ನೋವು ನಿರೋಧಕ ಜೀವನ ಶೈಲಿ ನಿಮ್ಮದಾಗಿಸಿಕೊಳ್ಳಬೇಕೇ?

ಸಮಯ ಕಳೆದಂತೆಲ್ಲ ನಾವು ಕೀಲು ನೋವು ಮತ್ತು ಅರ್ಥರಿಟಿಸ್ ಮುಂತಾದ ಸಮಸ್ಯೆಗಳನ್ನು ಒಪ್ಪಿಕೊಂಡು ಅದರ ಜೊತೆಗೆ ಜೀವಿಸುವ ಪರಿಯನ್ನು ಕಂಡುಕೊಂಡಿದ್ದೇವೆ. ಹಲವಾರು ಕಾರಣಗಳು ನಮ್ಮನ್ನು ಯಾತನಮಯವಾದ ಕೀಲು ನೋವುಗಳಿಗೆ ಗುರಿಪಡಿಸುತ್ತದೆ. ಆದರೆ ಒಂದು ವಿಚಾರವನ್ನು ನಾವು ಗಮನದಲ್ಲಿರಿಸಿಕೊಳ್ಳಬೇಕು. ಈ ನೋವು ನಮ್ಮ ದೇಹವು ನಮಗೆ ಕಳುಹಿಸುವ ಸಂದೇಶ ಎಂಬುದನ್ನು ಮರೆಯಬಾರದು.

ಈ ವಿಚಾರದಲ್ಲಿ ನಿಮ್ಮ ದೇಹಕ್ಕೆ ಸಹಾಯದ ಅಗತ್ಯವಿರುತ್ತದೆ. ಏನೇ ಆದರು ನೀವು ನಿಮ್ಮ ದೇಹದ ನೋವಿಗೆ ಔಷಧಿಯನ್ನು ತೆಗೆದುಕೊಳ್ಳಬಹುದಾದರು, ಅದರ ಮೂಲವನ್ನು ಕಂಡು ಹಿಡಿದು, ಆನಂತರ ಅದನ್ನು ನಿವಾರಿಸುವ ಪ್ರಯತ್ನ ಮಾಡಿದರೆ ಒಳ್ಳೆಯದು.

ನಿಮ್ಮ ದೇಹದಲ್ಲಿ ಯಾವುದೇ ನೋವಿರಲಿ, ಅದು ತೀವ್ರತರದ ಗಾಯವಾಗಿರಬಹುದು, ಬಾವು ಆಗಿರಬಹುದು ಅಥವಾ ಹುಳುಕು ಮುಂತಾದವುಗಳಾಗಿರಬಹುದು. ಯಾವುದೇ ಆದರು ನಿಮಗೆ ನೋವು ತಪ್ಪಿದ್ದಲ್ಲ. ಅದರಲ್ಲೂ ಕೀಲು ನೋವು ವಯಸ್ಸಾದಂತೆಲ್ಲ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ನಿಮ್ಮ ದೈಹಿಕ ಆಯಾಸವು ಭುಜ, ಮೊಣಕೈ, ಸೊಂಟ ಮತ್ತು ಮೊಣಕೈಗಳ ಮೇಲೆ ಪರಿಣಾಮ ಬೀರುತ್ತದೆ.

ಇಲ್ಲಿ ನೀಡಲಾಗಿರುವ ಸರಳವಾದ ಮುಂಜಾಗರೂಕತೆಯ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸಿ, ಇಲ್ಲಿ ಸೂಚಿಸಲಾಗಿರುವ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಿ.ಇದರಿಂದ ನೋವು ನಿರೋಧಕ ಜೀವನಶೈಲಿ ನಿಮ್ಮದಾಗುತ್ತದೆ. ನೈಸರ್ಗಿಕ ಶಕ್ತಿಯನ್ನು ಒದಗಿಸುವ ಸೊಪ್ಪಿನ ಜ್ಯೂಸ್

ವ್ಯಾಯಾಮ

ವ್ಯಾಯಾಮ

ನೀವು ವ್ಯಾಯಾಮ ಮಾಡುವಾಗ, ಹಾಸಿಗೆಯಲ್ಲಿರುವಾಗ ಮತ್ತು ಕೆಲಸ ಮಾಡುವಾಗ ಆಗುವ ನೋವುಗಳ ಪ್ರಕಾರಗಳನ್ನು ಮೌಲ್ಯಮಾಪನ ಮಾಡಿ.

