Latest Updates
-
ಬ್ರೇಕಪ್ ನಂತರ ಸೋಶಿಯಲ್ ಮೀಡಿಯಾ: ನಿಮ್ಮ ಗೌಪ್ಯತೆ ಮತ್ತು ಕಾನೂನು ರಕ್ಷಣೆಗೆ ಈ ಟಿಪ್ಸ್ ಪಾಲಿಸಿ -
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ! -
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ?
ತೂಕ ಇಳಿಸಲು ಸಹಕಾರಿ ಈ ಸೂಪರ್ ಫುಡ್‌ಗಳು
ಜೇನು ಮತ್ತು ದಾಲ್ಚೀನಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸುವುದು ಅತ್ಯಂತ ಆವಶ್ಯಕ. ನೀವು ತೂಕ ಇಳಿಸುವ ಕಾರ್ಯಕ್ರಮವನ್ನು ಹಾಕಿಕೊಂಡವರಾಗಿದ್ದು ನಿಮಗೆ ಶೀಘ್ರ ಫಲಿತಾಂಶ ದೊರೆಯಬೇಕೆಂದರೆ ಈ ಆಹಾರಗಳು ಖಂಡಿತ ನಿಮಗೆ ಫಲಕಾರಿಯಾಗಿರುತ್ತವೆ.
ಮೈಗ್ರೇನ್ ತಲೆನೋವು ನಿಮ್ಮನ್ನು ಬೆನ್ನುಬಿಡದೇ ಕಾಡುತ್ತಿದೆಯೇ?
ಜೇನನ್ನು ಹಿಂದಿನಿಂದಲೂ ತೂಕ ಇಳಿಕೆಯಲ್ಲಿ ಒಂದು ಪರಿಣಾಮಕಾರಿ ಆಹಾರವೆಂದು ಪರಿಗಣಿಸಲಾಗಿದೆ. ಲಿಂಬೆ ಜೇನು ಬೆರೆತ ನೀರು ಕೂಡ ತೂಕ ಇಳಿಕೆಗೆ ಸಹಕಾರಿಯಾಗಿದೆ. ಈಗ ದಾಲ್ಚೀನಿ ಕೂಡ ನಿಮ್ಮ ಆರೋಗ್ಯ ಮತ್ತು ಏರುತ್ತಿರುವ ತೂಕಕ್ಕೆ ನಿಯಂತ್ರಕವಾಗಿ ಕಾರ್ಯ ನಿರ್ವಹಿಸುತ್ತದೆ.
ಹಾಗಿದ್ದರೆ ಜೇನು ಮತ್ತು ದಾಲ್ಚೀನಿಯನ್ನು ನಿತ್ಯವೂ ಸೇವಿಸುವುದರಿಂದ ನಿಮ್ಮಲ್ಲಿ ಏನು ಬದಲಾವಣೆಗಳು ಉಂಟಾಗುತ್ತವೆ ಮತ್ತು ನಿಮ್ಮ ಉತ್ತಮ ಆರೋಗ್ಯಕ್ಕೆ ಇವು ಹೇಗೆ ಪರಿಣಾಮಕಾರಿಯಾಗಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಯಾರು ಹೆಚ್ಚು ಫಿಟ್ ? ಮಹಿಳೆರು v/s ಪುರುಷರು

ನಿಮಗೆ ಶಕ್ತಿಯನ್ನು ನೀಡುತ್ತದೆ:
ಸಿಹಿಯಾದ ಜೇನು ನಿಮಗೆ ಶಕ್ತಿಯನ್ನು ನೀಡುತ್ತದೆ ಸ್ವಲ್ಪ ನೀರಿಗೆ ದಾಲ್ಚೀನಿ ಮತ್ತು ಜೇನು ಬೆರೆಸಿ ಸೇವಿಸಿದರೆ ನಿಮ್ಮಲ್ಲುಂಟಾಗುವ ಬದಲಾವಣೆಗಳನ್ನು ಸ್ವಯಂ ನೀವೇ ಅರಿಯಿರಿ.

