರಿಗಳೆಲೆಲ್ಲ ಇದು ಉತ್ತಮ. ನೀವು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಲ್ಲಿ ಇದನ್ನು ಹೆಚ್ಚಾಗಿ ತಿನ್ನಿ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಇದು ನಿಮ್ಮ ಹೊಟ್ಟೆಯನ್ನು ತುಂಬಿಸುತ್ತದೆ.

ಮೂಲಂಗಿ:
ಮೂಲಂಗಿ ಮೂಲಂಗಿಯನ್ನು ಕೂಡ ಹಸಿಯಾಗಿ ತಿನ್ನಬಹುದು. ಆದರೆ ಇದರಲ್ಲಿ ಗ್ಯಾಸ್ ಹೆಚ್ಚಿರುವುದರಿಂದ ಹೆಚ್ಚಾಗಿ ತಿನ್ನುವುದು ಒಳ್ಳೆಯದಲ್ಲ.

ಟೊಮೇಟೊ:
ಟೊಮೇಟೊ ಹಸಿಯಾಗಿ ತಿನ್ನಲು ಬಹಳ ಚೆನ್ನಾಗಿರುತ್ತದೆ. ಇದು ನಿಮ್ಮ ಕೊಬ್ಬನ್ನು ಕರಗಿಸಲು ಸಹಕಾರಿ. ಇದು ಕ್ಯಾನ್ಸರ್ ನಂತಹ ರೋಗಗಳು ಬರದಂತೆ ತಡೆಗಟ್ಟುತ್ತದೆ.

ಮೊಳಕೆ ಕಾಳುಗಳು:
ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವುದರಿಂದ ತೂಕ ಕಳೆದುಕೊಳ್ಳಲು ಇವು ನೆರವು ನೀಡುತ್ತವೆ. ಇದು ನಿಮ್ಮ ಚರ್ಮದ ಹೊಳಪನ್ನು ಕೂಡ ಹೆಚ್ಚಿಸುತ್ತದೆ.

ಕೊಬ್ಬರಿ:
ಪರಿಣಿತರ ಪ್ರಕಾರ ಕೊಬ್ಬರಿ ತಿನ್ನುವುದರಿಂದ ದೇಹದಲ್ಲಿನ ಕೀಟಾಣುಗಳು ನಾಶವಾಗುತ್ತದೆಯಂತೆ. ನಿಮಗೆ ಹೊಟ್ಟೆಯ ಇನ್ ಫೆಕ್ಷನ್ ಕಾಡುತ್ತಿದ್ದಲ್ಲಿ ಕೊಬ್ಬರಿಯನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.

ಜೋಳ:
ಜೋಳವನ್ನು ತಿನ್ನುವುದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಇದರಲ್ಲಿ ಹೆಚ್ಚು ಪ್ರೊಟೀನ್ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು

ಈರುಳ್ಳಿ :
ಈರುಳ್ಳಿ ಕೊಬ್ಬನ್ನು ಇಳಿಸುವಲ್ಲಿ ಸಹಕಾರಿ. ಇದನ್ನು ಹಸಿಯಾಗಿ ತಿನ್ನುವುದರಿಂದ ತೂಕ ಕಳೆದುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ.

ಗೆಣಸು :
ಇದು ಆಲೂಗಡ್ಡೆಯ ರುಚಿಯನ್ನು ಹೊಂದಿರುವ ತರಕಾರಿ. ಇದನ್ನು ಹಸಿಯಾಗಿ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಇದು ಮಧುಮೇಹಿಗಳಿಗೆ ಉತ್ತಮವಾದ ಆಹಾರ.



Click it and Unblock the Notifications