 ದಿನಚರಿಯನ್ನು ಬಳಸಿಕೊಳ್ಳಿ

ದಿನಚರಿಯನ್ನು ಬಳಸಿಕೊಳ್ಳಿ

ನೀವು ಅನುಭವಿಸುವ ನೋವಿನ ಪ್ರಕಾರಗಳನ್ನು ನಮೂದಿಸಲು ಒಂದು ದಿನಚರಿಯನ್ನು ಬಳಸಿಕೊಳ್ಳಿ. ಅದರಲ್ಲಿ ನಿಮ್ಮ ನೋವು ಅದರ ಕಾರಣಗಳನ್ನು ನಮೂದಿಸುವುದರಿಂದ ನಿಮ್ಮ ನೋವು ಎಂತಹುದು ಎಂದು ಸುಲಭವಾಗಿ ಪತ್ತೆ ಹಚ್ಚಬಹುದು.

ಒತ್ತಡವನ್ನು ಪರಿಶೀಲಿಸಿ

ಒತ್ತಡವನ್ನು ಪರಿಶೀಲಿಸಿ

ನೀವು ಅನುಭವಿಸುತ್ತಿರುವ ಒತ್ತಡವನ್ನು ಪರಿಶೀಲಿಸಿ ಮತ್ತು ಒತ್ತಡ ನಿವಾರಕ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಿ - ಅವು ಲಘು ವ್ಯಾಯಾಮ, ಧ್ಯಾನ ಮತ್ತು ಯೋಗ ಯಾವುದಾದರು ಆಗಿರಬಹುದು.

ನಿರ್ಜಲೀಕರಣ

ನಿರ್ಜಲೀಕರಣ

ನಿರ್ಜಲೀಕರಣವು ನಿಮ್ಮ ದೇಹದಲ್ಲಿ ಕಂಡು ಬರುವ ನೋವುಗಳ ಮೂಲ ಕಾರಣವಾಗಿದೆ. ಮ್ಯಾಗ್ನೆಟೈಜ್ ಮಾಡಿದ ನೀರನ್ನು ಸೇವಿಸುವುದರಿಂದ ನಿಮ್ಮ ಕೀಲು ನೋವುಗಳಲ್ಲಿ ಗಣನೀಯವಾದ ಸುಧಾರಣೆಯನ್ನು ಕಾಣಬಹುದು.

ದಿನದ ಸಮಯದಲ್ಲಿ ಸ್ವಲ್ಪ ಲಘು ವ್ಯಾಯಾಮ ಮಾಡಿ

ದಿನದ ಸಮಯದಲ್ಲಿ ಸ್ವಲ್ಪ ಲಘು ವ್ಯಾಯಾಮ ಮಾಡಿ

ಕುಳಿತುಕೊಳ್ಳುವ ಭಂಗಿಯಲ್ಲಿ ಲೋಪ ದೋಷಗಳಿದ್ದಲ್ಲಿ, ಕಾಲ ಕಳೆದಂತೆಲ್ಲ ಇದು ನಿಮ್ಮ ಕೀಲುಗಳ ಮೇಲೆ ಪರಿಣಾಮವನ್ನು ಬಿರುತ್ತದೆ. ನಿಶ್ಯಕ್ತಿ, ಮಲಗುವ ಭಂಗಿಯಲ್ಲಿ ಲೋಪ ದೋಷ, ಕಂಪ್ಯೂಟರ್ ಮುಂದೆ ದೀರ್ಘ ಸಮಯ ಕುಳಿತು ಕೆಲಸ ಮಾಡುವುದು ಮತ್ತು ಅತಿಯಾಗಿ ಪ್ರಯಾಣಿಸುವುದು ನಿಮ್ಮ ಭಂಗಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ದಿನದ ಸಮಯದಲ್ಲಿ ಸ್ವಲ್ಪ ಲಘು ವ್ಯಾಯಾಮವನ್ನು ಮಾಡುವುದರಿಂದ ನಿಮ್ಮ ಭಂಗಿಯನ್ನು ಉತ್ತಮ ರೀತಿಯಲ್ಲಿರಿಸಿಕೊಳ್ಳಬಹುದು. ಇದರಿಂದ ನಿಮ್ಮ ಬೆನ್ನು ನೋವು ಮತ್ತು ಸ್ನಾಯುಗಳ ನೋವು ಕಡಿಮೆಯಾಗುತ್ತದೆ.