ಕೊಲೆಸ್ಟ್ರಾಲ್‌ಗಾಗಿ:
ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹೆಚ್ಚಿನ ಜನರು ಅನುಭವಿಸುತ್ತಾರೆ. ಇದಕ್ಕಾಗಿ ಎರಡು ಸ್ಪೂನ್ ಜೇನು ಮತ್ತು ಮೂರು ಸ್ಪೂನ್ ದಾಲ್ಚೀನಿಯನ್ನು 16 ಔನ್ಸ್ ಟೀ ನೀರಿನಲ್ಲಿ ಬೆರೆಸಿ ಕುಡಿಯಿರಿ.

ದೇಹದ ಶಕ್ತಿಗಾಗಿ:
ಜೇನು ಮತ್ತು ದಾಲ್ಚೀನಿ ಬೆರೆತ ನೀರನ್ನು ಪ್ರತೀ ದಿನ ಸೇವಿಸುವುದು ನಿಮ್ಮನ್ನು ಒಳಗಿನಿಂದಲೇ ಬಲಶಾಲಿಯಾಗಿಸಲು ಸಹಕಾರಿಯಾಗಿವೆ. ಊಟಕ್ಕಿಂತ ಮೊದಲು ಈ ನೀರನ್ನು ಸೇವಿಸಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಜೀರ್ಣಕ್ರಿಯೆ ಅಭಿವೃದ್ಧಿಗೆ:
ಊಟಕ್ಕಿಂತ ಮುಂಚೆ ದಾಲ್ಚೀನಿ ಬೆರೆತ ಜೇನನ್ನು ಕುಡಿಯಿರಿ. ಇದು ನಿಮ್ಮ ತೂಕವನ್ನು ಇಳಿಸುವುದರೊಂದಿಗೆ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯನ್ನು ದೂರ ಮಾಡುತ್ತದೆ.

ಕೊಬ್ಬನ್ನು ಕರಗಿಸುತ್ತದೆ:
ಜೇನು ಹಾಗೂ ದಾಲ್ಚೀನಿ ನಿಮ್ಮ ದೇಹದಲ್ಲಿ ಸಂಗ್ರಹಗೊಂಡಿರುವ ಕೊಬ್ಬನ್ನು ನಿವಾರಿಸಿ ದೇಹಕ್ಕೆ ಹೊಳಪು ಮತ್ತು ಸುಂದರತೆಯನ್ನು ನೀಡುತ್ತದೆ.

ಹಸಿವನ್ನು ನಿಯಂತ್ರಿಸುತ್ತದೆ:
ನಿಮ್ಮ ತೂಕವನ್ನು ಇಳಿಸುವುದರ ಜೊತೆಗೆ ಹನಿ ಮತ್ತು ದಾಲ್ಚೀನಿ ನಿಮ್ಮ ಬೇಡದ ಹಸಿವನ್ನು ನಿಯಂತ್ರಿಸುತ್ತದೆ ಕೂಡ. ನಿಮ್ಮ ಆಹಾರ ಪದ್ದತಿಯನ್ನು ಸರಿಯಾದ ಕ್ರಮದಲ್ಲಿ ತರಲು ಇವುಗಳು ಸಹಕಾರಿಯಾಗಿವೆ.

ಕೊಬ್ಬನ್ನು ನಿವಾರಿಸುತ್ತದೆ:
ಜೇನು ಮತ್ತು ದಾಲ್ಚೀನಿ ತೂಕ ಇಳಿಸುವುದು ಮಾತ್ರವಲ್ಲದೆ, ನಿಮ್ಮ ದೇಹದಲ್ಲಿ ಸೆಲ್ಯುಲೇಟ್‌ನಂತೆ ಎಂದು ಕರೆಯಲಾದ ಅಧಿಕ ಕೊಬ್ಬನ್ನು ನಿವಾರಿಸುತ್ತದೆ.



Click it and Unblock the Notifications