ಹೈ ಹೀಲ್‌ ಚಪ್ಪಳಿಗೆ ಗುಡ್ ಬೈ ಹೇಳಿ

ಹೈ ಹೀಲ್‌ ಚಪ್ಪಳಿಗೆ ಗುಡ್ ಬೈ ಹೇಳಿ

ಹೈ ಹೀಲ್ ಮತ್ತು ಸರಿಯಿಲ್ಲದ ಶೂಗಳನ್ನು ಧರಿಸುವುದರಿಂದ ಸಹ ನಿಮ್ಮ ದೇಹದ ಸಮತೋಲನವು ಹಾಳಾಗುತ್ತದೆ. ಇದರಿಂದ ತಾನೇ ತಾನಾಗಿ ನಿಮ್ಮ ಕೀಲುಗಳ ಮೇಲೆ ಒತ್ತಡವು ಅಧಿಕವಾಗುತ್ತದೆ. ಆದ್ದರಿಂದ ಶೂ ಒಳಗೆ ಹಾಕುವ ಇನ್ಸರ್ಟ್‌ಗಳನ್ನು/ ಜೆಲ್ ಹೀಲ್‍ಗಳು ಮತ್ತು ಇನ್‍ಸೋಲ್‍ಗಳನ್ನು ಆಯ್ಕೆ ಮಾಡಿಕೊಳ್ಳಿ. ಇವುಗಳು ಶಾಕನ್ನು ಹೀರಿಕೊಳ್ಳುವುದರ ಜೊತೆಗೆ, ನಿಮ್ಮ ಪಾದದ ಕೀಲುಗಳು ತಿರುಚಿಕೊಳ್ಳುವುದನ್ನು ತಡೆಯುತ್ತವೆ.

ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಿ

ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಿ

ಮುಟ್ಟು ನಿಂತ ನಂತರ ಹೆಂಗಸರಲ್ಲಿ ಸಾಮಾನ್ಯವಾಗಿ ಮೂಳೆ ನಾಶವು ಕಂಡು ಬರುತ್ತದೆ. ಇದರ ನೋವನ್ನು ಮಿನರಲೈಜ್ ಆಗಿರುವ ನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಯಂತ್ರಿಸಬಹುದು. ನಿಮ್ಮ ಮೂಳೆಗಳನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇಡಬೇಕೆಂದರೆ, ಕ್ಯಾಲ್ಸಿಯಂ ತೀರಾ ಅಗತ್ಯ. ಮ್ಯಾಗ್ನೆಟೈಜ್ ಆಗಿರುವ ನೀರಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ಮ್ಯೆಗ್ನಿಶಿಯಂಗಳು ಇರುತ್ತವೆ. ಇವುಗಳು ಮೂಳೆಗಳ ಸಾಂದ್ರತೆಯನ್ನು ಕಾಪಾಡಲು ಮತ್ತು ಆಸ್ಟಿಯೊಪೊರೊಸಿಸ್‍ನಿಂದ ರಕ್ಷಿಸಲು ತೀರಾ ಅಗತ್ಯವಾಗಿದೆ.

ಪ್ರೋಟೀನ್‍ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ

ಪ್ರೋಟೀನ್‍ಗಳನ್ನು ಹೊಂದಿರುವ ಆಹಾರವನ್ನು ಸೇವಿಸಿ

ಅಗತ್ಯವಾದ ಖನಿಜಾಂಶಗಳು ಮತ್ತು ಪ್ರೋಟೀನ್‍ಗಳನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಶಕ್ತಿಶಾಲಿಯಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಆಮ್ಲಗಳು ಅಧಿಕವಾಗಿರುವ ಕರಿದ ಆಹಾರ, ಸಂಸ್ಕರಿಸಿದ ಆಹಾರ, ಸಕ್ಕರೆ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಲು ಹೋಗಬೇಡಿ. ಏಕೆಂದರೆ ಈ ಆಹಾರ ಪದಾರ್ಥಗಳು ಕೀಲುಗಳಲ್ಲಿ ಊತವನ್ನುಂಟು ಮಾಡುತ್ತವೆ.

ಆಲಿವ್ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿ

ಆಲಿವ್ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿ

ಕೀಲುಗಳನ್ನು ಮತ್ತು ಭುಜಗಳನ್ನು ಆಲಿವ್ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡುವುದರಿಂದ ಊತ ಮತ್ತು ಕೀಲು ನೋವನ್ನು ನಿವಾರಿಸಿಕೊಳ್ಳಬಹುದು. ಮಸಾಜ್ ಮಾಡುವಾಗ ನಿಮ್ಮ ಹೊಡೆತಗಳು ಮತ್ತು ಒತ್ತುವಿಕೆಯು ಹೃದಯದತ್ತ ಸಾಗಬೇಕು. ಅದರೂ ನಿಮ್ಮ ನೋವು ದಿನದಿಂದ ದಿನಕ್ಕೆ ಹೆಚ್ಚುತ್ತ ಹೋದಲ್ಲಿ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.

Story first published: Monday, November 10, 2014, 23:02 [IST]
X
Desktop Bottom Promotion